ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 14 ವರ್ಷಗಳ ಬಳಿಕ ಕೋಲ್ಕತಾಗೆ ಆಗಮಿಸಿದ್ದಾರೆ. ಆದರೆ, ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಕೇವಲ 10 ನಿಮಿಷ ಮಾತ್ರ ಕಾಣಿಸಿಕೊಂಡು ನಿರ್ಗಮಿಸಿದ್ದರಿಂದ, ನಿರಾಸೆಗೊಂಡ ಸಾವಿರಾರು ಅಭಿಮಾನಿಗಳು ದಾಂಧಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಕೋಲ್ಕತಾ: ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬಂದಿಳಿದಿದ್ದಾರೆ. ಭಾರತದ ಫುಟ್ಬಾಲ್ ತವರು ಎಂದೇ ಗುರುತಿಸಿಕೊಂಡಿರುವ ಕೋಲ್ಕತಾಗೆ ಆಗಮಿಸಿರುವ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಇಲ್ಲಿನ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನೆರೆದಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಮೆಸ್ಸಿ ಮೈದಾನದಿಂದ ನಿರ್ಗಮಿಸಿದ್ದರಿಂದ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಸ್ಟೇಡಿಯಂನಲ್ಲಿ ದಾಂಧಲೆ ನಡೆಸಿದ್ದಾರೆ.

ಲಿಯೋನೆಲ್ ಮೆಸ್ಸಿ ಶನಿವಾರ ಮಧ್ಯರಾತ್ರಿ ಕೋಲ್ಕತಾಗೆ ಬಂದಿಳಿದ್ದರು. ಬರೋಬ್ಬರಿ 14 ವರ್ಷಗಳ ಬಳಿಕ ಭಾರತಕ್ಕೆ ಬಂದ ಮೆಸ್ಸಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಮೆಸ್ಸಿ ಕೇವಲ 10 ನಿಮಿಷಗಳೊಳಗೆ ಸಾಲ್ಟ್‌ ಲೇಕ್ ಸ್ಟೇಡಿಯಂನಿಂದ ನಿರ್ಗಮಿಸಿದ್ದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿ ಸ್ಟೇಡಿಯಂ ತೊರೆಯುತ್ತಿದ್ದಂತೆಯೇ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಸ್ಟೇಡಿಯಂಗೆ ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

ಭಾರತೀಯ ಫುಟ್‌ಬಾಲ್‌ನ ತವರು ಎಂದು ಹೇಳಲಾಗುವ ಸಾಲ್ಟ್‌ ಲೇಕ್‌ ಮೈದಾನದಲ್ಲಿ ನಡೆಯುತ್ತಿರುವ ಗಲಭೆ ಮತ್ತು ವಿಧ್ವಂಸಕ ಕೃತ್ಯಗಳನ್ನು ಹತ್ತಿಕ್ಕಲು ಪೊಲೀಸರು ಸಜ್ಜಾಗಿದ್ದಾರೆ. ನೇರ ಚಿತ್ರಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Scroll to load tweet…

ನಿರಾಸೆ ಹೊಸಹಾಕಿದ ಮೆಸ್ಸಿ ಅಭಿಮಾನಿ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಸಿ ಅಭಿಮಾನಿಯೊಬ್ಬರು, 'ತುಂಬಾ ಭಯಾನಕ ಘಟನೆ. ಅವರು ಕೇವಲ 10 ನಿಮಿಷಗಳ ಕಾಲ ಬಂದರು. ಎಲ್ಲಾ ನಾಯಕರು ಮತ್ತು ಮಂತ್ರಿಗಳು ಅವರನ್ನು ಸುತ್ತುವರೆದರು. ನಮಗೆ ಏನೂ ಕಾಣಿಸಲಿಲ್ಲ. ಅವನು ಒಂದೇ ಒಂದು ಕಿಕ್ ಅಥವಾ ಒಂದೇ ಒಂದು ಪೆನಾಲ್ಟಿ ತೆಗೆದುಕೊಳ್ಳಲಿಲ್ಲ. ಅವರು ಶಾರುಖ್ ಖಾನ್ ಅವರನ್ನೂ ಕರೆತರುವುದಾಗಿ ಹೇಳಿದರು. ಅವರು ಯಾರನ್ನೂ ಕರೆತರಲಿಲ್ಲ. ಅವರು 10 ನಿಮಿಷಗಳ ಕಾಲ ಬಂದು ಹೊರಟುಹೋದರು. ತುಂಬಾ ಹಣ ಮತ್ತು ಸಮಯ ವ್ಯರ್ಥವಾಯಿತು. ನಮಗೆ ಏನೂ ಕಾಣಿಸಲಿಲ್ಲ.' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Scroll to load tweet…

ತಮ್ಮದೇ ಸ್ಟ್ಯಾಚು ಅನಾವರಣ ಮಾಡಲಿರುವ ಮೆಸ್ಸಿ

ಶನಿವಾರ ಕೋಲ್ಕತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಮ್ಮ 70 ಅಡಿಯ ಪ್ರತಿಮೆಯನ್ನು ಲಿಯೋನೆಲ್ ಮೆಸ್ಸಿ ಅನಾವರಣಗೊಳಿಸಲಿದ್ದಾರೆ.

ಇದಾದ ಬಳಿಕ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ದಿಗ್ಗಜ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಸೇರಿ ಇನ್ನೂ ಕೆಲವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ಶಾರುಖ್‌ ಖಾನ್‌ ಕೂಡಾ ಉಪಸ್ಥಿತರಲಿದ್ದಾರೆ.