ಪುಣೆ[ಡಿ.05]: ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಬುಧವಾರ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ, ಒಡಿಶಾ ಎಫ್‌ಸಿ ವಿರುದ್ಧ 1-0 ಗೆಲುವು ಸಾಧಿಸಿದೆ. ಇದರೊಂದಿಗೆ ಬಿಎಫ್‌ಸಿ ತಂಡ, ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದ್ದು 13 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 

ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!

ಪಂದ್ಯದ ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿ, ಒಡಿಶಾ ತಂಡದ ಮೇಲೆ ಸವಾರಿ ನಡೆಸಿತು. ಜುನಾನ್‌ (36ನೇ ನಿ.) ಬಿಎಫ್‌ಸಿಗೆ ಮೊದಲ ಯಶಸ್ಸು ತಂದುಕೊಟ್ಟರು. ಬೆಂಗಳೂರು ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಕಾಯ್ದುಕೊಂಡಿತು. 

ಐಎಸ್‌ಎಲ್‌: ಬಿಎಫ್‌ಸಿ-ಹೈದ್ರಾಬಾದ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಇನ್ನು ದ್ವಿತೀಯಾರ್ಧದ ಆಟದಲ್ಲಿ ಎಚ್ಚರಿಕೆಯ ಆಟವಾಡಿದ ಚೆಟ್ರಿ ಪಡೆ, ಗೋಲಿನ ಅಂತರ ಕಾಯ್ದುಕೊಂಡು ಜಯದ ನಗೆ ಬೀರಿತು. ದ್ವಿತಿಯಾರ್ಧದಲ್ಲಿ ಗೋಲು ಬಾರಿಸಲು ಒಡಿಶಾ ಸಾಕಷ್ಟು ಪ್ರಯತ್ನ ನಡೆಸಿತಾದರೂ ಯಶಸ್ಸು ದಕ್ಕಲಿಲ್ಲ. ಈ ಗೆಲುವಿನೊಂದಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಆಡಿದ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಡ್ರಾದೊಂದಿಗೆ 13 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ.