ISL 2020: ಪಂದ್ಯ ಡ್ರಾ, ಕೇರಳ ಪ್ಲೇ ಆಫ್‌ ಕನಸು ಭಗ್ನ!

ಕೇರಳ ಹಾಗೂ ನಾರ್ತ್ ಈಸ್ಟ್ ತಂಡ ಗೆಲುವಿಗಾಗಿ ಹೋರಾಟ ಮಾಡಿತ್ತು. ಆದರೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಈ ಡ್ರಾದೊಂದಿಗೆ ಕೇರಳ ಮಾತ್ರವಲ್ಲ, ನಾರ್ತ್ ಈಸ್ಟ್ ಕಸು ಕೂಡ ಭಗ್ನಗೊಂಡಿದೆ. 

ISL 2020 Kerala and north east united fc match ends with draw

ಗುವಾಹಟಿ(ಫೆ.07):  ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಗೆಲುವಿನ ವಿಶ್ವಾಸದೊಂದಿಗೆ ಉಭಯ ತಂಡಗಳು ಕಣಕ್ಕಿಳಿದಿತ್ತು. ಆದರೆ  ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಈ ಮೂಲಕ ಕೇರಳ ತಂಡದ ಫ್ಲೇ ಆಫ್ ಕನಸು ಭಗ್ನಗೊಂಡಿತು. 

ಇದನ್ನೂ ಓದಿ: ATK ಅಬ್ಬರಕ್ಕೆ ಸೋಲಿಗೆ ಶರಣಾದ ಜೆಮ್‌ಶೆಡ್‌ಪುರ FC!.

ಇತ್ತ ನಾರ್ಥ್ ಈಸ್ಟ್ ತಂಡಕ್ಕೆ ಇನ್ನು ನಾಲ್ಕು ಪಂದ್ಯ ಬಾಕಿ ಇದ್ದು ಎಲ್ಲದಲ್ಲಿ ಜಯ ಗಳಿಸಿದರೂ ಟಾಪ್ ನಾಲ್ಕರ ಹಂತ ತಲುಪಲು ಸಾಧ್ಯವಿಲ್ಲ. 24 ಅಂಕ ಗಳಿಸಿದರೂ ನಾರ್ಥ್ ಈಸ್ಟ್ ಕೂಡ ಫ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಡುವ ಸಾಧ್ಯತೆಗಳಿಲ್ಲ. 

ಆರಂಭಿಕ 45ನಿಮಿಷಗಳ ಆಟದಲ್ಲಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಕೇರಳ ಹಾಗೂ ನಾರ್ತ್ ಈಸ್ಟ್ ಮನಸ್ಸು ಮಾಡಲಿಲ್ಲ. 15ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟಟರ್ಸ್ ತಂಡಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಸತ್ಯಸೇನ್ ಸಿಂಗ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಇದರೊಂದಿಗೆ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು.

ಕೇರಳ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದ ನಡುವೆಯೂ ನಾರ್ಥ್ ಈಸ್ಟ್ ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಯಿತು. ದ್ವಿತಿಯಾರ್ಧದಲ್ಲೂ ಗೋಲು ದಾಖಲಾಗಲಿಲ್ಲ. 
 

Latest Videos
Follow Us:
Download App:
  • android
  • ios