ಹೈದರಾಬಾದ್(ಡಿ.20):   ಇಲ್ಲಿನ ಜಿಎಂಸಿ ಬಾಲಯೋಗಿ ಅಥ್ಲೆಟಕ್ ಅಂಗನದಲ್ಲಿ ಶನಿವಾರ(ಡಿ.21) ನಡೆಯಲಿರುವ ಹೀರೋ ಇಂಟಿಯನ್ ಸೂಪರ್ ಲೀಗ್ ನಲ್ಲಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಬಾದ್ ಎಫ್ ಸಿ ಬಲಿಷ್ಢ ಎಟಿಕೆ ವಿರುದ್ಧದ ಸವಾಲನ್ನು ಎದುರಿಸಲಿದೆ.

ಹೈದರಾಬಾದ್ ಗೆಲ್ಲಲೇ ಬೇಕಾದ ಸ್ಥಿತಿಯಲ್ಲಿದೆ. ಕಾರಣ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎಂಟು ಪಂದ್ಯಗಳನ್ನು ಆಡಿರುವ ತಂಡ ಗಳಿಸಿರುವುದು ಕೇವಲ ನಾಲ್ಕು ಅಂಕಗಳು. ಎಲ್ಲಕ್ಕಿಂತ ಮುಖ್ಯವಾಗಿ ಫಿಲ್ ಬ್ರೌನ್ ಪಡೆ ಕಳೆದ ಐದು ಪಂದ್ಯಗಳಲ್ಲಿ  ಗೆದ್ದಿರುವುದುಗ ಕೇವಲ ಒಂದು ಅಂಕ ಎಂಬುದು ಗಮನಾರ್ಹ.

ಇದನ್ನೂ ಓದಿ: ISL 2019: ನಾರ್ತ್ ಈಸ್ಟ್ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಬೆಂಗಳೂರು FC!.

ಎದುರಾಳಿ ಎಟಿಕೆ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ  14 ಅಂಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ. ಶನಿವಾರ ಜಯ ಗಳಿಸಿದರೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಲಿದೆ. ಹಿಂದಿನ ಪಂದ್ಯದಲ್ಲಿ ಅಂಟೋನಿಯೋ ಹಬ್ಬಾಸ್ ಪಡೆಯ ವಿರುದ್ಧ ಹೈದರಾಬಾದ್ 5-0 ಗೋಲುಗಳ ಅಂತರದಲ್ಲಿ ಸೋಲು ಅನುಭವಿಸಿದ್ದನ್ನು ಮರೆಯುವಂತಿಲ್ಲ.  

‘’ನನ್ನ ಪ್ರಕಾರ ಹಿಂದಿನ ಪಂದ್ಯವನ್ನು ಗಮನಿಸಿದರೆ ನಾವು ಅತ್ಯಂತ ಹೀನಾಯವಾಗಿ ಸೋಲು ಅನುಭವಿಸಿರುವೆವು. ಒಬ್ಬ ಕೋಚ್ ಆಗಿ ನಾನು ಆ ರೀತಿಯ ಸಂದರ್ಭ ಮರುಕಳಿಸಬಾರದೆಂದು ಬಯಸುತ್ತೇನೆ. ಆ ದಿನ ನಾವು ಚೆಂಡಿನ ಮೇಲೆ ಉತ್ತಮ ರೀತಿಯಲ್ಲಿ ನಿಯಂತ್ರಣ ಸಾಧಿಸುವಲ್ಲಿ ವಿಫಲರಾದೆವು. ಆ ನಂತರ ನಾವು ಏಳೆಂಟು ಪಂದ್ಯಗಳನ್ನು ಆಡಿರುವುದರಿಂದ ನಮ್ಮದು ಈಗ ವಿಭಿನ್ನ ತಂಡ. ನಮ್ಮ ಯೋಚನೆಗಳೂ ಭಿನ್ನವಾಗಿವೆ,’’ ಎಂದು ಬ್ರೌನ್ ಹೇಳಿದ್ದಾರೆ.   

ಇದನ್ನೂ ಓದಿ: ರಾಹುಲ್ ಸೆಂಚುರಿ ಸೆಲೆಬ್ರೇಷನ್‌ ಹಿಂದಿದೆ ಫುಟ್ಬಾಲಿಗನ ಸಂಭ್ರಮಾಚರಣೆ.!...

ಹೈದರಾಬಾದ್ ಈ ಋತುವಿನಲ್ಲಿ ಅತ್ಯಂತ ಕಳಪೆ ಮಟ್ಟದ ಡಿಪೆನ್ಸ್ ವಿಭಾಗವನ್ನು ಹೊಂದಿದೆ. ಎಂಟು ಪಂದ್ಯಗಳಲ್ಲಿ 17 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಲು ಅವಕಾಶ ಮಾಡಿಕೊಟ್ಟಿರುದೇ ಇದಕ್ಕೆ ನಿದರ್ಶನ. ಎಟಿಕೆ ತಂಡ ಅಡಿರುವ ಎಂಟು ಪಂದ್ಯಗಳಲ್ಲಿ  16 ಗೋಲುಗಳನ್ನು ಗಳಿಸಿ ಪ್ರಭುತ್ವ ಸಾಧಿಸಿದೆ. ಹೈದರಾಬಾದ್ ತಂಡ ಇದುವರೆಗೂ ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ. ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಅವರನ್ನು ಹೊಂದಿರುವ ಎಟಿಕೆ ವಿರುದ್ಧ ಹೈದರಾಬಾದ್ ಕಠಣ ಶ್ರಮ ವಹಿಸಬೇಕಾಗಿರುವುದು ಸ್ಪಷ್ಟ.

ಆದರೆ ಹೈದರಾಬಾದ್ ತಂಡದ ಡಿಪೆನ್ಸ್ ವಿಭಾಗ ಕೂಡ ಹೆಚ್ಚು ಸಮಸ್ಯೆಯಿಂದ ಕೂಡಿದೆ. ಅವರ ದಾಳಿ ವಿಭಾಗ ಗಳಿಸಿದ್ದು ಇದುವರೆಗೂ ಕೇವಲ ಏಳು ಗೋಲುಗಳು. ಚೆನ್ನೈಯಿನ್ ಎಫ್ ಸಿ ತಂಡವನ್ನು (5) ಹೊರತು ಪಡಿಸಿದರೆ ಇದು ಅತ್ಯಂತ ಕಡಿಮೆ, ಎಲ್ಲಕ್ಕಿಂತ ಮುಖ್ಯವಾಗಿ ಮನೆಯಂಗಣದಲ್ಲಿ ತಂಡ ಗಳಿಸಿದ್ದು ಕೇಲವ ಮೂರು ಗೋಲು. ಇತರ ಪಂದ್ಯಗಳಲ್ಲೂ ತಂಡ ಮೊದಲ ಅರ್ಧದಲ್ಲಿ ಗೋಲು ಗಳಿಸಿಲ್ಲ. ಲೀಗ್ ನಲ್ಲಿ ಈ ದಾಖಲೆ ಹೊಂದಿರುವುದು ಈ ತಂಡ ಮಾತ್ರ.

ಲೀಗ್ ನ ಅಂಕಪಟ್ಟಿಯನ್ನು ಗಮನಿಸಿದಾಗ ನಾವಿರುವ ಸ್ಥಾನವು ಗಂಭೀರವಾದುದು. ಋತುವಿನ ದ್ವಿತಿಯಾರ್ಧದಲ್ಲಿ ನಮ್ಮ ತಂಡ ಉತ್ತಮವಾಗಿ ಆಡುತ್ತದೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ನೆಸ್ಟರ್ ಗೊರ್ಡಿಲ್ಲೊ ಅವರನ್ನು ಮುಂಭಾಗದಲ್ಲಿ ಆಡಿಸುತ್ತಿದ್ದೇವೆ. ಇದು ಅವರು ಆಡುತ್ತಿರುವ ಋತುವಿನ ಮೊದಲ ಪಂದ್ಯ. ಈಗ ತಂಡದ ಉತ್ತಮ ಆಟಗಾರರೆಲ್ಲರೂ ಲಭ್ಯರಿದ್ದಾರೆ. ಇನ್ನು ಮುಂದೆ ನಾವು ಹೆಚ್ಚು ಧನಾತ್ಮಕವಾದ ಫಲಿತಾಂಶ ಪಡೆಯಲಿದ್ದೇವೆ ಎಂಬ ನಂಬಿಕೆ ಇದೆ,’’ ಎಂದು ಬ್ರೌನ್ ಹೇಳಿದ್ದಾರೆ.

ಕೋಲ್ಕತಾ ಮೂಲದ ಕ್ಲಬ್‌ಗೆ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ. ತಂಡದ ಫಾರ್ವರ್ಡ್ ಆಟಗಾರರು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಗೋವಾ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋತ ನಂತರ ತಂಡ ಉತ್ತಮ ರೀತಿಯಲ್ಲಿ ಚೇತರಿಸಿಕೊಂಡಿದೆ. ಅಲ್ಲದೆ ಜಯದ ಲಯ ಕಂಡುಕೊಳ್ಳುವ ತವಕದಲ್ಲಿದೆ.

‘’ಹೈದರಾಬಾದ್ ವಿರುದ್ಧ ಗಳಿಸುವ ಮೂರು ಅಂಕ ಪ್ರಮುಖವಾಗಿದೆ. ಗೋವಾ ತಂಡ ನಮಗಿಂತ ಮುಂದೆ ಇದೆ. ಈ ಪಂದ್ಯವು ಸಾಕಷ್ಟು ಕಠಿಣವೆನಿಸಿದೆ. ಹೈದರಾಬಾದ್ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ, ಅಲ್ಲದೆ ತಂಡ ಉತ್ತಮ ಕೋಚನ್ನು ಹೊಂದಿದೆ, ಅವರು ಈ ಪಂದ್ಯಕ್ಕಾಗಿ ಒಂಬತ್ತು ದಿನಗಳಿಂದ ಕಾಯುತ್ತಿದ್ದಾರೆ. ಈ ಲೀಗ್ ನಲ್ಲಿ ಎಲ್ಲಾ ಪಂದ್ಯಗಳು ಸ್ಪರ್ಧಾತ್ಮಕವಾಗಿದೆ. ಸಣ್ಣ ತೀರ್ಮಾನ ಅಥವಾ ಸಣ್ಣ ತಪ್ಪು ಸ್ಕೋರ್ ಲೈನನ್ನೇ ಬದಲಾಯಿಸಬಹುದು,’’ ಎಂದು ಹಬ್ಬಾಸ್ ಹೇಳಿದ್ದಾರೆ.