ಹೈದ​ರಾ​ಬಾದ್‌[ನ.29]: ಇಂಡಿ​ಯನ್‌ ಸೂಪರ್‌ ಲೀಗ್‌ (ಐಎ​ಸ್‌​ಎ​ಲ್‌) 6ನೇ ಆವೃತ್ತಿಯಲ್ಲಿ ಶುಕ್ರ​ವಾರ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, ಆತಿ​ಥೇಯ ಹೈದ​ರಾ​ಬಾದ್‌ ತಂಡದ ಸವಾಲನ್ನು ಎದುರಿಸಲಿದೆ. 

ISL 2019: ಚೆನ್ನೈಯನ್ FCಗೆ ಸೂಪರ್ ಗೆಲುವು!

ಟೂರ್ನಿಯಲ್ಲಿ ಕಳೆದ 2 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಎಫ್‌ಸಿ, ಹೈದ​ರಾ​ಬಾದ್‌ ವಿರುದ್ಧ ಗೆದ್ದು ಹ್ಯಾಟ್ರಿಕ್‌ ಜಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ. ತವರಿನಲ್ಲಿ ನಡೆದಿದ್ದ ಕಳೆದ 2 ಪಂದ್ಯಗಳಲ್ಲಿ ಜಯಿಸಿರುವ ಚೆಟ್ರಿ ಪಡೆ ಲಯ ಕಂಡುಕೊಂಡಿದ್ದು ಹೈದ್ರಾಬಾದ್‌ ಎಫ್‌ಸಿ ಎದುರು ಇದನ್ನೇ ಮುಂದುವರೆಸುವ ಕಾತರದಲ್ಲಿದೆ. 

ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

ಆಡಿರುವ 5 ಪಂದ್ಯ​ಗ​ಳಲ್ಲಿ 2 ಜಯ, 3 ಡ್ರಾ ಸಾಧಿಸಿರುವ ಬಿಎ​ಫ್‌ಸಿ 9 ಅಂಕ​ಗ​ಳೊಂದಿಗೆ 3ನೇ ಸ್ಥಾನ​ದ​ಲ್ಲಿದೆ. 5 ಪಂದ್ಯ​ಗಳನ್ನಾಡಿರುವ ಹೈದ್ರಾ​ಬಾ​ದ್‌ 4 ಪಂದ್ಯ​ಗ​ಳಲ್ಲಿ ಸೋಲುಂಡು ಅಂಕ​ಪ​ಟ್ಟಿ​ಯಲ್ಲಿ ಕೊನೆಯ ಸ್ಥಾನ​ದ​ಲ್ಲಿದೆ.

ಚೆನ್ನೈ-ಒಡಿಶಾ ಪಂದ್ಯ ಡ್ರಾ

ಗುರುವಾರ ಇಲ್ಲಿ ನಡೆದ ಐಎಸ್‌ಎಲ್‌ ಟೂರ್ನಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ನಡುವಣ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯಕಂಡಿತು. ಚೆನ್ನೈ ಪರ ವಲಾಸ್ಕಿ (51, 71ನೇ ನಿ.) ಹಾಗೂ ಒಡಿಶಾ ಪರ ಕ್ಸಿಸ್ಕೊ (54ನೇ ನಿ.), ಅರಿದಾನೆ (82ನೇ ನಿ.) ಗೋಲುಗಳಿಸಿದರು.