ಕೋಲ್ಕೊತಾದಲ್ಲಿ ಬೆಂಗಳೂರಿಗೆ ಆಘಾತ; ಇತಿಹಾಸ ನಿರ್ಮಿಸಿದ ATK

ISL ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಹೊಸ ಇತಿಹಾಸ ನಿರ್ಮಿಸಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿದ ಎಟಿಕೆ ದಾಖಲೆ ನಿರ್ಮಿಸಿದೆ. ಆದರೆ ದಿಟ್ಟ ಹೋರಾಟ ನೀಡಿದ ಬೆಂಗಳೂರು ಸೋಲು ಅಭಿಮಾನಿಗಳಿಗೆ ಆಘಾತ ನೀಡಿದೆ.

First time in isl football atk beat bengaluru fc by 1-0 goals

ಕೋಲ್ಕೊತಾ(ಡಿ.25): ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದ್ದ ಬೆಂಗಳೂರು FC ತಂಡಕ್ಕೆ ಆಘಾತವಾಗಿದೆ. ಎಟಿಕೆ ವಿರುದ್ಧದ ರೋಚಕ ಹಣಾಹಣಿಯಲ್ಲಿ ಬೆಂಗಳೂರು ಮುಗ್ಗರಿಸಿದೆ.  ಡೇವಿಡ್ ವಿಲಿಯಮ್ಸ್ 47ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಸೋಲಿಸಿದ ಮಾಜಿ ಚಾಂಪಿಯನ್ ಎಟಿಕೆ ಹಳೆಯ ಸೇಡನ್ನು ತೀರಿಸಿಕೊಂಡಿತು. ಇದೇ ಮೊದಲ ಬಾರಿಗೆ ಬೆಂಗಳೂರು ತಂಡ ಮೊದಲ ಬಾರಿಗೆ ಎಟಿಕೆ ವಿರುದ್ಧ ಸೋಲನುಭವಿಸಿತು. 10 ಪಂದ್ಯಗಳನ್ನಾಡಿ 18 ಅಂಕಗಳನ್ನು ಗಳಿಸಿದ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಇದನ್ನೂ ಓದಿ: ISL 2019: ಚೆನ್ನೈನಲ್ಲಿ ಚೆನ್ನೈಯನ್ FCಗೆ ಗೆಲುವು!

ಮೊದಲ 45 ನಿಮಿಷಗಳ ಆಟದಲ್ಲಿ ಇತ್ತಂಡಡಗಳಿಗೆ ಯಾವುದೇ ರೀತಿಯಲ್ಲಿ ಉತ್ತಮ ಆವಕಾಶ ಸಿಗಲಿಲ್ಲ. ಬೆಂಗಳೂರು ಹೆಚ್ಚಿನ ಅವಧಿಯಲ್ಲಿ ಚೆಂಡನ್ನು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿತ್ತು. ಆದರೆ ಗೋಲು ಗಳಿಸುವ ಅವಕಾಶ ಸಿಕ್ಕಿರಲಿಲ್ಲ. ಎಟಿಕೆ ಎಂದಿನಂತೆ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿತ್ತು. ಮೈಕಲ್ ಸುಸೈರಾಜ್ ಆತಿಥೇಯರ ಪರ ಉತ್ತಮ ಅವಕಾಶಗಳನ್ನು ಗಳಿಸಿದರೂ ಅದಕ್ಕೆ ಗೋಲಿನ ರೂಪು ನೀಡುವಲ್ಲಿ ವಿಫಲರಾಗುತ್ತಿದ್ದರು. ಬೆಂಗಳೂರು ಎಫ್ ಸಿ ಗೆ ಯಾವುದೇ ರೀತಿಯಲ್ಲಿ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. ಉದಾಂತ್ ಸಿಂಗ್ ಮಿಂಚಿನ ಆಟ ಪ್ರದರ್ಶಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.  

ಇದನ್ನೂ ಓದಿ: 2019ರಲ್ಲಿ 50 ಗೋಲು ಬಾರಿಸಿದ ಲಿಯೋನೆಲ್ ಮೆಸ್ಸಿ!

ಪ್ರಥಮಾರ್ಧದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಎಟಿಕೆ ತಂಡಕ್ಕೆ ಯಶಸ್ಸು ಸಿಕ್ಕಿರಿಲಿಲ್ಲ, ಆದರೆ ಡೇವಿಡ್ ವಿಲಿಯಮ್ಸ್  47ನೇ ನಿಮಿಷದಲ್ಲಿ ತಂಡಕ್ಕೆ ಅಗತ್ಯ ಇರುವ ಗೋಲು ಗಳಿಸಿ ಮುನ್ನಡೆ ಕಲ್ಪಿಸಿದರು. ಇದರೊಂದಿಗೆ ಬೆಂಗಳೂರು ವಿರುದ್ಧ ಇದುವರೆಗೂ ಜಯ ಕಾಣದ ಕೋಲ್ಕೊತಾ ಪಡೆ ಈ ಬಾರಿ ಹೊಸ ಇತಿಹಾಸ ನಿರ್ಮಿಸಿತು. 
 

Latest Videos
Follow Us:
Download App:
  • android
  • ios