ಯುಕೆ ಮ್ಯಾನ್ ಮಾಡಿದ ಮೆಣಸಿನ ಬಜ್ಜಿಗೆ ಫಿದಾ ಆದ ಭಾರತೀಯರು.. ವೈರಲ್ ವಿಡಿಯೋ
ಒಬ್ಬ ವಿದೇಶಿಗನೊಬ್ಬ ನಮ್ಮ ಭಾರತೀಯ ತಿನಿಸು ಎನಿಸಿದ ಮೆಣಸಿನ ಬಜ್ಜಿಯನ್ನು ತಯಾರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಭಾರತೀಯರ ಬಾಯಲ್ಲಿ ನೀರೂರಿಸುವುದರ ಜೊತೆ ಆತನ ಪ್ರಯತ್ನಕ್ಕೆ ಭಾರತೀಯರು ಫುಲ್ ಫಿದಾ ಆಗಿದ್ದಾರೆ.
ನಮಗೆ ಭಾರತೀಯರಿಗೆ ನಮ್ಮ ಆಹಾರ ನಮ್ಮ ವೇಷ ಭೂಷಣ ನಮ್ಮ ಭಾಷೆ ಪರಂಪರೆಯನ್ನು ವಿದೇಶಿಗರೊಬ್ಬರು ನಕಲು ಮಾಡುತ್ತಾರೆ ಎಂದರೆ ನೋಡಲು ಎಲ್ಲಿಲ್ಲದ ಖುಷಿ. ವಿದೇಶಿ ನಾರಿಯರು ಭಾರತೀಯ ಧಿರಿಸು ಧರಿಸಿ ಬಂದರೆ ಅವರ ಹಿಂದೆಯೇ ಹೋಗುವಷ್ಟು ದೊಡ್ಡ ಅಭಿಮಾನಿಗಳಾಗಿ ಬಿಟ್ಟಿರುತ್ತಾರೆ. ಹೀಗಿರುವಾಗ ಒಬ್ಬ ವಿದೇಶಿಗನೊಬ್ಬ ನಮ್ಮ ಭಾರತೀಯ ತಿನಿಸು ಎನಿಸಿದ ಮೆಣಸಿನ ಬಜ್ಜಿಯನ್ನು ತಯಾರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಭಾರತೀಯರ ಬಾಯಲ್ಲಿ ನೀರೂರಿಸುವುದರ ಜೊತೆ ಆತನ ಪ್ರಯತ್ನಕ್ಕೆ ಭಾರತೀಯರು ಫುಲ್ ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಭಾರತೀಯ ತಿನಿಸುಗಳು ವಿಶ್ವದಾದ್ಯಂತ ಖ್ಯಾತಿ ಪಡೆದಿವೆ. ಸಂಪ್ರದಾಯಿಕ ತಿನಿಸುಗಳಿಂದ ಹಿಡಿದು ಸಿಹಿ ತಿನಿಸುಗಳವರೆಗೆ ವೈವಿಧ್ಯಮಯವಾದ ಆಹಾರವನ್ನು ಇಷ್ಟಪಡದವರಿಲ್ಲ. ಅದರಲ್ಲೂ ಮೆಣಸಿನ ಬಜ್ಜಿ ಯಾರಿಗೆ ಇಷ್ಟ ಇರಲ್ಲ ಹೇಳಿ ಹೊರಗೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಮನೆಯೊಳಗೆ ಅಮ್ಮ ಮಾಡಿದ ಬಜ್ಜಿ ತಿಂದು ಟೀ ಕುಡಿಯುವುದರಲಿ ಸಿಗುವ ಸುಖ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲವೇನೋ. ಸೋ ಹಾಗೆಯೇ ಮನೆ ಬಿಟ್ಟು ದೂರ ಬಂದಿದ್ದರೆ ಸ್ನೇಹಿತರ ಜೊತೆಗೆ ರಸ್ತೆ ಬದಿ ಬಜ್ಜಿ ಮಾರಾಟ ಮಾಡುವ ಗಾಡಿಯ ಮುಂದೆ ಆತ ನೀಡುವವರೆಗೆ ಬಾಯಲ್ಲಿ ನೀರೂರಿಸುತ್ತಾ ನಿಲ್ಲುವುದರಲ್ಲೂ ಏನು ಒಂತರ ಖುಷಿ ಇದೆ ಬಿಡಿ ಇಂತಹ ಹಲವು ನೆನಪುಗಳನ್ನು ನೀಡುವ ಬಜ್ಜಿಯನ್ನು ವಿದೇಶಿಗನೊರ್ವ ಭಾರತೀಯರಿಗೆ ಟಕ್ಕರ್ ಕೊಡೋ ರೀತಿ ತಯಾರಿಸಿದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ.
Christmas 2022: ಕ್ರಿಸ್‌ಮಸ್ ಅಂದ್ರೆ ಕೇಕ್ ಅಷ್ಟೇ ಅಲ್ಲ, ಈ ದೇಶದಲ್ಲಿ ತಯಾರಿಸೋ ಆಹಾರನೇ ಬೇರೆ
ಸಹಜವಾಗಿಯೇ ಈತನ ವಿಡಿಯೋ ನೋಡಿದ ಭಾರತೀಯ ನೆಟ್ಟಿಗರೆಲ್ಲ ಈತನಿಗೆ ಶಭಾಷ್ ಎಂದಿದ್ದಾರೆ. ಅಂದಹಾಗೆ ಈ ವಿದೇಶಿಗ ತಯಾರಿಸಿದ್ದು, ರಾಜಸ್ಥಾನಿ ಮಿರ್ಚಿ ವಡಾ. ಐದು ನಿಮಿಷದಲ್ಲಿ ತಯಾರಾಗುವ ಫಾಸ್ಟ್‌ಫುಡ್ ತಿನ್ನುವ ವಿದೇಶಿಗರು ಈ ಭಾರತೀಯ ಆಹಾರ ತಯಾರಿಸುವುದು ಎಂದರೆ ಸಣ್ಣ ಮಾತಲ್ಲ ಏಕೆಂದರೆ ಬಹುತೇಕ ಭಾರತೀಯ ತಿನಿಸು ತಯಾರಿಸಲು ತಾಳ್ಮೆ, ಶ್ರಮ ಸಮಯ ಬೇಕಾಗುವುದು ಹಾಗೆಯೇ ಈ ವಿದೇಶಿಗ ಇದೆಲ್ಲವನ್ನು ಬಳಸಿ ಅಚ್ಚುಕಟ್ಟಾಗಿ ಮಿರ್ಚಿ ವಡಾ ತಯಾರಿಸಿದ್ದಾನೆ.
ಬ್ರಿಟನ್ ಮೂಲದ ಇನ್ಸ್ಟಾಗ್ರಾಮ್ ಬಳಕೆದಾರ ಜಾಕ್ ಡ್ರಿಯನ್ ಎಂಬಾತ ಈ ಮಿರ್ಚಿ ವಡಾದ ವಿಡಿಯೋವನ್ನು @plantfuture ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ್ದು, ಇದರಲ್ಲಿ ಆತ ಬಜ್ಜಿ ಮೇಕಿಂಗ್ ವಿಡಿಯೋ ಇದೆ. ರಾಜಸ್ಥಾನಿ ಮಿರ್ಚಿ ವಡಾ ತಯಾರಿಸಲು ಬೇಕಾದ ಎಲ್ಲಾ ಉತ್ಪನ್ನಗಳನ್ನು ಆತ ಯಾವುದೇ ಚಮಚಗಳನ್ನು ಬಳಸದೇ ಕೇವಲ ಕೈಯಿಂದ ಪಂಟರ್ ರೀತಿ ಮಿಶ್ರಣ ಮಾಡಿ ನಂತರ ಮೆಣಸಿನ ಕಾಯಿಯನ್ನು ಮಧ್ಯಭಾಗ ಮಾಡಿ ಅದರೊಳಗೆ ಇರಿಸಿ ಎಣ್ಣೆಯಲ್ಲಿ ಬಿಟ್ಟಿದ್ದಾನೆ. ಬರೀ ಬಜ್ಜಿ ಮಾತ್ರವಲ್ಲದೇ ಬಜ್ಜಿ ತಿನ್ನುವುದಕ್ಕಾಗಿ ಆತ ಹಸಿರು ಬಣ್ಣದ ಚಟ್ನಿಯನ್ನು ಕೂಡ ಮಾಡಿದ್ದು, ಈ ವಿಡಿಯೋ ನೋಡುತ್ತಿದ್ದರೆ ಬಾಯಲ್ಲಿ ನೀರೂರುತ್ತಿದೆ.
ಬೆಳಗ್ಗಿನ ತಿಂಡಿ ಆರೋಗ್ಯಕ್ಕೆ ಅನಿವಾರ್ಯ, ಹಾಗಂಥ ಏನೇನೋ ತಿಂದು ಹಾಳಗ್ಬೇಡಿ!
ಈ ವಿಡಿಯೋವನ್ನು 9.1 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು, ಆತನ ಸಾಹಸಕ್ಕೆ ಭೇಷ್ ಎಂದಿದ್ದಾರೆ. ಅನೇಕ ಭಾರತೀಯರು ಕಾಮೆಂಟ್ ಮಾಡಿದ್ದಾರೆ. ನೀವು ಮಿರ್ಚಿ ತಯಾರಿಸಿದ ರೀತಿ ನಮಗೆ ನಿಜವಾಗಿಯೂ ಇಷ್ಟವಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಸೌಟ್ ಬಳಸದೇ ಕೈ ಬಳಸಿ ಅದನ್ನು ಮಿಶ್ರಣ ಮಾಡಿದ ರೀತಿ ಇಷ್ಟಾವಾಯ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನೀವು ಪಕ್ಕಾ ಭಾರತೀಯ ಅಮ್ಮನಂತೆ ಮಿರ್ಚಿ ವಡಾ ತಯಾರಿಸಿದ್ದೀರಿ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.