Asianet Suvarna News Asianet Suvarna News

Job Security And Zodiac: ಈ ರಾಶಿಯವರು ಸಧ್ಯದಲ್ಲೇ ಕೆಲಸ ಕಳೆದುಕೊಳ್ಳಲಿದ್ದಾರೆ!

ನೆಮ್ಮದಿಯ ಬದುಕಿಗೆ ಉದ್ಯೋಗ ಭದ್ರತೆಯೂ ಅವಶ್ಯಕ. ಆದರೆ, ಈ ಕೆಲ ರಾಶಿಯವರು ಕಾರಣಾಂತರಗಳಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹಾಗೆ, ಉದ್ಯೋಗ ಕಳೆದುಕೊಳ್ಳಬಹುದಾದ ಸಂಭಾವ್ಯ ರಾಶಿಗಳಿವು. 

Zodiac signs likely to get fired from their current job skr
Author
Bangalore, First Published Feb 5, 2022, 11:10 AM IST

ಎಲ್ಲ ಉದ್ಯೋಗ(job) ರಂಗಗಳಲ್ಲೂ ಈಗ ಹಿಂದೆಂದಿಗಿಂತ ಹೆಚ್ಚಿನ ಸ್ಪರ್ಧೆ ಇದೆ. ಉದ್ಯೋಗಿಗಳು ಸಣ್ಣ ಪುಟ್ಟ ತಪ್ಪುಗಳಿಗೂ ಎಲ್ಲಿ ಕೆಲಸ ಕಳೆದುಕೊಳ್ಳಬೇಕೋ ಎಂಬ ಭೀತಿಯಲ್ಲೇ ಬದುಕಬೇಕು. ಅದರಲ್ಲೂ ಬಾಸ್ ಹಾಗೂ ಸಹೋದ್ಯೋಗಿಗಳ ಸ್ನೇಹ ಸಂಪಾದನೆ ಮಾಡಲಾಗದವರಲ್ಲಂತೂ ಈ ಭೀತಿ ಹೆಚ್ಚೇ ಇರುತ್ತದೆ. ಕೆಲವರಿಗೆ ತಮ್ಮ ಸ್ವಭಾವದ ಕಾರಣದಿಂದ ಸವಾಲುಗಳು(challenges) ಎದುರಾಗುವುದು ಹೆಚ್ಚು. ಉದ್ಯೋಗವನ್ನು ನಂಬಿ ಹಲವಾರು ಕಮಿಟ್‌ಮೆಂಟ್ ಮಾಡಿಕೊಂಡಿರುತ್ತೇವೆ. ಅಂಥದರಲ್ಲಿ ಅದನ್ನು ಕಳೆದುಕೊಂಡರೆ ಎಂಬ ಭೀತಿಯೇ ನಡುಕ ಹುಟ್ಟಿಸುತ್ತದೆ. ಆದರೆ, ಈ ಕೆಲ ರಾಶಿಯವರು ಸಧ್ಯ ತಾವು ಮಾಡುತ್ತಿರುವ ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. 

ಮೇಷ(Aries)
ಈ ರಾಶಿಯವರು ತಮ್ಮ ಮಾತು ಹಾಗೂ ಕೆಲಸಗಳೆರಡರಲ್ಲೂ ಬಹಳ ಇಂಪಲ್ಸಿವ್(impulsive). ಯಾವ ಮಾತನ್ನೂ ತಡೆ ಹಿಡಿಯಲಾರರು. ತಮಗೆ ಸರಿ ಎನಿಸಿದ್ದೇ ಹೇಳುವವರು, ಮಾಡುವವರು. ಅವರು ಬೇರೆ ಸಹೋದ್ಯೋಗಿಗಳ ಮಾತು ಕೇಳುವುದು ಕಷ್ಟ. ಇವರು ಮಾತಾಡುವಾಗ ಬಾಸ್ ಎಂಬುದನ್ನೂ ನೋಡಲಾರರು. ಇವರಿಗೆ ನಾಯಕತ್ವ ನೀಡಿದಾಗ ಕೆಲಸವೇನೋ ಚೆನ್ನಾಗಿ ನಿಭಾಯಿಸುತ್ತಾರೆ. ಆದರೆ, ಕೈ ಕೆಳಗಿನ ಉದ್ಯೋಗಿಗಳು ಹೆದರಿಕೊಂಡೇ ಕೆಲಸ ಮಾಡಬೇಕು. ಈ ಗುಣದ ಕಾರಣದಿಂದ ಆಗಾಗ ಕೆಲಸದಲ್ಲಿ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ. ಇದು ತುಂಬಾ ಪುನರಾವರ್ತನೆಯಾದಾಗ ಬಾಸ್ ಇವರನ್ನು ಕೆಲಸದಿಂದ ತೆಗೆದು ಹಾಕಬಹುದು. 

Zodiac sign and illness: ಯಾವ ರಾಶಿಗೆ ಯಾವ ಅನಾರೋಗ್ಯ ಹೆಚ್ಚಾಗಿ ಕಾಡುವುದು ನೋಡಿ..

ವೃಷಭ(Taurus)
ಇವರು ಅತಿಯಾದ ಹಟವಾದಿಗಳು(stubborn), ತಮಗೇನಾದರೂ ಸರಿ ಎನಿಸಿದರೆ ಆ ನಿರ್ಧಾರ(decision)ದ ಪರ ನಿಂತು ಎಷ್ಟು ಜನರ ವಿರೋಧವಾದರೂ ಕಟ್ಟಿಕೊಳ್ಳಬಲ್ಲರು. ಮತ್ತೊಬ್ಬರ ಮಾತನ್ನು ಕೇಳುವುದು ಇವರ ಜಾಯಮಾನದಲ್ಲೇ ಇಲ್ಲ. ತಮ್ಮ ಕಡೆಯಿಂದ ಸರಿ ಇರುವಾಗ ಯಾರಿಗೇಕೆ ಹೆದರಬೇಕು ಎಂಬುದು ಒಂದೆಡೆಯಾದರೆ, ತಮ್ಮ ನಿರ್ಧಾರ ಸರಿ ಇರುವುದನ್ನು ಅರ್ಥ ಮಾಡಿಕೊಂಡು ಅದನ್ನೇ ಒಪ್ಪಿಕೊಳ್ಳುತ್ತಾರೆ ಎಲ್ಲರೂ ಎಂಬ ಹುಂಬತನ  ಮತ್ತೊಂದೆಡೆ. ಈ ಕಾರಣದಿಂದ ಇವರನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆಗಳು ಹೆಚ್ಚು. ಆದರೆ, ಬಹಳ ಬುದ್ಧಿವಂತರಾದ ವೃಷಭ ರಾಶಿಯವರು ತಾವು ಕೆಲಸ ಕಳೆದುಕೊಳ್ಳುವ ಸೂಚನೆ ಸಿಗುತ್ತಲೇ, ಬೇರೆಡೆ ಕೆಲಸ ಹುಡುಕಿಕೊಳ್ಳುವ ಪ್ರಯತ್ನ ಹೆಚ್ಚಿಸಿ, ಬೇಗ ಮತ್ತೊಂದು ಕಂಪನಿಯಲ್ಲಿ ಕೆಲಸ ಪಡೆದಿರುತ್ತಾರೆ. 

ಮಿಥುನ(Gemini)
ಇವರ ನಾಲಿಗೆ ಹರಿತ(sharp tongue), ಮಾತು ಹೆಚ್ಚು. ಮಾತಾಡುವಾಗ ಅದರಿಂದ ಏನು ಪರಿಣಾಮಗಳಾಗಬಹುದು ಎಂಬ ಎಚ್ಚರ ಇವರಲ್ಲಿರುವುದಿಲ್ಲ. ನಾಲಿಗೆ ಚಟಕ್ಕೆ ಮಾತಾಡಿರುತ್ತಾರೆ. ಕೆಲವೊಮ್ಮೆ ಮಾತಾಡಿದ ನಂತರವೂ ಅವರಿಗೆ ತಮ್ಮ ಮಾತಿನಲ್ಲಿ ತಪ್ಪಾಗಿರಬಹುದು ಎಂಬುದು ಗೊತ್ತಾಗಿರುವುದಿಲ್ಲ. ಇದರಿಂದ ಆಗಾಗ ಬಾಸ್ ಹಾಗೂ ಸಹೋದ್ಯೋಗಿಗಳಿಗೆ ಮನಸ್ಸಿಗೆ ಕಸಿವಿಸಿಯಾಗಿರುತ್ತದೆ. ಇವರ ಈ ಮುಖಕ್ಕೆ ಹೊಡೆದಂತೆ ಮಾತನಾಡುವ ಗುಣ ಯಾರಿಗೂ ಇಷ್ಟವಾಗುವುದಿಲ್ಲ. ಇದು ಇವರ ಕೆಲಸಕ್ಕೆ ಆಪತ್ತು ತರಬಹುದು. 

Birth Month And Traits: ನೀವು ಹುಟ್ಟಿದ ತಿಂಗಳು ನಿಮ್ಮ ಸ್ವಭಾವ ಹೇಳುತ್ತವೆ!

ಸಿಂಹ(Leo)
ಸನ್ನಿವೇಶ(situation)ಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದು ಇವರಿಗೆ ಕಷ್ಟದ ವಿಷಯ. ಈ ಕಾರಣದಿಂದ ಉದ್ಯೋಗ ಸ್ಥಳದಲ್ಲಿ ಶತ್ರುಗಳು ಹೆಚ್ಚು. ತಂಡದಲ್ಲಿ ಬೆರೆಯದ ಇವರ ಗುಣ ಸಹೋದ್ಯೋಗಿಗಳಿಗೆ ಕಷ್ಟವೆನಿಸುತ್ತದೆ, ಕಿರಿಕಿರಿ ತರುತ್ತದೆ. ಇವರು ತಮ್ಮ ಈ ಸ್ವಭಾವ ಬದಲಾಯಿಸಿಕೊಳ್ಳದೆ ಹೋದರೆ ಬೇಗ ಕೆಲಸ ಕಳೆದುಕೊಳ್ಳಬಹುದು. ೇ

ಮೀನ(Pisces)
ಮೀನ ರಾಶಿಯವರಿಗೆ ಕಚೇರಿಯಲ್ಲಿ ತಮ್ಮನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ, ಅದಕ್ಕೆ ಸರಿಯಾದ ಲಾಭ ತಮಗೆ ನೀಡುತ್ತಿಲ್ಲ ಎನಿಸಿದಾಗ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇದರಿಂದ ಇವರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಆದರೆ, ಇದೇ ಗುಣದಿಂದಾಗಿ ಈ ರಾಶಿಯವರೇ ಬೇಗ ಕೆಲಸ ಬದಲಿಸಿ ಬೇರೆ ಕಡೆ ಹೋಗುತ್ತಾ ಸಂಬಳ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ. 

Follow Us:
Download App:
  • android
  • ios