Asianet Suvarna News Asianet Suvarna News

ಅತ್ತೆಯನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಎತ್ತಿದ ಕೈ ಈ ರಾಶಿಯವರು!

ನೀವು ಯಶಸ್ವಿ ದಾಂಪತ್ಯವನ್ನು ಹೊಂದಬೇಕು ಎಂದು ಬಯಸಿದರೆ, ಅದಕ್ಕೆ ನಿಮ್ಮ ಹಾಗೂ ನಿಮ್ಮ ಗಂಡನಾಗುವ ವ್ಯಕ್ತಿಯೊಂದಿಗೆ ಹೊಂದಾಣಿಕೆ ಇದ್ದರೆ ಸಾಕಾಗುವುದಿಲ್ಲ. ಇದರ ಜೊತೆಗೆ ಅವರ ಅತ್ತೆ ಮಾವರಾಗಿ ಸಿಗುವವರನ್ನು ಕೂಡ ಮೆಚ್ಚಿಸಬೇಕು. ಅಂತಹ ಗುಣ ಈ ರಾಶಿಯವರಿಗಿದೆ.

Zodiac signs experts in having good relationship with mother in law
Author
First Published Dec 18, 2022, 12:55 PM IST

ಕೆಲವು ರಾಶಿಚಕ್ರ ಚಿಹ್ನೆಗಳು ಮೊದಲಿನಿಂದಲೂ ತಮ್ಮ ಅತ್ತೆಯೊಂದಿಗೆ ಬಲವಾದ ಕೌಟುಂಬಿಕ ಬಂಧವನ್ನು ರೂಪಿಸಲು ಸಿದ್ಧವಾಗಿರುತ್ತವೆ. ಅತ್ತೆ ಮಾವಂದಿರು ನಿರ್ದಿಷ್ಟವಾಗಿ ತಮ್ಮ ಮಗನ ಸಂಗಾತಿಯನ್ನು ತಮ್ಮ ಮನೆಗೆ ಆರಿಸಿಕೊಳ್ಳುವಾಗ ಭವಿಷ್ಯದ ಕುಟುಂಬದ ದೃಷ್ಟಿಯಿಂದ ಸ್ವಲ್ಪಮಟ್ಟಿಗೆ ಆಯ್ಕೆಯಲ್ಲಿ ಕಠಿಣವಾಗಿರುತ್ತಾರೆ. ಆದರೆ, ಇಲ್ಲಿ ನೀಡಿರುವ ರಾಶಿಚಕ್ರ ಚಿಹ್ನೆಗಳು ತಮ್ಮ ಅತ್ತೆಯ ಜೊತೆಗಿನ ಬಾಂಧವ್ಯವನ್ನು ಹೆಚ್ಚಿಸಲು ಮತ್ತು ಮೋಡಿ ಮಾಡವಲ್ಲಿ ಹೆಚ್ಚುವರಿ ಯಶಸ್ಸನ್ನು ಕಾಣುವುದರಲ್ಲಿ ಅನುಮಾನವೇ ಇಲ್ಲ..

ವೃಷಭ ರಾಶಿ (Taurus)
ವೃಷಭ ರಾಶಿಯ ವ್ಯಕ್ತಿಗಳು, ಇತರೆ ಜನರಿಗೆ ಬಹು ಬೇಗ ಇಷ್ಟವಾಗುವ ವ್ಯಕ್ತಿತ್ವದವರು ಆಗಿರುತ್ತಾರೆ. ಇದು ಅವರ ಅತ್ತೆಯೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರು ವಾಸ್ತವವಾಗಿ ತಮ್ಮ ಪ್ರಯೋಜನ ಪಡೆದುಕೊಳ್ಳುವ ಉದ್ದೇಶದಿಂದ ಅದನ್ನು ಮಾಡುವುದಿಲ್ಲ, ಬದಲಾಗಿ, ಅವರು ತಮ್ಮ ಜೀವನದಲ್ಲಿನ ಎಲ್ಲಾ ಸಂಬಂಧಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ದೃಢವಾದ ಅಡಿಪಾಯವನ್ನು (Foundation) ಹೊಂದಿರುವ ಸಂಬಂಧಗಳ ಜೊತೆ ಮುನ್ನಡೆಯಲು ಉತ್ಸುಕರಾಗಿದ್ದಾರೆ. ಅವರು ತುಂಬಾ ನಯವಾಗಿ ವರ್ತಿಸುತ್ತಾರೆ ಮತ್ತು ಬೇರೆಯರನ್ನು ಅರ್ಥಮಾಡಿಕೊಳ್ಳಲು ಅವರ ಸಮಯವನ್ನು ಕಳೆಯುತ್ತಾರೆ. ಇದೇ ಕಾರಣದಿಂದ ತಮ್ಮ ಭವಿಷ್ಯದಲ್ಲಿ (Future) ಅತ್ತೆಯಾಗುವ ಮಹಿಳೆಯ ಮನಸ್ಸನ್ನು ಕೂಡ ಕದ್ದು ಬಿಡುತ್ತಾರೆ.

ಇದನ್ನೂ ಓದಿ: ಯೌವನದಲ್ಲಿ ಈ ತಪ್ಪು ಮಾಡಿದ್ರೆ… ಮುಂದೆ ಪಶ್ಚಾತ್ತಾಪ ಪಡಬೇಕಾದೀತು

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿ ಬೇರೆ ಜನರ ಪೋಷಣೆ ಮಾಡುವ ಗುಣವಿರುವ ಚಿಹ್ನೆಯಾಗಿದೆ. ಆದ್ದರಿಂದ, ಅವರು ತಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ಗೌರವಿಸಲು ಮತ್ತು ಕಾಳಜಿಯಿಂದ ನೋಡಿಕೊಳುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಅವರು ಸಮಯವನ್ನು ಕಂಡುಕೊಳ್ಳುವವರೆಗೆ ಕುಟುಂಬದ ಎಲ್ಲಾ ಈವೆಂಟ್‌ಗಳು, ಆಚರಣೆಗಳು, ಪಿಕ್ನಿಕ್‌ಗಳು ಮತ್ತು ಇತರ ಚಟುವಟಿಕೆಗಳಲ್ಲಿ (Activities) ಅವಳನ್ನು ಒಳಗೊಳ್ಳುವ ಮೂಲಕ ತಮ್ಮ ಅತ್ತೆಯೊಂದಿಗೆ ಬಲವಾದ ಸಂಬಂಧವನ್ನು (Relationship) ಬೆಳೆಸಲು ಅವರು ತುಂಬಾ ಪ್ರಯತ್ನಿಸುತ್ತಾರೆ. ಭಾವನಾತ್ಮಕ ಸಂಪರ್ಕವನ್ನು ಉತ್ತೇಜಿಸುವ ಮೂಲಕ ಮತ್ತು ಹೆಚ್ಚು ಸಮಯವನ್ನು ಮನೆಯವರೆಲ್ಲರ ಒಟ್ಟಿಗೆ ಕಳೆಯುವ ಮೂಲಕ ಅವರೊಂದಿಗೆ ಬಲವಾದ ಸಂಬಂಧವನ್ನು ನಿರ್ಮಿಸಲು ಇವರು ಬಯಸುತ್ತಾರೆ.

ಸಿಂಹ ರಾಶಿ (Leo)
ಲಿಯೋ ಅವರು ತಮ್ಮ ಅತ್ತೆಯನ್ನು ಗೆಲ್ಲಲು ಅಗತ್ಯವಿರುವಷ್ಟು ಪ್ರಯತ್ನಗಳನ್ನು ಮಾಡಲು ಸಿದ್ಧರಿದ್ದಾರೆ. ಏಕೆಂದರೆ ಅವರು ಜನರ ಮನವೊಲಿಸುವ ಗುಣ ಹೊಂದಿದ್ದಾರೆ ಎಂಬುದು ತಮ್ಮ ಮೇಲೆ ತಾವು ಇಟ್ಟುಕೊಂಡಿರುವ ನಂಬಿಕೆ. ಅವರು ತಮ್ಮ ಅತ್ತೆಯನ್ನು ಎಂದಿಗೂ ನಿರಾಕರಿಸುವುದಿಲ್ಲ (Reject) ಮತ್ತು ಅವರೊಂದಿಗೆ ಸಂಬಂಧವನ್ನು ನಿರ್ಮಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಾರೆ. ಲಿಯೋ ಅವರು ತಮ್ಮ ಅತ್ತೆಯ ಮನಸ್ಸನ್ನು ಸಂತೋಷವಾಗಿ ಇರಿಸಲು ತಮ್ಮಿಂದ ಆಗುವ ಸಾಕಷ್ಟು ಪ್ರಯತ್ನಗಳನ್ನು ವಿನಿಯೋಗಿಸುವಲ್ಲಿ ಆದ್ಯತೆ ನೀಡುತ್ತಾರೆ. ಇವರ ಇಂತಹ ಗುಣಗಳನ್ನು ಜನರು ಕೊಂಡಾಡಬೇಕು ಎಂಬುದು ಇವರ ಮುಖ್ಯ ಉದ್ದೇಶಗಳಲ್ಲಿ ಒಂದು.

ಇದನ್ನೂ ಓದಿ: Gemini ಮಹಿಳೆಯನ್ನು ಪಟಾಯಿಸಲು ಹೀಗ್ ಮಾಡಿ ಸಾಕು!

ಕನ್ಯಾರಾಶಿ (Virgo)
ಕನ್ಯಾ ರಾಶಿಯವರು ಪರಿಪೂರ್ಣತಾವಾದಿಗಳು ಮತ್ತು ಅವರ ಅತ್ತೆಯೊಂದಿಗಿನ ಸಂಬಂಧಗಳು ಸೇರಿದಂತೆ ಎಲ್ಲವೂ ದೋಷ ರಹಿತವಾಗಿರಬೇಕೆಂದು ಬಯಸುತ್ತಾರೆ. ಅವರು ತಮ್ಮ ಅತ್ತೆಯ ಸಂಪರ್ಕವನ್ನು ಮಾಡಲು ತಮ್ಮ ಮಿತಿಯನ್ನು ಮೀರಿ ಮುಂದಕ್ಕೆ ಹೋಗುತ್ತಾರೆ. ಅವರು ಆಗಾಗ್ಗೆ ಇತರರ ಅಗತ್ಯಗಳನ್ನು ತಮ್ಮ ಅಗತ್ಯತೆಗಳಿಗಿಂತಲೂ ಹೆಚ್ಚಿಗೆ ಪ್ರಾಮುಖ್ಯತೆ (Importance) ನೀಡುತ್ತಾರೆ. ಅದರಂತೆಯೇ ಅವರ ಅತ್ತೆಯೊಂದಿಗಿನ ಸಂಬಂಧಕ್ಕೆ ಬಂದಾಗ ತಮ್ಮ ಆಧ್ಯತೆಗಿಂತಲೂ ಅತ್ತೆಯ ಕೆಲಸಗಳನ್ನು ಮೊದಲು ಮಾಡುತ್ತಾರೆ. ಅವರು ತಮ್ಮ ಅತ್ತೆಯ ಹವ್ಯಾಸಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸುತ್ತಿರಲಿ ಅಥವಾ ಅವರ ಸಲಹೆಯನ್ನು ಪಡೆಯುತ್ತಿರಲಿ ಅವರನ್ನು ತಿಳಿದುಕೊಳ್ಳಲು ಸಿಗುವ ಯಾವುದೇ ಅವಕಾಶವನ್ನು (Chance) ಬಿಟ್ಟುಕೊಡುವುದಿಲ್ಲ.

Follow Us:
Download App:
  • android
  • ios