Asianet Suvarna News Asianet Suvarna News

ಕನಸಿನಲ್ಲಿ ಮಾಜಿ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಬಂದರೇನರ್ಥ?

ರಾತ್ರಿ ನಿದ್ರೆ ಮಾಡಿದಾಗ ಒಳ್ಳೆಯ, ಕೆಟ್ಟ, ವಿಚಿತ್ರ ಹೀಗೆ ಎಲ್ಲ ರೀತಿಯ ಕನಸು ಬೀಳುತ್ತದೆ. ಕೆಲವೊಂದು ಅಚ್ಚರಿ ಹುಟ್ಟಿಸಿದ್ರೆ ಕೆಲವೊಂದು ಕಿರಿಕಿರಿ ಎನ್ನಿಸುತ್ತದೆ. ನಾವು ಕಾಣುವ ಪ್ರತಿಯೊಂದು ಕನಸಿಗೂ ಅರ್ಥವಿದೆ. ಕನಸಿನಲ್ಲಿ ಮಾಜಿ ಪ್ರೇಮಿ ಕಾಣಿಸಿಕೊಂಡ್ರೂ ಅದು ಅನೇಕ ಸಂಗತಿಯನ್ನು ಸೂಚಿಸುತ್ತದೆ.
 

Why We Dream About Past Loves Reasons Your  Dreaming About Your Ex Girlfriend And Boyfriend roo
Author
First Published Sep 8, 2023, 4:35 PM IST

ಕನಸು ಮಾನಸಿಕ ಕಲ್ಪನೆ ಅಥವಾ ಘಟನೆಯಾಗಿದೆ. ನಾವು ನಿದ್ರೆ ಮಾಡುವಾಗ ಕನಸು ಬೀಳೋದು ಸಹಜ. ಬಹುತೇಕ ಎಲ್ಲರೂ ನಿದ್ರೆಯಲ್ಲಿ ಕನಸು ಕಾಣ್ತಾರೆ. ನಾವು ಆರ್ ಇಎಂ ಮೋಡ್ ನಲ್ಲಿದ್ದಾಗ ನಮಗೆ ಕನಸು ಬೀಳುತ್ತದೆ. ನಮ್ಮ ಮೆದುಳು ಅಧಿಕ ಸಕ್ರಿಯವಾಗಿರುವ ಕಾರಣ ರ್ಯಾಪಿಡ್ ಐ ಮೂಮೆಂಟ್ ಸ್ಲೀಪ್ ನಲ್ಲಿರುವಾಗ ಕನಸು ಬೀಳುತ್ತದೆ. ನಾವು ಎದ್ದಿರುವಾಗ ನಮ್ಮ ಮೆದುಳು ಎಷ್ಟು ಆಕ್ಟಿವ್ ಆಗಿರುತ್ತದೆಯೋ ಅಷ್ಟೇ  ಆರ್ ಇಎಂ ಮೋಡ್ ನಲ್ಲೂ ಮೆದುಳು ಆಕ್ಟಿವ್ ಆಗಿರುತ್ತದೆ. ಪ್ರತಿ ದಿನ ಬೇರೆ ಬೇರೆ ಕನಸುಗಳು ಬೀಳುತ್ತವೆ. ಕೆಲವರಿಗೆ ಒಂದೇ ಕನಸು ಪದೇ ಪದೇ ಬರುತ್ತದೆ. ಕನಸಿನಲ್ಲಿ ಆಪ್ತರು, ಸ್ನೇಹಿತರು, ಶತ್ರುಗಳು, ಅಪರಿಚಿತರು ಎಲ್ಲರನ್ನೂ ನಾವು ಕಾಣ್ತೇವೆ. 

ಅನೇಕ ಜನರು ತಮ್ಮ ಕನಸಿನಲ್ಲಿ ಮಾಜಿ ಪ್ರೇಮಿ (Ex Lover)ಗಳನ್ನು ಕಾಣ್ತಾರೆ. ಅವರಿಗೆ ಸಂಬಂಧಿಸಿದ ಸ್ವಪ್ನ (Dream) ಗಳು ಬೀಳ್ತಿರುತ್ತವೆ. ಮಾಜಿ ಪ್ರೇಮಿಗಳು ಕನಸಿನಲ್ಲಿ ಬರಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.

ರಾತ್ರಿ ಹೊತ್ತು ಬೆಕ್ಕು ಜೋರಾಗಿ ಅತ್ತರೆ ಅಶುಭವೇ?

ಕಳೆದ 26 ವರ್ಷಗಳಿಂದ ಕನಸಿನ ಬಗ್ಗೆ ಅಧ್ಯಯನ (Study) ಮಾಡ್ತಿರುವ ಥೆರೆಸಾ ಚೆಯುಂಗ್ ದಿ ಡ್ರೀಮ್ ಡಿಕ್ಷನರಿ ಎ ಟು ಝೆಡ್ (The Dream Dictionary A To Z) ಪುಸ್ತಕ ಬರೆದಿದ್ದಾರೆ. ಸಂದರ್ಶನದಲ್ಲಿ ಥೆರೆಸಾ ಚೆಯುಂಗ್, ಸ್ವಪ್ನದಲ್ಲಿ ಮಾಜಿ ಸಂಗಾತಿ ಕಾಣಿಸಿಕೊಂಡ್ರೆ ಏನು ಅರ್ಥ ಎಂಬುದನ್ನು ಹೇಳಿದ್ದರು. ಅವರ ಪ್ರಕಾರ, ನೀವು ಈಗ್ಲೂ ನಿಮ್ಮ ಮಾಜಿಯನ್ನು ಪ್ರೀತಿಸುತ್ತೀರಿ ಅಥವಾ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ. 

ಕನಸಿನಲ್ಲಿ ಮಾಜಿಗಳು ಕಾಣಿಸಿಕೊಳ್ಳುವುದು ನೀವು ಅರ್ಧಕ್ಕೆ ಬಿಟ್ಟ ಕೆಲಸವನ್ನು ಕೂಡ ಸೂಚಿಸುತ್ತದೆ. ಅಂದ್ರೆ ನೀವು ನಿಮ್ಮ ಮಾಜಿ ಜೊತೆ ಮಾಡಬೇಕಾಗಿದ್ದ ಕೆಲವೊಂದು ಅರ್ಧಕ್ಕೆ ನಿಂತಿದ್ದರೆ ಇಂಥ ಕನಸು ಬೀಳುತ್ತದೆ. ಕೆಲವೊಮ್ಮೆ ನಿಮ್ಮ ಮಾಜಿ ಜೊತೆ ಮಾಡಿರುವ ತಪ್ಪನ್ನು ಮುಂದೆ ಮಾಡಬಾರದು ಎಂಬುದನ್ನು ಸೂಚಿಸಲು ಕೂಡ ಇಂಥ ಕನಸು ಬೀಳುವುದಿದೆ. ನಿಮ್ಮ ಮಾಜಿ ನಿಮ್ಮ ಜೀವನದ ಕುತೂಹಲ ಅಥವಾ ಅಡ್ವಂಚರ್ ಆಗಿರಬಹುದು. ಆದ್ರೀಗ ನಿಮ್ಮ ಜೀವನದಲ್ಲಿ ಅದು ಮಿಸ್ ಆಗ್ತಿದ್ದು, ಅದನ್ನು ಬಯಸುತ್ತಿರುವ ನಿಮ್ಮ ಮನಸ್ಸು ನಿಮ್ಮ ಮಾಜಿಯನ್ನು ನೆನಪಿಸಿಕೊಳ್ಳುತ್ತಿರಬಹುದು ಎನ್ನುತ್ತಾರೆ ಥೆರೆಸಾ. 

ಮಗಳ ಮದುವೆಯಲ್ಲಿ ತಪ್ಪಿಯೂ ಈ ಉಡುಗೊರೆ ನೀಡಲೇಬೇಡಿ!

ನಿಮ್ಮ ಮಾಜಿ ಮಹತ್ವವನ್ನು ತಿಳಿಸಲು ಕೂಡ ನಿಮ್ಮ ಮೆದುಳು ಕನಸಿನ ರೂಪದಲ್ಲಿ ನಿಮಗೆ ಸಂಕೇತ ನೀಡಬಹುದು. ಅಂದ್ರೆ ನಿಮ್ಮ ಸಂಗಾತಿ ನಮ್ಮ ಜೀವನದಲ್ಲಿ ಮಹತ್ವವುಳ್ಳವರಾಗಿದ್ದರು. ಅವರು ಸದಾ ನಿಮ್ಮ ಮನಸ್ಸಿನಲ್ಲಿರುತ್ತಾರೆ. ಅವರ ಬಗ್ಗೆ ಇನ್ನೊಮ್ಮೆ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂಬುದನ್ನು ಕೂಡ ಈ ಕನಸು ಸೂಚಿಸುತ್ತದೆ. ಇಂಥ ಕನಸು ಬಿದ್ದಾಗ ನೀವು ನಿಮ್ಮ ವ್ಯಕ್ತಿತ್ವದ ಬಗ್ಗೆ ಆಲೋಚನೆ ಮಾಡಲು ಶುರು ಮಾಡ್ತೀರಿ, ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಮುಂದಾಗ್ತೀರಿ ಎನ್ನುತ್ತಾರೆ ಥೆರೆಸಾ. 

ಮಾಜಿ ಪ್ರೇಮಿಯನ್ನು ಕನಸಿನಲ್ಲಿ ನಾನಾ ವಿಧಗಳಲ್ಲಿ ನಾವು ನೋಡ್ಬಹುದು. ಅದಕ್ಕೆ ಬೇರೆ ಬೇರೆ ಅರ್ಥಗಳಿವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.
• ನಿಮ್ಮ ಕನಸಿನಲ್ಲಿ ಮಾಜಿ ಸಂಗಾತಿ ಸಿಹಿ ತಿಂದಂತೆ ಕಂಡ್ರೆ ನೀವಿಬ್ಬರು ಮತ್ತೆ ಒಂದಾಗಲಿದ್ದೀರಿ ಎಂಬ ಸೂಚನೆಯಾಗಿದೆ.
• ಕನಸಿನಲ್ಲಿ ಮಾಜಿ ಸಂಗಾತಿ ನಕ್ಕಂತೆ ಕಂಡ್ರೆ ಅವರು ನಿಮ್ಮನ್ನು ಇನ್ನೂ ಬಯಸುತ್ತಿದ್ದಾರೆ, ನೀವು ಅವರನ್ನು ಬಯಸುತ್ತಿದ್ದೀರಿ ಎಂದರ್ಥ.
• ನಿಮ್ಮ ಮಾಜಿ ಸಂಗಾತಿ ಕೆಂಪು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡ್ರೆ ನೀವು ಅವರ ಜೊತೆ ಮಾತನಾಡಲು ಬಯಸುತ್ತಿದ್ದೀರಿ. ಅವರ ಜೊತೆ ಮದುವೆಯಾಗುವ ಸಂಭವವಿದೆ ಎಂಬ ಸೂಚನೆಯಾಗಿದೆ.
 

Follow Us:
Download App:
  • android
  • ios