Asianet Suvarna News Asianet Suvarna News

ಊಟ ಮಾಡಿ ತಟ್ಟೆಯಲ್ಲೇ ಕೈ ತೊಳೀತೀರಾ? ಬೇಡ ಅಭ್ಯಾಸ ಬಿಡಿ. ನಷ್ಟ ಅನುಭವಿಸುತ್ತೀರಿ!

ಹೊಟ್ಟೆ, ಬಟ್ಟೆಗೆ ಹಣ ಬೇಕು. ಹಣ ಸಂಪಾದನೆ ಮಾಡಲು ತಾಯಿ ಲಕ್ಷ್ಮಿ ಕೃಪೆ ಬೇಕು. ನಾವು ಪ್ರತಿ ದಿನ ಲಕ್ಷ್ಮಿಗೆ ಅವಮಾನ ಮಾಡಿದ್ರೆ ಆಕೆ ಆಶೀರ್ವಾದ ಹೇಗೆ ಸಿಗಲು ಸಾಧ್ಯ?. ಊಟ ಮಾಡುವ ಮೊದಲು ಅದ್ರ ನಿಯಮ ತಿಳಿದ್ರೆ ಲಕ್ಷ್ಮಿ ಮುನಿಸಿಕೊಳ್ಳೋದನ್ನು ತಪ್ಪಿಸಬಹುದು. 
 

Why Washing Hands In Plate After Eating Is Not Good
Author
First Published Dec 20, 2022, 3:48 PM IST

ನಮ್ಮ ಪ್ರತಿ ದಿನದ ಹೋರಾಟ ಆಹಾರಕ್ಕಾಗಿಯೇ ಆಗಿರುತ್ತದೆ. ಮನೆಗೆ ಲಕ್ಷ್ಮಿ ಪ್ರವೇಶ ಮಾಡಿದ್ರೆ ಮಾತ್ರ ಹೊಟ್ಟೆ ತುಂಬ ಆಹಾರ ಸಿಗಲು ಸಾಧ್ಯ. ಪ್ರತಿ ದಿನ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ನಮಗೆ ತಿಳಿದೋ, ತಿಳಿಯದೆಯೋ ಅಥವಾ ಐಷಾರಾಮಿಗಾಗಿಯೋ ನಾವು ಮಾಡುವ ತಪ್ಪುಗಳು ನಮ್ಮನ್ನು ಬಡತನಕ್ಕೆ ನೂಕುತ್ತದೆ. ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿತ್ಯ ನಾವು ಮಾಡುವ ತಪ್ಪುಗಳಲ್ಲಿ ಊಟದ ತಟ್ಟೆಯಲ್ಲಿ ಕೈತೊಳೆಯುವುದು ಕೂಡ ಸೇರಿದೆ.

ನಮ್ಮ ಶಾಸ್ತ್ರಗಳಲ್ಲಿ ಅಡುಗೆ (Cooking)  ಹೇಗೆ ತಯಾರಿಸಬೇಕು ಎಂಬುದರಿಂದ ಹಿಡಿದು ಎಲ್ಲಿ, ಹೇಗೆ ಕುಳಿತು ಊಟ (Lunch) ಮಾಡಬೇಕು ಎನ್ನುವವರೆಗೆ ಎಲ್ಲವನ್ನೂ ಹೇಳಲಾಗಿದೆ. ಅದ್ರ ಜೊತೆಗೆ ಆಹಾರ (Food) ಸೇವನೆ ಮಾಡಿದ ತಟ್ಟೆಯಲ್ಲಿಯೇ ಕೈ ತೊಳೆದ್ರೆ ಏನೆಲ್ಲ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎಂಬುದನ್ನು ಕೂಡ ವಿವರಿಸಲಾಗಿದೆ. ನೀವೂ ಊಟ ಮಾಡಿದ ತಟ್ಟೆಯಲ್ಲಿ ಕೈತೊಳೆಯುವ ಅಭ್ಯಾಸ ಹೊಂದಿದ್ದರೆ ಇಂದೇ ಬಿಡಿ. ಇಲ್ಲವೆಂದ್ರೆ ಅನ್ನಪೂರ್ಣೆ ಹಾಗೂ ಲಕ್ಷ್ಮಿ (Lakshmi) ಇಬ್ಬರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ನಾವಿಂದು ತಟ್ಟೆಯಲ್ಲಿ ಕೈ ತೊಳೆದ್ರೆ ಏನೆಲ್ಲ ನಷ್ಟ ಎಂಬುದನ್ನು ನಿಮಗೆ ಹೇಳ್ತೆವೆ.

Vastu Tips : ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲು ಹೀಗೆ ಮಾಡಿ.

ಊಟದ ತಟ್ಟೆಯಲ್ಲಿ ಕೈ ತೊಳೆದ್ರೆ ಕಾಡುತ್ತೆ ಈ ಸಮಸ್ಯೆ :
ಮುನಿಸಿಕೊಳ್ತಾರೆ ದೇವಿಯರು :
ಅನ್ನವಿಲ್ಲದೆ ಜೀವನ ಕಷ್ಟ. ಧಾರ್ಮಿಕ ಗ್ರಂಥಗಳಲ್ಲಿ ಆಹಾರವನ್ನು ಲಕ್ಷ್ಮಿ ಮತ್ತು ಅನ್ನಪೂರ್ಣೆ (Annapurna) ಗೆ ಹೋಲಿಸಲಾಗಿದೆ. ಆಹಾರದ ನಿಯಮಗಳನ್ನು ಪಾಲಿಸದೆ ಹೋದ್ರೆ  ಅನ್ನಪೂರ್ಣೆಗೆ ಅವಮಾನ ಮಾಡಿದಂತೆ. ಮುಖ್ಯವಾಗಿ ಊಟ ಮಾಡಿದ ನಂತರ ಅದೇ ತಟ್ಟೆಯಲ್ಲಿ ಕೈತೊಳೆದುಕೊಂಡರೆ ಅದು ಲಕ್ಷ್ಮಿ ದೇವಿಗೆ ಮಾಡಿದ ಅತಿ ದೊಡ್ಡ ಅವಮಾನವಾಗುತ್ತದೆ.  ಇದ್ರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಇಂಥ ಮನೆಯಲ್ಲಿ ಹಣ (Money) ವಿದ್ದರೂ ಹೆಚ್ಚು ಸಮಯ ಅದು ನಿಲ್ಲುವುದಿಲ್ಲ. ಖಾಲಿ ಊಟದ ತಟ್ಟೆಯನ್ನು ಅವಮಾನಿಸಿದವರಿಗೆ ತಾಯಿ ಲಕ್ಷ್ಮಿಯ ಆಶೀರ್ವಾದ ಸಿಗುವುದಿಲ್ಲ.

ನಕಾರಾತ್ಮಕ ಶಕ್ತಿಯ (Negative Energy) ಹೆಚ್ಚಳ : ನಾವು ಊಟ ಮಾಡಿದ ತಟ್ಟೆಯಲ್ಲಿಯೇ ಕೈ ತೊಳೆದ್ರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಊಟ ಮಾಡಿದ ತಟ್ಟೆಯಲ್ಲಿ ಕೈಗಳನ್ನು ತೊಳೆದರೆ ಆಗ ದೇಹದಿಂದ ಹೊರಬರುವ ಶಕ್ತಿ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಅದು ನಮ್ಮ ಸುತ್ತ ಒಗ್ಗೂಡಲು ಶುರುವಾಗುತ್ತದೆ. ಈ ನಕಾರಾತ್ಮಕ ಶಕ್ತಿ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ದೇಹಕ್ಕೆ ಅನೇಕ ರೀತಿಯಲ್ಲಿ ಹಾನಿಯಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಊಟದ ತಟ್ಟೆಯಲ್ಲಿ ಕೈ ತೊಳೆಯಬಾರದು. 

ಗ್ರಹಗಳ (Planets) ಅಸಮಾಧಾನ : ಆಹಾರಕ್ಕೆ ನೀವು ಮಾಡುವ ಅವಮಾನವು ಗ್ರಹಗಳ ಅಸಮಾಧಾನಕ್ಕೆ ಕಾರಣವಾಗಬಹುದು. ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ಒಂದು ಅಥವಾ ಇನ್ನೊಂದು ಆಹಾರವನ್ನು ಪ್ರತಿನಿಧಿಸುತ್ತವೆ. ಆಹಾರದಲ್ಲಿ ನಾವು ಪ್ರತಿ ನಿತ್ಯ ಅನೇಕ ಬಗೆಯ ಧಾನ್ಯಗಳನ್ನು ಸೇವನೆ ಮಾಡ್ತೇವೆ. ನೀವು ಊಟ ಮಾಡಿದ ತಟ್ಟೆಯಲ್ಲಿ ಕೈ ತೊಳೆದು ಆಹಾರವನ್ನು ಅವಮಾನಿಸಿದರೆ ಗ್ರಹಗಳಿಗೆ ಅಪಮಾನ ಮಾಡಿದಂತೆ ಆಗುತ್ತದೆ. ಆಹಾರವನ್ನು ಅವಮಾನಿಸುವುದು ಶುಕ್ರ ಮತ್ತು ಗುರುವನ್ನು ಅವಮಾನಿಸಿದಂತೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೀವು ತಟ್ಟೆಯಲ್ಲಿ ಕೈ ತೊಳೆದ್ರೆ ಗ್ರಹಗಳ ಅಶುಭ ಫಲ ನಿಮಗೆ ಸಿಗುತ್ತದೆ. 

Flirting ಮಾಡೋದರಲ್ಲಿ ಈ zodiac signನ ಜನರು ನಿಸ್ಸೀಮರು!

ವೈಜ್ಞಾನಿಕ ಕಾರಣ (Scientific Reason) : ಬರೀ ಜ್ಯೋತಿಷ್ಯ ಕಾರಣವಲ್ಲ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ನಾವು ಊಟದ ತಟ್ಟೆಯಲ್ಲಿ ಕೈ ತೊಳೆಯುವುದ್ರಿಂದ ರೋಗಾಣುಗಳು ತಟ್ಟೆಯಲ್ಲಿ ಇರುತ್ತವೆ. ನಾವು ಮತ್ತೆ ಆ ತಟ್ಟೆಯನ್ನು ಸ್ವಚ್ಛಗೊಳಿಸಿ ಬಳಸಿದ್ರೂ ರೋಗಾಣು ಸತ್ತಿರುವುದಿಲ್ಲ. ಅವು ನಮ್ಮ ದೇಹವನ್ನು ಸೇರಿ ಆರೋಗ್ಯ ಹಾಳು ಮಾಡುತ್ತವೆ. 
 

Follow Us:
Download App:
  • android
  • ios