Asianet Suvarna News Asianet Suvarna News

ಮನೆಯಲ್ಲಿ ಈ ಬಿಳಿ ವಸ್ತುವ ಅಪ್ಪಿತಪ್ಪಿ ಕೆಳಗೆ ಬೀಳಿಸಿದರೂ ಅಪಶಕುನ

ಹಿಂದೂ ಧರ್ಮ, ವಾಸ್ತು ಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಆಗಾಗ ಕೆಲ ವಸ್ತುಗಳು ನಮ್ಮ ಕೈನಿಂದ ಬೀಳ್ತಿರುತ್ತವೆ. ನಾವು ಅದನ್ನು ನಿರ್ಲಕ್ಷ್ಯ ಮಾಡ್ಬಾರದು. ಯಾವ ವಸ್ತು ಕೆಳಗೆ ಬಿದ್ರೆ ಅಶುಭ ಎಂಬುದು ಗೊತ್ತಾದ್ರೆ ಮೊದಲೇ ಎಚ್ಚೆತ್ತುಕೊಳ್ಳಬಹುದು. 
 

White Things Falls Out Of Hands Are Considered Inauspicious roo
Author
First Published Nov 25, 2023, 5:09 PM IST

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಮುಖ್ಯ. ಅಡುಗೆ ಮನೆಯಲ್ಲಿರುವ ಆಹಾರ ಪದಾರ್ಥಗಳಿಂದ ಹಿಡಿದು ಮುಖ್ಯ ದ್ವಾರದಲ್ಲಿರುವ ವಸ್ತುಗಳು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಮನೆಗೆ ತರುವ ಕೆಲ ವಸ್ತುಗಳು ಶುಭ ನೀಡಿದ್ರೆ ಕೆಲ ವಸ್ತುಗಳು ಅಶುಭವಾಗಿರುತ್ತವೆ. ಎಲ್ಲ ವಸ್ತುಗಳನ್ನು ನಾವು ಎಲ್ಲ ದಿನ ತರಲು ಸಾಧ್ಯವಿಲ್ಲ. ನಮ್ಮ ನಿಮ್ಮ ಮನೆಯಲ್ಲಿ ಅನೇಕ ಬಿಳಿ ವಸ್ತುಗಳಿರುತ್ತವೆ. ಈ ಬಿಳಿ ವಸ್ತುಗಳು ವಾಸ್ತು ಶಾಸ್ತ್ರದ ಜೊತೆ ಬಲವಾದ ನಂಟನ್ನು ಹೊಂದಿವೆ. ನಿಮ್ಮ ಮನೆಯಲ್ಲಿರುವ ಕೆಲ ಬಿಳಿ ವಸ್ತುಗಳನ್ನು ಅಪ್ಪಿತಪ್ಪಿಯೂ ನಿಮ್ಮ ಕೈನಿಂದ ಬೀಳಿಸಬಾರದು. ಒಂದ್ವೇಳೆ ಆ ವಸ್ತುಗಳು ಕೈನಿಂದ ಕೆಳಗೆ ಜಾರಿ ಬಿದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಾವಿಂದು ಯಾವ ವಸ್ತುಗಳು ನಿಮ್ಮ ಕೈನಲ್ಲಿ ಜಾರಿ ಬೀಳದಂತೆ ನೋಡಿಕೊಳ್ಳಬೇಕು ಅನ್ನೋದನ್ನು ಹೇಳ್ತೇವೆ. 

ಸಕ್ಕರೆ (Sugar): ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುವ ಬಿಳಿ ಬಣ್ಣದ ಸಿಹಿ ವಸ್ತು ಸಕ್ಕರೆ. ಟೀ, ಕಾಫಿ ಸೇರಿದಂತೆ ಸಿಹಿ ಖಾದ್ಯ ತಯಾರಿಸಲು ಇದನ್ನು ಬಳಸ್ತಾರೆ. ಸಕ್ಕರೆ ಸೇವನೆ ಮಾಡದಂತೆ ಆರೋಗ್ಯ (Health)  ತಜ್ಞರು ಸಲಹೆ ಕೂಡ ನೀಡ್ತಾರೆ. ಈ ಸಕ್ಕರೆ ಆರೋಗ್ಯದ ಮೇಲೆ ಮಾತ್ರವಲ್ಲ ನಮ್ಮ ಭವಿಷ್ಯ (Future ) ದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಕೈನಿಂದ ಸಕ್ಕರೆ ಕೆಳಗೆ ಬಿದ್ರೆ ಅಶುಭ. ಮನೆಯಲ್ಲಿ ಅಹಿತಕರ ಘಟನೆ ನಡೆಯುತ್ತದೆ, ದುಃಖವುಂಟಾಗುತ್ತದೆ ಎಂಬುದರ ಸಂಕೇತವಾಗಿದೆ. ಮನೆಗೆ ಅತಿಥಿಗಳು ಬಂದಾಗ ಅಥವಾ ದೇವರ ಪೂಜೆಗೆ ಬೇರೆ ಯಾವುದೇ ಸಿಹಿ ಇಲ್ಲ ಎಂದಾಗ ಸಕ್ಕರೆಯನ್ನು ನೀಡ್ತೇವೆ. ಈ ಸಕ್ಕರೆ ಕೈತಪ್ಪಿ ಬಿದ್ರೆ ಒಳ್ಳೆಯದಲ್ಲ. ಕೆಟ್ಟ ಸುದ್ದಿ ಬರುವ ಸಾಧ್ಯತೆ ಇರುತ್ತದೆ.

ಸಂಜೆ ಈ ಚಿಹ್ನೆಗಳು ಕಂಡಲ್ಲಿ ಲಕ್ಷ್ಮಿ ಕೃಪೆ ಗ್ಯಾರಂಟಿ..

ಉಪ್ಪು (Salt): ಸಕ್ಕರೆಯಂತೆ ಅಡುಗೆಗೆ ಅತಿ ಮುಖ್ಯ ಉಪ್ಪು. ಇದಿಲ್ಲದೆ ಊಟ ಸಾಧ್ಯವಿಲ್ಲ. ಉಪ್ಪು ನಿಮ್ಮ ಕೈನಿಂದ ನೆಲಕ್ಕೆ ಬಿದ್ದರೆ ಅದನ್ನು ಅಮಂಗಲ ಎನ್ನಲಾಗುತ್ತದೆ. ಹಣ ಹಾಗೂ ಧಾನ್ಯಗಳ ಸಮಸ್ಯೆ ಮನೆಯಲ್ಲಿ ಕಾಡುತ್ತದೆ. ಪದೇ ಪದೇ ನಿಮ್ಮ ಕೈನಿಂದ ಉಪ್ಪು ಬೀಳ್ತಿದ್ದರೆ ಹಣ ನಿಮ್ಮ ಕೈನಲ್ಲಿ ನಿಲ್ಲೋದಿಲ್ಲ ಎಂಬ ಸೂಚನೆಯಾಗಿದೆ. ಆರ್ಥಿಕ ಸಂಕಷ್ಟವನ್ನು ಕುಟುಂಬ ಅನುಭವಿಸಬೇಕು. ಬಡತನ ಕಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಕೈನಿಂದ ಉಪ್ಪು ಆಗಾಗ ಬೀಳ್ತಿದ್ದರೆ ಇದು ನಿಮ್ಮ ಜೀವಿತಾವಧಿ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. 

ಅನಾರೋಗ್ಯ, ಬ್ಯಾಡ್ ಲಕ್ ಹಿಂಬಾಲಿಸಲು ಬಳಸೋ ಕಾರಿನ ಬಣ್ಣವೂ ಕಾರಣವಾಗುತ್ತಾ?

ಅಕ್ಕಿ (Rice) : ಅಕ್ಕಿಯನ್ನು ಅನ್ನಪೂರ್ಣೆಗೆ ಹೋಲಿಕೆ ಮಾಡಲಾಗುತ್ತದೆ. ಅಕ್ಕಿಯನ್ನು ಕಾಲಿನಲ್ಲಿ ತುಳಿಯುವುದಿಲ್ಲ. ಅನ್ನ ತಿನ್ನುವ ಮೊದಲು ನಮಸ್ಕಾರ ಮಾಡಿ ಸೇವನೆ ಮಾಡಲಾಗುತ್ತದೆ. ಅನ್ನ ಮಾಡುವ ಸಮಯದಲ್ಲಿ ಅನೇಕರು ಕೈನಿಂದ ಅಕ್ಕಿ ತೆಗೆಯುತ್ತಾರೆ. ಈ ವೇಳೆ ನಾಲ್ಕೈದು ಅಕ್ಕಿ ಕಾಲು ಕೆಳಗೆ ಬೀಳುತ್ತದೆ. ಇದನ್ನು ಕೂಡ ಅಶುಭ ಎನ್ನಲಾಗುತ್ತದೆ. ಅಕ್ಕಿ ಕೆಳಗೆ ಬಿದ್ರೆ ದುಃಖ ಕಾಡುತ್ತದೆ ಎಂದು ಹೇಳಲಾಗುತ್ತದೆ. 

ತೆಂಗಿನಕಾಯಿ (Coconut) : ತೆಂಗಿನಕಾಯಿಯನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತೆಂಗಿನ ಕಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಈ ತೆಂಗಿನ ಕಾಯಿ ಕೂಡ ನೆಲಕ್ಕೆ ಬೀಳೋದು ಒಳ್ಳೆಯದಲ್ಲ. ವೃತ್ತಿ ಜೀವನ ಹಾಗೂ ಉದ್ಯೋಗದಲ್ಲಿ ಸಮಸ್ಯೆ ಕಾಡುತ್ತದೆ. ಪ್ರಗತಿಗೆ ಅಡ್ಡಿಯುಂಟಾಗುತ್ತದೆ. 

ಹಾಲು (Milk) : ಗ್ಲಾಸ್ ನಲ್ಲಿ ಹಾಕಿದ ಹಾಲು ಕೈಜಾರಿ ಬೀಳೋದಿದೆ. ನೀವು ಆಗಾಗ ಹಾಲನ್ನು ಕೆಳಗೆ ಬೀಳಿಸುತ್ತಿದ್ದರೆ ಅದು ಒಳ್ಳೆಯದಲ್ಲ. ಮಕ್ಕಳ ಜೀವನದಲ್ಲಿ ಕೆಲವು ಸಮಸ್ಯೆಯಾಗುವ ಸಾಧ್ಯತೆ ಇದೆ.  

Follow Us:
Download App:
  • android
  • ios