Asianet Suvarna News Asianet Suvarna News

Jyotish Shastra : ಇಷ್ಟವಾಯ್ತು ಅಂತಾ ಎಲ್ಲ ದಿನ ಎಲ್ಲ ವಸ್ತು ಖರೀದಿಸ್ಬೇಡಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ದಿನಕ್ಕೂ, ಸಮಯಕ್ಕೂ ಮಹತ್ವವಿದೆ. ಆಯಾ ಸಮಯಕ್ಕೆ ತಕ್ಕಂತೆ ಆಯಾ ಕೆಲಸ ಮಾಡ್ಬೇಕು. ಅನೇಕ ಬಾರಿ ತಪ್ಪು ಸಮಯದಲ್ಲಿ ನಾವು ಮಾಡುವ ಒಳ್ಳೆಯ ಕೆಲಸ ಕೂಡ ತಪ್ಪು ಪರಿಣಾಮ ಬೀರುತ್ತದೆ. 
 

Which Day Is Best For Shopping according to astrology
Author
Bangalore, First Published Aug 23, 2022, 3:22 PM IST

ಶಾಪಿಂಗ್ ಮಾಡೋದು ಯಾರಿಗೆ ಇಷ್ಟವಿಲ್ಲ ಹೇಳಿ. ರಜೆ ಸಿಕ್ಕಾಗೆಲ್ಲ ಶಾಪಿಂಗ್ ಮಾಲ್ ಸುತ್ತೋರು ಒಂದಿಷ್ಟು ಮಂದಿಯಾದ್ರೆ ಮತ್ತೆ ಕೆಲವರು ಮನೆಯಲ್ಲೇ ಕುಳಿತು ಆನ್ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡ್ತಾರೆ. ಆದ್ರೆ ಹಿಂದೂ ಧರ್ಮದಲ್ಲಿ  ಪ್ರತಿ ಕೆಲಸಕ್ಕೂ ದಿನ, ಸಮಯ ಮತ್ತು ಮುಹೂರ್ತವನ್ನು ಇಡಲಾಗಿದೆ. ಯಾವುದೇ ವಸ್ತುಗಳನ್ನು ಸರಿಯಾದ ಸಮಯಕ್ಕೆ ಖರೀದಿಸಬೇಕು. ಇದರಿಂದ ಮನೆಗೆ ಬರುವ ವಸ್ತುಗಳು ಮಂಗಳಕರವಾಗಿರುತ್ತದೆ. ಶುಭ ಮುಹೂರ್ತದಲ್ಲಿ ವಸ್ತುಗಳನ್ನು ಖರೀದಿಸಿದ್ರೆ ಮನೆಯೊಳಗೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಎಂದು ಹಿರಿಯರು ನಂಬುತ್ತಾರೆ. ಸರಿಯಾದ ದಿನದಂದು ಶಾಪಿಂಗ್ ಮಾಡದೆ ಬೇರೆ ದಿನ ಶಾಪಿಂಗ್ ಮಾಡಿದ್ರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಏಳು ದಿನಗಳು ಕೆಲವು ಗ್ರಹಗಳಿಗೆ ಮತ್ತು ದೇವರಿಗೆ ಸಂಬಂಧಿಸಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ವಸ್ತುವನ್ನು ಖರೀದಿಸಲು ಯಾವ ದಿನ ಶುಭವೆಂದು ನಾವು ಹೇಳ್ತೇವೆ.

ಸೋಮವಾರ (Monday) : ಸೋಮವಾರ ಚಂದ್ರ (Moon) ಮತ್ತು ಶಿವ (Shiva) ನ ದಿನವೆಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ (Astrology ) ದ ಪ್ರಕಾರ, ಈ ದಿನ ಬಿಳಿ ಬಣ್ಣದ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಹಾಲು, ಅಕ್ಕಿ, ಸಿಹಿತಿಂಡಿಗಳು ಮತ್ತು ಖೋವಾವನ್ನು ಖರೀದಿಸಬಹುದು. ಈ ದಿನ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಾರದು.

ಮಂಗಳವಾರ :  ಮಂಗಳವಾರವನ್ನು ಹನುಮಂತನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಭೂಮಿ, ಮನೆ ಖರೀದಿ ಮತ್ತು ಮಾರಾಟವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಮರ ಮತ್ತು ಚರ್ಮದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು.

ಗಣೇಶನ ಹಬ್ಬಕ್ಕಿನ್ನು ಒಂದೇ ವಾರ, ಮೋದಕ ಮಾಡೋದು ಹೇಗೆ ತಿಳ್ಕೊಂಡು ಬಿಡಿ

ಬುಧವಾರ : ಬುಧವಾರ ಬುಧ ದೇವರು ಮತ್ತು ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನ ಮನೆಯ ಅಲಂಕಾರ ಸಾಮಗ್ರಿಗಳು, ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಲೇಖನ ಸಾಮಗ್ರಿಗಳನ್ನು ಖರೀದಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ದಿನ ಹೊಸ ಪಾತ್ರೆಗಳು ಮತ್ತು ಅಕ್ಕಿಯನ್ನು ಖರೀದಿಸುವುದನ್ನು ತಪ್ಪಿಸಬೇಕು.

ಗುರುವಾರ : ಗುರುವಾರ ಗುರು ಬೃಹಸ್ಪತಿ ದೇವ ಮತ್ತು ಭಗವಂತ ವಿಷ್ಣುವಿನ ದಿನ. ಈ ದಿನ ಹೊಸ ಆಸ್ತಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಚೂಪಾದ ವಸ್ತುಗಳು ಮತ್ತು ಬಟ್ಟೆಗಳನ್ನು ಖರೀದಿಸಬಾರದು.

ಶುಕ್ರವಾರ : ಶುಕ್ರವಾರವನ್ನು ಶುಕ್ರ ಗ್ರಹ ಮತ್ತು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನದಿಂದ ಮೇಕಪ್ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ದಿನ ಪೂಜೆ ವಸ್ತುಗಳು, ಮನೆ, ಭೂಮಿಯನ್ನು ಖರೀದಿಸುವುದನ್ನು ತಪ್ಪಿಸಬೇಕು.

ಶನಿವಾರ : ಶನಿವಾರವನ್ನು ಶನಿ ದೇವರಿಗೆ ಅರ್ಪಿಸಲಾಗಿದೆ. ಶನಿವಾರದಂದು ಎಣ್ಣೆ, ಕಬ್ಬಿಣ, ಮರ, ಉಪ್ಪು, ಪೊರಕೆ, ಮಸಾಲೆ ಮತ್ತು ಚರ್ಮದ ವಸ್ತುಗಳನ್ನು ಖರೀದಿಸಬಾರದು. ಈ ದಿನ ಆಭರಣ, ಬೆಳ್ಳಿ, ವಜ್ರ, ಚಿನ್ನ, ಪಚ್ಚೆ, ನೀಲಮಣಿ ವಸ್ತುಗಳನ್ನು ಖರೀದಿಸುವುದು ಶುಭ ಎಂದು ಪರಿಗಣಿಸಲಾಗಿದೆ. 

ಶನಿ ಕೇತು ದೋಷ ಕಳೆದುಕೊಳ್ಳಲು ಈ ಬಣ್ಣದ ನಾಯಿ ಸಾಕಿ..!

ಭಾನುವಾರ : ಭಾನುವಾರ ಸೂರ್ಯ ದೇವರ ದಿನ. ಈ ದಿನ ತಾಮ್ರದ ವಸ್ತುಗಳು, ಗೋಧಿ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕತ್ತರಿಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಈ ದಿನ ಸಾಸಿವೆ ಎಣ್ಣೆ, ಕಬ್ಬಿಣದ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸಬಾರದು.

ಖರೀದಿಸಬಾರದು ಎಂಬ ವಸ್ತುಗಳನ್ನು ನಾವು ಅದೇ ದಿನ ಖರೀದಿಸಿದ್ರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ದೋಷವುಂಟಾಗುವ ಸಾಧ್ಯತೆಯಿರುತ್ತದೆ. ಹಾಗೆ ವಸ್ತುಗಳು ಬಾಳಿಕೆ ಬರದೆ ಇರಬಹುದು. ವಸ್ತುಗಳು ಮನೆ ಪ್ರವೇಶ ಮಾಡ್ತಿದ್ದಂತೆ ಕುಟುಂಬಸ್ಥರಲ್ಲಿ ಭಿನ್ನಾಭಿಪ್ರಾಯ, ಅನಾರೋಗ್ಯ ಕೂಡ ಕಾಡಬಹುದು.
 

Follow Us:
Download App:
  • android
  • ios