Chandra Grahan 2022: ಈ ವರ್ಷದಲ್ಲೆಷ್ಟು ಬಾರಿ ಚಂದ್ರಗ್ರಹಣ?

ಈ ವರ್ಷ ಚಂದ್ರ ಗ್ರಹಣ ಯಾವಾಗ ಆಗಲಿದೆ, ಎಷ್ಟು ಬಾರಿ ಆಗಲಿದೆ, ಅದರ ಪರಿಣಾಮಗಳೇನು? ಒಳ್ಳೆಯ ಫಲ ತರಲಿವೆಯೋ ಇಲ್ಲವೋ?

When will the first lunar eclipse of 2022 take place skr

ಗ್ರಹಣ(eclipse)ವು ವೈಜ್ಞಾನಿಕವಾಗಿಯೂ, ಧಾರ್ಮಿಕವಾಗಿಯೂ ಸಾಕಷ್ಟು ಮಹತ್ವವನ್ನು ಹೊಂದಿದೆ. ಗ್ರಹಣವೊಂದರಿಂದ ಭೂಮಿಯ ಸಕಲ ಚರಾಚರ ಜೀವಿಗಳ ಮೇಲೆ ಪರಿಣಾಮಗಳಾಗಲಿವೆ. ಜಗತ್ತಿನಲ್ಲಿ ಬದಲಾವಣೆಗಳಾಗಲಿವೆ. ಸದ್ಯ ಈ ಲೇಖನದಲ್ಲಿ ಚಂದ್ರಗ್ರಹಣ(Lunar eclipse)ದ ಬಗ್ಗೆ ನೋಡೋಣ. 

ಜ್ಯೋತಿಷ್ಯದ ಪ್ರಕಾರ, ರಾಹುವು ಸೂರ್ಯ ಗ್ರಹಣಕ್ಕೆ ಕಾರಣವಾದರೆ, ಕೇತು(Ketu)ವು ಚಂದ್ರಗ್ರಹಣಕ್ಕೆ ಕಾರಣವಾಗುತ್ತದೆ. ಈ ಎರಡೂ ರೀತಿಯ ಗ್ರಹಣಗಳೂ ಅಶುಭವೇ. ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಹಾಗೂ ಚಂದ್ರ ನೇರ ಎದುರಾ ಎದುರು ಬಂದಾಗ ಭೂಮಿ(Earth)ಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಗ್ರಹಣ ಸಂಭವಿಸುತ್ತದೆ. 

ಈ ವರ್ಷ ಎಷ್ಟು ಚಂದ್ರಗ್ರಹಣ?
ಈ ವರ್ಷ ಒಟ್ಟು ಎರಡು ಬಾರಿ ಚಂದ್ರಗ್ರಹಣ ಸಂಭವಿಸಲಿದೆ. ವರ್ಷದ ಮೊದಲನೇ ಚಂದ್ರಗ್ರಹಣವು ಮೇ 16ರ ಸೋಮವಾರ ನಡೆಯಲಿದೆ. ಸೋಮವಾರ(Monday) ಚಂದ್ರನ ದಿನ ಕೂಡಾ ಹೌದು. ಈ ದಿನ ನಡೆಯುವುದು ಸಂಪೂರ್ಣ ಗ್ರಹಣವಾಗಿದ್ದು, ಇದು ಬೆಳಿಗ್ಗೆ 8:59 ರಿಂದ ಮಧ್ಯಾಹ್ನ 10:23ರವರೆಗೆ ಇರುತ್ತದೆ. ಆಫ್ರಿಕಾ(Africa), ದಕ್ಷಿಣ ಅಮೆರಿಕ, ಪೆಸಿಫಿಕ್ ಓಶನ್, ಉತ್ತರ ಅಮೆರಿಕ, ಅಂಟಾರ್ಟಿಕಾ ಭಾಗಗಳಲ್ಲಿ ಈ ಚಂದ್ರಗ್ರಹಣ ಗೋಚರವಾಗಲಿದೆ. ಗ್ರಹಣದ ಸೂತಕ ಅವಧಿಯು ಗ್ರಹಣಕ್ಕೆ 9 ಗಂಟೆಗಳ ಮುಂಚೆಯೇ ಆರಂಭವಾಗುತ್ತದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲದ ಕಾರಣ ಸೂತಕದ ಅವಧಿ ಇರುವುದಿಲ್ಲ. 

ಮಸೀದಿಗೆ ಭೇಟಿ ನೀಡಿ ಭಾತೃತ್ವದ ಮೆರೆದ ಗವಿ ಸಿದ್ದೇಶ್ವರ ಸ್ವಾಮೀಜಿ

ಎರಡನೇ ಚಂದ್ರಗ್ರಹಣವು ನವೆಂಬರ್(November) 8, ಮಂಗಳವಾರದ ದಿನ ಸಂಭವಿಸಲಿದೆ. ಆ ದಿನ ಸಂಜೆ 5.28ರಿಂದ ರಾತ್ರಿ 7.26ರವರೆಗೆ ಈ ಚಂದ್ರಗ್ರಹಣದ ಅವಧಿಯಾಗಿದೆ. ಇದರ ಸೂತಕ ಅವಧಿ ಕೂಡಾ 9 ಗಂಟೆ ಮುಂಚೆ ಆರಂಭವಾಗುತ್ತದೆ. ಇದೂ ಕೂಡಾ ಪೂರ್ಣ ಚಂದ್ರ ಗ್ರಹಣವಾಗಿದ್ದು, ಭಾರತದ ಕೆಲ ಭಾಗಗಳು, ಆಸ್ಟ್ರೇಲಿಯಾ(Astralia), ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೂರ್ವ ಯೂರೋಪ್‌ನಲ್ಲಿ ಕಾಣಿಸುತ್ತದೆ. ಗ್ರಹಣ ಕಾಲದಲ್ಲಿ ಸಾಕಷ್ಟು ಪ್ರಮುಖ ಕೆಲಸಗಳನ್ನು ಮಾಡುವುದನ್ನು ನಿರ್ಬಂಧಿಸಲಾಗುತ್ತದೆ. 

Food remedies: ಜಾತಕದ ದುರ್ಬಲ ಗ್ರಹಕ್ಕೆ ಬಲ ತುಂಬಲು ಈ ಆಹಾರ ಸೇವಿಸಿ

ಹುಣ್ಣಿಮೆಯಂದೇ ನಡೆವುದು
ಯಾವಾಗಲೂ ಚಂದ್ರ ಗ್ರಹಣವು ಹುಣ್ಣಿಮೆ(full moon day)ಯ ದಿನವೇ ಸಂಭವಿಸುವುದು. ಇದು ವೃಷಭ, ಸಿಂಹ, ಕುಂಭ ಹಾಗೂ ವೃಶ್ಚಿಕ ರಾಶಿಗಳ ಮೇಲೆ ಆಗಾಧ ಪರಿಣಾಮ ಬೀರಲಿದೆ. 
ಚಂದ್ರ ಗ್ರಹಣ ಕಾಲವು ಮನಸ್ಸಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಅತ್ಯುತ್ತಮ ಸಮಯವಾಗಿದೆ. ನಾವು ಕಡೆಗಣಿಸಿದ ಭಾವನೆಗಳ(emotions) ಜೊತೆ ವ್ಯವಹರಿಸಲು ಸರಿಯಾದ ಸಮಯವಾಗಿದೆ. ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹಣವು ನಮ್ಮ ಜೀವನದ ಕೆಲ ವಿಷಯಗಳಿಗೆ ಗ್ರಹಣ ಹಿಡಿಸುತ್ತದೆ. ದೊಡ್ಡ ಮಟ್ಟದ ಹಾನಿಗೆ ಕಾರಣವಾಗುತ್ತದೆ. ಅದು ವೃತ್ತಿ, ಸಂಬಂಧ, ನಂಬಿಕೆ ಸೇರಿದಂತ ಯಾವುದೇ ವಿಷಯವಿರಬಹುದು. 
ಗ್ರಹಣ ಎಂದರೆ ಮೂರು ಹುಣ್ಣಿಮೆಗೆ ಸಮ ಎನ್ನುವವರಿದ್ದಾರೆ. ಈ ಸಂದರ್ಭವು ಬದುಕನ್ನು ಇದ್ದಕ್ಕಿದ್ದಂತೆ ಉಲ್ಟಾ ಮಗುಚಿ ಹಾಕಬಹುದು. ಕೆಲ ಅದೃಷ್ಟವಂತರಿಗೆ ಅನಿರೀಕ್ಷಿತ ಲಾಭಗಳೂ ಇರಲಿವೆ. ಒಟ್ಟಿನಲ್ಲಿ ಗ್ರಹಣ ಕಾಲವೆಂದರೆ ಸಿಕ್ಕಪಟ್ಟೆ ಭಾವನಾತ್ಮಕ ಏರಿಳಿತ ಹಾಗೂ ಬಹಳಷ್ಟು ಅಚ್ಚರಿಗಳ ಗುಚ್ಛ. 

ಗ್ರಹಣ ಸಂದರ್ಭವು ಭೂಮಿಯ ಪ್ರತಿ ಚರಾಚರಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಗ್ರಹಣ ಸಂದರ್ಭದಲ್ಲಿ ಕೆಲ ಹಕ್ಕಿಗಳು ಹಾಡುವುದಿಲ್ಲ, ಕೆಲ ಹೂವುಗಳು ಮುದುಡುತ್ತವೆ. ಅಂತೆಯೇ ಮನುಷ್ಯರು ಕೂಡಾ ಈ ಸಂದರ್ಭದಲ್ಲಿ ಊಟ ಮಾಡುವುದು, ನೀರು ಕುಡಿಯುವುದು ಸರಿಯಲ್ಲ ಎನ್ನಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios