MahaShivaratri: ಶಿವರಾತ್ರಿಯಂದು ಎಂತಹ ದಾನ ಮಾಡೋದ್ರಿಂದ ನಿಮ್ಮ ನೈಜ ಶಕ್ತಿ ಜಾಗೃತವಾಗುತ್ತೆ?
ಮಹಾಶಿವರಾತ್ರಿಯಂದು ದೇಣಿಗೆ ನೀಡುವ ಮೂಲಕ ಪುಣ್ಯ ಗಳಿಸಿಕೊಳ್ಳಬೇಕು, ಆಂತರ್ಯದ ಶಕ್ತಿಗೆ ಬಲ ನೀಡಬೇಕು ಎನ್ನುವ ಇಚ್ಛೆ ಹೊಂದಿರುವವರು ನೀವಾಗಿದ್ದರೆ, ನಿಮ್ಮ ಜನ್ಮರಾಶಿಗೆ ಹೊಂದಾಣಿಕೆಯಾಗುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿ, ಬೆಂಬಲ, ದೇಣಿಗೆ ನೀಡಿ.
ಮಹಾಶಿವರಾತ್ರಿ ಸಮೀಪಿಸುತ್ತಿದೆ. ಬ್ರಹ್ಮಾಂಡದ ವಿಶಿಷ್ಟ ಎನರ್ಜಿಗಳು ನಮ್ಮ ಸುತ್ತ ಕವಿದು ಪ್ರಭಾವಿಸುವ ಈ ಪವಿತ್ರ ಸಮಯದಲ್ಲಿ ಆಧ್ಯಾತ್ಮಿಕ ಅನುಭೂತಿ ಪಡೆಯಲು ಎಲ್ಲರೂ ಇಚ್ಛಿಸುತ್ತಾರೆ. ಹಲವರಿಗೆ ಮಹಾಶಿವರಾತ್ರಿ ಆಧ್ಯಾತ್ಮಿಕ ದರ್ಶನ ನೀಡುವ ಸಮಯವಾದರೆ, ಹಲವರು ಈ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಬಯಸುತ್ತಾರೆ. ದಾನಧರ್ಮಾದಿಗಳಲ್ಲಿ ನಿರತರಾಗುವ ಜನ, ಮಹಾಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡುತ್ತ ಆಧ್ಯಾತ್ಮಿಕತೆಯಲ್ಲಿ ಮನಸ್ಸನ್ನು ನಿಲ್ಲಿಸುತ್ತಾರೆ. ಶಿವರಾತ್ರಿಯಂದು ದಾನ ಮಾಡುವ ಮನಸ್ಸುಳ್ಳವರು ತಮ್ಮ ಜನ್ಮರಾಶಿಗೆ ಅನುಗುಣವಾದ ವಸ್ತುಗಳನ್ನು ದಾನ ಮಾಡುವ ಮೂಲಕ ಇನ್ನಷ್ಟು ಉತ್ತಮ ಅನುಭವಕ್ಕೆ ಪಾತ್ರರಾಗಲು ಸಾಧ್ಯ.
• ಮೇಷ (Aries)
ಉರಿಯುವ (Fiery) ಎನರ್ಜಿಯ ಮೇಷ ರಾಶಿಯ ಜನ ತಮ್ಮ ಡೈನಮಿಕ್ ಮನೋಧರ್ಮವನ್ನು ಬಿಂಬಿಸುವ ವಸ್ತುಗಳನ್ನು ದಾನ (Donate) ಮಾಡಬೇಕು. ನಾಯಕತ್ವ, ಶಿಕ್ಷಣಕ್ಕೆ (Education) ಸಂಬಂಧಿಸಿದ ಕಾರ್ಯಕ್ರಮಗಳು, ಮಾರ್ಗದರ್ಶನ ನೀಡುವಂಥ ಶಿಬಿರಗಳಲ್ಲಿ ಪಾಲ್ಗೊಳ್ಳಬಹುದು.
ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಏನು ಸಂಬಂಧ.. ಶಿವಲಿಂಗವನ್ನು ಮೊದಲು ಪೂಜಿಸಿದವರು ಯಾರು..?
• ವೃಷಭ (Taurus)
ವೃಷಭ ರಾಶಿಯ ಜನ ಮೂರ್ತ ರೂಪದ ಗಿಫ್ಟ್ (Gift) ನೀಡುವುದು ಉತ್ತಮ. ಆಹಾರ (Food), ಬಟ್ಟೆ (Cloth) ಸೇರಿದಂತೆ ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮಲ್ಲಿನ ಆರೈಕೆ ಮಾಡುವ ಗುಣಕ್ಕೆ ಬಲ ದೊರೆಯುತ್ತದೆ.
• ಮಿಥುನ (Gemini)
ಅಭಿವ್ಯಕ್ತಿಯನ್ನು ಇಷ್ಟಪಡುವ ಮಿಥುನ ರಾಶಿಯ ಜನ ಬೌದ್ಧಿಕ (Intellectual) ಬೆಳವಣಿಗೆಗೆ ಪೂರಕವಾಗುವ ಕಾರ್ಯಗಳಲ್ಲಿ ನಿರತವಾಗಬೇಕು. ಗ್ರಂಥಾಲಯಗಳು, ಶೈಕ್ಷಣಿಕ ಸ್ಕಾಲರ್ ಶಿಪ್ (Scholarship) ಅಥವಾ ಕಮ್ಯೂನಿಟಿ ವರ್ಕ್ ಶಾಪ್ ಗಳಿಗೆ ಬೆಂಬಲ ನೀಡಬಹುದು.
• ಕರ್ಕಾಟಕ (Cancer)
ಭಾವನಾತ್ಮಕ ಬೆಂಬಲ (Emotional Support) ಹಾಗೂ ಆರೈಕೆ ಸೇವೆ ನೀಡುವ ಸಂಘ-ಸಂಸ್ಥೆಗಳಿಗೆ ದೇಣಿಗೆ ನೀಡಬೇಕು. ಈ ಸಂಸ್ಥೆಗಳು ಮಾನಸಿಕ ಆರೋಗ್ಯ ಮತ್ತು ಕುಟುಂಬದ ಕಲ್ಯಾಣಕ್ಕೆ ಆದ್ಯತೆ ನೀಡುವಂಥವಾಗಿರಬೇಕು.
• ಸಿಂಹ (Leo)
ಕಲೆ (Art) ಮತ್ತು ಸಮುದಾಯ ಯೋಜನೆಗಳಿಗೆ ಬೆಂಬಲ ನೀಡಿ. ಕ್ರಿಯಾಶೀಲತೆಗೆ (Creativity) ಆದ್ಯತೆ ನೀಡುವ ಚಟುವಟಿಕೆಗೆ ಬೆಂಬಲ ನೀಡುವುದರಿಂದ ನಿಮ್ಮಲ್ಲಿ ಸಂತಸ ಹೆಚ್ಚುತ್ತದೆ, ಶಕ್ತಿ ವೃದ್ಧಿಸುತ್ತದೆ.
ಮಾರ್ಚ್ ತಿಂಗಳಲ್ಲಿ ಈ ನಾಲ್ಕು ರಾಶಿಯವರಿಗೆ ಐಶ್ವರ್ಯ ಯೋಗ.. ನೂರರಷ್ಟು ಧನಲಾಭ..
• ಕನ್ಯಾ (Virgo)
ಪ್ರಾಯೋಗಿಕ ಗುಣದ ಕನ್ಯಾ ರಾಶಿಯ ಜನ ವಿಪತ್ತಿನ ಸಮಯದಲ್ಲಿ ಜನರಿಗೆ ನೆರವು ನೀಡುವ, ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಂಸ್ಥೆಗಳಿಗೆ (Organisations) ದೇಣಿಗೆ ನೀಡುವುದು ಉತ್ತಮ.
• ತುಲಾ (Libra)
ಸೌಹಾರ್ದ ಗುಣ ತುಲಾ ರಾಶಿಯ ಜನ ದೇಣಿಗೆಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ನ್ಯಾಯ (Justice), ಸಮಾನತೆಯನ್ನು ಉತ್ತೇಜಿಸುವ ಚಟುವಟಿಕೆಗೆ ಬೆಂಬಲ ನೀಡಬೇಕು.
• ವೃಶ್ಚಿಕ (Scorpio)
ಪರಿವರ್ತನೆಯ ಎನರ್ಜಿಯನ್ನು ದೇಣಿಗೆ ಮೂಲಕ ಪಡೆಯಬಹುದು. ಸಶಕ್ತೀಕರಣ, ಪುನರುತ್ಪಾದನೆ ಹಾಗೂ ಪುನರ್ವಸತಿಗೆ ಸಂಬಂಧಿಸಿರುವ ಚಟುವಟಿಕೆಗೆ ದೇಣಿಗೆ ನೀಡಿ.
• ಧನು (Sagittarius)
ಸಾಹಸಿ ಧೋರಣೆಯ ಧನು ರಾಶಿಯ ಜನ ಲೋಕಕಲ್ಯಾಣಕ್ಕೆ ಆದ್ಯತೆ ನೀಡಬೇಕು. ಪ್ರವಾಸ (Travel), ಶಿಕ್ಷಣ ಅಥವಾ ಸಾಂಸ್ಕೃತಿಯ ವಿನಿಮಯ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದು ನಿಮಗೆ ಹೊಂದುತ್ತದೆ.
• ಮಕರ (Capricorn)
ನಿಮ್ಮ ಶಿಸ್ತುಬದ್ಧ ಜೀವನ ಎಲ್ಲರಿಗೂ ಪರಿಣಾಮ ಬೀರುವಂಥದ್ದು. ದೀರ್ಘಾವಧಿ (Long Term) ಯೋಜನೆ ಹೊಂದಿರುವ ಮೂಲಸೌಕರ್ಯ ಅಭಿವೃದ್ಧಿ ಅಥವಾ ಶೈಕ್ಷಣಿಕ ಫೌಂಡೇಷನ್ ಗಳಿಗೆ ನೆರವು ನೀಡಿ.
• ಕುಂಭ (Aquarius)
ಅನ್ವೇಷಣಾತ್ಮಕ ಧೋರಣೆಯ ಕುಂಭ ರಾಶಿಯ ಜನ ತಮ್ಮೊಳಗಿನ ಮಾನವೀಯತೆಯ ಸ್ಫೂರ್ತಿಗೆ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ (Social) ನ್ಯಾಯದ ಕಾರಣಕ್ಕಾಗಿ ಹೋರಾಡುವ ಅಥವಾ ತಂತ್ರಜ್ಞಾನ ಸಂಬಂಧಿ ಸಂಸ್ಥೆಗಳಿಗೆ ನೆರವು ನೀಡಬೇಕು.
• ಮೀನ (Pisces)
ಸಹಾನುಭೂತಿಯುಳ್ಳ ಮೀನ ರಾಶಿಯ ಜನ ತಮ್ಮ ದೇಣಿಗೆಯ ಮುಖಾಂತರ ತಮ್ಮ ಪ್ರೀತಿಯ (Love) ಭಾವವನ್ನು ಉತ್ತೇಜಿಸಿಕೊಳ್ಳುವುದು ಅಗತ್ಯ. ಹೀಲಿಂಗ್, ಮೆಡಿಕಲ್, ಪರಿಸರ ರಕ್ಷಣೆ ಅಥವಾ ಆಧ್ಯಾತ್ಮಿಕ ಚಟುವಟಿಕೆ ನಡೆಸುವ ಸಂಘಗಳೊಂದಿಗೆ ಕೈ ಜೋಡಿಸಿ.