Asianet Suvarna News Asianet Suvarna News

ಮೇಷ ರಾಶಿಯವರಿಗೆ ಜೀವನದ ಸಂಗಾತಿ ಹೇಗಿದ್ದರೆ ಇಷ್ಟ?

ಪ್ರತಿಯೊಬ್ಬರಿಗೂ ತಮ್ಮ ಲೈಫ್ ಪಾರ್ಟ್‌ನರ್ ಹೀಗೇ ಇರಬೇಕು, ಇಂತಿಂಥಾ ಗುಣಗಳನ್ನು ಹೊಂದಿರಬೇಕು ಎಂಬ ಕನಸಿರುವುದು ಸಹಜ. ಪ್ರತಿ ಜನ್ಮರಾಶಿಯಲ್ಲಿ ಜನಿಸಿದವರಿಗೂ ತಮ್ಮ ಸಂಗಾತಿ ಹೀಗಿರಬೇಕು ಎಂಬ ಕನಸುಗಳಿರುತ್ತವೆ. ಬನ್ನಿ, ಮೇಷ ರಾಶಿಯಲ್ಲಿ ಜನಿಸಿದವರು ತಮ್ಮ ಜೀವನ ಸಂಗಾತಿಯಲ್ಲಿ ಯಾವ ಗುಣಗಳಿರಬೇಕು ಎಂದು ಬಯಸುತ್ತಾರೆ ಎಂದು ನೋಡೋಣ.
 

What characters do Aries born people like in their spouses
Author
Bengaluru, First Published Sep 18, 2021, 5:56 PM IST

ಮೇಷ ರಾಶಿಗೆ ಸೇರಿದ ಜನರು ಮಹತ್ವಾಕಾಂಕ್ಷೆಯವರು, ದೃಢಸಂಕಲ್ಪದವರು ಮತ್ತು ಚತುರರು. ಇವರು ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತು ಅವರ ಕನಸುಗಳನ್ನು ಈಡೇರಿಸುವ, ತಮ್ಮ ಗುರಿಗಳನ್ನು ಸಾಧಿಸುವ ಸಂದರ್ಭದಲ್ಲಿ ಯಾರೂ ಅವರನ್ನು ತಡೆಯಲಾಗದು. ಇವರು ರಿಸ್ಕ್ ತೆಗೆದುಕೊಳ್ಳುವವರು ಮತ್ತು ಸುರಕ್ಷಿತವಾಗಿ ಆಟವಾಡುವುದನ್ನು ನಂಬುವುದಿಲ್ಲ. ಮೇಷರಾಶಿಯಲ್ಲಿ ಜನಿಸಿದವರು ಯಾವುದಕ್ಕೂ ಹೆದರುವುದಿಲ್ಲ, ಧೈರ್ಯಶಾಲಿಗಳು. ಅವರ ಭಾವಿ ಲೈಫ್ ಪಾರ್ಟ್‌ನರ್‌ನಲ್ಲಿ ಅವರು ಹೊಂದಲು ಬಯಸುವ ವ್ಯಕ್ತಿತ್ವ ಗುಣಲಕ್ಷಣಗಳ ಪಟ್ಟಿಯನ್ನು ನೋಡಿ.

ಮಹತ್ವಾಕಾಂಕ್ಷೆ
ಮೇಷ ರಾಶಿಯಲ್ಲಿ ಜನಿಸಿದವರು ಎಂದಿಗೂ ಸವಾಲಿನಿಂದ ಹಿಂದೆ ಸರಿಯುವುದಿಲ್ಲವಾದ್ದರಿಂದ, ತಮ್ಮ ಜೀವನ ಸಂಗಾತಿಯೂ ಅದೇ ರೀತಿಯ ಉತ್ಸಾಹವನ್ನು ಹೊಂದಿರಬೇಕೆಂದು ಬಯಸುತ್ತಾರೆ. ಅವರ ಜೀವನ ಸಂಗಾತಿಯು ಅವರಂತೆಯೇ ರಿಸ್ಕ್ ತೆಗೆದುಕೊಳ್ಳುವವರಾಗಿರಬೇಕು, ಜೀವನದಲ್ಲಿ ಧೈರ್ಯದ ಚಾಲಕಶಕ್ತಿ ಹೊಂದಿರಬೇಕು. ಹಾಗೇ ಇವರು ಸೆಕ್ಸ್‌ನಲ್ಲಿ ಕೂಡ ಹೆಚ್ಚಿನ ಆಸಕ್ತಿ ಹೊಂದಿರಬೇಕು ಎಂದು ಬಯಸುತ್ತಾರೆ. 
 
ಶ್ರಮಜೀವಿ
ಮೇಷರಾಶಿಯಲ್ಲಿ ಜನಿಸಿದವರು ಅಪಾರ ಶ್ರಮಜೀವಿಗಳು. ತಮ್ಮ ಗುರಿಯ ಹತ್ತಿರ ಬಂದಾಗ ಸಮಯ ಮರೆತು ಕೆಲಸ ಮಾಡುತ್ತಾರೆ. ಇವರು ತಮ್ಮ ಭಾವಿ ಸಂಗಾತಿ ತಮ್ಮ ಕೆಲಸಕ್ಕೆ ಬದ್ಧರಾಗಿರಬೇಕು, ಮಿತಿಗಳನ್ನು ಹೇರಬಾರದು, ತಮ್ಮೊಡನೆ ದುಡಿಯಲು ಹಿಂಜರಿಯಬಾರದು ಎಂದು ಅಪೇಕ್ಷಿಸುತ್ತಾರೆ. ದುಡಿಮೆಗಾಗಿ ಕೆಲವೊಮ್ಮೆ ಕುಟುಂಬಸುಖವನ್ನು ತ್ಯಾಗ ಮಾಡಬೇಕು ಎಂದು ಬಯಸುತ್ತಾರೆ. 

ನೀರು, ಬೆಂಕಿ, ಗಾಳಿ, ಭೂಮಿ- ಇದರಲ್ಲಿ ನಿಮ್ಮದು ಯಾವ ಜನ್ಮರಾಶಿ? ನಿಮ್ಮ ಗುಣ ಹೇಗೆ? 

ನೇರ ಮಾತಿನವರು
ಈ ರಾಶಿಗೆ ಸೇರಿದ ಜನರು, ಮಾತಿನಲ್ಲಿ ಸಕ್ಕರೆ ಅಂಶ ಬೆರೆಸದೆ ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಬೇಗನೆ ಹೇಳುತ್ತಾರೆ. ಇವರದು ಒಂಥರಾ ಮೊಂಡುತನ. ಪ್ರಾಮಾಣಿಕರು. ಮತ್ತು ತಮ್ಮ ಜೀವನ ಸಂಗಾತಿಯು ಸಹ ತಮ್ಮ ಹಾಗೇ ನೇರವಾಗಿರಬೇಕು, ಮುಕ್ತವಾಗಿ ಮಾತಾಡಬೇಕು, ತನ್ನದೇ ರೀತಿಯ ನೇರತೆಯನ್ನು ಹೊಂದಬೇಕೆಂದು ಬಯಸುತ್ತಾರೆ.

ತಾಳ್ಮೆಯಿರಬೇಕು
ಮೇಷರಾಶಿಯಲ್ಲಿ ಜನಿಸಿದವರು ಸಾಕಷ್ಟು ತಾಳ್ಮೆಯನ್ನು ಹೊಂದಿದವರು. ಇತರರಿಗೂ ತಾಳ್ಮೆಯನ್ನು ಕಲಿಸುವವರು. ಇವರು ತಮ್ಮ ಜೀವನ ಸಂಗಾತಿ ಕೂಡ ಜೀವನದಲ್ಲಿ ಬರುವ ಕಷ್ಟನಷ್ಟದ ಪರಿಸ್ಥಿತಿಗಳನ್ನು ತಾಳ್ಮೆಯಿಂದ ಎದುರಿಸುವವರು ಆಗಿರಬೇಕು ಎಂದು ಬಯಸುತ್ತಾರೆ. 

ಅಪಮೃತ್ಯು ಉಂಟಾಗದಂತೆ ಯಾವ ಜನ್ಮರಾಶಿಗೆ ಯಾವ ಪರಿಹಾರ?

ಹಣಕಾಸಿನ ಎಚ್ಚರ
ತಮ್ಮ ಭಾವಿ ಸಂಗಾತಿ ಅನಗತ್ಯವಾಗಿ ದುಂದುವೆಚ್ಚ ಮಾಡಬಾರದು ಎಂದು ಇವರು ಬಯಸುತ್ತಾರೆ. ತಾವೂ ಅನಗತ್ಯವಾಗಿ ಖರ್ಚುವೆಚ್ಚಗಳನ್ನು ಮಾಡುವುದಿಲ್ಲ.  ನೀವು ಮಾಡಿದ ಖರ್ಚುಗಳಿಗೆ ಪೈಸೆ ಪೈಸೆ ಲೆಕ್ಕ ಕೇಳಿದರೆ ಆಶ್ಚರ್ಯಪಡಬೇಡಿ. ಯಾಕೆಂದರೆ ಇದು ನಿಮಗೆ ಉಳಿತಾಯ ಹಾಗೂ ನಿವೃತ್ತಿಯ ನಂತರದ ಸುಖೀಜೀವನದ ಪಾಠವನ್ನು ಕಲಿಸುವುದು.
 

What characters do Aries born people like in their spouses

ಆಧ್ಯಾತ್ಮಿಕ ಭಾವನೆ
ಮೇಷ ರಾಶಿಯವರಲ್ಲಿ ಸ್ವಲ್ಪ ಆಧ್ಯಾತ್ಮಿಕ ಭಾವನೆ ಇರಬಹುದು. ಅಂದರೆ ದೇವಾನುದೇವತೆಗಳನ್ನು ನಂಬದೇ ಇದ್ದರೂ ಧ್ಯಾನ, ಯೋಗ, ಪ್ರಾಣಾಯಾಮ ಮುಂತಾದವುಗಳನ್ನು ಮಾಡಬಹುದು. ತಮ್ಮ ಸಂಗಾತಿ ಸ್ವಲ್ಪವಾದರೂ ಆಧ್ಯಾತ್ಮಿಕ ಸ್ವಭಾವವನ್ನು ಹೊಂದಿರಲಿ ಎಂದು ಬಯಸಬಹುದು. ಆದರೆ ತೀರಾ ಮೂಢನಂಬಿಕೆಗಳನ್ನು ಇವರು ಎಂಟರ್‌ಟೇನ್ ಮಾಡುವುದಿಲ್ಲ.  

ಗಣೇಶನ ಪೂಜಿಸಿದ್ರೆ ಶನಿದೇವರ ಕಾಟವಿಲ್ಲ, ಯಾಕೆ ಗೊತ್ತೆ?

Follow Us:
Download App:
  • android
  • ios