Asianet Suvarna News Asianet Suvarna News

ಆ.31ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಆಗಸ್ಟ್ 31ರಂದು ಶುಕ್ರ, ಸಿಂಹ ರಾಶಿಗೆ ಪ್ರವೇಶ ಮಾಡ್ತಿದ್ದಾನೆ. ಸಿಂಹ ರಾಶಿಗೆ ಕಾಲಿಡ್ತಿದ್ದಂತೆ ಕೆಲ ರಾಶಿಗಳಿಗೆ ಶುಭವಾಗಲಿದೆ. ಹಣದ ಹೊಳೆ ಹರಿಯಲಿದೆ. ಉದ್ಯೋಗ ಪ್ರಾಪ್ತಿಯಾಗಲಿದೆ. ಮಂಗಳಕರ ಲಾಭ ಪ್ರಾಪ್ತಿಯಾಗಲಿದೆ. 
 

Venus Is Going To Transit In Leo Soon
Author
Bangalore, First Published Aug 22, 2022, 3:21 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ಜೀವನ ಗ್ರಹಗಳ ಬದಲಾವಣೆ ಮೇಲೆ ನಿಂತಿದೆ.  ಗ್ರಹ  ಮತ್ತು ನಕ್ಷತ್ರ  ಬದಲಾವಣೆಯು ಎಲ್ಲಾ ರಾಶಿ  ಚಿಹ್ನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರಸ್ತುತ ಶುಕ್ರನು ಕರ್ಕಾಟಕ ರಾಶಿಯಲ್ಲಿ ನೆಲೆಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್ 31 ರಂದು ಶುಕ್ರ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಲಿದೆ. ಶುಕ್ರದೇವನನ್ನು ಅಸುರರ ಗುರು ಎಂದು ಪರಿಗಣಿಸಲಾಗಿದೆ. ಶುಕ್ರನನ್ನು ವೈವಾಹಿಕ ಜೀವನ, ಆರ್ಥಿಕ ಜೀವನ, ಐಶ್ವರ್ಯ, ಸಂತೋಷ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಲಾಭದಾಯಕನಾಗಿದ್ದಾಗ, ವ್ಯಕ್ತಿಯು ಕಾಲಕಾಲಕ್ಕೆ ಅನೇಕ ಸಂತೋಷಗಳನ್ನು ಪಡೆಯುತ್ತಾನೆ. ಮತ್ತೊಂದೆಡೆ, ಶುಕ್ರನು ದುರ್ಬಲನಾಗಿದ್ದರೆ, ಆ ಪರಿಸ್ಥಿತಿಯಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಆಸೆಗಳು ಈಡೇರದೆ ಉಳಿಯಬಹುದು. ಇದು ಸಂತೋಷದ ಕೊರತೆಗೆ ಕಾರಣವಾಗಬಹುದು. ಶುಕ್ರ ರಾಶಿಯ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, 3 ರಾಶಿಗಳು ವಿಶೇಷ ಲಾಭಗಳನ್ನು ಪಡೆಯಲಿವೆ. ಶುಕ್ರ ರಾಶಿ ಬದಲಾವಣೆಯಿಂದ ಯಾವ 3 ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ ಎಂಬುದು ಇಲ್ಲಿದೆ.

ಶುಕ್ರ (Shukra) ನ ರಾಶಿ (Zodiac) ಬದಲಾವಣೆಯಿಂದ ಯಾವ ರಾಶಿಗೆ ಲಾಭ :

ತುಲಾ ರಾಶಿ (Libra) : ಆಗಸ್ಟ್ 31ರಂದು ಶುಕ್ರ ರಾಶಿ ಬದಲಾವಣೆ ಮಾಡಲಿದ್ದಾನೆ. ಶುಕ್ರನ ರಾಶಿ ಬದಲಾವಣೆ ತುಲಾ ರಾಶಿಯ ಜನರಿಗೆ ಲಾಭ ತರಲಿದೆ. ಇದ್ರಿಂದ ತುಲಾ ರಾಶಿಯವರಿಗೆ ವಿಶೇಷ ಪ್ರಯೋಜನ ಸಿಗಲಿದೆ. ಜ್ಯೋತಿಷ್ಯ (Astrology) ದ ಪ್ರಕಾರ, ಶುಕ್ರವು ತುಲಾ ರಾಶಿಯ 11 ನೇ ಮನೆಯಲ್ಲಿ ಸಾಗಲಿದೆ. ಶುಕ್ರನ ರಾಶಿ ಬದಲಾವಣೆ ಸಮಯದಲ್ಲಿ ತುಲಾ ರಾಶಿಯವರ ಆದಾಯದಲ್ಲಿ ಭಾರಿ ಹೆಚ್ಚಳವಾಗಲಿದೆ. ಇದರೊಂದಿಗೆ ಹೊಸ ಆದಾಯ (income) ದ ಮೂಲಗಳು ಸೃಷ್ಟಿಯಾಗಲಿವೆ. ಮಾಧ್ಯಮ ಮತ್ತು ಚಲನಚಿತ್ರದೊಂದಿಗೆ ಸಂಬಂಧ ಹೊಂದಿರುವವರಿಗೆ  ಈ ಶುಕ್ರ ಸಂಕ್ರಮವು ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಅವಧಿಯಲ್ಲಿ ತುಲಾ ರಾಶಿಯವರ ಅದೃಷ್ಟ ಬದಲಾಗಲಿದೆ. ತುಲಾ ರಾಶಿಯವರ ದುಂದು ವೆಚ್ಚ ನಿಲ್ಲಲಿದೆ. ತುಲಾ ರಾಶಿಯವರಿಗೆ ನ್ಯಾಯಾಂಗ ವಿವಾದಗಳಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ: ಈ ರಾಶಿಗಳ ಆ್ಯಟಿಟ್ಯೂಡ್ ತಡ್ಕೊಳಕಾಗಲ್ಲ ಗುರೂ!

ವೃಶ್ಚಿಕ ರಾಶಿ (Scorpio) : ಶುಕ್ರನ ರಾಶಿಚಕ್ರ ವೃಶ್ಚಿಕ ರಾಶಿಯ ಜನರಿಗೆ ಶುಭ ಲಾಭ ಸಿಗಲಿದೆ. ಶುಕ್ರನು ವೃಶ್ಚಿಕ ರಾಶಿಯ 10 ನೇ ಮನೆಯಲ್ಲಿ ಸಾಗುತ್ತಾನೆ. ಇದು ಕೆಲಸದ ಅರ್ಥ ಮತ್ತು ಕೆಲಸದ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಶುಕ್ರನ ರಾಶಿ ಬದಲಾವಣೆಯಿಂದ ಹೊಸ ಉದ್ಯೋಗ ಈ ರಾಶಿಯವರಿಗೆ ಒಲಿದು ಬರಲಿದೆ. ಉದ್ಯೋಗ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ. ವ್ಯಾಪಾರ  ವಿಸ್ತರಿಸಲು ಈ ಅವಧಿ ಮಂಗಳಕರವೆಂದು ಹೇಳಲಾಗಿದೆ. ಪಾಲುದಾರಿಕೆ ವ್ಯವಹಾರದಿಂದ ಲಾಭದ ಸಾಧ್ಯತೆಯೂ ಹೆಚ್ಚಿರುತ್ತದೆ.

ಇದನ್ನೂ ಓದಿ: ಪತಿ- ಪತ್ನಿ ಸರಸ ಹೆಚ್ಚಾಗೋಕೆ ಬೆಡ್‌ರೂಮಿನಲ್ಲಿ ಈ ಕಲರ್‌ ಇರಲಿ!

ಕರ್ಕ ರಾಶಿ (Cancer) : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯವರಿಗೆ ಶುಕ್ರನ ರಾಶಿಯಲ್ಲಿ ಬದಲಾವಣೆ ಆಗುವುದ್ರಿಂದ ಮಂಗಳಕರ ಲಾಭ ಸಿಗಲಿದೆ. ಶುಕ್ರ ಸಂಕ್ರಮಣದ ಸಮಯದಲ್ಲಿ ಕರ್ಕ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಅದ್ಭುತ ಯಶಸ್ಸು ಸಿಗುವ ಸಾಧ್ಯತೆಯಿದೆ. ವಾಸ್ತವವಾಗಿ ಶುಕ್ರನು ಈ ರಾಶಿಚಕ್ರದ ಎರಡನೇ ಮನೆಯಲ್ಲಿ ಸಾಗಲಿದ್ದಾನೆ. ಇದು ಹಣ ಮತ್ತು ಮಾತಿನ ಸೂಚಕವಾಗಿದೆ. ಶುಕ್ರ ಸಂಕ್ರಮಣದ ಸಮಯದಲ್ಲಿ ಅನೇಕ ಮೂಲಗಳಿಂದ ಹಣವನ್ನು ಗಳಿಸುವ ಅವಕಾಶವಿರುತ್ತದೆ. ಕರ್ಕ ರಾಶಿಯವರಿಗೆ ಈ ಸಮಯದಲ್ಲಿ ಹಠಾತ್ ಹಣ ಸಿಗುವ ಸಾಧ್ಯತೆಯಿದೆ. ವ್ಯವಹಾರ ಮಾಡುವವರಿಗೆ ಕೂಡ ಇದು ಒಳ್ಳೆಯ ಅವಕಾಶವಿದೆ. ಮಕ್ಕಳ ಕಡೆಯಿಂದ ಕರ್ಕ ರಾಶಿಯವರಿಗೆ ಕೆಲವು ಶುಭ ಸುದ್ದಿಗಳು ಸಿಗುವ ಸಾಧ್ಯತೆಯಿದೆ. 

Follow Us:
Download App:
  • android
  • ios