Asianet Suvarna News Asianet Suvarna News

ಮೇ 16ರಂದು ವೈಶಾಖ ಪೂರ್ಣಿಮಾ; ಇಲ್ಲಿದೆ ಪೂಜಾ ವಿಧಾನ

ಚಂದ್ರನು ಪೂರ್ಣವಾಗಿ ಪ್ರಕಟವಾಗುವ ಹುಣ್ಣಿಮೆಯ ದಿನಕ್ಕೆ ಹಿಂದೂ ಕ್ಯಾಲೆಂಡರಿನಲ್ಲಿ ವಿಶೇಷ ಸ್ಥಾನವಿದೆ. ಈ ದಿನ ಮಾಡುವ ಕೆಲಸಗಳು, ವಿಶೇಷ ಪೂಜೆ ವಿಶೇಷ ಫಲಗಳನ್ನು ಕೊಡಲಿದೆ. 

Vaishakh Purnima worship method and auspicious time skr
Author
Bangalore, First Published May 14, 2022, 4:53 PM IST

ಪ್ರತಿ ತಿಂಗಳಿಗೊಮ್ಮೆ ಚಂದ್ರನು ಪೂರ್ಣ ಪ್ರಮಾಣದ ವೃತ್ತಾಕಾರದಲ್ಲಿ ಪ್ರಕಟಗೊಂಡು ಬೆಳದಿಂಗಳು ಸೂಸುವ ದಿನವನ್ನು ಹುಣ್ಣಿಮೆ(Purnima) ಎನ್ನುತ್ತೇವೆ. ಸೂರ್ಯ ಮತ್ತು ಚಂದ್ರರು 180 ಡಿಗ್ರಿಯಿಂದ ಬೇರೆಯಾದಂತೆ ಕಂಡಾಗ ಹುಣ್ಣಿಮೆ ಸಂಭವಿಸುತ್ತದೆ. ಹುಣ್ಣಿಮೆಯ ದಿನವನ್ನು ಹೊಸ ಆರಂಭಗಳಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹುಣ್ಣಿಮೆಗೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಹುಣ್ಣಿಮೆಗಿಂತ ಮೊದಲಿನ 15 ದಿನಗಳನ್ನು ಶುಕ್ಲ ಪಕ್ಷ ಎಂದರೆ ನಂತರದ ದಿನಗಳನ್ನು ಕೃಷ್ಣ ಪಕ್ಷ ಎನ್ನಲಾಗುತ್ತದೆ. 

ಈ ಬಾರಿ ವೈಶಾಖ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ವೈಶಾಖ ಪೂರ್ಣಿಮಾ(Vaishakh Purnima) ಎನ್ನಲಾಗುತ್ತದೆ. ಇದೇ ಹುಣ್ಣಿಮೆಯ ದಿನ ಬುದ್ಧನ ಜನ್ಮದಿನವಾಗಿ ಬುದ್ಧ ಪೂರ್ಣಿಮಾ ಆಚರಣೆಯನ್ನೂ ಮಾಡಲಾಗುತ್ತದೆ. ಸಾಲದೆಂಬಂತೆ ಈ ಬಾರಿ ಖಗ್ರಾಸ ಚಂದ್ರಗ್ರಹಣ ಕೂಡಾ ಇದೇ ವೈಶಾಖ ಪೂರ್ಣಿಮೆಯಂದು ಘಟಿಸುತ್ತಿದೆ. 

ಹುಣ್ಣಿಮೆಯ ದಿನ ಬರುವ ಕೆಲ ಹಬ್ಬಗಳು
ವೈಶಾಖ ಪೂರ್ಣಿಮೆಯ ದಿನ ಬೌದ್ಧ ಪೂರ್ಣಿಮೆ(Buddha Purnima)
ಕಾರ್ತಿಕ ಮಾಸದ ಹುಣ್ಣಿಮೆಯನ್ನು ಕಾರ್ತಿಕ ಪೂರ್ಣಿಮೆ(Karthika Purnima)
ಶ್ರಾವಣ ಹುಣ್ಣಿಮೆಯಂದು ರಕ್ಷಾಬಂಧನ(Raksha Bandhan)
ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ(Guru Purnima)

ಹೀಗೆ ಹುಣ್ಣಿಮೆಯ ದಿನ ಹಿಂದೂಗಳಿಗೆ ಸಾಕಷ್ಟು ವಿಶೇಷ ದಿನಗಳನ್ನು ಕರುಣಿಸುತ್ತದೆ. ಬಹಳ ಶುಭ ದಿನವಾಗಿ ಹುಣ್ಣಿಮೆಯನ್ನು ನೋಡಲಾಗುತ್ತದೆ. ಈ ಬಾರಿ ಮೇ 16ರಂದು ವೈಶಾಖ ಪೂರ್ಣಿಮೆ. ಈ ದಿನ ಭಕ್ತರು ಭಗವಾನ್ ವಿಷ್ಣುವಿನ ಪೂಜೆಯಲ್ಲಿ ತೊಡಗುತ್ತಾರೆ. ಈ ದಿನ ಮಾಡುವ ದಾನ ಸ್ನಾನಗಳಿಗೆ ಬಹಳ ಮಹತ್ವವಿದೆ. ಈ ಬಾರಿ ಚಂದ್ರ ಗ್ರಹಣವಿದೆಯಾದರೂ ಅದು ಭಾರತದಲ್ಲಿ ಗೋಚರವಾಗದ ಕಾರಣ ಸೂತಕ ಇರುವುದಿಲ್ಲ. ಹಾಗಾಗಿ, ವೈಶಾಖ ಪೂರ್ಣಿಮೆ ಆಚರಣೆಗೆ ಅಡ್ಡಿ ಇಲ್ಲ. ವೈಶಾಖಾ ಪೂರ್ಣಿಮೆ ಆಚರಣೆ ಹೇಗೆ? ಪೂಜಾ ವಿಧಾನವೇನು ತಿಳಿಯೋಣ. 

ಐದೇ ದಿನದಲ್ಲಿ ನಾಲ್ಕು ರಾಶಿ ಪರಿವರ್ತನೆ, ಜೊತೆಗೆ ಗ್ರಹಣ, ಹಬ್ಬ ಹುಣ್ಣಿಮೆ..

ಪೂಜಾ ವಿಧಾನ(Pooja method)
ಈ ಪುಣ್ಯದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಬಹಳ ಮಹತ್ವವನ್ನು ಹೊಂದಿದೆ.
ಸ್ನಾನದ ನಂತರ ಮನೆಯ ಪೂಜಾ ಕೋಣೆಯಲ್ಲಿ ದೀಪವನ್ನು ಬೆಳಗಿಸಿ.
ಸಾಧ್ಯವಾದರೆ, ಈ ದಿನ ವಿಷ್ಣುವಿಗಾಗಿ ಉಪವಾಸ ಆಚರಿಸಿ.
ಮೊದಲಿಗೆ ಗಂಗಾಜಲದಿಂದ ಎಲ್ಲ ದೇವತೆಗಳಿಗೆ ಅಭಿಷೇಕ ಮಾಡಿ.
ಪೂರ್ಣಿಮಾದ ಪವಿತ್ರ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯು ವಿಶೇಷ ಮಹತ್ವವನ್ನು ಹೊಂದಿದೆ.
ಈ ದಿನ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಕೂಡಾ ಪೂಜಿಸಿ.
ಭಗವಾನ್ ವಿಷ್ಣುವಿಗೆ ನೈವೇದ್ಯಗಳನ್ನು ಅರ್ಪಿಸಿ. ವಿಷ್ಣುವಿನ ಭೋಗದಲ್ಲಿ ತುಳಸಿಯನ್ನೂ ಸೇರಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ತುಳಸಿ ಇಲ್ಲದೆ ಭೋಗವನ್ನು ಸ್ವೀಕರಿಸುವುದಿಲ್ಲ. ಸಾತ್ವಿಕ ವಸ್ತುಗಳನ್ನು ಮಾತ್ರ ದೇವರಿಗೆ ಅರ್ಪಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಆರತಿ ಮಾಡಿ.
ಬಳಿಕ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಧ್ಯಾನವನ್ನು ಮಾಡಿ. ಅವರಿಗೆ ಸಂಬಂಧಿಸಿದ ಶ್ಲೋಕಗಳನ್ನು ಭಕ್ತಿಯಿಂದ ಹೇಳಿ.

ಹುಣ್ಣಿಮೆಯಂದು ರಾತ್ರಿ ಚಂದ್ರ ಬರುವ ಸಮಯದಲ್ಲಿ ಮತ್ತೊಮ್ಮೆ ಸ್ನಾನ ಮಾಡಿ ಬಂದು ಚಂದ್ರನನ್ನು ಪೂಜಿಸಿ. 
ಚಂದ್ರೋದಯದ ನಂತರ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಸಾಕಷ್ಟು ದೋಷಗಳಿಂದ ಮುಕ್ತಿ ದೊರೆಯುತ್ತದೆ.
ಹೀಗೆ ಚಂದ್ರನ ಆರಾಧನೆಯ ಬಳಿಕ ಉಪವಾಸ ಮುರಿಯಬಹುದು. 
ಹುಣ್ಣಿಮೆಯ ದಿನ ನಿಮ್ಮ ಕೈಲಿ ಸಾಧ್ಯವಾದಷ್ಟು ನಿರ್ಗತಿಕರಿಗೆ ಸಹಾಯ ಮಾಡಿ.
ನಿಮ್ಮ ಮನೆಯ ಸುತ್ತ ಹಸು ಇದ್ದರೆ ಖಂಡಿತವಾಗಿ ಹಸುವಿಗೆ ಆಹಾರ ನೀಡಿ. ಹಸುವಿಗೆ ಆಹಾರ ನೀಡುವುದರಿಂದ ಅನೇಕ ರೀತಿಯ ದೋಷಗಳು ದೂರವಾಗುತ್ತವೆ.

Chandra Grahan ಸಮಯದಲ್ಲಿ ಹೀಗೆ ಮಾಡಿ, ಹಣದ ಸಮಸ್ಯೆಯಿಂದ ಮುಕ್ತರಾಗಿ!

ಶುಭ ಸಮಯ(Timings)
ವೈಶಾಖ, ಶುಕ್ಲ ಪೂರ್ಣಿಮಾ ಆರಂಭ - ಮೇ 15 ರಾತ್ರಿ 12:45
ವೈಶಾಖ, ಶುಕ್ಲ ಪೂರ್ಣಿಮಾ ಅಂತ್ಯ - ಮೇ 16 ಬೆಳಗ್ಗೆ 09:43
 

Follow Us:
Download App:
  • android
  • ios