Universe sends Signal: ಕೆಟ್ಟ ದಿನಕ್ಕೂ ಮುನ್ನ ಇಂಥ ಸೂಚನೆಗಳನ್ನ ಎಲ್ಲರೂ ಎದುರಿಸ್ತಾರಂತೆ!
ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಕಷ್ಟದ ದಿನಗಳು, ಸವಾಲಿನ ಸಮಯ ಎದುರಾಗುವುದಿಲ್ಲ. ಅದಕ್ಕೂ ಮುನ್ನ ನಮಗೆ ಹಲವು ರೀತಿಯಲ್ಲಿ ಬ್ರಹ್ಮಾಂಡದಿಂದ ಸಂದೇಶಗಳು ದೊರೆಯುತ್ತವೆ. ಅವುಗಳನ್ನು ಗಮನಿಸಿ ಎಚ್ಚರಿಕೆ ವಹಿಸಿದರೆ ಸಾಕಷ್ಟು ಬಾರಿ ಅವಘಡಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಜೀವನದಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಸಂಕಷ್ಟಗಳು ಎದುರಾಗುತ್ತವೆ. ಕಷ್ಟಗಳು ಬರಲು ಆಗಮಿಸಿದರೆ ಒಂದಾದ ಮೇಲೆ ಒಂದರಂತೆ ಅಥವಾ ಒಟ್ಟೊಟ್ಟಾಗಿ ಬರುವುದನ್ನು ಗಮನಿಸುತ್ತೇವೆ. ಆ ಸಮಯದಲ್ಲಿ ಜೀವನ ಹೈರಾಣಾಗುತ್ತದೆ, ತಾಳ್ಮೆ ಕಳೆದುಹೋಗುತ್ತದೆ, ಉತ್ಸಾಹ ಬತ್ತಿ ಸೋಲಿನ ಹತಾಶೆ ಮನಸ್ಸನ್ನು ಆವರಿಸಿಕೊಳ್ಳಬಹುದು. ಹವ್ಯಾಸಗಳು, ಆಸಕ್ತಿಗಳೆಲ್ಲ ಮೂಲೆಗುಂಪಾಗಬಹುದು. ಜೀವನಕ್ಕಾಗಿ ಯಾವುದೋ ವೃತ್ತಿ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗತಿಗಳ ಕಾರಣದಿಂದ ಜೀವನದಲ್ಲಿ ಬಹುದೊಡ್ಡ ಬದಲಾವಣೆ ನಡೆಯಬಹುದು. ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾಗಬಹುದು. ಆದರೆ, ಬ್ರಹ್ಮಾಂಡ ಎನ್ನುವುದು ಹಲವು ವಿಶಿಷ್ಟ ಎನರ್ಜಿಗಳ ಆಗರ. ಎಲ್ಲವೂ ಇದ್ದಕ್ಕಿದ್ದ ಹಾಗೆ ಸಂಭವಿಸುವುದಿಲ್ಲ. ಕಷ್ಟ, ಸವಾಲು, ಪರೀಕ್ಷೆಯ ಕಾಲ ಎದುರಾಗುವ ಮುನ್ನ ಅನೇಕ ರೀತಿಯಲ್ಲಿ ಸಂದೇಶಗಳು ದೊರೆಯುತ್ತವೆ. ಅವುಗಳನ್ನು ನಿರ್ಲಕ್ಷಿಸಿದರೆ ಕಷ್ಟಗಳು ಇದ್ದಕ್ಕಿದ್ದ ಹಾಗೆ ಬಂದ ಹಾಗೆನಿಸುತ್ತವೆ. ಅದಕ್ಕೂ ಮುನ್ನ ಬರುವ ಸಂದೇಶಗಳನ್ನು ಗ್ರಹಿಸಿದರೆ ಸ್ವಲ್ಪ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಹಾಗೆಯೇ, ಜ್ಯೋತಿಷ್ಯ ಶಾಸ್ತ್ರ ಸೂಚಿಸುವ ಪರಿಹಾರಗಳನ್ನು ಕೈಗೊಳ್ಳಲು ಸಹ ಅನುಕೂಲವಾಗುತ್ತದೆ. ಹೀಗಾಗಿ, ಕಷ್ಟದ ದಿನಗಳು ಎದುರಾಗುವ ಮೊದಲು ಬ್ರಹ್ಮಾಂಡದಿಂದ ಯಾವ ರೀತಿಯ ಸಂದೇಶಗಳು ದೊರೆಯಬಲ್ಲವು ಎನ್ನುವುದನ್ನು ಅರಿತುಕೊಳ್ಳೋಣ.
• ಎನರ್ಜಿಯಲ್ಲಿ (Energy) ಬದಲಾವಣೆ
ವೃತ್ತಿಯಲ್ಲಿ (Profession) ಚೆನ್ನಾಗಿರುವ ನೀವು ಕೆಲವೊಮ್ಮೆ ಏನೋ ಹೇಳಲು ಅಸಾಧ್ಯವಾದ, ಕೆಡುಕಿನ ಸೂಚನೆಗಳನ್ನು ಕಚೇರಿಯಲ್ಲಿ (Office) ಎದುರಿಸಬಹುದು. ನೀವು ಪ್ರಾಮಾಣಿಕರಾಗಿದ್ದರೂ ನಿಮ್ಮನ್ನು ಅನುಮಾನಿಸಲು ಶುರು ಮಾಡುವುದು, ಕೆಲಸಗಳಲ್ಲಿ ಆಗಾಗ ಸಂಭವಿಸುವ ತಪ್ಪುಗಳು, ಮೈಮರೆವು ಹೀಗೆ ಕೆಲವು ಬದಲಾವಣೆ (Change) ಕಾಣಬಹುದು. ಇದೇ ಎನರ್ಜಿಯಲ್ಲಾಗುವ ಬದಲಾವಣೆ. ಸೂಕ್ಷ್ಮವಾಗಿ ಅವಲೋಕಿಸಿದರೆ, ನಿಮ್ಮ ಹಾಗೂ ಸುತ್ತಲಿನ ವಾತಾವರಣದ ಶಕ್ತಿಯಲ್ಲಾಗುವ ಬದಲಾವಣೆ ಅನುಭವಕ್ಕೆ ಬರುತ್ತದೆ. ನಿಮ್ಮ ಭಾವನೆಗಳಲ್ಲೂ ವ್ಯತ್ಯಾಸವಾಗುತ್ತದೆ. ಯಾವತ್ತೂ ಆಶಾವಾದಿಯಾಗಿರುವ (Optimist) ನಿಮ್ಮಲ್ಲಿ ನಿರಾಶಾವಾದ ಮೂಡಬಹುದು.
ಜಪಾನೀಯರಿಗೆ 4 ಅಶುಭ ಸಂಖ್ಯೆ.. ಇದರ ಹಿಂದಿನ ಇಂಟ್ರೆಸ್ಟಿಂಗ್ ಕಹಾನಿ ಇದು!
• ನಿರ್ದಿಷ್ಟ ಸಂಕೇತ (Symbols)
ಪದೇ ಪದೆ ಕೆಲವು ರೀತಿಯ ಸಂಕೇತಗಳು ನಿಮ್ಮನ್ನು ಎದುರಾಗಬಹುದು. ನಿರ್ದಿಷ್ಟ ಸಂಖ್ಯೆ, ಬಣ್ಣ, ಚಿತ್ರಗಳು ಗೋಚರಿಸಬಹುದು. ಇಂತಹ ಸಂಕೇತಗಳು ನಿಮಗೆ ಬ್ರಹ್ಮಾಂಡದ (Universe) ಸಂದೇಶಗಳನ್ನು ತಿಳಿಸಲು ಯತ್ನಿಸುತ್ತಿರಬಹುದು ಹಾಗೂ ನಿಮ್ಮ ಜೀವನಕ್ಕೆ ಏನೋ ನಿರ್ದೇಶನ ನೀಡುತ್ತಿರಬಹುದು. ಮುಂದಿನ ದಿನಗಳಲ್ಲಿ ಸಂಕಷ್ಟಗಳು (Challenges) ಎದುರಾಗಲಿವೆ ಎನ್ನುವುದನ್ನು ತಿಳಿಸುತ್ತಿರಬಹುದು.
• ಅಂತಃಪ್ರಜ್ಞೆಯ (Intuition) ಪಿಸುಗುಟ್ಟುವಿಕೆ
ಕೆಲವೊಮ್ಮೆ ಬೆಳಬೆಳಗ್ಗೆಯೇ ಅರಿಯದ ತಳಮಳವೊಂದು ನಮ್ಮನ್ನು ಆವರಿಸಿ, ಅಂದಿನ ದಿನ ಚೆನ್ನಾಗಿಲ್ಲ ಎನ್ನುವುದನ್ನು ಹೇಳುತ್ತದೆ. ಅಂದು ಮುಖ್ಯವಾದ ಕಾರ್ಯಗಳಲ್ಲಿ ಹಿನ್ನಡೆಯಾಗುತ್ತದೆ. ನಿಮ್ಮ ಅಂತಃಪ್ರಜ್ಞೆ ನಿಮಗೆ ಪಿಸುಗುಟ್ಟುತ್ತ ಏನೋ ಹೇಳಲು ಬಯಸುತ್ತಿದೆ ಎನಿಸುತ್ತದೆ. ಅಂಥದ್ದನ್ನು ಅಲಕ್ಷಿಸಬಾರದು. ಏನೋ, ಯಾವುದೋ ಸರಿಯಿಲ್ಲ ಎನ್ನುವ ಭಾವನೆಯನ್ನು (Feeling) ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ನಿಮ್ಮ ಅವಜ್ಞೆಯಿಂದ ತಪ್ಪಾಗುತ್ತಿದ್ದರೂ ಹೀಗಾಗುತ್ತದೆ. ಮುಂದೆ ಅದರ ಪರಿಣಾಮ ಭಾರಿಯಾಗಬಹುದು. ಹೀಗಾಗಿ, ಈ ಭಾವನೆಯನ್ನು ದೂರ ತಳ್ಳದೆ ಪರಿಶೀಲಿಸಿ.
• ದೈನಂದಿನ ಜೀವನ ಏರುಪೇರು
ಸಾಮಾನ್ಯವಾಗಿ ನಮ್ಮೆಲ್ಲರ ಜೀವನದಲ್ಲಿ (Life) ಒಂದಿಷ್ಟು ದೈನಂದಿನ ಕೆಲಸಕಾರ್ಯಗಳಿರುತ್ತವೆ. ಅವು ಅವುಗಳ ಪಾಡಿಗೆ ನಿತ್ಯನಿರಂತರವಾಗಿ ಜರುಗುತ್ತಿರುತ್ತವೆ. ಆದರೆ, ಕೆಲವೊಮ್ಮೆ ಇವುಗಳಲ್ಲಿ ತೀರ ವ್ಯತ್ಯಾಸವಾಗುತ್ತದೆ. ನೀಟಾಗಿ ಎಲ್ಲವನ್ನೂ ನಡೆಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಮುಂದೆ ಬದಲಾವಣೆಯಿದೆ ಎನ್ನುವುದು ಈ ರೀತಿಯಲ್ಲಿ ಸೂಚನೆಯಾಗುತ್ತಿರಬಹುದು.
ಅಡುಗೆ ಮನೆಯಲ್ಲಿ ಈ ವಸ್ತು ಖಾಲಿ ಮಾಡಬೇಡಿ ಕೆಲಸವು ಹಾಳಾಗುತ್ತೆ
• ಕನಸುಗಳು, ದೃಷ್ಟಿಕೋನ
ಬ್ರಹ್ಮಾಂಡ ನಮಗೆ ಕನಸುಗಳ (Dreams) ಮೂಲಕ ಹಲವು ರೀತಿಯಲ್ಲಿ ಎಚ್ಚರಿಕೆ ನೀಡುತ್ತದೆ. ಸುಮ್ಮನೆ ನಿದ್ರೆಯ ಮಂಪರಿನಲ್ಲಿ ಏನೋ ಪ್ರಜ್ಞೆಯಾದಂತೆ ಆಗುತ್ತದೆ. ವಿಚಿತ್ರ ಕನಸುಗಳು ಬೀಳಬಹುದು. ಕಾಸ್ಮಿಕ್ ಶಕ್ತಿಯ (Cosmic Energy) ಪ್ರಭಾವದಿಂದ ಮುಂದಿನ ಕೆಟ್ಟ ದಿನಗಳು (Bad Days) ಸೂಚನೆ ದೊರೆಯಬಹುದು. ಇಂಥ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ನೆರವು ಪಡೆದುಕೊಂಡರೆ, ಮುಂದೆ ಎದುರಾಗಬಹುದಾದ ಸವಾಲುಗಳನ್ನು, ಸಂಕಷ್ಟಗಳನ್ನು ಸ್ವಲ್ಪ ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ.