ಈ ನಾಲ್ಕು ರಾಶಿಗಳದು ಪ್ರೇಮವಿವಾಹವಾಗುವುದೇ ಹೆಚ್ಚು!

ಪ್ರೇಮ ವಿವಾಹವಾಗುವ ಕನಸು ಬಹುತೇಕ ಯುವಜನತೆಯದ್ದು. ಪ್ರೀತಿಯಲ್ಲಿ ಬೀಳುವುದು, ಏಳುವುದು, ಪ್ರೀತಿಸಿದವರನ್ನೇ ವಿವಾಹವಾಗುವುದು- ಇವೆಲ್ಲವೂ ಬದುಕಿನ ಸುಂದರ ಅನುಭವ.. ಅಂದ ಹಾಗೆ ಯಾವೆಲ್ಲ ರಾಶಿಗಳು ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು ಗೊತ್ತಾ?

These Zodiac signs who are likely to have love marriages skr

ಮದುವೆ(Marriage) ಎಂಬುದು ಎಲ್ಲರಿಗೂ ವಿಶೇಷ. ಬದುಕಿನಲ್ಲೊಂದು ಮಹತ್ತರ ಬದಲಾವಣೆ. ಮದುವೆ ಪ್ರಸ್ತಾಪಗಳಿಂದ ಮದುವೆಯ ಸಿದ್ಧತೆಗಳವರೆಗೆ, ಈ ಪ್ರಕ್ರಿಯೆಯು ತುಂಬಾ ಸುಂದರವಾಗಿರುತ್ತದೆ. ಆದರೆ, ಈ ಎಲ್ಲ ಅನುಭವಗಳನ್ನೊಳಗೊಂಡಿದ್ದರೂ ಎರಡು ರೀತಿಯ ವಿವಾಹಗಳನ್ನು ಕಾಣಬಹುದು. ಹಿರಿಯರು ನೋಡಿ ಮಾತಾಡಿ ನಿಶ್ಚಯಿಸಿದ ಮದುವೆ ಹಾಗೂ ಪ್ರೇಮ ವಿವಾಹ(Love marriage). ಪ್ರೇಮ ವಿವಾಹ ಬಹುತೇಕ ಯುವಜನರ ಕನಸು. ವಿವಾಹಕ್ಕೂ ಮುನ್ನ ಪ್ರೇಮಿಸುವ ಅನುಭವ ಅನೂಹ್ಯವಾದದ್ದು. ಈ ಅದೃಷ್ಟ(Luck) ಕಾರಣಾಂತರಗಳಿಂದ ಎಲ್ಲರಿಗೂ ದಕ್ಕುವುದಿಲ್ಲ. ಹಾಗೆ ಪ್ರೇಮಿಸಿದ ಮೇಲೆ ಅವರನ್ನೇ ವಿವಾಹವಾಗುವುದು ಮತ್ತೊಂದು ಅದೃಷ್ಟದ ವಿಷಯ. ಏಕೆಂದರೆ, ಪ್ರೇಮ ವಿವಾಹದಲ್ಲಿ ವಿವಾಹಕ್ಕೂ ಮುನ್ನವೇ ಪಾರ್ಟ್ನರ್ ಬಗ್ಗೆ ಸಂಪೂರ್ಣ ತಿಳಿದಿರುವುದಷ್ಟೇ ಅಲ್ಲ, ಒಬ್ಬರನ್ನೊಬ್ಬರು ಸಿಕ್ಕಾಪಟ್ಟೆ ಬಯಸುತ್ತಿರುತ್ತಾರೆ. ಇಬ್ಬರ ನಡುವೆ ಯಾವುದೇ ಸಂಕೋಚವಿರುವುದಿಲ್ಲ, ಇರುವುದು ಪ್ರೀತಿ(Love) ಮಾತ್ರವಾಗಿರುತ್ತದೆ. ಸಾಮಾನ್ಯವಾಗಿ ಪ್ರೇಮ ವಿವಾಹವನ್ನು ಹೊಂದುವ ಸಾಧ್ಯತೆಯಿರುವ ಪ್ರಮುಖ ರಾಶಿಚಕ್ರ ಚಿಹ್ನೆಗಳು ಯಾವೆಲ್ಲ ಗೊತ್ತಾ?

ವೃಶ್ಚಿಕ ರಾಶಿ(Scorpio)
ಪ್ರೀತಿಯ ವಿಷಯಕ್ಕೆ ಬಂದಾಗ, ವೃಶ್ಚಿಕ ರಾಶಿಯವರು ಉತ್ತಮ ಯಶಸ್ಸನ್ನು ಹೊಂದಿದ್ದಾರೆ. ಅವರು ತಾವು ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಮತ್ತು ಪರಿಪೂರ್ಣ ಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ವೃಶ್ಚಿಕ ರಾಶಿಯವರಿಗೆ ಪ್ರೀತಿಯ ಪಾಲುದಾರರನ್ನು ಹುಡುಕುವ ಅಭ್ಯಾಸವಿದೆ. ಅವರು ದೀರ್ಘಾವಧಿಯ ಪ್ರೇಮ ಸಂಬಂಧವನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಮನೆಯಲ್ಲಿ ಒಪ್ಪಲಿಲ್ಲವೆಂದರೆ ಅವರು ಒಪ್ಪುವವರೆಗೂ ತಾಳ್ಮೆ(Patience)ಯಿಂದ ಕಾಯಬಲ್ಲರು. 

ಸಿಂಹ ರಾಶಿ(Leo)
ಸಿಂಹ ರಾಶಿಯವರು ಕೂಡ ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು. ಅವರು ಸಮಾನ ಮನಸ್ಸಿನ ಸಂಗಾತಿಗಳನ್ನು ಆಕರ್ಷಿಸುತ್ತಾರೆ. ಸಿಂಹ ರಾಶಿಯವರು ತಮ್ಮಂತೆಯೇ ವ್ಯಕ್ತಿತ್ವದ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಸಾಮಾನ್ಯವಾಗಿ ಹೋದಲ್ಲೆಲ್ಲ ಗಮನ ಸೆಳೆಯುವ ಅವರಿಗೆ ತಮ್ಮಂತೆ ಗಮನ ಸೆಳೆವವರೇ ಇಷ್ಟವಾಗುವುದು. ಅದಕ್ಕಾಗಿಯೇ ಅವರ ವಿವಾಹ ಜೀವನವು ಸಂತೋಷದಿಂದಿರುತ್ತದೆ ಮತ್ತು ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. 

ಮೂಲ ನಕ್ಷತ್ರ ಕೆಟ್ಟದ್ದೇ? ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ?

ಮೇಷ ರಾಶಿ(Aries)
ಯಾರೋ ನೋಡಿ ಮಾಡಿಸುವ ಮದುವೆ ಮೇಷ ರಾಶಿಯವರಿಗೆ ಒಪ್ಪಿತವಲ್ಲ. ತಮ್ಮ ಬದುಕು ಎಂದ ಮೇಲೆ ಆಯ್ಕೆಯೂ ತಮ್ಮದೇ ಆಗಿರಬೇಕೆಂದು ಬಯಸುವವರಿವರು. ಸಂಗಾತಿಯ ಆಯ್ಕೆಯಲ್ಲಿ ಸದಾ ಮುಂದು. ಮೇಷ ರಾಶಿಯವರು ಪ್ರೇಮಕ್ಕೆ ಬಿದ್ದ ಮೇಲೆ ಯಾವುದೇ ಕಾರಣಕ್ಕೂ ಪ್ರೇಮಿಯನ್ನು ಬಿಟ್ಟು ಕೊಡುವುದಿಲ್ಲ. ಅವರನ್ನು ವಿವಾಹವಾಗಲು ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಎದುರಿಸಿಯೇ ಸಿದ್ಧ ಎಂಬ ಗುಣ ಇವರದು. ಹಾಗಾಗಿ, ಮೇಷ ರಾಶಿಯವರದು ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ, ಹೋದಲ್ಲೆಲ್ಲ ತಮ್ಮದೇ ನಾಯಕತ್ವ ಗುಣ ತೋರುವ ಇವರಿಗೆ ಆಕರ್ಷಿತರಾಗುವವರ ಸಂಖ್ಯೆಯೂ ಹೆಚ್ಚು. 

ಈ 5 ರಾಶಿಗಳಿಗಿರತ್ತೆ ಲಕ್ಷ್ಮೀ ಅನುಗ್ರಹ, ನಿಮ್ಮ ರಾಶಿ ಯಾವುದು?

ತುಲಾ ರಾಶಿ(Libra)
ತುಲಾ ರಾಶಿಯವರು ಪ್ರೇಮವಿವಾಹಕ್ಕೆ ಮುಂದಾಗುತ್ತಾರೆ. ತುಲಾ ರಾಶಿಯವರು ಅತ್ಯಂತ ಭಾವೋದ್ರಿಕ್ತ ಪ್ರೇಮಿಗಳು, ಮತ್ತು ಅವರು ಅದೇ ರೀತಿ ಭಾವಿಸುವ ಸಂಗಾತಿಯನ್ನು ಹೊಂದಲು ಬಯಸುತ್ತಾರೆ.  ಸಂತೋಷದ ಜೀವನ ಮತ್ತು ಪ್ರೇಮ ವಿವಾಹದ ವಿಷಯಕ್ಕೆ ಬಂದಾಗ, ಅವರು ಸಾಕಷ್ಟು ಅದೃಷ್ಟವಂತರು. ಅವರ ಸ್ನೇಹ ನಡೆಗೆ ಪ್ರೇಮಿಯು ಸಂಪೂರ್ಣ ಪ್ರೀತಿಯಲ್ಲಿ ಬೀಳುತ್ತಾರೆ. ಭಾವನಾಜೀವಿಗಳಾದ, ಮಾತಿನಲ್ಲಿ ಮಹಾಚತುರರಾದ ಅವರಿಗೆ ಪ್ರೇಮ ವಿವಾಹಕ್ಕೆ ಮನೆಯವರನ್ನು ಒಪ್ಪಿಸುವ ಕಲೆಯೂ ಗೊತ್ತಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios