ಮೇಷ
ಮೇಷ ಅಂದರೆ ಟಗರು. ಟಗರುವಿನ ಶಕ್ತಿ ನಿಮಗೆ ಗೊತ್ತಿದ್ದದ್ದೇ. ಸುಮ್ಮನೇ ನಿಂತು ನೊಡುತ್ತಿರುತ್ತದೆ. ಹತ್ತಿರ ಹೋದರೆ ಗುಮ್ಮಿಬಿಡುತ್ತದೆ. ಹಾಗೇ ತನಗಿಷ್ಟ ಇಲ್ಲದವರನ್ನು ಹಿಂದಿನಿಂದಲಾದರೂ ಒಮ್ಮೆ ಗುಮ್ಮಿಬಿಡೋಣ ಎಂದು ಭಾವಿಸುವ ಟಗರುಗಳೇ ಇವರು. ಇನ್ನು ಈ ರಾಶಿಯವರು ಹೆಣ್ಣಾಗಿದ್ದರೂ ಸರಿ, ಈ ವಿಷಯದಲ್ಲಿ ಏನೂ ಕಡಿಮೆ ಇರೋಲ್ಲ. ಗಂಡಿಗೆ ಸವ್ವಾಸೇರಾಗಿ ತಮ್ಮ ಸಾಮರ್ಥ್ಯ ತೋರುತ್ತಾರೆ. ಲೈಂಗಿಕತೆಯ ವಿಷಯದಲ್ಲಿ ನೀವು ಇವರನ್ನು ಸೋಲಿಸಲಿಕ್ಕೆ ಆಗೋದಿಲ್ಲ. ಇವರಿಗೆ ಪ್ರೀತಿ ಮತ್ತು ಫ್ಲರ್ಟಿಂಗ್‌ನ ವ್ಯತ್ಯಾಸ ಗೊತ್ತಿಲ್ಲ ಎಂದಲ್ಲ, ಆದರೆ ಅವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಬಿಡುತ್ತಾರೆ.

ವೃಷಭ
ಹೇಳಿ ಕೇಳಿ ವೃಷಭ ಅಂದರೆ ಹೋರಿ. ಹೋರಿ ಮೇಲ್ನೋಟಕ್ಕೆ ಗಂಭೀರವಾಗಿ ಯಾರನ್ನೂ ಲಕ್ಷ್ಯ ಮಾಡದೆ ಹೋಗುವಂತೆ ಕಾಣುತ್ತಿದ್ದರೂ, ಅದರ ಮನಸ್ಸು ಮಾತ್ರ ಅತ್ತಿತ್ತ ಸುತ್ತ ಯಾವ ಒಳ್ಳೇ ಆಕಳು ಇದೆ, ಅದರ ಹಿಂದೆ ಯಾವಾಗ ಹೋದರೆ ಒಳ್ಳೇದು ಎಂದು ಹೊಂಚು ಹಾಕುತ್ತಾ ಇರುತ್ತದೆ. ಈ ರಾಶಿಯವರ ಗಂಭೀರ ಸ್ವಭಾವ ನಿಮ್ಮನ್ನು ಮೋಸ ಮಾಡಬಹುದು. ಆದರೆ ಒಳಗೊಳಗೇ ಅವರು ನಾಲಿಗೆ ಚಪ್ಪರಿಸುತ್ತಾ ಇರುತ್ತಾರೆ. ಆದ್ದರಿಂದ ಈ ಒಂದು ವಿಷಯದಲ್ಲಿ ಅವರನ್ನು ಪೂರ್ತಿ ನಂಬಬೇಡಿ. ಉಳಿದಂತೆ ಒಳ್ಳೆಯವರೇ.

ವಾತಾವರಣದಲ್ಲಿ ಆಮ್ಲಜನಕ ಹೆಚ್ಚಿಸೋ ಅಗ್ನಿಹೋತ್ರದ ಮಹತ್ವ ಗೊತ್ತಾ? ...

ಮಿಥುನ
ಮಿಥುನ ಅಂದ್ರೇನೇ ಜೋಡಿ. ಇವರು ರೊಮ್ಯಾನ್ಸ್ ಅಥವಾ ಪ್ರಣಯಕ್ಕೆ ತಕ್ಕ ಸಮಯಕ್ಕೆ ಕಾಯ್ತಾ ಇರುತ್ತಾರೆ. ತಕ್ಕ ಸಮಯ ಸಿಗಲಿಲ್ಲವಾದರೆ ಅದನ್ನು ಸೃಷ್ಟಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಹಾಲ್‌ನಲ್ಲಿ ಅತಿಥಿಗಳು ಇರುವಾಗಲೇ ಅಡುಗೆಮನೆಯಲ್ಲಿ ಸಂಗಾತಿಯನ್ನು ಪ್ರಣಯದಾಟಕ್ಕೆ ಎಳೆಯಬಲ್ಲರು. ಇಂಥ ರೋಮಾಂಚನ ಹಾಗೂ ಸಾಹಸಗಳನ್ನು ಇಷ್ಟಪಡುತ್ತಾರೆ. ಹೊಸ ಹಾಗೂ ಅಪರಿಚಿತ ಜಾಗಗಳಲ್ಲಿ ರೊಮ್ಯಾಂಟಿಕ್ ಸಾಹಸಗಳನ್ನು ಮಾಡುವುದು ಎಂದರೆ ಇವರಿಗೆ ಪ್ರೀತಿ. ಸರಿಯಾದ ಬಾಳಸಂಗಾತಿ ಸಿಕ್ಕಿದರೆ ಓಕೆ, ಇಲ್ಲವಾದರೆ ಜಾರಲೂ ಓಕೆ.

ಕುಂಭ
ಕುಂಭ ಅಂದರೆ ನೀರಿನ ಬಿಂದಿಗೆ. ಹೊರಗಿನಿಂದ ನೋಡಿದಾಗ ಬಿಂದಿಗೆಯೊಳಗೆ ನೀರು ಎಷ್ಟಿದೆ ಎಂದು ನಿಮಗೆ ಕಾಣುತ್ತದೆಯೇ? ಇಲ್ಲವಲ್ಲ. ಹಾಗೇ ಇವರೂ ಒಮ್ಮೆ ಪರಿಚಿತರಾಗುವವರೆಗೂ ಸಂಭಾವಿತರೇ. ಒಮ್ಮೆ ಅವರ ಆಪ್ತಲೋಕಕ್ಕೆ ನಿಮಗೆ ಪ್ರವೇಶ ಸಿಕ್ಕಿದರೆ ಮುಗಿಯಿತು, ಅವರ ಪೋಲಿ ಜೋಕುಗಳ ಹೊಳೆಯಲ್ಲಿ ನೀವು ಕೊಚ್ಚಿ ಹೋಗಬಹುದು. ತಮಗಿಂತ ಎಷ್ಟೇ ಹೆಚ್ಚು ವಯಸ್ಸಿನವರಾದರೂ, ಕಡಿಮೆ ವಯಸ್ಸಿನವರಾದರೂ ಸರಿ, ಫ್ಲರ್ಟ್ ಮಾಡಬೇಕೆಂದು ನಿರ್ಧರಿಸಿದರೆ ಸುಮ್ಮನೆ ಇರುವವರೇ ಅಲ್ಲ. ಇವರು ಇದ್ದಲ್ಲಿ ಸಾಕಷ್ಟು ರಸಿಕತನಕ್ಕೆ ಎಡೆಯಿದೆ.

ಮಕರ ರಾಶಿಗೆ ಶನೀಶ್ವರ: ಯಾರಿಗೆ ಏಳೂವರೆ ಬಾಧೆ? ...

ಧನು
ಸಾಂಗತ್ಯದ ವಿಷಯದಲ್ಲ ಇವರು ಓಕೆ. ಅಂದರೆ ದಾಂಪತ್ಯದಲ್ಲಿ ಪ್ರಣಯದಾಟ ಇವರಿಗೆ ಇಷ್ಟ. ಆದರೆ ಅದು ಅಲ್ಲಿ ಸಿಗಲಿಲ್ಲ ಎಂದಾದರೆ ಹೊರಗಿನ ಸಂಬಂಧಗಳನ್ನು ಕಂಡುಕೊಂಡು ಅಲ್ಲಿ ತಮ್ಮ ಪೋಲಿತನ ಪ್ರದರ್ಶಿಸಲು ಮುಂದಾಗುತ್ತಾರೆ. ಇವರ ಪೋಲಿತನ ಮಾತುಗಳಲ್ಲಿ ಮಾತ್ರವೇ ಅಲ್ಲದೆ ಕೃತ್ಯದಲ್ಲೂ ಇಣುಕುತ್ತದೆ. ಪೋಲಿತನದಲ್ಲೂ ಕ್ರಿಯೇಟಿವ್ ಆಗಿರುತ್ತಾರೆ ಇವರು. ಹೊಸಹೊಸ ಜೋಡಿಯನ್ನು ಕಂಡುಕೊಂಡು ದೂರ ಪ್ರಯಾಣ ಮಾಡುತ್ತಾ ಇರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಕೂಡ ಸ್ವಲ್ಪ ಏಕಾಂತ ಸಿಕ್ಕಿದರೆ ಪ್ರಣಯದಾಟ ಆಡಲು ಇವರು ರೆಡಿ.

ಮೀನ
ಇವರು ಎಂಥಾ ನಾಟಿ ಎಂದರೆ, ತಮ್ಮ ರಸಿಕತನದಿಂದ ತಮ್ಮ ಬಾಸ್‌ನನ್ನು ಕೂಡ ಬುಟ್ಟಿಗೆ ಹಾಕಿಕೊಂಡು ತಮಗೆ ಬೇಕಾದಂತೆ ಕುಣಿಸಬಲ್ಲರು. ಪೋಲಿತನ ಎಂಬುದು ಇವರಿಗೆ ಒಂದು ರೀತಿಯಿಂದ ತಮ್ಮ ಕೆಲಸ ಮಾಡಿಸಿಕೊಳ್ಳುವ ವಿಧಾನವೂ ಹೌದು. ಶ್ರೀಕೃಷ್ಣನೇ ಹದಿನಾರು ಸಾವಿರ ಹೆಂಗಳನ್ನು ನಿಭಾಯಿಸಲಿಲ್ವೇ, ಗೋಪಿಕೆಯರ ವಸ್ತ್ರವನ್ನೆಲ್ಲಾ ಕದಿಯಲಿಲ್ವೇ ಎಂದೆಲ್ಲಾ ತಮ್ಮ ಪೋಲಿತನವನ್ನು ಸಮರ್ಥಿಸಿಕೊಳ್ಳುವ ಭಂಡರೂ ಇವರು ಹೌದು. ಇವರ ಜೊತೆ ಪೋಲಿತನದ ಸ್ಪರ್ಧೆಯಲ್ಲಿ ನೀವು ನಿಂತು ಗೆಲ್ಲಲಾರಿರಿ.

ಕೋಪ, ಒತ್ತಡ ಎಲ್ಲಾ ದೂರ ಮಾಡಲು ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ ...