Asianet Suvarna News Asianet Suvarna News

ಪ್ರೀತಿಯ ಸಂಕೇತ ಇವರು: ಯಾವ ರಾಶಿಯವರು ಉತ್ತಮ ಸಂಗಾತಿ?

ನಿಜವಾದ ಪ್ರೀತಿ  (love) ತೋರುವ ಹಾಗೂ ಬದ್ಧತೆಯಿರುವ ಜನರು ತುಂಬಾ ವಿರಳ. ಕೆಲವೊಮ್ಮೆ ಅವರ ಗುಣ ಅವರ ರಾಶಿಗಳ ಅನುಸಾರವಾಗಿ ನಿರ್ಧಾರವಾಗುತ್ತದೆ. ಕೆಲವೊಂದು ರಾಶಿಯ ಜನರು ಹೆಚ್ಚು ಪ್ರೀತಿಯನ್ನು ಹೊಂದಿರುತ್ತಾರೆ. ಪ್ರೀತಿಯ ಸಂಬಂಧ (relationship) ಗಳ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ಇರುತ್ತಾರೆ.

The most loved zodiac signs suh
Author
First Published Jun 15, 2023, 10:01 AM IST | Last Updated Jun 15, 2023, 10:01 AM IST

ನಿಜವಾದ ಪ್ರೀತಿ  (love) ತೋರುವ ಹಾಗೂ ಬದ್ಧತೆಯಿರುವ ಜನರು ತುಂಬಾ ವಿರಳ. ಕೆಲವೊಮ್ಮೆ ಅವರ ಗುಣ ಅವರ ರಾಶಿಗಳ ಅನುಸಾರವಾಗಿ ನಿರ್ಧಾರವಾಗುತ್ತದೆ. ಕೆಲವೊಂದು ರಾಶಿಯ ಜನರು ಹೆಚ್ಚು ಪ್ರೀತಿಯನ್ನು ಹೊಂದಿರುತ್ತಾರೆ. ಪ್ರೀತಿಯ ಸಂಬಂಧ (relationship) ಗಳ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ಇರುತ್ತಾರೆ.

ಕೆಲವರು ಹೃದಯ (heart) ದಿಂದ ಮುಕ್ತವಾಗಿ ಪ್ರೀತಿಯನ್ನು ನೀಡುತ್ತಾರೆ. ಯಾರೂದರೂ ಸರಿ ಅವರೊಂದಿಗೆ ಬದ್ಧತೆಯಿಂದ ನಡೆದುಕೊಳ್ಳುತ್ತಾರೆ. ಎಲ್ಲರೊಂದಿಗೂ ವಿಶೇಷ ಬಾಂಧವ್ಯ ಹೊಂದಿರುತ್ತಾರೆ. ಸುತ್ತಲಿನ ಹೆಚ್ಚಿನ ಜನರನ್ನು ಪ್ರೀತಿಸುತ್ತಾರೆ. ಅಂತಹ ವ್ಯಕ್ತಿತ್ವಗಳನ್ನು ಪಡೆಯಲು ಅದೃಷ್ಟ (good luck) ಬೇಕು. ಜ್ಯೋತಿಷ್ಯದ ಪ್ರಕಾರ ಇಂಥಹ 5 ರಾಶಿಗಳಿವೆ. ಈ ರಾಶಿಯ ಜನರು ಹೆಚ್ಚು ಬದ್ಧರಾಗಿರುತ್ತಾರೆ. ಇವರು ಹೆಚ್ಚು ಬದ್ಧತೆಯನ್ನು ಹೊಂದಿರುವ ಪ್ರೇಮಿಗಳಾಗಿರುತ್ತಾರೆ.


ಸಿಂಹ ರಾಶಿ ( Leo)

ಸಿಂಹ ರಾಶಿಯವರು ತುಂಬಾ ಆತ್ಮವಿಶ್ವಾಸ (Confidence) ಕ್ಕೆ ಹೆಸರುವಾಸಿಯಾದವರು. ಇವರು ತುಂಬಾ ವರ್ಚಸ್ಸಿ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇದು ಅವರನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ. ಅವರು ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ಇಷ್ಟಪಡುತ್ತಾರೆ. ತಮ್ಮ ಸಂಗಾತಿಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಾರೆ. ಈ ರಾಶಿ ಚಕ್ರ zodiac ದ ಚಿಹ್ನೆಯು ತುಂಬಾ ಉದಾರವಾಗಿದ್ದು, ತಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಕಾಳಜಿ (concern)  ಹೊಂದಿರುತ್ತಾರೆ.

ವೃಷಭ ರಾಶಿ (Taurus) 

ಇವರು ತುಂಬಾ ನಿಷ್ಠಾವಂತ (faithful) ರು. ಮತ್ತು ನೀವು ಅವರ ಮೇಲೆ ಅವಲಂಬಿತರಾಗಬಹುದು. ಪ್ರೀತಿಯ ವಿಚಾರದಲ್ಲಿ ಇವರು ರತ್ನ. ತಮ್ಮ ಸಂಗಾತಿಯನ್ನು ಗೌರವಿಸುತ್ತಾರೆ ಅಲ್ಲದೆ ಅದ್ಭುತವಾಗಿ ಪ್ರೀತಿಸುತ್ತಾರೆ. ಜೀವನದ ಪ್ರತಿ ಕ್ಷಣವನ್ನೂ ಆನಂದಿಸುತ್ತಾರೆ. ಈ ರಾಶಿಚಕ್ರದ ಚಿಹ್ನೆಗಳು ತಮ್ಮ ಸಂಗಾತಿಯ ಆಸೆ (desire) ಗಳನ್ನು ಮತ್ತು ಅಗತ್ಯಗಳಿಗೆ ಬಹಳ ಗಮನ ಹರಿಸುತ್ತವೆ. ಇದು ಅವರನ್ನು ತುಂಬಾ ಪ್ರೀತಿಪಾತ್ರರನ್ನಾಗಿ ಮಾಡುತ್ತದೆ.

ಇವರಿಗೆ ಸಂಪತ್ತಿನ ಕೊರತೆಯೇ ಇಲ್ಲ: ಲಕ್ಷ್ಮಿ ದೇವಿಗೆ ಪ್ರಿಯವಾದ ರಾಶಿ ಯಾವುದು? 

 

ಕಟಕ ರಾಶಿ (Cancer)

ಈ ರಾಶಿಚಕ್ರ ಚಿಹ್ನೆಯು ಅತ್ಯಂತ ಪ್ರೀತಿಯ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಇವರು ತುಂಬಾ ಅನೂನ್ಯ ಜೀವಿಗಳಾಗಿದ್ದು, ಸಂಬಂಧಗಳನ್ನು ಗೌರವಿಸುತ್ತಾರೆ. ತಮ್ಮ ಸಂಗಾತಿಯ ಅಗತ್ಯಗಳನ್ನು ಈಡೇರಿಸುತ್ತಾರೆ. ತುಂಬಾ ರೋಮ್ಯಾಂಟಿಕ್  (Romantic) ಆಗಿರುತ್ತಾರೆ. ಮುಖ್ಯವಾಗಿ ತುಂಬಾ ಕಾಳಜಿ ವಹಿಸುತ್ತಾರೆ.

ತುಲಾ ರಾಶಿ (Libra)

ಈ ಆಕರ್ಷಕವಾದ ರಾಶಿಚಕ್ರ ಚಿಹ್ನೆಯು ಸಾಮರಸ್ಯ (harmony) ವನ್ನು ಗೌರವಿಸುತ್ತದೆ ಮತ್ತು ಅವರು ತಮ್ಮ ಸಂಬಂಧಗಳು ಮತ್ತು ಜೀವನದಲ್ಲಿ ಸಮತೋಲನ (balance) ವನ್ನು ಬಯಸುತ್ತಾರೆ. ಇವರು ಜಗಳ ಪರಿಹರಿಸುವಲ್ಲಿ ಜಾಣರು. ಸಂವಹನ  (communication) ಕೌಶಲ್ಯಗಳು ಉತ್ತಮವಾಗಿವೆ. ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಜನರನ್ನು ಆಕರ್ಷಿಸುತ್ತಾರೆ.

ತಪ್ಪಿಯೂ ಗಣೇಶನಿಗೆ ಈ 5 ವಸ್ತುಗಳನ್ನು ಅರ್ಪಿಸುವ ತಪ್ಪು ಮಾಡ್ಬೇಡಿ!

 

ಮೀನ ರಾಶಿ (Pisces )

ಈ ರಾಶಿಚಕ್ರದ ಚಿಹ್ನೆಯು ಸಹಾನುಭೂತಿ ಮತ್ತು ಭಾವನಾತ್ಮಕ (Emotional) ಆಗಿದೆ. ಇವರು ತುಂಬಾ ಸೃಜನಶೀಲರಾಗಿದ್ದು, ಅಭಿವ್ಯಕ್ತರಾಗಿದ್ದಾರೆ. ಪ್ರೀತಿಪಾತ್ರರಿಗೆ ವಿಶೇಷ ಗೌರವ ಕೊಡುತ್ತಾರೆ. ಭಾವನೆ (feeling) ಗಳಿಗೆ ಬೆಲೆ ಕೊಡುತ್ತಾರೆ. ಕಾಳಜಿಯುಳ್ಳ ಪಾರ್ಟನರ್ ಆಗುತ್ತಾರೆ.

ಈ ರಾಶಿಚಕ್ರಗಳು ತುಂಬಾ ತಟಸ್ಥ

ಮೇಷ, ಮಿಥುನ (Gemini) , ಕನ್ಯಾ, ವೃಶ್ಚಿಕ, ಧನು (Sagittarius), ಮತ್ತು ಕುಂಭ ರಾಶಿ (Aquarius) ಯವರು ಸಹ ಪ್ರೀತಿಸುತ್ತಾರೆ ಆದರೆ ಅದು ಅವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ.

Latest Videos
Follow Us:
Download App:
  • android
  • ios