Swapna shastra: ನೀವು ಎಂದಾದರೂ ಕರೆನ್ಸಿ ನೋಟುಗಳ ಮಳೆಯ ಕನಸು ಕಂಡಿದ್ದೀರಾ? ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸು ಶ್ರೀಮಂತರಾಗುವುದರ ಜೊತೆಗೆ ಬಡತನವನ್ನೂ ಸೂಚಿಸುತ್ತದೆ. ಈ ಕನಸಿನ ನಿಜವಾದ ಅರ್ಥ ಏನು? ಇದರಿಂದ ನಿಜಕ್ಕೂ ಶುಭವಾಗುತ್ತಾ? ಅಥವಾ ಇದು ಅಶುಭದ ಸೂಚನೆಯೇ? ಎಲ್ಲಾ ಮಾಹಿತಿ ತಿಳಿಯೋಣ. 

ನೋಟಿನ ಮಳೆಯಾಗುವ ಕನಸು ಬಿದ್ದಿದ್ಯಾ?

ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ ನಿದ್ದೆ ಮಾಡುವಾಗ ಕನಸು ಕಾಣುತ್ತಾನೆ. ಸ್ವಪ್ನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸೂ ನಮ್ಮ ನಿಜ ಜೀವನಕ್ಕೆ ಆಳವಾದ ಮತ್ತು ವಿಶೇಷ ಸಂಬಂಧವನ್ನು ಹೊಂದಿದೆ. ಕೆಲವು ಕನಸುಗಳು ಭವಿಷ್ಯದ ಪ್ರಯೋಜನಗಳ ಬಗ್ಗೆ ನಮಗೆ ಹೇಳಿದರೆ, ಇನ್ನು ಕೆಲವು ಸನ್ನಿಹಿತ ಅಪಾಯಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತವೆ. ಇಂತಹ ಅತ್ಯಂತ ಸಾಮಾನ್ಯ ಆದರೆ ಅಚ್ಚರಿಯ ಕನಸುಗಳಲ್ಲಿ ಒಂದು ಕರೆನ್ಸಿ ನೋಟುಗಳ ಮಳೆಯನ್ನು ನೋಡುವುದು. ಜನರು ಸಾಮಾನ್ಯವಾಗಿ ಆಕಾಶದಿಂದ ಹಣದ ಮಳೆಯನ್ನು ನೋಡುವುದನ್ನು ಅಪಾರ ಸಂಪತ್ತು ಮತ್ತು ಶ್ರೀಮಂತರಾಗುವ ಸೂಚನೆ ಎನ್ನುತ್ತಾರೆ, ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸು ಎಷ್ಟೇ ಶುಭವಾಗಿದ್ದರೂ, ಅದು ದೊಡ್ಡ ಅಪಾಯವನ್ನು ಸಹ ಸೂಚಿಸುತ್ತದೆ. ಈ ಕನಸಿನ ನಿಜವಾದ ಅರ್ಥ ಮತ್ತು ನೀವು ತಪ್ಪಿಸಬೇಕಾದ ದೊಡ್ಡ ತಪ್ಪಿನ ಬಗ್ಗೆ ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ನೋಟುಗಳ ಮಳೆ: ಅದೃಷ್ಟ ಬೆಳಗುತ್ತದೆ

  • ನೀವು ಆಕಾಶದಿಂದ ಬೀಳುವ ಹೊಸ, ಶುಭ್ರವಾದ ಮತ್ತು ಸ್ವಚ್ಛವಾದ ನೋಟುಗಳ ಮಳೆಯನ್ನು ನೋಡುವ ಕನಸು ಕಂಡರೆ ಮತ್ತು ನೀವು ಅದರಿಂದ ತುಂಬಾ ಸಂತೋಷಪಟ್ಟರೆ, ಇದು ತುಂಬಾ ಶುಭ ಸಂಕೇತವಾಗಿದೆ.
  • ನಿಮಗೆ ಅಪರಿಚಿತ ಅಥವಾ ಸ್ಥಗಿತಗೊಂಡ ಮೂಲದಿಂದ ಸಡನ್ ಆಗಿ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಎಂದು ಸೂಚಿಸುತ್ತದೆ.
  • ಉದ್ಯೋಗದಲ್ಲಿರುವವರು ಬಡ್ತಿಯನ್ನು ಪಡೆಯಬಹುದು, ಜೊತೆಗೆ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಗಮನಾರ್ಹ ಲಾಭವನ್ನು ಪಡೆಯಬಹುದು.
  • ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುವ ಸಮಯ ಬಂದಿದೆ.

ಆದರೆ ಈ ರೀತಿ ಕನಸು ಬಿದ್ದರೆ ಎಚ್ಚರ!

ಸಂಪತ್ತಿನ ಪ್ರತಿಯೊಂದು ಕನಸು ಸಂತೋಷವನ್ನು ಮಾತ್ರ ತರುವುದಿಲ್ಲ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ನೀವು ಈ ರೀತಿ ಕನಸು ಕಂಡ ಎಚ್ಚರ ವಹಿಸೋದು ಅವಶ್ಯಕ.

ಹರಿದ ಮತ್ತು ಸವೆದ ನೋಟುಗಳ ಮಳೆ: ಕೊಳಕು, ಹರಿದ ಅಥವಾ ಸವೆದ ನೋಟುಗಳು ಆಕಾಶದಿಂದ ಮಳೆಯಾಗುತ್ತಿದ್ದರೆ, ಅದು ದೊಡ್ಡಮಟ್ಟದಲ್ಲಿ ಆರ್ಥಿಕ ನಷ್ಟ, ಪ್ರಗತಿಗೆ ಅಡ್ಡಿ ಅಥವಾ ಮುಂದಿನ ದಿನಗಳಲ್ಲಿ ಅಪಖ್ಯಾತಿ ಉಂಟಾಗುವುದನ್ನು ಸೂಚಿಸುತ್ತದೆ.

ಕನಸಿನಲ್ಲಿ ಆತಂಕ: ನೋಟುಗಳ ಮಳೆಯನ್ನು ನೋಡುವುದರಿಂದ ನಿಮಗೆ ಸಂತೋಷದ ಬದಲು ಆತಂಕ ಅಥವಾ ಭಯ ಉಂಟಾದರೆ, ಅದು ನಿಮ್ಮ ಆರ್ಥಿಕ ಭಯ ಮತ್ತು ಮಾನಸಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ.

ಈ ಒಂದು ತಪ್ಪನ್ನು ಮಾಡಬೇಡಿ!

ನೀವು ನೋಟುಗಳ ಮಳೆಯ ಕನಸು ಕಂಡಿದ್ದರೆ, ಎದ್ದ ನಂತರ ಅದನ್ನು ಯಾರಿಗೂ ಹೇಳಬೇಡಿ. ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಶುಭ ಮತ್ತು ಹಣಕ್ಕೆ ಸಂಬಂಧಿಸಿದ ಕನಸುಗಳನ್ನು ಹೆಚ್ಚು ರಹಸ್ಯವಾಗಿರಿಸಿಕೊಂಡಷ್ಟೂ ಅವುಗಳ ಫಲಿತಾಂಶಗಳು ವೇಗವಾಗಿ ಪೂರ್ಣಗೊಳ್ಳುತ್ತವೆ. ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಕನಸನ್ನು ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಹಂಚಿಕೊಳ್ಳುವುದರಿಂದ ಅದರ ಸಕಾರಾತ್ಮಕ ಪರಿಣಾಮ ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಅಂತಹ ಕನಸು ಬಿದ್ದರೆ, ನಿಜ ಜೀವನದಲ್ಲಿ ನಿಮ್ಮ ಖರ್ಚನ್ನು ನಿಯಂತ್ರಿಸಿ, ಏಕೆಂದರೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವಲ್ಲಿ ನಿಮ್ಮ ಸುಪ್ತ ಮನಸ್ಸು ಸಹ ಮುಖ್ಯಪಾತ್ರವಹಿಸುತ್ತೆ.