Asianet Suvarna News Asianet Suvarna News

ಈ Zodiac Signs ಮೇಲೆ ಪ್ರಭಾವ ಬೀರಲಿದೆ ಸೂರ್ಯನ ರಾಶಿ ಬದಲಾವಣೆ

ಗ್ರಹಗಳ ರಾಶಿ ಬದಲಾವಣೆ ನಮ್ಮ ರಾಶಿ ಮೇಲಾಗುತ್ತದೆ. ಕೆಲ ರಾಶಿಗೆ ಅದೃಷ್ಟ ಒಲಿದ್ರೆ ಮತ್ತೆ ಕೆಲ ರಾಶಿಗಳು ನಷ್ಟ ಅನುಭವಿಸುತ್ತವೆ. ಏಪ್ರಿಲ್ 14ರಂದು ಸೂರ್ಯ ತನ್ನ ರಾಶಿ ಬದಲಿಸುವ ಕಾರಣ ಅನೇಕರಿಗೆ ಕಷ್ಟ ಎದುರಾಗಲಿದೆ.
 

Sun Transit In Aries Mesh Could Lucky For Seven Zodiac Signs
Author
First Published Apr 8, 2023, 12:37 PM IST | Last Updated Apr 8, 2023, 12:37 PM IST

ಏಪ್ರಿಲ್ 14 ರಂದು  ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಧ್ಯಾಹ್ನ 2.42ಕ್ಕೆ ಸೂರ್ಯ ರಾಶಿ ಬದಲಿಸಲಿದ್ದಾನೆ. ಸೂರ್ಯನ ಈ ಸಂಕ್ರಮಣ ಎಲ್ಲಾ ರಾಶಿಯವರ ಮೇಲೆ ಸಮಾನವಾಗಿ ಪರಿಣಾಮ ಬೀರಲಿದೆ.  ಕೆಲ ರಾಶಿಗಳಿಗೆ ಮಂಗಳ ಪರಿಣಾಮ ಇದ್ರಿಂದಾದ್ರೆ ಮತ್ತೆ ಕೆಲ ರಾಶಿಯವರಿಗೆ ಇದ್ರಿಂದ ಹಾನಿಯಾಗಲಿದೆ. ಯಾವ ರಾಶಿಯವರಿಗೆ ಸೂರ್ಯನ ರಾಶಿ ಪ್ರವೇಶ  ಕೆಟ್ಟ ಪರಿಣಾಮ ಬೀರಲಿದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಸೂರ್ಯ (Sun) ನ ಮೇಷ ರಾಶಿ ಪ್ರವೇಶದಿಂದ ಈ ರಾಶಿಯವರಿಗೆ ಹಾನಿ :
ವೃಷಭ (Taurus) ರಾಶಿ :
ಸೂರ್ಯನ ರಾಶಿ ಬದಲಾವಣೆ ವೃಷಭ ರಾಶಿಯ ಮೇಲಾಗಲಿದೆ. ಇದರ ಹನ್ನೆರಡನೇ ಮನೆಯಲ್ಲಿ ಸೂರ್ಯ ಸಾಗಲಿದ್ದಾನೆ. ವೃಷಭ ರಾಶಿಯ ಜನರು ಕೆಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮೇಲಧಿಕಾರಿಗಳೊಂದಿಗೆ ವಾಗ್ವಾದ ಉಂಟಾಗಬಹುದು. ಹಕ್ಕಿಗಾಗಿ ಈ ರಾಶಿಯ ಜನರು ಹೋರಾಟ ನಡೆಸಲಿದ್ದಾರೆ. ಈ ಸಮಯದಲ್ಲಿ ವೃಷಭ ರಾಶಿಯವರು ಶಾಂತವಾಗಿರುವುದು ಒಳ್ಳೆಯದು. ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ವೃಷಭ ರಾಶಿಯವರು ಶಿವ (Shiva) ನ ಆರಾಧನೆ ಮಾಡಿದ್ರೆ ಎಲ್ಲ ಕಷ್ಟಗಳಿಂದ ಮುಕ್ತಿ ಪಡೆಯಬಹುದು. 

ರಾಜ್ಯದ ಕೆಟ್ಟ ಮಂತ್ರಿ ಸೇರಿ ಇಂಥವು ಬೇಗ ನಾಶವಾಗುತ್ತೆ ಅಂದಿದ್ದಾನೆ ಚಾಣಕ್ಯ!

ಕರ್ಕ (Cancer) ರಾಶಿ : ಕರ್ಕ ರಾಶಿಯವರೂ ಕೆಲ ಸಮಸ್ಯೆಯನ್ನು ಎದುರಿಸಲಿದ್ದಾರೆ. ಸೂರ್ಯ ಈ ರಾಶಿಯ ಹತ್ತನೇ ಮನೆಯಲ್ಲಿ ನಡೆಯಲಿದ್ದಾನೆ.  ರಾಹು ಜೊತೆ ಸೂರ್ಯನ ಮೈತ್ರಿಯಿಂದಾಗಿ ಕರ್ಕ ರಾಶಿಯವರು ಹಠಾತ್ ತೊಂದರೆಗಳನ್ನು ಎದುರಿಸಲಿದ್ದಾರೆ. ಅನವಶ್ಯಕ ಚರ್ಚೆಯಿಂದ ಸಮಾಜ ಮತ್ತು ಕುಟುಂಬದಲ್ಲಿ ಗೌರವ ಕಡಿಮೆಯಾಗಲಿದೆ. ಕರ್ಕ ರಾಶಿಯವರನ್ನು ರಾಹು ರಕ್ಷಿಸಲಿದ್ದಾನೆ. ರಾಹುವಿನಿಂದ ಈ ರಾಶಿಯವರಿಗೆ ಲಾಭವಾಗಲಿದೆ. ಸೂರ್ಯ ಪ್ರವೇಶದ ಅಶುಭ ಪ್ರಭಾವ ಕಡಿಮೆಯಾಗಲಿದೆ. 

ಕನ್ಯಾ (Virgo) ರಾಶಿ : ಏಪ್ರಿಲ್ 14ರ ನಂತ್ರ ಕನ್ಯಾ ರಾಶಿಯರವ ಜೀವನದಲ್ಲೂ ಕೆಲ ಬದಲಾವಣೆಯಾಗಲಿದೆ. ಈ ರಾಶಿಯವರು ಜೀವನದ ಕೆಲ ಸುಖ ಸಮಯವನ್ನು ಕಳೆಯಲಿದ್ದಾರೆ. ಕನ್ಯಾ ರಾಶಿಯ ಎಂಟನೇ ಮನೆಯಲ್ಲಿ ಸೂರ್ಯ ಸಂಚರಿಸಲಿದ್ದಾನೆ. ಇಲ್ಲಿ ರಾಹುವಿನ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಆದ್ರೆ ವಿದೇಶದಲ್ಲಿ ಹೊಂದಿಕೊಳ್ಳುವುದು ಇವರಿಗೆ ಸ್ವಲ್ಪ ಕಷ್ಟವಾಗುತ್ತದೆ. ಸಮಸ್ಯೆಗಳು ಎದುರಾಗುತ್ತವೆ. ವೃತ್ತಿ ಜೀವನದಲ್ಲಿ ಸಣ್ಣ ಏರಿಳಿತಗಳಾಗುತ್ತವೆ. ಮಾತಿನ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ. ಭಗವಂತ ವಿಷ್ಣುವನ್ನು ಕನ್ಯಾ ರಾಶಿಯವರು ಆರಾಧಿಸಬೇಕು. ಆಗ ಬಂದ ಸಮಸ್ಯೆಯಲ್ಲ ಹೂವಿನಂತೆ ಹಗುರವಾಗುತ್ತದೆ. 

Bad Time ಎಲ್ಲರಿಗೂ ಬರುತ್ತೆ, ಓಡಿ ಹೋಗೋ ಬದಲು, ಆಚಾರ್ಯ ಚಾಣಕ್ಯನ ನೀತಿ ನೆನಪಿಡಿ

ಮಕರ (Capricorn) ರಾಶಿ : ಮಕರ ರಾಶಿಯವರೂ ಈ ಸಂದರ್ಭದಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಸೂರ್ಯ ರಾಶಿ ಪ್ರವೇಶ ಮಾಡ್ತಿದ್ದಂತೆ ವ್ಯಾಪಾರ (Business)ದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಕರ ರಾಶಿಯ ಜನರು ಯಾವುದೇ ರೀತಿಯ ಯೋಜನೆಯಲ್ಲಿ ಹಣವನ್ನು ಹೂಡಿಕೆ (Investment) ಮಾಡದಿರುವುದು ಒಳ್ಳೆಯದು. ಆರ್ಥಿಕ ನಷ್ಟದ ಸಾಧ್ಯತೆ ಹೆಚ್ಚಾಗುವ ಕಾರಣ ಎಚ್ಚರಿಕೆ ಹೆಜ್ಜೆ ಇಡಬೇಕು. ಬೇರೆಯವರ ಟೀಕೆ ಅಥವಾ ಕೊಂಕು ಮಾತಿಗೆ ಗಮನ ನೀಡದೆ ಇರೋದು ಬಹಳ ಒಳ್ಳೆಯದು. ಈ ಸಂದರ್ಭದಲ್ಲಿ ಮಕರ ರಾಶಿಯವರು ಶಾಂತವಾಗಿರಬೇಕು. ತಾಳ್ಮೆಯಿಂದ ಪ್ರಯತ್ನಗಳನ್ನು ಮುಂದುವರಿಸುತ್ತಿರಬೇಕು. ಮಕರ ರಾಶಿಯವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಶಾಂತಿಯನ್ನು ಬಯಸುವ, ಜೀವನದಲ್ಲಿ ಸುಖವನ್ನು ಬಯಸುವ ಮಕರ ರಾಶಿಯವರು ದುರ್ಗಾ ಮಾತೆಯ ಮಂತ್ರವನ್ನು ಜಪಿಸುತ್ತಿರಬೇಕು. ಇದ್ರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು. 

ಯಾವ ರಾಶಿಗೆ ಲಾಭ : ಇನ್ನು ಸೂರ್ಯನ ರಾಶಿ ಬದಲಾವಣೆ ಕೆಲ ರಾಶಿಯವರಿಗೆ ಲಾಭ ನೀಡಲಿದೆ. ಮೇಷ, ಮಿಥುನ, ಸಿಂಹ, ವೃಶ್ಚಿಕ, ಧನ ಹಾಗೂ ಕುಂಭ ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಮಾಡಿದ ಕೆಲಸದಲ್ಲಿ ಯಶಸ್ಸು (Success) ಸಿಗಲಿದೆ.  
 

Latest Videos
Follow Us:
Download App:
  • android
  • ios