Asianet Suvarna News Asianet Suvarna News

Astrology Tips : ಹೊಸ ವರ್ಷದ ಮೊದಲ ದಿನ ಸೂರ್ಯನ ಆಶೀರ್ವಾದ ಸಿಗಲು ಹೀಗೆ ಮಾಡಿ

ಹೊಸ ವರ್ಷದ ಮೊದಲ ದಿನ ಚೆನ್ನಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಬರೀ ಮೊದಲ ದಿನ ಚೆನ್ನಾಗಿದ್ರೆ ಸಾಲದು. ವರ್ಷಪೂರ್ತಿ ಸಂತೋಷ, ಆರ್ಥಿಕ ವೃದ್ಧಿ, ಗೌರವ ಸಿಗಬೇಕು ಅಂದ್ರೆ ಏನು ಮಾಡಬೇಕು ಅನ್ನೋದು ಇಲ್ಲಿದೆ. 
 

Sun Astro Remedies For New Year 2023
Author
First Published Dec 26, 2022, 12:45 PM IST

ಹೊಸ ವರ್ಷಕ್ಕೆ ಇನ್ನೇನು ಕೆಲವೇ ಕೆಲವು ದಿನ ಬಾಕಿಯಿದೆ. ಕ್ರಿಸ್ಮಸ್ ಸಂಭ್ರಮ ಮುಗಿಸಿರುವ ಜನರು ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. 2022ರಲ್ಲಿ ಮಾಡಲು ಸಾಧ್ಯವಾಗದ ಕೆಲಸ 2023ರಲ್ಲಿ ಆದ್ರೂ ಪೂರ್ಣಗೊಳ್ಳುತ್ತಾ ಎಂಬ ನಿರೀಕ್ಷೆ ಅನೇಕರಲ್ಲಿದೆ. 

ಹೊಸ ವರ್ಷ (New Year) ವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಹ್ವಾನಿಸುತ್ತಾರೆ. ತಡರಾತ್ರಿಯವರೆಗೆ ಪಾರ್ಟಿ ಮಾಡಿ, ಹೊಸ ವರ್ಷದ ಮೊದಲ ದಿನ ಸೂರ್ಯ ನೆತ್ತಿಗೆ ಬಂದ್ರೂ ಮಲಗಿರುವವರು ಕೆಲವರಾದ್ರೆ, ಹೊಸ ವರ್ಷದ ಮೊದಲ ದಿನ ಬೇಗ ಎದ್ದು ದೇವರ ಪೂಜೆ ಮಾಡಿ, ಹೊಸ ವರ್ಷದ ಮೊದಲ ದಿನವನ್ನು ಪಾಸಿಟಿವ್ (Positive) ಎನರ್ಜಿಯೊಂದಿಗೆ ಸ್ವಾಗತಿಸುವವರು ಮತ್ತೆ ಕೆಲವರು. ಹೊಸ ವರ್ಷ ಅಂದರೆ 2023 ಭಾನುವಾರ (Sunday) ಪ್ರಾರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಭಾನುವಾರವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಸೂರ್ಯ (Sun) ನನ್ನು ಈ ಬ್ರಹ್ಮಾಂಡದ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದ. ಗ್ರಹಗಳು ಮತ್ತು ನಕ್ಷತ್ರಗಳ ಅಧಿಪತಿ ಎಂದೂ ಸೂರ್ಯನನ್ನು ಕರೆಯಲಾಗುತ್ತದೆ. ಹೊಸ ವರ್ಷದ ಮೊದಲ ದಿನ ಸೂರ್ಯನ ದಿನವಾದ ಭಾನುವಾರ ಶುರುವಾಗುವ ಕಾರಣ ಸೂರ್ಯನಿಗೆ ಸಂಬಂಧಿಸಿದ ಕೆಲವು ಉಪಾಯಗಳನ್ನು ಮಾಡಿದರೆ ಸೂರ್ಯನ ಕೃಪೆ ನಿಮಗೆ ಸಿಗಲಿದೆ. ವರ್ಷವಿಡೀ ಎಲ್ಲಾ ದೇವಾನುದೇವತೆಗಳ ಮತ್ತು ಗ್ರಹ ರಾಶಿಗಳ ಆಶೀರ್ವಾದ ನಿಮ್ಮ ಮೇಲಿರುತ್ತದೆ. ನಾವಿಂದು ಹೊಸ ವರ್ಷದ ಮೊದಲ ದಿನ ಏನು ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೆವೆ. 

2023 ರಲ್ಲಿ ಈ ಗಿಫ್ಟ್’ ನಿಮಗೆ ನೀವೇ ಕೊಡುವ ಮೂಲಕ ಹೊಸ ಜೀವನ ಆರಂಭಿಸಿ

ಹೊಸ ವರ್ಷದ ಮೊದಲ ದಿನ ಅವಶ್ಯಕವಾಗಿ ಮಾಡಿ ಈ ಕೆಲಸ : 
ಸೂರ್ಯನ ಪೂಜೆ :
2023 ರ ಮೊದಲ ದಿನದಂದು ಸೂರ್ಯನನ್ನು ಅಗತ್ಯವಾಗಿ ಪೂಜೆ ಮಾಡಿ. ಇದರಿಂದ ವ್ಯಕ್ತಿತ್ವದಲ್ಲಿ ಸೂರ್ಯನ ಪ್ರಭಾವ ಕಾಣಿಸಿಕೊಳ್ಳುತ್ತದೆ.

ಅರ್ಘ್ಯ ಅರ್ಪಿಸಿ : 2023 ರ ಮೊದಲ ದಿನ, ಭಾನುವಾರ ಬೆಳಿಗ್ಗೆ ನಿತ್ಯದ ಕೆಲಸ ಮುಗಿಸಿ, ಸ್ನಾನ ಮಾಡಿ ನೀವು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಸೂರ್ಯನ ಮಂತ್ರವನ್ನು ಪಠಿಸಿ. ಇದರಿಂದ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಇಡೀ ವರ್ಷ ನಿಮ್ಮ ಗೌರವಕ್ಕೆ ಅಡ್ಡಿಯಾಗುವ ಯಾವುದೇ ಸಮಸ್ಯೆ ಕಾಡುವುದಿಲ್ಲ. 

ಲಕ್ಷ್ಮಿ ಪೂಜೆ : ಹೊಸ ವರ್ಷದ ಮೊದಲ ದಿನ ನೀವು ಬರೀ ಸೂರ್ಯನನ್ನು ಮಾತ್ರವಲ್ಲ ಲಕ್ಷ್ಮಿಯನ್ನು ನೆನೆಯಬೇಕಾಗುತ್ತದೆ. ಭಾನುವಾರ ಸೂರ್ಯನ ಕಿರಣಗಳು ಮೈಗೆ ತಾಗುವಂತೆ ನಿಂತು ತಾಯಿ ಲಕ್ಷ್ಮಿಯ ಸ್ತೋತ್ರವನ್ನು ಪಠಿಸಬೇಕು. ಇದ್ರಿಂದ ಲಕ್ಷ್ಮಿ ಕೃಪೆಗೆ ನೀವು ಪಾತ್ರರಾಗುವುದಲ್ಲದೆ ಮನೆಯಲ್ಲಿ ವರ್ಷಪೂರ್ತಿ ಸಮೃದ್ಧಿ ನೆಲೆಸಿರುತ್ತದೆ. 

ಆರ್ಥಿಕ ವೃದ್ಧಿಗೆ ಹೀಗೆ ಮಾಡಿ : 2023 ರ ಮೊದಲ ದಿನದಂದು  ತಾಯಿ ಲಕ್ಷ್ಮಿಗೆ ಹೂವುಗಳನ್ನು ಅರ್ಪಿಸಿ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕಪಾಟಿನಲ್ಲಿ ಹಣ ತುಂಬಿರುತ್ತದೆ.

ಜಾತಕದಲ್ಲಿ ಸೂರ್ಯನ ಬಲವನ್ನು ಹೀಗೆ ಹೆಚ್ಚಿಸಿ : 2023 ರ ಮೊದಲ ದಿನದಂದು ಗೋಧಿ ಹಿಟ್ಟಿನ ಉಂಡೆಯನ್ನು ಮಾಡಬೇಕು. ಅದನ್ನು ಮೀನುಗಳಿಗೆ ಆಹಾರವಾಗಿ ನೀಡಬೇಕು. ನಿಮ್ಮ   ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ ಇದು ಹೆಚ್ಚು ಫಲ ನೀಡುತ್ತದೆ.  ಸೂರ್ಯನ ಸ್ಥಾನವನ್ನು ಬಲಪಡಿಸುತ್ತದೆ.

ಉದ್ಯೋಗದಲ್ಲಿ ಪ್ರಗತಿ : 2023 ರ ಮೊದಲ ದಿನ, ಒಂದು ಪಾತ್ರೆಯಲ್ಲಿ ನೀರು, ಬೆಲ್ಲ ಮತ್ತು ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನದಿಯಲ್ಲಿ ಹಾಕಬೇಕು. ಹೀಗೆ ಮಾಡಿದ್ರೆ ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ. ಉದ್ಯೋಗದಲ್ಲಿ ಪ್ರಮೋಷನ್ ಸಿಗುತ್ತದೆ. ಹಾಗೆಯೇ ವ್ಯಾಪಾರದಲ್ಲಿ ಪ್ರಗತಿ ಕಂಡು ಬರುತ್ತದೆ.   

ಭಾರತದ ಈ ಸ್ಥಳಗಳ Christmas celebration ಪ್ರಪಂಚದಾದ್ಯಂತ ಫೇಮಸ್

ಗ್ರಹ ದೋಷ ನಿವಾರಣೆ : ಹೊಸ ವರ್ಷದ ಮೊದಲ ದಿನದಂದು ಆದಿತ್ಯ ಹೃದಯಂ ಸ್ತೋತ್ರವನ್ನು ಪಠಿಸಲು ಮರೆಯಬೇಡಿ. ನೀವು ಹೀಗೆ ಮಾಡಿದ್ರೆ ಒಂಬತ್ತು ಗ್ರಹಗಳು ಶಾಂತವಾಗಿರುತ್ತವೆ. ಗ್ರಹ ದೋಷಗಳಿಂದ ನಿಮಗೆ ಮುಕ್ತಿ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 
 

Follow Us:
Download App:
  • android
  • ios