Vastu Tips : ಮಕ್ಕಳು ಹೆಚ್ಚು ಅಂಕ ಗಳಿಸ್ಬೇಕೆಂದ್ರೆ ಇದೂ ಮುಖ್ಯ
ಪ್ರತಿಯೊಂದು ಕೆಲಸಕ್ಕೂ ಹಾರ್ಡ್ ವರ್ಕ್ ಮಹತ್ವದ್ದು. ಪ್ರಯತ್ನಿಸಿದಷ್ಟು ಫಲ ಹೆಚ್ಚು. ಕೆಲವೊಮ್ಮೆ ಪ್ರಯತ್ನವೇ ಸಾಧ್ಯವಾಗೋದಿಲ್ಲ. ಅದಕ್ಕೆ ವಾಸ್ತುದೋಷವೂ ಕಾರಣವಾಗಿರಬಹುದು. ಪರೀಕ್ಷೆ ಹತ್ತಿರ ಬಂದ್ರೂ ಓದೋಕೆ ಮನಸ್ಸಿಲ್ಲ ಎನ್ನುವ ಮಕ್ಕಳನ್ನು ವಾಸ್ತು ಸರಿದಾರಿಗೆ ತರಬಹುದು.
ಮಕ್ಕಳಿಗೆ ಪರೀಕ್ಷೆ ಎಂದರೆ ಹೆತ್ತವರಿಗೆ ಜ್ವರ ಬರುವ ಕಾಲ ಇದು. ಶಾಲೆಗೆ ಹೋಗುವ ಮಕ್ಕಳ ಹೋಂ ವರ್ಕ್, ಪ್ರೊಜೆಕ್ಟ್, ಟ್ಯೂಶನ್, ಪರೀಕ್ಷೆ ಇಂತಹ ಹತ್ತು ಹಲವು ಟೆನ್ಶನ್ ಗಳನ್ನು ಮನೆಯಲ್ಲಿರುವ ಪಾಲಕರು ನೋಡ್ಬೇಕಾಗತ್ತೆ. ಪರೀಕ್ಷೆ ಈಗ ಹತ್ತಿರ ಬರ್ತಿದೆ. ಎಲ್ಲ ಮಕ್ಕಳ ಗಮನ ಓದಿನ ಕಡೆಗಿದೆ. ಕೆಲ ಮಕ್ಕಳಿಗೆ ಎಷ್ಟು ಓದಿದ್ರೂ ಓದು ತಲೆಯಲ್ಲಿ ನಿಲ್ಲೋದಿಲ್ಲ. ಇದಕ್ಕೆ ವಾಸ್ತು ದೋಷ ಕೂಡ ಕಾರಣವಾಗಿರಬಹುದು. ಮಕ್ಕಳ ಓದಿಗೆ ಸಂಬಂಧಿಸಿದಂತ ಕೆಲವು ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿಯೇ ಪರಿಹಾರವಿದೆ. ನಾವಿಂದು ಅದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಮಕ್ಕಳು (Children) ಚುರುಕಾಗ್ಬೇಕೆಂದ್ರೆ ಹೀಗೆ ಮಾಡಿ :
ಓದಿ (Read) ಗೆ ಈ ದಿಕ್ಕು (Direction) ಹೆಚ್ಚು ಪ್ರಶಸ್ತ : ಮಕ್ಕಳು ಓದಲು ಸ್ಪೂರ್ತಿಯಾಗುವಂತಹ ವಾತಾವರಣ ಮನೆಯಲ್ಲಿರಬೇಕು. ಮಕ್ಕಳ ಸ್ಟಡಿ ರೂಮ್ (Study Room) ನಲ್ಲಿರುವ ವಸ್ತು, ಸ್ಟಡಿ ಟೇಬಲ್, ಕುಳಿತುಕೊಳ್ಳುವ ದಿಕ್ಕುಗಳು ಕೂಡ ಅವರ ಏಳ್ಗೆಗೆ ಕಾರಣವಾಗುತ್ತೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು (Vastu) ಶಾಸ್ತ್ರದ ಪ್ರಕಾರ, ಮಕ್ಕಳ ಕೋಣೆ ಈಶಾನ್ಯ ದಿಕ್ಕಿನಲ್ಲಿರಬೇಕು. ಆ ರೂಮಿನಲ್ಲಿ ಅವರು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಅಭ್ಯಾಸ ಮಾಡಬೇಕು. ಹೀಗೆ ಮಾಡುವುದರಿಂದ ಅವರ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ.
ಓದುವಾಗ ನಿಮ್ಮ ಮುಖ ಈ ದಿಕ್ಕಿಗಿರಲಿ : ಇನ್ನು ಮಕ್ಕಳು ಓದುವಾಗ ಅವರ ಮುಖ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇರಬೇಕು. ಇದು ಸಾಧ್ಯವಾಗದೇ ಇದ್ದಲ್ಲಿ ಉತ್ತರ ದಿಕ್ಕಿಗೆ ಕೂಡ ಕುಳಿತುಕೊಳ್ಳಬಹುದು. ಇದರ ಹೊರತಾಗಿ ಈಶಾನ್ಯ ದಿಕ್ಕು ಕೂಡ ಓದಿಗೆ ಪ್ರಶಸ್ತವಾಗಿದೆ. ಈ ದಿಕ್ಕುಗಳಿಗೆ ಮುಖಮಾಡಿ ಓದಿದಾಗ ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸುತ್ತಾರೆ.
ಮದುವೆ ಸಂಪ್ರದಾಯ ಆರಂಭವಾಗಿದ್ದು ಯಾವಾಗ? ಅದಕ್ಕೂ ಮುನ್ನ ಏನಾಗ್ತಿತ್ತು…
ಸ್ಟಡಿ ಟೇಬಲ್ ಹೀಗಿರಲಿ : ಮಕ್ಕಳ ಸ್ಟಡಿ ಟೇಬಲ್ ಓರೆ ಕೋರೆ ಆಕಾರದಲ್ಲಿ ಇರಬಾರದು. ಸ್ಟಡಿ ಟೇಬಲ್ ಯಾವಾಗಲೂ ಆಯತಾಕಾರ ಅಥವಾ ಚೌಕಾಕಾರದಲ್ಲಿ ಇರಬೇಕು. ಟೇಬಲ್ ಅನ್ನು ಗೋಡೆಗೆ ಅಂಟಿಸಿ ಇಡಬಾರದು. ಅದು ಗೋಡೆಯಿಂದ 3-4 ಇಂಚು ದೂರದಲ್ಲಿರಬೇಕು. ಸ್ಟಡಿ ಟೇಬಲ್ ಎದುರಿನಲ್ಲಿ ಸ್ಪೂರ್ತಿದಾಯಕ ಎನಿಸುವ, ನುಡಿ ಮುತ್ತುಗಳನ್ನು ಬರೆದಿರುವ ಪೋಸ್ಟರ್ ಅಂಟಿಸಿ. ಮಕ್ಕಳು ಓದುವ ಕೋಣೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕಪಾಟುಗಳನ್ನು ಇಡಬೇಡಿ. ಮಕ್ಕಳ ಪುಸ್ತಕಗಳನ್ನು ಇಡುವ ಕಪಾಟು ಕೂಡ ಮುಖ್ಯವಾಗುತ್ತದೆ. ಅದನ್ನು ನೀವು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗೆ ಇಡಬೇಕು.
ಈ ರಾಶಿಯವ್ರಿಗೆ ಲೌಡ್ ಮ್ಯೂಸಿಕ್, ಪಾರ್ಟಿಗಿಂತ… ಚೆನ್ನಾಗಿ ನಿದ್ದೆ ಮಾಡೋದೇ ಇಷ್ಟ!
ಸ್ಟಡಿ ಟೇಬಲ್ ಗೆ ಈ ದಿಕ್ಕು ಸೂಕ್ತ : ಇನ್ನು ಮಕ್ಕಳು ಓದಲು ಹೇಗೆ ಪ್ರಶಸ್ತವಾದ ದಿಕ್ಕು ಇದೆಯೋ ಹಾಗೇ ಸ್ಟಡಿ ಟೇಬಲ್ ಇಡಲು ಕೂಡ ದಿಕ್ಕಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಸ್ಟಡಿ ಟೇಬಲ್ ಉತ್ತರ ಅಥವಾ ಪೂರ್ವ ದಿಕ್ಕು ಹೆಚ್ಚು ಪ್ರಾಶಸ್ತ್ಯವಾಗಿದೆ. ಈ ದಿಕ್ಕು ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸ್ಟಡಿ ರೂಮಿನಲ್ಲಿ ಮಕ್ಕಳ ಪುಸ್ತಕಗಳನ್ನು ಇಡಲು ಕೂಡ ಸರಿಯಾದ ದಿಕ್ಕು ನೋಡಬೇಕು. ಮಕ್ಕಳ ಪುಸ್ತಕಗಳನ್ನ ಇಡಲು ಈಶಾನ್ಯ ದಿಕ್ಕು ಸೂಕ್ತವಾಗಿದೆ. ಓದಲು ಏಕಾಗ್ರತೆ ಬಹಳ ಮುಖ್ಯ. ಮಕ್ಕಳಲ್ಲಿ ಏಕಾಗ್ರತೆ ಮೂಡಲು ಪೂರಕ ವಾತಾವರಣ ಕೂಡ ಇರಬೇಕು. ಇಂತಹ ಏಕಾಗ್ರತೆಯು ಒಳ್ಳೆಯ ವಾತಾವರಣ, ಚೊಕ್ಕಟವಾದ ಕೋಣೆ, ವ್ಯವಸ್ಥಿತವಾಗಿ ಜೋಡಿಸಿದ ಸ್ಟಡಿ ಟೇಬಲ್ ಗಳಿಂದಲೂ ಬರುತ್ತದೆ. ಇಂತಹ ವಾತಾವರಣದಲ್ಲಿ ಮಕ್ಕಳು ಓದಿದಾಗ ಅವರು ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲು ಸಾಧ್ಯ.