Asianet Suvarna News Asianet Suvarna News

Astrology Tips: ಸಂಗಾತಿ ಜತೆಗೂ ಸೀಕ್ರೇಟ್‌ ಮಾಡೋ ಜನ ಇವ್ರು

ಸಂಗಾತಿ ಜತೆಗೂ ಗುಟ್ಟು ಬಿಟ್ಟುಕೊಡದವರಿದ್ದಾರೆ. ಸಂಬಂಧದಲ್ಲೂ ನಿಗೂಢತೆ ಕಾಯ್ದುಕೊಂಡು ಸಾಂಗತ್ಯವನ್ನು ಹೆಚ್ಚು ಆಕರ್ಷಕವನ್ನಾಗಿಸಿಕೊಳ್ಳುವುದು ಕೆಲವರ ಸ್ವಭಾವ. ಕೆಲವು ರಾಶಿಗಳ ಜನರಲ್ಲಿ ಇದನ್ನು ಗಾಢವಾಗಿ ಕಾಣಬಹುದು.

Some zodiac signs have tendency to keep secrecy with partner
Author
First Published May 21, 2023, 6:24 PM IST

ಸಂಗಾತಿಯೊಂದಿಗೆ ಎಲ್ಲವನ್ನೂ ಹಂಚಿಕೊಳ್ಳದಿದ್ದರೆ ಸಾಧ್ಯವಿಲ್ಲ ಎನ್ನುವುದು ಹಲವರ ಮನಸ್ಥಿತಿ. ಎಲ್ಲ ರೀತಿಯ ಆಗುಹೋಗುಗಳು, ಅನಿಸಿಕೆಗಳು, ಭಾವನೆಗಳನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಂಡರೆ ಮಾತ್ರ ಅವರಿಗೆ ಸಮಾಧಾನ ಎನಿಸುತ್ತದೆ. ಸಂಗಾತಿಯೊಂದಿಗೆ ಏನನ್ನಾದರೂ ಮುಚ್ಚಿಡುವುದು ಅವರಿಂದ ಸಾಧ್ಯವಾಗುವುದಿಲ್ಲ. ಆದರೆ, ಎಲ್ಲರೂ ಹೀಗಿರುವುದಿಲ್ಲ. ಸಂಗಾತಿ ಜತೆಗೆ ಕೆಲವು ಗುಟ್ಟುಗಳನ್ನು ಮೆಂಟೇನ್‌ ಮಾಡುತ್ತಾರೆ. ಹೆಚ್ಚು ನಿಗೂಢವಾಗಿರಲು ಬಯಸುತ್ತಾರೆ. ಎಲ್ಲವನ್ನೂ ಸಂಗಾತಿಗೆ ತಿಳಿಯಪಡಿಸಿದರೆ ತಮ್ಮ ಕುರಿತ ಆಕರ್ಷಣೆ ಕಡಿಮೆಯಾಗಿ ಬಿಡಬಹುದು ಎನ್ನುವ ವಿಚಾರವೂ ಅವರಲ್ಲಿ ಇರುತ್ತದೆ. ಜತೆಗೆ, ಸಂಬಂಧದಲ್ಲಿ ನಿಗೂಢತೆ ಇದ್ದಾಗ ಹೆಚ್ಚು ಕುತೂಹಲ ಇರುತ್ತದೆ ಎನ್ನುವ ನಂಬಿಕೆಯಿಂದ ಅವರು ಸಂಬಂಧದಲ್ಲಿ ಗುಟ್ಟನ್ನು ಕಾಪಾಡುತ್ತಾರೆ. ಕೆಲವು ರಾಶಿಗಳ ಜನರಲ್ಲಿ ಈ ಗುಣವನ್ನು ಹೆಚ್ಚಾಗಿ ನೋಡಬಹುದು. ಅವರು ಸಂಗಾತಿ ಜತೆಗೆ ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ. ಅದಕ್ಕೆ ನಾಚಿಕೆ ಅಥವಾ ಇಂಟ್ರಾವರ್ಟ್‌ ಗುಣ ಕಾರಣವಾಗಿರುವುದಿಲ್ಲ. ಉದ್ದೇಶಪೂರ್ವಕವಾಗಿ ಅವರು ಹಾಗೆ ಮಾಡುತ್ತಾರೆ. ಹಾಗೆಂದು ಅದು ನೆಗೆಟಿವ್ ಗುಣವೇನೂ ಅಲ್ಲ. ಅಲ್ಲದೆ, ಭಯಪಡಿಸುವಂತಹ ಮನಸ್ಥಿತಿಯೂ ಆಗಿರುವುದಿಲ್ಲ. ಅವರ ಸ್ವಭಾವವೇ ಹಾಗಿರುತ್ತದೆ ಅಷ್ಟೆ. ಈ ಗುಣ ಮುಖ್ಯವಾಗಿ ನಾಲ್ಕು ರಾಶಿಗಳ ಜನರಲ್ಲಿ ಕಂಡುಬರುತ್ತದೆ.

•    ಕುಂಭ (Aquarius)
ಕುಂಭ ರಾಶಿಯ ಜನ ನಿಜಕ್ಕೂ ಆಳವರಿಯಲು ಸಾಧ್ಯವಾಗದ ಮನಸ್ಥಿತಿ (Mentality) ಹೊಂದಿರುತ್ತಾರೆ. ಅವರು ತಮ್ಮದೇ ಕುಟುಂಬದ (Family) ಜತೆಗೂ ಗುಟ್ಟು ಮಾಡುತ್ತಾರೆ. ಈ ರಾಶಿಯ ಜನ ಆಕರ್ಷಕ (Attractive) ಮತ್ತು ಶಕ್ತಿಯುತ ವ್ಯಕ್ತಿತ್ವ (Personality)  ಹೊಂದಿರುತ್ತಾರೆ. ಹೀಗಾಗಿ, ಸಂಬಂಧದಲ್ಲೂ (Relation) ನಿಗೂಢವಾಗಿರಲು ಬಯಸುತ್ತಾರೆ. ಸಂಗಾತಿಗೆ (Partner) ಸಾಕಷ್ಟು ಗೌರವ ನೀಡಿದರೂ ತಮ್ಮೊಳಗನ್ನು ಬಿಟ್ಟುಕೊಡುವುದಿಲ್ಲ. ವರ್ಷಗಳು ಕಳೆದಂತೆ ಸಂಗಾತಿಯೊಂದಿಗೆ ಆಳವಾದ ಬಾಂಧವ್ಯ ಹೊಂದುತ್ತಾರೆ. ಸಂಬಂಧದಲ್ಲಿ ಪ್ರೀತಿ (Love) ಭಾರೀ ಮುಖ್ಯ ಎಂದು ನಂಬುವ ಇವರು, ಪ್ರೀತಿಯಲ್ಲಿ ನಿಗೂಢತೆ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯ ಎಂದು ಭಾವಿಸುತ್ತಾರೆ. ಆರಂಭದ ದಿನಗಳಲ್ಲಿರುವಂತೆ ಸಂಬಂಧದಲ್ಲಿ ಹೊಳಪಿರಲು ಇದು ಕಾರಣವಾಗುತ್ತದೆ ಎನ್ನುತ್ತಾರೆ.

Career Tips: ರಾಶಿ ಪ್ರಕಾರ ನಿಮ್ಮ ಕೈ ಹಿಡಿವ ಉದ್ಯೋಗ ಯಾವುದು?

•    ಕನ್ಯಾ (Virgo)
ಕನ್ಯಾ ರಾಶಿಯ ಜನ ಮತ್ತವರ ಸಂಗಾತಿ ಹೊಸ ಜೋಡಿಗಳಾಗಿರುವಾಗ (New Couple) ಒಬ್ಬರು ಮತ್ತೊಬ್ಬರೊಂದಿಗೆ ಭಾರೀ ಹೊಂದಾಣಿಕೆಯಿಂದ (Adjustment) ಕೂಡಿರುತ್ತಾರೆ. ಜೀವನವನ್ನು ಎಂಜಾಯ್‌ (Enjoy) ಮಾಡುತ್ತಾರೆ. ಆದರೂ ಅವರು ಸಂಬಂಧದಲ್ಲಿ ನಿಗೂಢತೆ (Mystery) ಮತ್ತು ಸಭ್ಯತೆ (Polite) ಇರಬೇಕೆಂದು ಬಯಸುತ್ತಾರೆ. ಒಬ್ಬರನ್ನೊಬ್ಬರು ಗೌರವಪೂರ್ಣವಾಗಿ ಪರಿಗಣಿಸಲು ಗುಟ್ಟು ಅಗತ್ಯ ಎಂದು ಭಾವಿಸುತ್ತಾರೆ. ಸಂಗಾತಿಯನ್ನು ಟೇಕನ್‌ ಫಾರ್‌ ಗ್ರಾಂಟೆಡ್‌ ರೀತಿ ಪರಿಗಣಿಸಿದರೆ ಸಂಬಂಧದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತದೆ ಎನ್ನುವುದು ಇವರ ನಿಲುವು. ಸಂಗಾತಿ ಜತೆ ಸಭ್ಯವಾಗಿ ವರ್ತಿಸುವುದು ಜಗಳ (Fight) ಕಡಿಮೆ ಮಾಡುವ ಹಾದಿ ಎನ್ನುತ್ತಾರೆ. ಹೀಗಾಗಿ, ಸಂಗಾತಿಗೆ ಹೆಚ್ಚು ಪ್ರಶ್ನೆ ಮಾಡುವುದಿಲ್ಲ. ಇಂತಹ ಗುಣದಿಂದಾಗಿ ಇವರ ಪ್ರೀತಿ ಹೆಚ್ಚು ಆಪ್ತವಾಗಿರುತ್ತದೆ.

•    ಮೇಷ (Aries)
ಮೇಷ ರಾಶಿಯವರು ಎಂತಹ ಸಂಗಾತಿ ಎಂದರೆ, ತಮ್ಮ ಪತಿ ಅಥವಾ ಪತ್ನಿಗೆ ಯಾವಾಗ ಸಾರಿ ಕೇಳಬೇಕು, ಯಾವಾಗ ಪ್ಲೀಸ್‌ ಎನ್ನಬೇಕು ಎನ್ನುವುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ಮೂಲಕ, ತಮ್ಮ ಸಂಗಾತಿಗೆ ಮೌಲ್ಯವಿದೆ (Value) ಎನ್ನುವುದನ್ನು ಆಗಾಗ ತಿಳಿಯಪಡಿಸುತ್ತಾರೆ. ಸಂಗಾತಿಯೊಂದಿಗೆ ಆಸಕ್ತಿಕರವಾಗಿ ಇರಲು ಬಯಸುತ್ತಾರೆ. ಭಾವನಾತ್ಮಕ (Emotional) ಮತ್ತು ಹೆಚ್ಚು ಹೊಂದಾಣಿಕೆಯ ಸಾಂಗತ್ಯಕ್ಕಾಗಿ ಸ್ವಲ್ಪ ಗುಟ್ಟು ನಿಭಾಯಿಸುವುದು ಅಗತ್ಯ ಎನ್ನುತ್ತಾರೆ.

ಇವರಿಗೆ ಅವರು ಪ್ರೇಮಿ, ಅವರಿಗೆ ಇವರಲ್ಲ! ಒನ್ ಸೈಡೆಡ್ ಲವ್‌ ಈ ರಾಶಿಯವರಲ್ಲಿ ಹೆಚ್ಚು

•    ಧನು (Sagittarius)
ಕ್ರಿಯಾಶೀಲತೆ (Creativity), ಸ್ವತಂತ್ರ ಧೋರಣೆಯ ಧನು ರಾಶಿಯ ಜನ ಸಾಕಷ್ಟು ವರ್ಚಸ್ಸು (Charm) ಹೊಂದಿರುತ್ತಾರೆ. ಈ ಗುಣ ಇವರನ್ನು ಸಹಜವಾದ ಲೀಡರ್‌ (Leader) ಆಗಿ ರೂಪಿಸುತ್ತದೆ. ಲವ್‌ ಲೈಫ್‌ ನಲ್ಲಿ ಹೆಚ್ಚು ನಿಗೂಢವಾಗಿರಲು ಬಯಸುತ್ತಾರೆ. ಸಾಮಾಜಿಕವಾಗಿ ಹೆಚ್ಚು ಉದಾರಬುದ್ಧಿ ಹೊಂದಿದ್ದು, ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಾರೆ. ಸಾಂಗತ್ಯದಲ್ಲಿ ಲೈಂಗಿಕ (Sexual) ಆಕರ್ಷಣೆ ಹೆಚ್ಚಲು ನಿಗೂಢತೆ ಕಾಯ್ದುಕೊಳ್ಳುವುದು ಅಗತ್ಯ ಎಂದು ಭಾವಿಸುತ್ತಾರೆ. 

Follow Us:
Download App:
  • android
  • ios