Asianet Suvarna News Asianet Suvarna News

Zodiac Sign: ಈ ರಾಶಿಯವರು ಒಮ್ಮೆ ನಿರ್ಧರಿಸದ್ರೆ ಮುಗೀತು, ಮತ್ತೆ ಬದಲಾಗೋಲ್ಲ

ಹಿಂದಿನ ನಿರ್ಧಾರಗಳ ಬಗ್ಗೆ ಪಶ್ಚಾತ್ತಾಪ ಪಡುವುದು, ಪರಾಮರ್ಶೆ ಮಾಡುವುದು, ತಪ್ಪು ಎನಿಸಿದ್ದನ್ನು ತಿದ್ದಿಕೊಳ್ಳುವುದು ಬಹುತೇಕರ ಗುಣ. ಆದರೆ, ಕೆಲವು ರಾಶಿಗಳ ಜನ ಇತಿಹಾಸವನ್ನು ಎಂದಿಗೂ ತಿರುಗಿ ನೋಡುವುದಿಲ್ಲ. ತಮ್ಮ ನಿರ್ಧಾರಗಳ ಬಗ್ಗೆ ಮತ್ತೊಮ್ಮೆ ಯೋಚಿಸುವುದಿಲ್ಲ. 
 

Some people never look back for their decision
Author
First Published May 18, 2023, 2:50 PM IST | Last Updated May 18, 2023, 2:50 PM IST

“ಜೀವನದಲ್ಲಿ ಅದೊಂದು ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಇಂದು ಏನೋ ಆಗಿರಬಹುದಿತ್ತು, ಅಂದು ಈ ಆಯ್ಕೆ ಮಾಡದೆ ಮತ್ತೊಂದನ್ನು ಮಾಡಿದ್ದರೆ ನಾನೂ ಅವರ ಹಾಗೆ ಇರಬಹುದಿತ್ತು..’ ಮನುಷ್ಯರಲ್ಲಿ ಇಂತಹ ಹಳಹಳಿಕೆಗಳಿಗೆ ಬರವೇ ಇರುವುದಿಲ್ಲ. ಏಕೆಂದರೆ, ನಾವೆಲ್ಲರೂ ಸಾಮಾನ್ಯವಾಗಿ ನಮ್ಮ ನಮ್ಮ ಇತಿಹಾಸವನ್ನು ಆಗಾಗ ಪುನರವಲೋಕನ ಮಾಡುತ್ತಲೇ ಇರುತ್ತೇವೆ. ಬರೀ ಅವಲೋಕನ ಮಾಡಿದರೆ ಪರವಾಗಿಲ್ಲ, ಹಿಂದೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪಶ್ಚಾತ್ತಾಪವನ್ನೂ ಪಡುತ್ತೇವೆ. ಅಂತಹ ಸಮಯದಲ್ಲಿ “ಏನೋ ನಮ್ಮ ಹಣೆಬರಹ’ ಎಂದುಕೊಂಡು ಸುಮ್ಮನಾಗುತ್ತೇವೆಯೇ ವಿನಾ ಹಳೆಯದರ ಬಗ್ಗೆ ನೆನಪಿಸಿಕೊಳ್ಳುವುದನ್ನು, ಹಿಂದಿನ ನಿರ್ಧಾರಗಳ ಬಗ್ಗೆ ಅತೃಪ್ತಿ ಹೊಂದುವ ಅಭ್ಯಾಸವನ್ನು ಬಿಡುವುದಿಲ್ಲ. ಆದರೆ, ಕೆಲವು ರಾಶಿಗಳ ಜನ ಮಾತ್ರ ಇಂತಹ ಗೋಜಿಗೆ ಹೋಗುವುದಿಲ್ಲ. ಅವರ ಸದ್ಯದ ಪರಿಸ್ಥಿತಿ ಅದೆಷ್ಟೇ ಕಷ್ಟಕರವಾಗಿದ್ದರೂ ಅವರು ಇತಿಹಾಸದ ತಮ್ಮ ನಿರ್ಧಾರಗಳನ್ನು ಪರಾಮರ್ಶೆ ಮಾಡುವುದಿಲ್ಲ. ಹಿಂದೆ ನಡೆದು ಹೋದುದರ ಬಗ್ಗೆ ಕಿಂಚಿತ್ತೂ ವ್ಯಥೆ ಪಡುವುದಿಲ್ಲ. ತಮ್ಮ ನಿರ್ಧಾರ ಹೇಗೇ ಇದ್ದರೂ ಅದನ್ನು ಮತ್ತೆ ಮತ್ತೆ ಒರೆಗೆ ಹಚ್ಚಲು ಹೋಗುವುದಿಲ್ಲ. ಖಾಸಗಿ ಬದುಕಿನಲ್ಲಾಗಲೀ, ವೃತ್ತಿಜೀವನದಲ್ಲಾಗಲೀ ಇತಿಹಾಸದ ಬಗ್ಗೆ ಯೋಚಿಸುವುದಿಲ್ಲ. ಅವರ ದೃಷ್ಟಿ ಕೇವಲ ಭವಿಷ್ಯದ ಮೇಲಿರುತ್ತದೆ. ಅಂತಹ ರಾಶಿಗಳು ಯಾವುವು ನೋಡೋಣ.

•    ಸಿಂಹ (Leo)
ಯಾವುದೇ ಪರಿಸ್ಥಿತಿಯಲ್ಲೂ ತಮ್ಮವರ ಬಗ್ಗೆ ಕಾಳಜಿ (Care), ಪ್ರೀತಿ (Love) ತೋರುವ ಸಿಂಹ ರಾಶಿಯ ಜನ ಮೇಲಿನಿಂದ ಕಂಡುಬರುವಷ್ಟು ಒರಟಾಗಿ ಇರುವುದಿಲ್ಲ. ಮೇಲ್ನೋಟಕ್ಕೆ ಭಾರೀ ಕಟ್ಟುನಿಟ್ಟಿನ ಜನರಾಗಿ ಕಂಡುಬಂದರೂ ಕೆಲವೊಮ್ಮೆ ತಮ್ಮ ಸಾಮರ್ಥ್ಯದ (Capacity) ಬಗ್ಗೆ ಎಲ್ಲೋ ಸ್ವಲ್ಪ ಅಭದ್ರತೆಯ (Insecure) ಭಾವನೆಯನ್ನೂ ಹೊಂದಿರುತ್ತಾರೆ. ವೃತ್ತಿ ಸ್ಥಳದಲ್ಲಿ (Work Place) ಇತರರಿಂದ ಇವರ ಈಗೋ (Ego) ಆಗಾಗ ನೋವುಣ್ಣುತ್ತದೆ. ಮೇಲಧಿಕಾರಿಗಳಿಂದ ಅಗೌರವಕ್ಕೆ ಪಾತ್ರರಾಗುತ್ತಿದ್ದೇವೆ ಎಂದು ಕಂಡುಬಂದ ತಕ್ಷಣ ಆ ವೃತ್ತಿಯನ್ನೇ ತೊರೆಯಬಲ್ಲರು. ಕೆಲಸದ ಸ್ಥಳದಲ್ಲಿ ಸಂತಸದ ವಾತಾವರಣ ಮೂಡಿಸಲು ಸಾಧ್ಯವಾದಷ್ಟು ಯತ್ನಿಸುತ್ತಾರೆ.

•    ಕನ್ಯಾ (Virgo)
ತಮ್ಮ ಗೌರವಕ್ಕೆ (Respect) ಸರಿಸಮನಾದುದು ಕನ್ಯಾ ರಾಶಿಯವರಿಗೆ ಯಾವುದೂ ಇಲ್ಲ. ಬೇರೆ ಯಾವುದೇ ಭಾವನೆಗಿಂತ ಸ್ವಾಭಿಮಾನವೇ ಇವರ ಪಾಲಿಗೆ ಅಧಿಕವಾಗಿರುತ್ತದೆ. ಹೀಗಾಗಿ, ಬಹಳ ಬೇಗ ಯಾವುದಾದರೂ ಸಂಬಂಧದಿಂದ ಬ್ರೇಕಪ್ (Breakup) ಮಾಡಿಕೊಳ್ಳುತ್ತಾರೆ. ಒಮ್ಮೆ ಸಂಬಂಧದಿಂದ (Relation) ದೂರವಾದ ಬಳಿಕ ಯಾವುದೇ ಕಾರಣಕ್ಕೂ ಮತ್ತೆ ತಿರುಗಿ ನೋಡುವುದಿಲ್ಲ. ಕೆಲವೊಮ್ಮೆ ಇದು ಅವರಿಗೆ ಕಷ್ಟವಾಗುತ್ತದೆ, ಅವರ ಮನಸ್ಸಿನಲ್ಲಿ ಎಕ್ಸ್ ಬಗ್ಗೆ ಮೃದು ಭಾವನೆಗಳಿದ್ದರೂ ತಮ್ಮ ಸ್ವಾಭಿಮಾನದ ಕಾರಣದಿಂದ ಮತ್ತೆ ಒಂದಾಗಲು ಎಂದಿಗೂ ಬರುವುದಿಲ್ಲ. 

Vastu Tips: ರಾಶಿ ಪ್ರಕಾರ ಮನೆಯಲ್ಲಿ ಈ ವಸ್ತು ಇರಿಸಿ, ಹಣದ ಕೊರತೆ ಎಂದಿಗೂ ಇರೋಲ್ಲ!

•    ವೃಷಭ (Taurus) 
ವೃಷಭ ರಾಶಿಯವರು ಸ್ನೇಹಿತರಿಂದ (Friends) ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದರೆಂದರೆ ಅದು ಎಂದಿಗೂ ಮುಂದುವರಿಯುತ್ತದೆ ಎಂದರ್ಥ. ಅಸೂಯೆ, ಅಸ್ಥಿರ ವರ್ತನೆ (Behavior), ಅಪನಂಬಿಕೆಯಂತಹ ಯಾವುದೇ ಕಾರಣದಿಂದ ದೂರವಾದರೂ ಅದು ಕಾಯಂ ಆಗಿರುತ್ತದೆ. ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಸ್ನೇಹಿತರು, ಕುಟುಂಬದ ಸದಸ್ಯರು ಮನವಿ ಮಾಡಿದರೂ ಇವರು ಕರಗುವುದಿಲ್ಲ. ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡವರನ್ನು ಇವರು ಎಂದಿಗೂ ಕ್ಷಮಿಸುವುದಿಲ್ಲ. ವೃಷಭ ರಾಶಿಯವರು ಎಲ್ಲಕ್ಕಿಂತ ಹೆಚ್ಚಾಗಿ ನಂಬಿಕೆ (Trust), ವಿಶ್ವಾಸಕ್ಕೆ ಬೆಲೆ ನೀಡುತ್ತಾರೆ. ಅದಕ್ಕೆ ಧಕ್ಕೆಯಾದರೆ ಎಂದಿಗೂ ಮರೆಯುವುದಿಲ್ಲ. 

ಈ ರಾಶಿಯ ಹುಡುಗಿಯರಿಗೆ ಪ್ರತಿ ಕ್ಷೇತ್ರದಲ್ಲೂ ಯಶ ಸಿಗೋದು ಗ್ಯಾರಂಟಿ!

•    ವೃಶ್ಚಿಕ (Scorpio)
ತಾವು ಕಾಳಜಿ ಮಾಡುವ ಯಾರಿಂದಲಾದರೂ ಅಗೌರವಕ್ಕೆ ಪಾತ್ರರಾದ ವೃಶ್ಚಿಕ ರಾಶಿಯವರು ಅವರನ್ನು ತಮ್ಮ ಜೀವನದಿಂದ ಎಂದಿಗೂ ದೂರವಿಡುತ್ತಾರೆ. ಇವರೊಂದಿಗೆ ಪುನಃ ಸಂಬಂಧ ಬೆಸೆಯಲು ಅವರು ಮುಂದೆ ಬಂದರೂ ಇವರು ಆ ಬಗ್ಗೆ ಯೋಚನೆ ಮಾಡುವುದಿಲ್ಲ. ತಮಗೆ ದ್ರೋಹ ಮಾಡಿದವರೊಂದಿಗೆ ಇದ್ದ ಎಲ್ಲ ಸಂಪರ್ಕ ಸೇತುವೆಗಳನ್ನು ಕಟ್ ಮಾಡುತ್ತಾರೆ. ಹಾಗೂ ತಮ್ಮ ನಿರ್ಧಾರದ ಬಗ್ಗೆ ಎಂದಿಗೂ ಪರಾಮರ್ಶೆ ಮಾಡುವುದಿಲ್ಲ. 

Latest Videos
Follow Us:
Download App:
  • android
  • ios