Asianet Suvarna News Asianet Suvarna News

ನವರಾತ್ರಿಯಲ್ಲಿ ಪವಿತ್ರವೆನಿಸಿದ ಒಂಬತ್ತು ಬಣ್ಣಗಳ ಮಹತ್ವ ನಿಮಗೆ ಗೊತ್ತೆ?

ದುರ್ಗಾದೇವಿಗೆ ಪೂಜೆ ಸಲ್ಲಿಸುವ ನವರಾತ್ರಿಯಲ್ಲಿ ಒಂಬತ್ತು ಬಣ್ಣಗಳಿಗೂ ಮಹತ್ವವಿದೆ. ಈ ಒಂಬತ್ತು ಬಣ್ಣಗಳು ಯಾವುವು, ಅವು ಯಾಕೆ ಮುಖ್ಯ ಅಂತ ತಿಳಿಯೋಣ ಬನ್ನಿ.
 

Significance of Nine colors in Hindu festival Navratri Puja
Author
Bengaluru, First Published Oct 2, 2021, 5:20 PM IST

ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯು ಒಂಬತ್ತು ಬಗೆಯ ಅವತಾರದಲ್ಲಿ ವಿಭಿನ್ನ ಬಣ್ಣಗಳನ್ನು ಪ್ರತಿನಿಧಿಸುತ್ತಾಳೆ. ಆ ಪ್ರತಿಯೊಂದು ಬಣ್ಣವು ಒಂದೊಂದು ವಿಶೇಷ ಧಾರ್ಮಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿಯೇ ಒಂಬತ್ತು ದಿನಗಳ ಕಾಲ ಆಯಾ ಅವತಾರಗಳಿಗೆ ಸಂಬಂಧಿಸಿದಂತೆ ತಾಯಿಗೆ ಲೇಪನ, ವಸ್ತ್ರಾಲಂಕಾರ ಹಾಗೂ ಪೂಜೆಯನ್ನು ಸಲ್ಲಿಸಲಾಗುವುದು. ಆಯಾ ಅವತಾರಗಳಿಗೆ ತಕ್ಕಂತೆ ದೇವಿಯನ್ನು ಸಿಂಗರಿಸಿ ಪೂಜೆ ಮಾಡುವುದರಿಂದ ಭಕ್ತರ ಬದುಕಲ್ಲಿ ಶ್ರೇಯಸ್ಸು, ಶಾಂತಿ ಹಾಗೂ ನೆಮ್ಮದಿ ನೆಲೆಸುವುದು.

ವಿವಿಧ ಸ್ಥಳಗಳಲ್ಲಿ ವಿಭಿನ್ನ ರೀತಿಯ ಆಚರಣೆಯನ್ನು ಮಾಡುತ್ತಾರೆ. ಆಚರಣೆಯಲ್ಲಿ ವಿಭಿನ್ನತೆ ಇದ್ದರೂ ಹಬ್ಬದ ವಿಧಿ-ವಿಧಾನಗಳು ಒಂದೇ. ದೇವಿಯ ಈ ಹಬ್ಬವನ್ನು ಮನೆಗಳಲ್ಲಿ ಹಾಗೂ ದುರ್ಗಾದೇವಿಯ ದೇವಸ್ಥಾನಗಳಲ್ಲೂ ಆಚರಿಸಲಾಗುವುದು. ಭಕ್ತರ ಪಾಲಕಳಾದ ದುರ್ಗಾದೇವಿಯ ಒಂಬತ್ತು ದಿನಗಳ ವಿಶೇಷ ಅವತಾರ ಹಾಗೂ ಅವುಗಳ ಬಣ್ಣಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ

ಒಂದನೇ ದಿನ- ಶೈಲಪುತ್ರಿ- ಕಿತ್ತಳೆಬಣ್ಣ (Orange)
ಶೈಲಪುತ್ರಿ ಪಾರ್ವತಿ ದೇವಿಯ ಅವತಾರ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವರ ಸಾಮೂಹಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ದೇವಿಯ ಈ ಅವತಾರವು ಪ್ರಕೃತಿ (Nature) ಮತ್ತು ಶುದ್ಧತೆಯ (Purity) ಗುಣಲಕ್ಷಣಗಳ ಸಂಕೇತ. ಹಾಗಾಗಿ ನವರಾತ್ರಿಯ ಮೊದಲನೇ ದಿನ ಕಿತ್ತಳೆವನ್ನು ಧರಿಸಬೇಕು.

ಎರಡನೇ ದಿನ- ಬ್ರಹ್ಮಚಾರಿಣಿ- ಬಿಳಿ ಬಣ್ಣ (White)
ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸ ಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳ ವಿಮೋಚನೆಗೆ ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿಬಣ್ಣ

ಮೂರನೇ ದಿನ- ಚಂದ್ರಘಂಟ- ಕೆಂಪು ಬಣ್ಣ (Red)
ಚಂದ್ರಘಂಟ ಎಂದರೆ ಸುಂದರವಾದ ಸೌಂದರ್ಯವನ್ನು ಹೊಂದಿರುವ ರೂಪ. ಕೆಂಪು ಬಣ್ಣದಲ್ಲಿ ಕಂಗೊಳಿಸುವ ದೇವಿಯು ಅನುಗ್ರಹ ಮತ್ತು ನೆಮ್ಮದಿಯನ್ನು ಕರುಣಿಸುತ್ತಾಳೆ . ಸೌಂದರ್ಯ (Beauty) ಮತ್ತು ಧೈರ್ಯದ (Courage) ಸಂಕೇತವಾಗಿ ಈ ಅವತಾರದಲ್ಲಿ ದೇವಿ ಅವತರಿಸಿದಳು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ದಿನ ದೇವಿಗೆ ಕೆಂಪು ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತದೆ

ನಾಲ್ಕನೇ ದಿನ- ಕೂಷ್ಮಾಂಡ- ಗಾಢ ನೀಲಿ ಬಣ್ಣ (Dark Blue)
ಕೂಷ್ಮಾಂಡ ಅವತಾರವನ್ನು ಬ್ರಹ್ಮಾಂಡದ ಹಿಂದಿನ ಶಕ್ತಿ ಎಂದು ನಂಬಲಾಗಿದೆ. ಜಗತ್ತನ್ನು ಹಸಿರು ಸಸ್ಯವರ್ಗ, ಜೀವನದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸುಂದರ ಮಂದಹಾಸದ ಮೂಲಕವೇ ಭಕ್ತರ ಅಗತ್ಯತೆಗಳನ್ನು ನೆರವೇರಿಸುವಳು ಎನ್ನಲಾಗುತ್ತದೆ. ಆದ್ದರಿಂದ ಈ ದಿನ ದೇವಿಗೆ ಗಾಢ ನೀಲಿ ಬಣ್ಣದ ಸೀರೆಯಿಂದ ಅಲಂಕಾರ ಮಾಡುವುದರ ಮೂಲಕ ಪೂಜೆ ಮಾಡಲಾಗುವುದು.
 

Significance of Nine colors in Hindu festival Navratri Puja

ಐದನೇ ದಿನ- ಸ್ಕಂದ ಮಾತಾ- ಹಳದಿ ಬಣ್ಣ (Yellow)
ಸ್ಕಂದ ಮಾತಾ ಅವತಾರವು ಕಾರ್ತಿಕೇಯನ ತಾಯಿಯ ಅವತಾರ. . ದುಷ್ಟ ರಾಕ್ಷಸನ ಸಂಹಾರಕ್ಕೆ ಅವತರಿಸಿ ಬಂದ ಈ ಅವತಾರವು ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಸ್ಕಂದ ಮಾತೆಯನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಶಾಂತಿ (Peace), ಸಮೃದ್ಧಿ ನೆಲೆಸುತ್ತದೆ. ಈ ದಿನ ಭಕ್ತರು ಹಳದಿ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

ರಾಜಸಭೆಯಲ್ಲಿ ಸಲೀಸಾಗಿ ಧನಸ್ಸನ್ನು ಎತ್ತಿದ ಅರ್ಜುನ, ಕೃಷ್ಣನಿಗೆ ಆನಂದವೋ ಆನಂದ

ಆರನೇ ದಿನ- ಕಾತ್ಯಾಯನಿ- ಹಸಿರು ಬಣ್ಣ (Green)
ದೇವಿಯ ಕಾತ್ಯಾಯನಿ ಅವತಾರವು ಅತ್ಯಂತ ಧೈರ್ಯಶಾಲಿಯ ಅವತಾರ. ಕಾತ್ಯಾಯನ್‌ ಋಷಿಯ ಮಗಳಾಗಿ ಜನಿಸಿದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಹಬ್ಬದ ಆರನೇ ದಿನ ಹಸಿರು ಬಣ್ಣದ ವಿಶೇಷ ಲೇಪನ ಹಾಗೂ ಅಲಂಕಾರಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನ ಹಸಿರು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

ಏಳನೇ ದಿನ- ಕಾಲರಾತ್ರಿ- ಬೂದು ಬಣ್ಣ (Grey)
ದೇವಿಯ ಒಂಬತ್ತು ಅವತಾರದಲ್ಲಿ ಈ ಅವತಾರವೂ ಅತ್ಯಂತ ಶಕ್ತಿಶಾಲಿಯಾದ ಅವತಾರ. ಅದು ದೇವಿ ಕಾಳಿಯ ರೂಪದಲ್ಲಿ ಅವತರಿಸಿ ಬಂದ ದಿನ. ಈ ಅವತಾರದಲ್ಲಿ ಅಧಿಕ ಶಕ್ತಿಯನ್ನು ಹೊಂದಿರುವ ಭಂಗಿ ಹಾಗೂ ಮೂರು ಕಣ್ಣುಗಳನ್ನು ಹೊಂದಿದ್ದಳು ಎನ್ನಲಾಗುತ್ತದೆ. ಅವಳ ಪ್ರತಿ ಉಸಿರಿನಲ್ಲೂ ಬೆಂಕಿಯನ್ನು ಹೊರಹಾಕುತ್ತಿದ್ದಳು. ಇದು ತಾಯಿಯ ಭೀಕರ ರೂಪ. ತನ್ನ ಭಕ್ತರ ಎಲ್ಲಾ ಸಂಕಷ್ಟಗಳನ್ನು ಹಾಗೂ ಜೀವನದಲ್ಲಿ ಬರುವ ಎಲ್ಲಾ ಋಣಾತ್ಮಕ ಅಂಶಗಳನ್ನು (Negative Energy) ತೊಡೆದು ಹಾಕುವವಳು ಈ ತಾಯಿ. ಹಾಗಾಗಿ ಈ ದಿನ ಬೂದು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

ಕೊರೋನಾ ಭಯವನ್ನು ಬಿಟ್ಟು ನವರಾತ್ರಿಯನ್ನು ಸಂಭ್ರಮದಿಂದ ಈ ರೀತಿ ಆಚರಿಸಿ

ಎಂಟನೇ ದಿನ- ಮಹಾ ಗೌರಿ- ಗುಲಾಬಿ ಬಣ್ಣ (Pink)
ದುರ್ಗಾ ದೇವಿಯ ಈ ಅವತಾರ ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಪುರಾಣ ಕಥೆಗಳ ಪ್ರಕಾರ ಅವಳು ಹಿಮಾಲಯದ ಕಾಡುಗಳಲ್ಲಿ ಇದ್ದುದರಿಂದ ಅವಳ ಬಣ್ಣ ಅತ್ಯಂತ ಕಪ್ಪು ಬಣ್ಣದಿಂದ ಕೂಡಿತ್ತು ಎನ್ನಲಾಗುತ್ತದೆ. ಶಿವನು ಗಂಗಾ ನೀರಿನಿಂದ ಅವಳ ದೇಹವನ್ನು ಶುದ್ಧೀಕರಿಸಿದನು. ನಂತರ ಅವಳ ಸೌಂದರ್ಯವು ಅತ್ಯಂತ ಸುಂದರ ಹಾಗೂ ಹೊಳಪಿನಿಂದ ಮಾರ್ಪಟ್ಟಿತು. ಆಶಾವಾದದ ಬಣ್ಣವಾದ ಗುಲಾಬಿ ಬಣ್ಣದ ಸೀರೆಯನ್ನು ತೊಟ್ಟಿದ್ದಳು. ಹಾಗಾಗಿ ಈ ದಿನ ದೇವಿಗೆ ಗುಲಾಬಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಒಂಬತ್ತನೇ ದಿನ- ಸಿದ್ಧಿಧಾತ್ರಿ- ಆಕಾಶ ನೀಲಿ ಬಣ್ಣ (Sky Blue)
ಇದು ದೇವಿಯ ಕೊನೆಯ ಅವತಾರ. ಈ ದಿನವು ಹಬ್ಬದ ಕೊನೆಯ ದಿನ. ಈ ಅವತಾರವು ಸಂತೋಷ, ಆಶೀರ್ವಾದ (Blessing) ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದವಳು ಈಕೆ. ಶುದ್ಧವಾದ ಆಕಾಶ ನೀಲಿಯ ಬಣ್ಣದಂತೆ ಆನಂದದಿಂದ ಹರಸುತ್ತಾಳೆ. ಹಾಗಾಗಿ ಈ ದಿನದಂದು ತಾಯಿಗೆ ಆಕಾಶ ನೀಲಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರೂ ಈ ದಿನ ನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕು.

ದ್ರೌಪದಿಯನ್ನು ಪಾಂಡವರೈವರನ್ನು ಮದುವೆಯಾಗಿದ್ದು ಹೇಗೆ.?

Follow Us:
Download App:
  • android
  • ios