ಶುಕ್ರ ಮಂಗಳ ಯುತಿಯಿಂದ ಈ ರಾಶಿಗಳಿಗೆ ಮಹಾ ಲಾಭ
ಮಿಥುನ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹವು ಮೇ 2ರಂದು ಸಂಯೋಗಿಸುತ್ತಿವೆ. ಇದರ ಪರಿಣಾಮವಾಗಿ 3 ರಾಶಿಗಳು ವಿಶೇಷ ಲಾಭ ಪಡೆದು ರಾತ್ರೋರಾತ್ರಿ ಶ್ರೀಮಂತರಾಗುವಂಥ ಅದೃಷ್ಟ ಹೊಂದುತ್ತಿವೆ. ಆ ಅದೃಷ್ಟವಂತ ರಾಶಿ ನಿಮ್ಮದೇ ನೋಡಿ..
ಮೇ ತಿಂಗಳಲ್ಲಿ ಶುಕ್ರನು ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸುತ್ತಾನೆ. ಮೇ 2 ರಂದು ಶುಕ್ರನು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಾದ ನಂತರ ಮತ್ತೊಮ್ಮೆ ಮೇ 30 ರಂದು ತನ್ನ ರಾಶಿಯನ್ನು ಬದಲಿಸಿ ಕರ್ಕಾಟಕ ರಾಶಿಯಲ್ಲಿ ಸಾಗಲಿದ್ದಾನೆ. ಇದೀಗ ಮೇ ಆರಂಭದಲ್ಲಿ ಶುಕ್ರನ ಮಿಥುನ ಸಂಕ್ರಮಣದಿಂದ ಶುಕ್ರ ಮಂಗಳ ಮೈತ್ರಿ ಏರ್ಪಡಲಿದೆ. ಏಕೆಂದರೆ ಈಗಾಗಲೇ ಮಂಗಳವು ಮಿಥುನದಲ್ಲೇ ಕುಳಿತಿದೆ. ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗವು ನಿಮ್ಮ ರಾಶಿಚಕ್ರದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ, ಯಾರಿಗೆ ಲಾಭಕರವಾಗಿರಲಿದೆ ನೋಡೋಣ.
ಜ್ಯೋತಿಷ್ಯದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಮಹತ್ವವಿದೆ. ಮಂಗಳವನ್ನು ಶಕ್ತಿ, ಧೈರ್ಯ, ಭೂಮಿ, ಸಂಪತ್ತಿನ ಅಂಶವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶುಕ್ರನನ್ನು ಸಂಪತ್ತು, ಐಷಾರಾಮಿ, ಪ್ರೀತಿ, ಸೌಂದರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಮಿಥುನ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವು ಮೇ 10 ರವರೆಗೆ ಇರುತ್ತದೆ. ಅಂದು ಮಂಗಳ ಮತ್ತೆ ರಾಶಿ ಬದಲಿಸುತ್ತಿರುವುದರಿಂದ ಈ ವಾರದಲ್ಲಿ 3 ರಾಶಿಗಳ ಜನರಿಗೆ ಅಪಾರ ಲಾಭ ಸಾಧ್ಯತೆ ಇದೆ. ಆ ಲಕ್ಕಿ ರಾಶಿಗಳಲ್ಲಿ ನಿಮ್ಮದಿದೆಯೇ ನೋಡಿ..
ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಮಂಗಳ ಶುಕ್ರನ ಸಂಯೋಗವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಮಧ್ಯೆ ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ. ನಿಮ್ಮ ಹಣ ಎಲ್ಲೋ ಬಾಕಿ ಉಳಿದು ಕಾಡಿಸುತ್ತಿದ್ದರೆ, ಅಲ್ಲಿಂದ ನೀವು ಹಣವನ್ನು ಮರಳಿ ಪಡೆಯುತ್ತೀರಿ. ಒತ್ತಡ ಮುಕ್ತವಾಗಲಿದ್ದೀರಿ. ಮನಸ್ಸು ಶಾಂತವಾಗಿ ಉಳಿಯುತ್ತದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಈ ರಾಶಿಚಕ್ರದ ಜನರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತಾರೆ. ಒಡಹುಟ್ಟಿದವರ ಜೊತೆ ಪ್ರೀತಿ ಹೆಚ್ಚಾಗುವುದು. ಇದಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಹ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.
ವಿಷಕನ್ಯಾ ಯೋಗ ಇದ್ದರೆ ವೈವಾಹಿಕ ಜೀವನಕ್ಕೆ ಸಂಕಷ್ಟ, ಇದಕ್ಕೆ ಪರಿಹಾರವೇನು?
ವೃಷಭ ರಾಶಿ (Taurus)
ಶುಕ್ರ ಸಂಕ್ರಮಣದಿಂದ ರೂಪುಗೊಂಡ ಮಂಗಳ ಮತ್ತು ಶುಕ್ರನ ಸಂಯೋಗವು ವೃಷಭ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಆದಾಯ ಹೆಚ್ಚಲಿದೆ. ಭೂಮಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಯಶಸ್ಸು ಇರುತ್ತದೆ. ಇಷ್ಟೇ ಅಲ್ಲ, ಈ ಅವಧಿಯಲ್ಲಿ ಉನ್ನತ ಅಧಿಕಾರಿಯಿಂದ ಪ್ರೋತ್ಸಾಹವನ್ನು ಪಡೆಯಬಹುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ.
Venus Transit 2023: ಈ ರಾಶಿಗಿದೆ ವಿದೇಶ ಪ್ರಯಾಣ ಯೋಗ, ಮತ್ತೊಂದಕ್ಕೆ ದಕ್ಕುವ ಪ್ರೇಮ
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಮಂಗಳ ಮತ್ತು ಶುಕ್ರರ ಸಂಯೋಜನೆಯು ಉತ್ತಮ ಫಲಿತಾಂಶಗಳನ್ನು ತರಲಿದೆ. ಮಂಗಳವು ಅವರ ಜೀವನದಲ್ಲಿ ಬಹಳಷ್ಟು ಲಾಭಗಳನ್ನು ತರಲಿದೆ. ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುವಿರಿ. ಗೌರವದಲ್ಲಿ ಹೆಚ್ಚಳವಾಗಲಿದೆ. ಈ ಗ್ರಹಗಳ ಪ್ರಭಾವದಿಂದ, ನಿಮ್ಮ ಆದಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ವಿದೇಶದಲ್ಲಿ ಆಸ್ತಿಯನ್ನು ಖರೀದಿಸಬಹುದು. ಬಹಳ ಕಾಲದಿಂದ ನಿಂತು ಹೋದ ಕೆಲಸಗಳು ನಡೆಯಲಿವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.