ಸೂರ್ಯ ಸಂಕ್ರಮಣದಿಂದ ಈ 3 ರಾಶಿಗಳಿಗೆ ಲಕ್; ಎಲ್ಲಾ ಕೆಲಸಗಳೂ ಪೂರ್ಣ..!

ಸೆಪ್ಟೆಂಬರ್‌ 17ರಂದು ಸೂರ್ಯ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. ಆ ದಿನ ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸುವನು. ಸೂರ್ಯ ದೇವನ ರಾಶಿ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸುವುದು ಖಚಿತ. ಈ ಕುರಿತು ಇಲ್ಲಿದೆ ಮಾಹಿತಿ.

september sun transit effects future predictions Gemini Leo Sagittarius suh

ಸೆಪ್ಟೆಂಬರ್‌ 17ರಂದು ಸೂರ್ಯ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. ಆ ದಿನ ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸುವನು. ಸೂರ್ಯ ದೇವನ ರಾಶಿ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸುವುದು ಖಚಿತ. ಈ ಕುರಿತು ಇಲ್ಲಿದೆ ಮಾಹಿತಿ.

ಜ್ಯೋತಿಷ್ಯದಲ್ಲಿ ಸೂರ್ಯ ದೇವರಿಗೆ ವಿಶೇಷ ಸ್ಥಾನವಿದೆ. ಸೂರ್ಯ ದೇವರನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ದೇವನು ಮಂಗಳಕರವಾದಾಗ ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ. ಸೂರ್ಯ ದೇವನ ರಾಶಿ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರುವುದು ನಿಶ್ಚಿತ. ಕೆಲ ರಾಶಿಚಕ್ರ ಚಿಹ್ನೆಗಳ ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ. ಯಾವುವು ಆ ಅದೃಷ್ಟದ ರಾಶಿಗಳು ಎಂದು ನೋಡಿ.

ಮಿಥುನ ರಾಶಿ (Gemini)

ನಿಮ್ಮ ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿನ ವಾತಾವರಣ ನಿಮಗೆ ಅನುಕೂಲಕರವಾಗಿರುತ್ತದೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಈ ಹಿಂದೆ ಬಾಕಿ ಇದ್ದ ಕೆಲಸಗಳು  ಪೂರ್ಣಗೊಳ್ಳಲಿದೆ. ವ್ಯಾಪಾರದಲ್ಲಿ ಹಠಾತ್‌ ಲಾಭದ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಹಣಕಾಸಿನ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ.

ಸಿಂಹ ರಾಶಿ ( Leo)

ಕ್ಷೇತ್ರ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ಮನದಲ್ಲಿ ಸಂತಸದ ಭಾವ ಮೂಡಲಿದೆ. ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಅಧಿಕಾರಿಗಳ ಸಹವಾಸ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಉಂಟಾಗುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಉಳಿಯುತ್ತದೆ.

ಈ 4 ರಾಶಿಯವರಿಗೆ ದೀಪಾವಳಿ ಬಂಪರ್; ಕೈ ಹಿಡಿಲಿದ್ದಾನೆ ಶನಿದೇವ...!

 

ಧನು ರಾಶಿ  (Sagittarius)

ನಿಮ್ಮ ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಹಿಂದೆ ಅಂಟಿಕೊಂಡಿರುವ ಕಾರ್ಯಗಳಲ್ಲಿ ಪ್ರಯತ್ನಗಳನ್ನು ಮಾಡಿದ ನಂತರ ನೀವು ಯಶಸ್ಸು ಪಡೆಯುತ್ತೀರಿ. ಕುಟುಂಬದಿಂದ ಬೆಂಬಲ ಸಿಗಲಿದೆ. ವೈವಾಹಿಕ ಜೀವನದಲ್ಲಿ ಮಾಧರ್ಯ ಉಳಿಯುತ್ತದೆ. ನಿಮ್ಮ ಆರೋಗ್ಯ ಸಾಮಾನ್ಯವಾಗಿರುತ್ತದೆ.

Latest Videos
Follow Us:
Download App:
  • android
  • ios