Asianet Suvarna News Asianet Suvarna News

ಅಮರನಾಥ ಯಾತ್ರೆ ವೇಳೆ ಹೃದಯಾಘಾತ: ಐವರು ಯಾತ್ರಿಕರ ಸಾವು

ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದ 5 ಯಾತ್ರಿಕರು ಬುಧವಾರ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಕೊರತೆ ಕಾರಣ ಈ ಘಟನೆ ಸಂಭವಿಸಿದೆ. 

Salvation while visiting Amarnath Five pilgrims die of cardiac arrest akb
Author
First Published Jul 13, 2023, 2:06 PM IST

ಶ್ರೀನಗರ: ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದ 5 ಯಾತ್ರಿಕರು ಬುಧವಾರ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಕೊರತೆ ಕಾರಣ ಈ ಘಟನೆ ಸಂಭವಿಸಿದೆ. ಇದರೊಂದಿಗೆ ಜು.1ರಿಂದ ಶುರುವಾದ ಯಾತ್ರೆಯಲ್ಲಿ ಓರ್ವ ಐಟಿಬಿಪಿ ಅಧಿಕಾರಿ ಸೇರಿ 19 ಜನ ಸಾವನ್ನಪ್ಪಿದಂತಾಗಿದೆ. ಬುಧವಾರ ಮೃತಪಟ್ಟವರಲ್ಲಿ ಇಬ್ಬರು ಉತ್ತರ ಪ್ರದೇಶ, ಮತ್ತಿಬ್ಬರು ಮಧ್ಯಪ್ರದೇಶದವರು ಎಂದು ಗುರುತಿಸಲಾಗಿದ್ದು, ಮತ್ತೋರ್ವರ ರಾಜ್ಯ ಪತ್ತೆ ಹಚ್ಚಬೇಕಾಗಿದೆ. ಈವರೆಗೂ 1.37 ಲಕ್ಷ ಜನ ಅಮರನಾಥ ಹಿಮಲಿಂಗ ದರ್ಶನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮರನಾಥ ಯಾತ್ರೆ ಜುಲೈ 1 ರಿಂದ ಆರಂಭವಾಗಿದ್ದು,  ಉತ್ತರ ಭಾರತದಾದ್ಯಂತ ಸುರಿದ ಮಳೆಯಿಂದಾಗಿ ಅನೇಕ ಯಾತ್ರಿಕರು ಅಮರನಾಥನ ದರ್ಶನ ಪಡೆಯದೇ ಹಿಂದಿರುಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆ ರಸ್ತೆಗಳು ಮುಳುಗಿದ ಕೆಲವೆಡೆ ಕೊಚ್ಚಿ ಹೋದ ಕಾರಣ ದೇಶದ ವಿವಿಧೆಡೆಯಿಂದ ಅಮರನಾಥನ ದರ್ಶನಕ್ಕೆ ತೆರಳಿದ್ದ ಯಾತ್ರಿಕರು ಸಂಕಷ್ಟಕ್ಕೆ ಒಳಗಾಗಿದ್ದರು. 

ಗುರುವಿನ ಪಾದದಲ್ಲೇ ತೀರ್ಥ ಕ್ಷೇತ್ರ ದರ್ಶನ, ಭಾರತ ಪ್ರದಕ್ಷಿಣೆ ಇದು!

ಈ ವರ್ಷ ಅಮರನಾಥ ಯಾತ್ರೆಗೆ ಮೂರು ಲಕ್ಷ ಯಾತ್ರಿಗಳು ನೋಂದಾಯಿಸಿಕೊಂಡಿದ್ದರು. ಯಾತ್ರಿಕರ ಮೊದಲ ತಂಡವು ಜೂ.30ರಂದು ಜಮ್ಮುವಿನಿಂದ ತೆರಳಿತ್ತು.  ಯಾತ್ರೆಯುದ್ದಕ್ಕೂ ಜನರಿಗೆ ಅನುಕೂಲವಾಗಲು ಹಾದಿ ಸುಗಮಗೊಳಿಸಲಾಗಿದ್ದು, ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿತ್ತು, ಹಿಡಿಕೆ ಕಂಬಿಗಳನ್ನು ಅಳವಡಿಸಲಾಗಿತ್ತು. ಅಂತರ್ಜಾಲ ಕಲ್ಪಿಸಲು ಎಲ್ಲ ಕಡೆ ಕೇಬಲ್‌ಗಳನ್ನು ಅಳವಡಿಸಲಾಗಿತ್ತು. ಆದಾಗ್ಯೂ ಮಳೆಯ ಅವಾಂತರದಿಂದ ಅಮರನಾಥ ಯಾತ್ರೆ ಕಠಿಣವಾಗಿದೆ. 

ಅಮರನಾಥ, ಕೇದರನಾಥ, ಮುಕ್ತಿನಾಥ, ಕಾಶಿ ವಿಶ್ವನಾಥ ಇವುಗಳು ಹಿಂದೂ ಪವಿತ್ರ ತೀರ್ಥಕ್ಷೇತ್ರಗಳಾಗಿದ್ದು, ಭಗವಾನ್ ಶಿವನ ಆಲಯಗಳಾಗಿವೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿದರೆ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ. 

Amarnath Yatra 2023ಗೆ ನೋಂದಣಿ ಆರಂಭ, ಇಲ್ಲಿದೆ ಸಂಪೂರ್ಣ ವಿವರ..

Follow Us:
Download App:
  • android
  • ios