Asianet Suvarna News Asianet Suvarna News

Ram Navami Date 2023; ಈ ದಿನ ವೈಶಿಷ್ಟ್ಯತೆಯ ಬಗ್ಗೆ ನೀವು ತಿಳಿಯಬೇಕಾದುದೆಲ್ಲವೂ ಇಲ್ಲಿದೆ..

ಈ ವರ್ಷದ ರಾಮನವಮಿ ಬಹಳ ವಿಶೇಷವಾಗಿರಲಿದೆ. ಏಕೆಂದರೆ ಈ ದಿನ ಐದು ಶುಭ ಯೋಗಗಳು ನಡೆಯುತ್ತಿವೆ. ರಾಮನವಮಿಯ ದಿನಾಂಕ, ಮುಹೂರ್ತ, ಪೂಜಾವಿಧಿ ಇತ್ಯಾದಿ ವಿವರ ಇಲ್ಲಿದೆ.

Ram Navami 2023 Date Puja Vidhi Subh Muhurat auspicious yoga skr
Author
First Published Mar 28, 2023, 12:01 PM IST

ರಾಮ ನವಮಿ ಹಬ್ಬವನ್ನು ಚೈತ್ರ ನವರಾತ್ರಿಯ 9ನೇ ದಿನದಂದು ಆಚರಿಸಲಾಗುತ್ತದೆ. ಈ ನಿಯಮದ ಪ್ರಕಾರ ಈ ವರ್ಷ ಮಾರ್ಚ್ 30ರಂದು ರಾಮನವಮಿ ಆಚರಿಸಲಾಗುವುದು. ಈ ಬಾರಿ ರಾಮ ನವಮಿಯಂದು 5 ಶುಭ ಯೋಗಗಳ ವಿಶಿಷ್ಟ ಸಂಯೋಜನೆ ರಚನೆಯಾಗುತ್ತಿದೆ. ರಾಮನವಮಿಯ ದಿನದಂದು ಚಂದ್ರನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ರಾಮನ ಜಾತಕದಲ್ಲಿಯೂ ಚಂದ್ರನು ಕರ್ಕಾಟಕ ರಾಶಿಯಲ್ಲಿ ಕುಳಿತಿದ್ದಾನೆ. ಇದಲ್ಲದೆ ಗುರು ಪುಷ್ಯ ಯೋಗ, ಅಮೃತ ಸಿದ್ಧಿ ಯೋಗ, ರವಿ ಯೋಗ, ಸರ್ವಾರ್ಥ ಸಿದ್ಧಿ ಯೋಗಗಳು ಈ ದಿನವನ್ನು ಮತ್ತಷ್ಟು ಶುಭವಾಗಿಸಲಿವೆ. ಇದಲ್ಲದೇ ಬುಧನೂ ಈ ದಿನ ಉದಯಿಸುತ್ತಿದ್ದಾನೆ. ಈ ಎಲ್ಲ ಕಾರಣಗಳಿಂದಾಗಿ ಈ ದಿನದಂದು ಶ್ರೀರಾಮನನ್ನು ಆರಾಧಿಸುವುದು ಅತ್ಯಂತ ಫಲಪ್ರದವಾಗಿದೆ. ಈ ವರ್ಷ ರಾಮ ನವಮಿ ಯಾವಾಗ, ಮುಹೂರ್ತ, ಪೂಜಾ ವಿಧಾನಗಳೇನು ಎಲ್ಲ ವಿವರ ತಿಳಿಯೋಣ ಬನ್ನಿ. 

ರಾಮನವಮಿ 2023 ದಿನಾಂಕ
ಈ ವರ್ಷ ರಾಮ ನವಮಿಯ ಹಬ್ಬವನ್ನು ಮಾರ್ಚ್ 30ರಂದು ಆಚರಿಸಲಾಗುತ್ತದೆ. 

ರಾಮನವಮಿಯ ದಿನ ಶುಭ ಮುಹೂರ್ತ
ಮಾರ್ಚ್ 29 ರಂದು ರಾತ್ರಿ 9.08 ಕ್ಕೆ, ಶುಕ್ಲ ನವಮಿ ತಿಥಿ ಪ್ರಾರಂಭವಾಗಲಿದೆ.
ನವಮಿ ತಿಥಿ ಮಾರ್ಚ್ 30 ರಂದು ರಾತ್ರಿ 11:31 ಕ್ಕೆ ಇರುತ್ತದೆ.

Ram Navami 2023: ರಾಮಾಯಣ ಕಪೋಲಕಲ್ಪಿತವೇ? ರಾಮ ನಿಜವಾಗಿಯೂ ಇದ್ದನೇ?

ರಾಮ ನವಮಿಯ ಇತಿಹಾಸ
ದೃಕ್ ಪಂಚಾಂಗದ ಪ್ರಕಾರ, ಭಗವಾನ್ ರಾಮನು ಅಯೋಧ್ಯೆಯಲ್ಲಿ ಈ ದಿನ ಜನಿಸಿದನೆಂದು ನಂಬಲಾಗಿದೆ. ಹೀಗಾಗಿ, ಅವನ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ಭಕ್ತರು ಈ ದಿನ ರಾಮ ನವಮಿಯನ್ನು ಆಚರಿಸಲು ಪ್ರಾರಂಭಿಸಿದರು. ರಾಮನು ಭಗವಾನ್ ವಿಷ್ಣುವಿನ ಅವತಾರವಾಗಿದ್ದು, ಆತ ರಕ್ಷಕನಾಗಿ ಗುರುತಿಸಿಕೊಂಡಿದ್ದಾನೆ. ಈ ಹಬ್ಬವನ್ನು ಯುಗಯುಗಾಂತರಗಳಿಂದ ಆಚರಿಸಲಾಗಿದ್ದರೂ, ನಿಖರವಾದ ವರ್ಷವನ್ನು ಲೆಕ್ಕ ಹಾಕಲು ಯಾವುದೇ ಬಲವಾದ ಪುರಾವೆಗಳಿಲ್ಲ. ಆದಾಗ್ಯೂ, ವೈದಿಕ ಕಾಲಾನುಕ್ರಮದ ಪ್ರಕಾರ, ಭಗವಾನ್ ರಾಮನು ಸುಮಾರು ಒಂದು ಮಿಲಿಯನ್ ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ಬದುಕಿದ್ದನು.

ಜನರು ಈ ದಿನವನ್ನು ದೇವಸ್ಥಾನಗಳಿಗೆ ಹೋಗುವುದು, ಪೂಜೆ ಮಾಡುವ ಮೂಲಕ ಮತ್ತು ಪ್ರಾರ್ಥನೆಗಳನ್ನು ಮಾಡುವ ಮೂಲಕ ಆಚರಿಸುತ್ತಾರೆ. ಜೊತೆಗೆ, ಅವರು ಪಾನಕ ಮತ್ತು ಕೋಸಂಬರಿಯನ್ನು ತಯಾರಿಸುತ್ತಾರೆ. ಇವುಗಳನ್ನು ಪರಿಚಿತ ಅಪರಿಚಿತರೆನ್ನದೆ ಎಲ್ಲರಿಗೂ ಹಂಚಿ 'ರಾಮ್ ರಾಮ್' ಹೇಳುತ್ತಾರೆ. 

Hanuman Jayanti 2023 ಯಾವಾಗ? ಆಂಜನೇಯನ ಜನ್ಮ ವೃತ್ತಾಂತವೇನು?

ರಾಮ ನವಮಿ ಪೂಜಾ ವಿಧಾನ

  • ರಾಮನವಮಿಯ ಶುಭ ದಿನದಂದು ಪ್ರಾತಃ ಕಾಲದಲ್ಲಿ ಎದ್ದು, ಸ್ನಾನ ಇತ್ಯಾದಿಗಳ ನಂತರ ಶ್ರೀರಾಮನ ವಿಗ್ರಹಕ್ಕೆ ಕೇಸರಿ ಹಾಲಿನಿಂದ ಅಭಿಷೇಕ ಮಾಡಿ.
  • ಇದಾದ ನಂತರ ತುಪ್ಪದ ದೀಪವನ್ನು ಹಚ್ಚಿ ರಾಮಚರಿತಮಾನಸ ಪಠಿಸಿ.
  • ನಿಮಗೆ ರಾಮಚರಿತ್ರ ಮಾನಸವನ್ನು ಪಠಿಸಲು ಸಾಧ್ಯವಾಗದಿದ್ದರೆ, ಸುಂದರಕಾಂಡವನ್ನು ಪಠಿಸಿ. ಇದನ್ನು ಪಠಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
  • ರಾಮ ನವಮಿಯ ದಿನದಂದು, ಗಂಗಾ ಜಲವನ್ನು ಇಟ್ಟುಕೊಂಡು 'ಓಂ ಶ್ರೀ ಹ್ರೀ ಕ್ಲೀಂ ರಾಮಚಂದ್ರಾಯ ಶ್ರೀ ನಮಃ' ಈ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ.
  • ಶ್ರೀರಾಮನನ್ನು ಪೂಜಿಸುವುದರ ಜೊತೆಗೆ ಸೀತಾಮಾತೆಯ ಆರಾಧನೆಯನ್ನೂ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಪೂಜೆಯ ಕೊನೆಯಲ್ಲಿ, ಶ್ರೀರಾಮ ಮತ್ತು ತಾಯಿ ಸೀತೆಯ ಆಶೀರ್ವಾದವನ್ನು ತೆಗೆದುಕೊಳ್ಳಿ.
  • ಅಷ್ಟೇ ಅಲ್ಲ ಕಡೆಯಲ್ಲಿ ಗಂಗಾಜಲವನ್ನು ಮನೆಯ ಮೂಲೆ ಮೂಲೆಯಲ್ಲಿ ಚಿಮುಕಿಸಿ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದು ನಿವಾರಣೆಯಾಗುತ್ತದೆ.
     
Follow Us:
Download App:
  • android
  • ios