Asianet Suvarna News Asianet Suvarna News

Puja Mistakes: ದೇವರ ಮೂರ್ತಿಗೂ, ಫೋಟೋಗೂ ಒಂದೇ ರೀತಿ ಪೂಜಿಸಬೇಡಿ!

ಮೂರ್ತಿ ಪೂಜೆ ಮತ್ತು ಫೋಟೋ ಪೂಜೆ ಎರಡೂ ಒಂದಕ್ಕೊಂದು ಭಿನ್ನ. ಈ ಎರಡರ ನಡುವಿನ ಆಳವಾದ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳೋಣ.

Puja Mistakes There is a deep difference between idol and photo worship skr
Author
First Published Nov 15, 2022, 4:58 PM IST

ನಾವೆಲ್ಲರೂ ಮನೆಯಲ್ಲಿ ನಿತ್ಯ ದೇವರ ಪೂಜೆ ಮಾಡುತ್ತೇವೆ. ಕೆಲವರು ದೇವರ ಫೋಟೋಗಳನ್ನು ಪೂಜಾಕೋಣೆಯಲ್ಲಿಟ್ಟು ಪೂಜಿಸಿದರೆ, ಮತ್ತೆ ಕೆಲವರು ದೇವರ ಮೂರ್ತಿಗಳನ್ನಿಟ್ಟು ಪೂಜಿಸುತ್ತಾರೆ. ಮತ್ತೆ ಕೆಲವರು ಪೂಜಾ ಕೋಣೆಯಲ್ಲಿ ಎರಡೂ ರೀತಿಯ ದೇವರ ಚಿತ್ರಗಳಿದ್ದು- ಎರಡನ್ನೂ ಒಂದೇ ರೀತಿಯಲ್ಲಿ ಪೂಜಿಸಲಾಗುತ್ತದೆ. ಆದರೆ, ದೇವರ ಫೋಟೋವನ್ನು ಹಾಗೂ ದೇವರ ಮೂರ್ತಿಯನ್ನು ಪೂಜಿಸುವ ವಿಧಾನ ಬೇರೆ ಬೇರೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಎರಡೂ ಪೂಜೆಗಳಲ್ಲಿಯೂ ಸಹ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ, ನಮ್ಮ ದೈನಂದಿನ ಪೂಜೆಯಲ್ಲಿ ಮಾಡುತ್ತಿರಬಹುದಾದ ಹಲವು ಸಣ್ಣ ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ. 

ವಿಗ್ರಹ ಮತ್ತು ಚಿತ್ರ ಪೂಜೆ ವ್ಯತ್ಯಾಸ
ಮೂರ್ತಿ ಪೂಜೆಯನ್ನು ಸಿದ್ಧ ಪೂಜೆ ಎಂದು ಕರೆಯಲಾಗುತ್ತದೆ. ಆದರೆ ಫೋಟೋ ಪೂಜೆ(Picture worship)ಯು ಮಾನಸ ಪೂಜೆಯ ಒಂದು ರೂಪವಾಗಿದೆ. ಸಿದ್ಧ ಪೂಜೆ ಎಂದರೆ ಸಂಪೂರ್ಣ ವಿಧಾನದಿಂದ ಮಾಡುವ ಪೂಜೆ ಮತ್ತು ಮಾನಸ ಪೂಜೆ ಎಂದರೆ ಮನಸ್ಸಿನಿಂದ ಮಾಡುವ ಮಾನಸಿಕ ಆರಾಧನೆ. 

ಬಲಗೈಯ್ಯನ್ನೇ ಮಂಗಳಕರ ಕೆಲಸಕ್ಕೆ, ಊಟಕ್ಕೆ ಬಳಸೋದು ಏಕೆ?

ಮೂರ್ತಿ ಪೂಜೆ(Idol puja)

  • ಮೂರ್ತಿ ಪೂಜೆಯಲ್ಲಿ ಆಸನದ ಮೇಲೆ ಕುಳಿತು ಪೂಜೆ ಮಾಡುವುದು ಕಡ್ಡಾಯವಾಗಿದೆ, ಆದರೆ ದೇವರ ಪಟಕ್ಕೆ ಪೂಜೆ ಮಾಡುವುದಾದರೆ ಆಸನದ ಮೇಲೆ ಕುಳಿತು ಪೂಜೆ ಮಾಡಬೇಕೆಂಬ ಯಾವುದೇ ನಿರ್ಬಂಧವಿಲ್ಲ.
  • ಮೂರ್ತಿ ಪೂಜೆಯಲ್ಲಿ ಅಭಿಷೇಕಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಆದರೆ ಚಿತ್ರ ಪೂಜೆಯಲ್ಲಿ ಜಲಾಭಿಷೇಕ್ಕೆ ಅವಕಾಶವಿಲ್ಲ.
  • ಮೂರ್ತಿ ಪೂಜೆಯಲ್ಲಿ ಸಾಧನೆ ಮಾಡುವ ಮೂಲಕ ಇಷ್ಟದೇವತೆಯನ್ನು ಆವಾಹಿಸಬಹುದು. ಆದರೆ ಚಿತ್ರ ಪೂಜೆಯಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ.
  • ಮೂರ್ತಿ ಪೂಜೆಯಲ್ಲಿ ಪ್ರತಿಷ್ಠಾಪನೆಯ ನಂತರವೇ ದೇವರನ್ನು ಪೂಜಿಸಬಹುದು. ಆದರೆ ಚಿತ್ರ ಪೂಜೆಯಲ್ಲಿ ದೇವತೆಯನ್ನು ಸ್ಥಾಪಿಸಲಾಗುವುದಿಲ್ಲ.
  • ವಿಗ್ರಹ ಪೂಜೆಯಲ್ಲಿ, ವಿಗ್ರಹದ ಗಾತ್ರವು 6 ಇಂಚುಗಳನ್ನು ಮೀರಬಾರದು. ಆದರೆ ಫೋಟೋ ಪೂಜೆಯಲ್ಲಿ, ದೇವರ ಚಿತ್ರವನ್ನು ಎಷ್ಟು ದೊಡ್ಡದು ಬೇಕಾದರೂ ತೆಗೆದುಕೊಳ್ಳಬಹುದು.
  • ವಿಗ್ರಹ ಪೂಜೆಯಲ್ಲಿ ಯಾವುದೇ ದೇವತೆ ಅಥವಾ ದೇವತೆಯ ಬೀಜ ಮಂತ್ರಗಳನ್ನು ಪಠಿಸಬಹುದು. ಆದರೆ ಫೋಟೋ ಪೂಜೆಯಲ್ಲಿ ಬೀಜ ಮಂತ್ರಗಳ ಪಠಣವನ್ನು ನಿಷೇಧಿಸಲಾಗಿದೆ.
  • ವಾಸ್ತವವಾಗಿ, ಅದು ವಿಗ್ರಹವಾಗಲಿ ಅಥವಾ ಚಿತ್ರವಾಗಲಿ, ಅದನ್ನು ಸ್ನಾನ ಮಾಡಿದ ನಂತರವೇ ಪೂಜಿಸಬೇಕು. ಆದರೆ ಕೆಲವು ಅನಾರೋಗ್ಯದ ಸಂದರ್ಭಗಳಲ್ಲಿ, ಚಿತ್ರದ ಪೂಜೆಯಲ್ಲಿ ಸ್ನಾನ ಇತ್ಯಾದಿಗಳನ್ನು ಮಾಡದಿದ್ದರೂ, ಅದನ್ನು ಶುದ್ಧವೆಂದೇ ಪರಿಗಣಿಸಲಾಗುತ್ತದೆ. ಆದರೆ ಮೂರ್ತಿಯ ಪೂಜೆಯಲ್ಲಿ ಸ್ನಾನ ಮಾಡದೆ ಆಸನದ ಮೇಲೆ ಕುಳಿತುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಮೂರ್ತಿ ಪೂಜೆಯಲ್ಲಿ ವಿಗ್ರಹದ ಲೋಹಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಂದರೆ, ವಿಗ್ರಹದ ಲೋಹವು ಅಷ್ಟಧಾತುಗಳಿಂದ ಅಥವಾ ಚಿನ್ನ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿರಬೇಕು. ಅದೇ ಸಮಯದಲ್ಲಿ, ಫೋಟೋ ಪೂಜೆಯಲ್ಲಿ ಚಿತ್ರದ ಲೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.

    12 ವರ್ಷಗಳ ಬಳಿಕ ನವಪಂಚಮ ರಾಜಯೋಗ; ಮೂರು ರಾಶಿಗಳಿಗೆ ಬಂಪರ್

ಇದಲ್ಲದೆ ಇತರೆ ಕೆಲ ಪೂಜಾ ತಪ್ಪುಗಳು(Puja mistakes)
ಮಂತ್ರ ಹೇಳುವ ಮುನ್ನ ತಿಂಡಿ ತಿಂದಿದ್ದರೆ ಅಥವಾ ಜರ್ದಾ ಅಗಿದಿದ್ದರೆ ಬಾಯಿ ಗಲೀಜಾಗಿರುತ್ತದೆ. ಹೀಗಾಗಿ, ಸ್ನಾನವಾದ ಕೂಡಲೇ ಪೂಜಿಸಬೇಕು. 
ಸ್ನಾನ ಮಾಡದೇ ತುಳಸಿ ಕೊಯ್ಯಬಾರದು. ಜೊತೆಗೆ ತುಳಸಿಯನ್ನು ಗಣಪತಿಗೆ ಏರಿಸಬಾರದು. 
ಕೇದಗೆ ಹೂವನ್ನು ವಿಷ್ಣುವಿಗೆ ಏರಿಸಬಾರದು.
ನೀರಾದ ತುಪ್ಪವನ್ನು ದೇವರಿಗೆ ನೈವೇಧ್ಯ ಮಾಡಬಾರದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ಅದೃಷ್ಟ ರತ್ನಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios