ಮಹಾನವಮಿ ಸಂಭ್ರಮ: ದಾಂಡಿಯಾ ನೃತ್ಯಕ್ಕಾಗಿ ಶುರುವಾಗಿದೆ ಭರ್ಜರಿ ತಯಾರಿ!
ಆದಿಶಕ್ತಿ, ಜಗನ್ಮಾತೆ ಚಂಡಿ ಚಾಮುಂಡಿ ದೇವಿಯನ್ನ ಆರಾಧಿಸುವ ಹಬ್ಬವೇ ದಸರಾ. ಈ ಹಬ್ಬವನ್ನ ಸಾಂಸ್ಕೃತಿಕವಾಗಿ, ಸಂಪ್ರದಾಯಿಕವಾಗಿ ಶ್ರೀಮಂತಿಕೆ ಹೊಂದಿರುವ ಹಬ್ಬ. ಅದ್ರಲ್ಲು ನಮ್ಮ ಕರ್ನಾಟಕದ ನಾಡ ಹಬ್ಬವು ಹೌದು.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.13): ಆದಿಶಕ್ತಿ, ಜಗನ್ಮಾತೆ ಚಂಡಿ ಚಾಮುಂಡಿ ದೇವಿಯನ್ನ ಆರಾಧಿಸುವ ಹಬ್ಬವೇ ದಸರಾ. ಈ ಹಬ್ಬವನ್ನ ಸಾಂಸ್ಕೃತಿಕವಾಗಿ, ಸಂಪ್ರದಾಯಿಕವಾಗಿ ಶ್ರೀಮಂತಿಕೆ ಹೊಂದಿರುವ ಹಬ್ಬ. ಅದ್ರಲ್ಲು ನಮ್ಮ ಕರ್ನಾಟಕದ ನಾಡ ಹಬ್ಬವು ಹೌದು. ನವರಾತ್ರಿ 9 ದಿನಗಳು ದಾಂಡಿಯಾ ನೃತ್ಯದ ಮೂಲಕ ಹೆಣ್ಣು ಮಕ್ಕಳು ಹಬ್ಬವನ್ನ ಸಂಭ್ರಮಿಸೋದು ವಾಡಿಕೆ. ನವರಾತ್ರಿ ನಿಮಿತ್ತವಾಗಿ ವಿಜಯಪುರದಲ್ಲಿ ಪ್ರತಿದಿನ ಗಂಡು-ಹೆಣ್ಣು ಎನ್ನುವ ಭೇದವಿಲ್ಲದೆ ಕೈಯಲ್ಲಿ ಕೋಲು ಹಿಡಿದು ದಾಂಡಿಯಾ ಆಡಿ ಖುಷಿಪಡ್ತಾರೆ. ಇಂತಹ ದಾಂಡಿಯಾಗಾಗಿ ನಗರದಲ್ಲಿ ಬರದ ಸಿದ್ಧತೆ ನಡೆಯುತ್ತಿವೆ.
9 ದಿನಗಳ ದಾಂಡಿಯಾ ನೃತ್ಯ ಬರದ ಸಿದ್ಧತೆ: ಮಹಾನವಮಿ ಹಬ್ಬ ಎಂದರೆ ವನಿತೆಯರಿಗೆ ಎಲ್ಲಿಲ್ಲದ ಸಂಭ್ರಮ. ಒಂಭತ್ತು ದಿನ ದಿನ ಒಂಭತ್ತು ಬಣ್ಣದ ಸೀರೆಯುಟ್ಟು ಸಂಭ್ರಮಿಸುತ್ತಾರೆ. ಇನ್ನೂ ಸಂಪ್ರದಾಯಿಕ ಶೈಲಿಯ ನೃತ್ಯ ದಾಂಡಿಯಾ ಕೂಡಾ ಆಡ್ತಾರೆ. ಈ ಬಾರಿ ವಿಜಯಪುರ ನಗರದ ಶಾಂತಿನಿಕೇತನ ಎಸ್ ಎಸ್ ಬಿ ಇವೆಂಟ್ಸ್ ವತಿಯಿಂದ ಅಕ್ಟೋಬರ್18 ರಂದು ದಾಂಡಿಯಾ ನೃತ್ಯ ಆಯೋಜಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ: ಸಂಸದ ಡಿ.ಕೆ.ಸುರೇಶ್
5 ಸಾವಿರ ಜನರಿಂದ ಒಟ್ಟೊಟ್ಟಿಗೆ ದಾಂಡಿಯಾ ನೃತ್ಯ: ಕನಿಷ್ಠ ಪಕ್ಷ 5 ಸಾವಿರಕ್ಕೂ ಹೆಚ್ಚು ಮಹಿಳೆಯರು, ಪುರುಷರು, ಚಿಣ್ಣರು ಈ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಲಿದ್ದಾರೆ. ಚಿತ್ರನಟಿ ಮಯೂರಿ ಸೇರಿದಂತೆ ಹಲವರು ದಾಂಡಿಯಾಕ್ಕೆ ಸಾಥ್ ನೀಡಲಿದ್ದಾರೆ. ಅಲ್ಲದೇ ಬಬಲ್ ಮೆನ್ ಚಿಣ್ಣರಿಗೆ ಖುಷಿ ಪಡಿಸಲು ಆಗಮಿಸುತ್ತಿದ್ದಾನೆ. ಶಾಂತಿನಿಕೇತನ ಕಾಲೇಜಿನ ಆವರಣದಲ್ಲಿ ಈ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಲಿದೆ.
ದಾಂಡಿಯಾದಲ್ಲಿ ಪಾಲ್ಗೊಳ್ಳಲು ಮಹಿಳೆಯರ ಪ್ರಾಕ್ಟಿಸ್: ಇನ್ನೂ ದಾಂಡಿಯಾ ನೃತ್ಯದಲ್ಲಿ ಪಾಲ್ಗೊಳ್ಳಲು ವನಿತೆಯರು ವಯಸ್ಸಿನ ಹಂಗಿಲ್ಲದೇ ತಯಾರಿ ನಡೆಸುತ್ತಿದ್ದಾರೆ. ಕೈಯಲ್ಲಿ ಕೋಲು ಹಿಡಿದು ಸಾಂಪ್ರದಾಯಿಕ ಹಾಗೂ ಡಿಜೆ ಹಾಡುಗಳಿಗೆ ಸ್ಟೆಪ್ ರೂಢಿ ಮಾಡಿಕೊಳ್ಳುತ್ತಿದ್ದಾರೆ.ಕೊರೊನಾ ಹೆಮ್ಮಾರಿ ವಕ್ಕರಿಸಿ ಅಬ್ಬರಿಸಿ ಬೊಬ್ಬಿರಿದು ಸಾಕಷ್ಟು ನೋವು ಕೊಟ್ಟ ಬಳಿಕ ಇದೇ ಮೊದಲ ಬಾರಿಗಡ ವಿಜಯಪುರ ನಗರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವದು ನೃತ್ಯ ಪ್ರೀಯರಿಗರ ಸಂತಸ ತಂದಿದೆ.
ವೋಟ್ ಹಾಕಿದ್ರೆ ಅಭಿವೃದ್ದಿ, ಇಲ್ಲಂದ್ರೆ ನೋ ಅಭಿವೃದ್ಧಿ: ಶಾಸಕ ಬಾಲಕೃಷ್ಣ
ಗುಮ್ಮಟನಗರಿಯಲ್ಲಿ ಮನೆ ಮಾಡಿರುವ ಸಂಭ್ರಮ: ನವರಾತ್ರಿಯಲ್ಲಿ ನವಶಕ್ತಿಗೆ ಭಕ್ತಿಯ ಆರಾಧನೆ ಜೊತೆಗೆ ಸಂಪ್ರದಾಯಿಕ ನೃತ್ಯದ ಮೂಲಕ ಮಹಾನವಮಿ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಲು ಗುಮ್ಮಟನಗರಿ ಜನತೆ ಸಿದ್ದವಾಗುತ್ತಿದ್ದಾರೆ.