Asianet Suvarna News Asianet Suvarna News

Pregnancy and zodiacs: ರಾಶಿ ಪ್ರಕಾರ ನಿಮ್ಮ ಪ್ರಗ್ನೆನ್ಸಿ ಪಯಣ ಹೇಗಿರಲಿದೆ?

ಗರ್ಭಾವಸ್ಥೆ ಸಮಯವು ರೋಲರ್ ಕೋಸ್ಟರ್‌ನಂತ ಏರಿಳಿತದ ಅವಧಿಯಾಗಿದೆ. ಹಾಗಿದ್ದೂ ಮಗುವಿನ ಮುಖ ನೋಡುತ್ತಿದ್ದಂತೆ ಆ ಎಲ್ಲ ಅನುಭವಿಸಿದ ಕಷ್ಟಗಳು ಮರೆತು ಹೋಗುತ್ತವೆ. ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದಲ್ಲಿ, ಜ್ಯೋತಿಷ್ಯದಲ್ಲಿ ಪ್ರತಿ ರಾಶಿಚಕ್ರ ಚಿಹ್ನೆಯ ಗರ್ಭಧಾರಣೆ ಅವಧಿ ಹೇಗಿರುತ್ತದೆ ಎಂಬುದನ್ನು ಹೇಳಲಾಗಿದೆ. 

pregnancy nature according to zodiac sign skr
Author
First Published Jun 18, 2023, 4:59 PM IST

ನಿಮ್ಮ ಕುಟುಂಬದ ಹೊಸ ಸದಸ್ಯರ ಆಗಮನಕ್ಕಾಗಿ ನೀವು ಕುತೂಹಲದಿಂದ ಕಾಯುತ್ತಿದ್ದೀರಾ? ಕುಟುಂಬವನ್ನು ಪ್ರಾರಂಭಿಸುವ ನಿರ್ಧಾರವು ವೈಯಕ್ತಿಕವಾಗಿದ್ದರೂ, ಜ್ಯೋತಿಷ್ಯವು ನಿಮ್ಮ ಗರ್ಭಧಾರಣೆಯ ಸಮಯದ ಒಳನೋಟಗಳನ್ನು ನೀಡುತ್ತದೆ. ಜ್ಯೋತಿಷ್ಯವು ಹೆರಿಗೆಗೆ ಹೆಚ್ಚು ಅನುಕೂಲಕರ ಸಮಯವನ್ನು ಊಹಿಸಲು ಹಲವಾರು ಅಂಶಗಳನ್ನು ಪರಿಗಣಿಸುತ್ತದೆ. ಇದು ಗ್ರಹಗಳ ಸ್ಥಾನ, ಚಂದ್ರ ಮತ್ತು ಲಗ್ನವನ್ನು ಒಳಗೊಂಡಿದೆ.

ಗರ್ಭಾವಸ್ಥೆ ಸಮಯವು ರೋಲರ್ ಕೋಸ್ಟರ್‌ನಂತ ಏರಿಳಿತದ ಅವಧಿಯಾಗಿದೆ. ಹಾಗಿದ್ದೂ ಮಗುವಿನ ಮುಖ ನೋಡುತ್ತಿದ್ದಂತೆ ಆ ಎಲ್ಲ ಅನುಭವಿಸಿದ ಕಷ್ಟಗಳು ಮರೆತು ಹೋಗುತ್ತವೆ. ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದಲ್ಲಿ, ಜ್ಯೋತಿಷ್ಯದಲ್ಲಿ ಪ್ರತಿ ರಾಶಿಚಕ್ರ ಚಿಹ್ನೆಯ ಗರ್ಭಧಾರಣೆ ಅವಧಿ ಹೇಗಿರುತ್ತದೆ ಎಂಬುದನ್ನು ಹೇಳಲಾಗಿದೆ. ಅದರ ಬಗ್ಗೆ ತಿಳಿಯೋಣ. 

ಮೇಷ(Aries): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಶಕ್ತಿಯುತ ಮತ್ತು ಸಕ್ರಿಯ ಗರ್ಭಧಾರಣೆಯನ್ನು ಅನುಭವಿಸಬಹುದು. ಅವರ ಆಶಾವಾದಿ ಸ್ವಭಾವವು ಗರ್ಭಾವಸ್ಥೆಯಲ್ಲಿ ಎದುರಿಸುವ ಭಾವನಾತ್ಮಕ ಸವಾಲುಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.
ವೃಷಭ(Taurus): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ವೈದ್ಯರ ಅಪಾಯಿಂಟ್‌ಮೆಂಟ್ ಮಿಸ್ ಮಾಡುವುದಿಲ್ಲ. ಅವರೆಲ್ಲ ಸಲಹೆಗಳನ್ನು ಪಾಲಿಸುತ್ತಾರೆ. ಹಾಗಾಗಿ ಅವರು ಸುಗಮ ಮತ್ತು ಸುಲಭವಾದ ಗರ್ಭಧಾರಣೆಯನ್ನು ಹೊಂದಿರುತ್ತಾರೆ ಮತ್ತು ಅವರು ಆರೋಗ್ಯಕರ ಮಗುವಿಗೆ ಜನ್ಮ ನೀಡುತ್ತಾರೆ.

ಅಮವಾಸ್ಯೆಯಂದು ಮಗು ಜನಿಸಿದರೆ ಅದು ಶುಭವೋ, ಅಶುಭವೋ?

ಮಿಥುನ(Gemini): ಮಿಥುನ ರಾಶಿಯವರು ತುಲನಾತ್ಮಕವಾಗಿ ಸುಲಭವಾದ ಗರ್ಭಧಾರಣೆ ಮತ್ತು ಹೆರಿಗೆಯನ್ನು ಅನುಭವಿಸಬಹುದು ಮತ್ತು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಹುದು.
ಕರ್ಕಾಟಕ(Cancer): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಬಲವಾದ ತಾಯ್ತನವನ್ನು ಹೊಂದಿರುತ್ತಾರೆ ಮತ್ತು ಅವರು ಗರ್ಭಧಾರಣೆ ಮತ್ತು ಮಗುವಿನ ಜನನದ ಅನುಭವಕ್ಕೆ ಹೆಚ್ಚು ಭಾವನಾತ್ಮಕವಾಗಿ ಸಂಪರ್ಕ ಹೊಂದಿರುತ್ತಾರೆ. ಇವರೇ ತಮ್ಮೆಲ್ಲ ಅನುಭವಗಳನ್ನು ದಾಖಲಿಸಲು ಬಯಸುತ್ತಾ, ಪ್ರಗ್ನೆನ್ಸಿ ಫೋಟೋಶೂಟ್ ಮಾಡಿಸುತ್ತಾರೆ. ಮಗುವಿನ ಸ್ಕ್ಯಾನಿಂಗ್ ಫೋಟೋ ಪ್ರಿಂಟ್ ಹಾಕಿಸುತ್ತಾರೆ.
ಸಿಂಹ(Leo): ಸಿಂಹ ರಾಶಿಯವರು ತಮ್ಮ ಮಗುವಿನೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿರುತ್ತಾರೆ ಮತ್ತು ಉತ್ತಮ ಪೋಷಕರಾಗುವ ಬಯಕೆಯನ್ನು ಹೊಂದಿರುತ್ತಾರೆ. ಇವರು ಗರ್ಭಿಣಿಯಾದಾಗ ಎಲ್ಲರ ಗಮನ ತಮ್ಮ ಮೇಲೆಯೇ ಇರಬೇಕು, ತಮ್ಮನ್ನು ವಿಶೇಷವಾಗಿ ನಡೆಸಿಕೊಳ್ಳಬೇಕು ಎಂದು ಬಯಸುತ್ತಾರೆ. 
ಕನ್ಯಾ(Virgo): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಚೆನ್ನಾಗಿ ಯೋಜಿತ ಮತ್ತು ಸಂಘಟಿತ ಗರ್ಭಧಾರಣೆ ಮತ್ತು ಹೆರಿಗೆಯನ್ನು ಹೊಂದಿರುತ್ತಾರೆ. 
ತುಲಾ(Libra): ತುಲಾ ರಾಶಿಯವರು ಮಗುವಿನ ಜನನದ ಸಮಯದಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ತೊಂದರೆಗಳು ಅಥವಾ ಹಾರ್ಮೋನ್ ಅಸಮತೋಲನದಂತಹ ಹೆಚ್ಚಿನ ತೊಡಕುಗಳನ್ನು ಅನುಭವಿಸಬಹುದು. ಅವರು ತಮ್ಮ ಮಗುವಿನ ಬಗ್ಗೆ ಹೆಚ್ಚಿನ ತಾಯ್ತನವನ್ನು ಹೊಂದಿರಬಹುದು ಮತ್ತು ಇದು ಗರ್ಭಧಾರಣೆಗೆ ಸಹಾಯ ಮಾಡುತ್ತದೆ.
ವೃಶ್ಚಿಕ(Scorpio): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಗರ್ಭಧಾರಣೆ ಮತ್ತು ಮಗುವಿನ ಜನನದ ಅನುಭವವನ್ನು ವಿಭಿನ್ನವಾಗಿ ಅನುಭವಿಸಬಹುದು. ಅವರು ಧೈರ್ಯವಾಗಿ ಈ ಅವಧಿಯನ್ನು ಅನುಭವಿಸಬಲ್ಲರು.
ಧನು ರಾಶಿ(Sagittarius): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ನೈಸರ್ಗಿಕ ಮಗುವಿನ ಜನನವನ್ನು ಬಯಸುತ್ತಾರೆ. ಅವರ ಉತ್ತಮ ಹಾಸ್ಯ ಪ್ರಜ್ಞೆಯು ಅವರ ಆಶಾವಾದಿ ಮತ್ತು ಉತ್ಸಾಹಭರಿತ ಸ್ವಭಾವದೊಂದಿಗೆ ಬೆರೆತಿದ್ದು, ಅವರು ತಾಯಿಯಾಗುವುದರ ಸುತ್ತಲಿನ ಸಂತೋಷ ಹೆಚ್ಚಿಸುತ್ತದೆ.
ಮಕರ(Capricorn): ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಚೆನ್ನಾಗಿ ಯೋಜಿತ ಮತ್ತು ಸಂಘಟಿತ ಗರ್ಭಧಾರಣೆ ಮತ್ತು ಹೆರಿಗೆಯನ್ನು ಹೊಂದಿರಬಹುದು. ಅವರು ವೈದ್ಯರು ಹೇಳಿದಂತೆಯೇ ಆಹಾರ ಪದ್ಧತಿ, ವ್ಯಾಯಾಮ ಇತ್ಯಾದಿಗಳನ್ನು ಅನುಸರಿಸುತ್ತಾರೆ. 

Lal Kitab remedies: ವ್ಯಾಪಾರದಲ್ಲಿ ಗೆಲ್ಲೋ ಕುದುರೆ ಆಗೋಕೆ ಇಲ್ಲಿವೆ ಸುಲಭ ಪರಿಹಾರ ಮಾರ್ಗಗಳು..

ಕುಂಭ(Aquarius): ಕುಂಭ ರಾಶಿಯು ಅದರ ಸ್ವತಂತ್ರ ಮತ್ತು ಅಸಾಂಪ್ರದಾಯಿಕ ಸ್ವಭಾವಕ್ಕೆ ಹೆಸರುವಾಸಿಯಾದ ಗಾಳಿಯ ಚಿಹ್ನೆ. ಅವರು ಒಬ್ಬರೇ ವೈದ್ಯಕೀಯ ಚೆಕಪ್‌ಗೆ ಹೋಗಬಲ್ಲರು. ಭಾವನೆಗಳನ್ನು ಅಷ್ಟಾಗಿ ತೋರ್ಪಡಿಸದ ಕಾರಣ ಅವರು ಪ್ರಗ್ನೆನ್ಸಿಯಲ್ಲಿ ಖುಷಿಯಾಗಿಲ್ಲ ಎಂದು ನೋಡುಗರು ಭಾವಿಸಬಹುದು. ಆದರೆ, ಒಳಗೊಳಗೇ ಅವರು ಬಹುವಾಗಿ ತಮ್ಮ ಗರ್ಭಧಾರಣೆ ವಿಷಯವಾಗಿ ಸಂತೋಷವಾಗಿರುತ್ತಾರೆ. 
ಮೀನ(Pisces): ಮೀನವು ನೀರಿನ ಚಿಹ್ನೆ ಮತ್ತು ಅದರ ಅರ್ಥಗರ್ಭಿತ ಮತ್ತು ಸೂಕ್ಷ್ಮ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ಮಗುವಿನೊಂದಿಗೆ ಬಲವಾದ ಸಂಪರ್ಕವನ್ನು ಹೊಂದುತ್ತಾರೆ ಮತ್ತು ಮಗುವಿನ ಜನನದ ಸಮಯದಲ್ಲಿ ಆಧ್ಯಾತ್ಮಿಕ ಅಥವಾ ಅತೀಂದ್ರಿಯ ಅನುಭವವನ್ನು ಹೊಂದುವ ಸಾಧ್ಯತೆಯಿದೆ.

Follow Us:
Download App:
  • android
  • ios