Asianet Suvarna News Asianet Suvarna News

ನವರಾತ್ರಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗೋದು ಎಷ್ಟು ಸರಿ?

ಸೂರ್ಯೋದಯದ ನಂತ್ರ, ಸೂರ್ಯಾಸ್ತದ ಸಮಯದಲ್ಲಿ, ಅಮವಾಸ್ಯೆ ದಿನ ಹೀಗೆ ಕೆಲ ವಿಶೇಷ ಸಮಯದಲ್ಲಿ ಸಂಭೋಗ ಬೆಳೆಸುವುದು ನಿಷಿದ್ಧ. ಅದಕ್ಕೆ ಬೇರೆ ಬೇರೆ ಕಾರಣವಿದೆ. ನವರಾತ್ರಿಯಲ್ಲಿ ಸೆಕ್ಸ್ ಬೇಡ ಎನ್ನಲೂ ಕಾರಣವಿದೆ. ಅದೇನು ಎಂಬುದನ್ನು ನಾವಿಂದು ಹೇಳ್ತೇವೆ.
 

Physical Relation During Navratri Allowed Or Not
Author
Bangalore, First Published Jun 30, 2022, 2:57 PM IST

ಭಾರತ (India) ದಲ್ಲಿ ಈಗಲೂ ಲೈಂಗಿಕತೆಯನ್ನು ಅಶುದ್ಧ ಸ್ಥಾನದಲ್ಲಿ ಇಡಲಾಗಿದೆ. ದೈಹಿಕ ಸಂಬಂಧ (Physical Relationship) ಬೆಳೆಸಿದ ನಂತರ ದೇವರ ಮನೆಗೆ ಹೋಗಲು ಹೆದರುತ್ತಾರೆ. ಅಡಿಯಿಂದ ಮುಡಿಯವರೆಗೆ ಸ್ನಾನ ಮಾಡಿ, ಪಾಪ ಕಳೆದುಕೊಂಡು, ಶುದ್ಧವಾಗಿ ದೇವರ ಮನೆಗೆ ಹೋಗುವ ಪದ್ಧತಿ ನಮ್ಮಲ್ಲಿದೆ. ಭಾರತದಲ್ಲಿ ಅನೇಕ ತಿಥಿಯಂದು ಲೈಂಗಿಕ ಸಂಬಂಧ ಬೆಳೆಸುವುದು ನಿಷಿದ್ಧ. ಇದಕ್ಕೆ ಕೆಲ ವೈಜ್ಞಾನಿಕ ಕಾರಣವೂ ಇದೆ. ಹುಣ್ಣಿಮೆ, ಅವಮಾಸ್ಯೆ ಸೇರಿದಂತೆ ಹಬ್ಬ (Festival) ಗಳಲ್ಲಿ ಯಾವುದೇ ಕಾರಣಕ್ಕೂ ಸಂಭೋಗ ಬೆಳೆಸಬಾರದು ಎಂದು ನಂಬಲಾಗಿದೆ. ಹಾಗೆಯೇ ನವರಾತ್ರಿ ಸಂದರ್ಭದಲ್ಲಿ ಕೂಡ ಸಂಭೋಗ ಬೆಳೆಸಬಾರದು ಎನ್ನಲಾಗುತ್ತದೆ. ನವರಾತ್ರಿಯ 9 ದಿನ ದಂಪತಿ ದೂರವಿರಬೇಕು ಎಂದಾಗ ಅನೇಕರು ಶಾಸ್ತ್ರಕ್ಕೆ ಸೊಪ್ಪು ಹಾಕೋರು ಯಾರು ಎನ್ನುತ್ತಾರೆ. ಆದರೆ 9 ದಿನಗಳ ಕಾಲ ಸಂಗಾತಿಯಿಂದ ದೂರವಿದ್ರೆ ಏನೆಲ್ಲ ಲಾಭವಿದೆ ಎಂಬುದು ನಿಮಗೆ ಗೊತ್ತಾ?.  

ನವರಾತ್ರಿಯಲ್ಲಿ 9 ದಿನದ ವಿರಾಮ ಪಾಲುದಾರರ ನಡುವೆ ಪ್ರೀತಿ  ಹೆಚ್ಚಿಸುತ್ತೆ: ನವರಾತ್ರಿಯ ಸಮಯದಲ್ಲಿ  ನೀವು ನಿಮ್ಮ ಸಂಗಾತಿಯಿಂದ ಸ್ವಲ್ಪ ಸಮಯದವರೆಗೆ ದೈಹಿಕ ಅಂತರವನ್ನು ಕಾಯ್ದುಕೊಂಡರೆ ನಿಮ್ಮಿಬ್ಬರ ನಡುವೆ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗಬಹುದು. ಕೆಲವು ದಿನಗಳು ದೂರವಿರುವುದು ಪ್ರೀತಿ ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ನವರಾತ್ರಿಗೂ ಲೈಂಗಿಕತೆಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ದಿನಗಳಲ್ಲಿ ನೀವು ಸೆಕ್ಸ್ನಿಂದ ದೂರವಿರಲು ನಿರ್ಧರಿಸಿದರೆ ಅದನ್ನು ವಿರಾಮವಾಗಿ ನೋಡಬಹುದು. ಈ ವಿರಾಮ ಪರಸ್ಪರ ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.   

ಇದನ್ನೂ ಓದಿ: ಜೂನ್ 30ರಿಂದ ಆಷಾಢ ಗುಪ್ತ ನವರಾತ್ರಿ; ಆಚರಣೆ ಹೇಗೆ? ಏಕಿದು ಗುಪ್ತ್ ಗುಪ್ತ್?

ಮನಸ್ಸನ್ನು ಹಿಡಿದಿಟ್ಟುಕೊಳ್ಬೇಡಿ: ಸಾಧು ಒಬ್ಬರ ಪ್ರಕಾರ, ಸೆಕ್ಸ್ ವಯಸ್ಕರ ದೈಹಿಕ ಅಗತ್ಯಗಳಾದ ಹಸಿವು ಮತ್ತು ನಿದ್ರೆಗೆ ಸಮ. ಇಬ್ಬರಿಗೂ ಆಸಕ್ತಿಯಿದ್ದರೆ ಶಾರೀರಿಕ ಸಂಬಂಧ ಬೆಳೆಸಬಹುದು. ಆದರೆ ಯಾವುದೇ ತಪ್ಪಿತಸ್ಥ ಭಾವನೆ ಬೆಳೆಸಿಕೊಳ್ಳಬಾರದು. ಅವಶ್ಯವಿದ್ದಲ್ಲಿ ಇಬ್ಬರೂ ಸಂಭೋಗದ ನಂತರ ಸ್ನಾನ ಮಾಡಬಹುದು. ಸ್ನಾನ  ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಎನ್ನುತ್ತಾರೆ.  

ನವರಾತ್ರಿಯಲ್ಲಿ ಸೆಕ್ಸ್, ಇದು ನಿಮ್ಮ ಆಯ್ಕೆ: ನವರಾತ್ರಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಧರ್ಮಕ್ಕೆ ಸಂಬಂಧಿಸಿಲ್ಲ. ನವರಾತ್ರಿಯಲ್ಲಿ ಲೈಂಗಿಕ ಕ್ರಿಯೆ ನಡೆಸದಿರುವುದು ನಿಮ್ಮ ಆಯ್ಕೆಯಾಗಿದೆ. ಅದನ್ನು ಧರ್ಮವೆಂದು ನೋಡಬೇಡಿ. ಆದರೆ ನೀವು ಪ್ರತಿದಿನ ದೇವಿಯ ಆರಾಧನೆ ಮಾಡುತ್ತಿದ್ದರೆ, ಸೆಕ್ಸ್ ನಿಂದ ದೂರವಿರುವುದು ಒಳ್ಳೆಯದು. ಪೂಜೆ ವೇಳೆ ಮನಸ್ಸು ಚಂಚಲವಾಗಬಾರದು. ಹಾಗೆಯೇ ಪೂಜೆಗೆ ಶುದ್ಧ ಜೀವನಶೈಲಿ ಮುಖ್ಯವಾಗುತ್ತದೆ.

ಇಂದ್ರಿಯ ನಿಗ್ರಹ: ನವರಾತ್ರಿಯಲ್ಲಿ ಉಪವಾಸ ಮಾಡುತ್ತೇವೆ. ಪ್ರಾರ್ಥನೆ, ಆತ್ಮಾವಲೋಕ್ಕೆ ಮಹತ್ವ ನೀಡುತ್ತೇವೆ. ದೈವಿಕತೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವ ಅವಧಿ ಇದು. ಎಲ್ಲಾ ಭೌತಿಕ ಆಸೆಗಳಿಂದ ದೂರವಿರುವ ಸಮಯ. ಹಾಗಾಗಿ ನೀವು ಲೈಂಗಿಕತೆಯಿಂದ ದೂರವಿರಬೇಕೆಂದು ಹೇಳಲಾಗುತ್ತದೆ. ಇಂದ್ರಿಯ ನಿಗ್ರಹವು ಭಕ್ತಿಯ ಭಾಗವಾಗಿದೆ.

ನವರಾತ್ರಿಯ ಸಮಯದಲ್ಲಿ ಲೈಂಗಿಕತೆಯ ಹಿಂದೆ ಧರ್ಮ ಮತ್ತು ವಿಜ್ಞಾನ: ನವರಾತ್ರಿಯ ಒಂಬತ್ತು ದಿನ ಅನೇಕರು ಉಪವಾಸ ಮಾಡ್ತಾರೆ. ದೈಹಿಕ ಸಂಬಂಧದಿಂದಾಗಿ ಅವರ ಉಪವಾಸವನ್ನು ಮುರಿಯಬೇಕಾಗಬಹುದು. ಯಾಕೆಂದರೆ ಉಪವಾಸದಿಂದ ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗುತ್ತದೆ. ಸಂಭೋಗ ಬೆಳೆಸಿದಾಗ ಮತ್ತಷ್ಟು ಶಕ್ತಿ ಕಡಿಮೆಯಾಗುತ್ತದೆ. ಆ ಸಂದರ್ಭದಲ್ಲಿ ಜನರು ಉಪವಾಸ ಮುರಿಯಬೇಕಾಗುತ್ತದೆ. ಅಲ್ಲದೆ ಉಪವಾಸ ಮಾಡಿ ಆಯಾಸಗೊಂಡಿರುವ ಸಂಗಾತಿ ಲೈಂಗಿಕತೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಿರುವುದಿಲ್ಲ. ಹಾಗಾಗಿ ಇದನ್ನು ಧರ್ಮದ ಜೊತೆ ಜೋಡಿಸಲಾಗಿದೆ. 

ಇದನ್ನೂ ಓದಿ: ಅಂಗಾಂಗಗಳ ಶುಭ, ಅಶುಭಗಳ ಬಗ್ಗೆ 'ಜ್ಯೋತಿಷ್ಯ ಶಾಸ್ತ್ರ' ಏನು ಹೇಳುತ್ತದೆ?

ನವರಾತ್ರಿಯಲ್ಲಿ ಇಂದ್ರಿಯನಿಗ್ರಹಕ್ಕೆ ವೈಜ್ಞಾನಿಕ ಕಾರಣ: ವರ್ಷದಲ್ಲಿ ಬರುವ ಎರಡೂ ನವರಾತ್ರಿಗಳಲ್ಲಿ ಋತುಗಳಲ್ಲಿ ಬದಲಾವಣೆ ಇರುತ್ತದೆ ಹೀಗಾಗಿ ನವರಾತ್ರಿಯ ಆರಂಭವನ್ನು ಋತುಗಳ ಸಂಕ್ರಮಣ ಕಾಲವೆಂದು ಪರಿಗಣಿಸಲಾಗಿದೆ. ಹವಾಮಾನದಲ್ಲಿ ಆಗುವ ಬದಲಾವಣೆಗೆ ನಮ್ಮ ದೇಹ ಸಿದ್ಧವಾಗ್ಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು. ಅದೇ ಕಾರಣಕ್ಕೆ ಋಷಿಮುನಿಗಳು ಉಪವಾಸ ಮಾಡುವಂತೆ ಹೇಳ್ತಾರೆ. ಒಂಬತ್ತು ದಿನಗಳ ಕಾಲ ಉಪವಾಸ ಮತ್ತು ಸಂಯಮದ ನಿಯಮವನ್ನು ಪಾಲನೆ ಮಾಡಿದ್ರೆ, ಋತುವಿನ ಬದಲಾವಣೆಯಿಂದ ದೇಹವು ಆಹಾರ ಮತ್ತು ನಡವಳಿಕೆಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ಆದ್ದರಿಂದ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡ್ಬೇಕು ಸೆಕ್ಸ್ ತಪ್ಪಿಸಬೇಕೆಂದು ಹೇಳಲಾಗುತ್ತದೆ. 

Follow Us:
Download App:
  • android
  • ios