ಮೇಷ ಎಂದರೆ ರೋಷ, ಆವೇಶ, ಆತ್ಮವಿಶ್ವಾಸ.. ಈ ರಾಶಿಯ ಸ್ವಭಾವವಿದು..

ಮೇಷ ಎಂದರೆ ಮೊದಲ ರಾಶಿ. ನಂಬರ್ ಒನ್ ಆಗಿರಬೇಕೆಂಬ ಇವರ ಬಯಕೆ ಇಲ್ಲಿಂದಲೇ ಆರಂಭ. ಮೇಷ ರಾಶಿಯವರ ವ್ಯಕ್ತಿತ್ವ, ಗುಣಸ್ವಭಾವಗಳು ಹೇಗೆ ತಿಳಿಯೋಣ. 

Personality traits of Aries zodiac sign skr

ಮೇಷ ರಾಶಿಯು ರಾಶಿಚಕ್ರದ ಮೊದಲ ಚಿಹ್ನೆಯಾಗಿದೆ. ಈ ಧೈರ್ಯಶಾಲಿಗಳು ತಮ್ಮದೇ ಆದ ನಿಯಮಗಳ ಮೇಲೆ ಬದುಕುತ್ತಾರೆ. ತಮ್ಮ ನಂಬಿಕೆಗಳು, ಆದರ್ಶಗಳು ಮತ್ತು ಆಲೋಚನೆಗಳ ಮೇಲೆ ರಾಜಿ ಮಾಡಿಕೊಳ್ಳಲು ಬಯಸುವವರಲ್ಲ. ಇವರಲ್ಲಿ ಮುಗ್ಧತೆ ಇರುವಂತೆಯೇ ಅಹಂಕಾರವೂ ಜೊತೆಯಾಗುತ್ತದೆ. ಶೌರ್ಯದ ಜೊತೆಗೆ ಸ್ವಾರ್ಥವೂ ಮೈಗೂಡಿರುತ್ತದೆ. ನಾಯಕತ್ವ ಗುಣದ ಜೊತೆಗೆ ಕೋಪವೂ ಹೆಚ್ಚು. ಸೃಜನಶೀಲತೆ ಇದ್ದರೂ ಹಠಾತ್ ಪ್ರವೃತ್ತಿ ಹೆಚ್ಚು. ಒಟ್ಟಿನಲ್ಲಿ ಮೇಷ ರಾಶಿಯವರಲ್ಲಿ ಎಷ್ಟು ಧನಾತ್ಮಕ ಅಂಶಗಳಿವೆಯೋ ಅಷ್ಟೇ ನಕಾರಾತ್ಮಕ ವಿಷಯಗಳೂ ಇವೆ. 

ಮೇಷ ರಾಶಿಯವರ ವ್ಯಕ್ತಿತ್ವದ ಬಗ್ಗೆ ಇಲ್ಲಿ ವಿವರವಾಗಿ ಹೇಳಲಾಗಿದೆ. ಮೊದಲಿಗೆ ಅವರ ಧನಾತ್ಮಕ ವಿಷಯಗಳತ್ತ ಗಮನ ಹರಿಸೋಣ.

ಬಲವಾದ ನಾಯಕತ್ವ(Strong Leadership)
ಇವರು ಹುಟ್ಟಾ ನಾಯಕತ್ವ ಗುಣ ಹೊಂದಿರುತ್ತಾರೆ. ಇತರರ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕೆಂದು ತಿಳಿದಿರುತ್ತಾರೆ. ಇದು ಇವರಿಗೆ ಎಲ್ಲಾ ಕಾರ್ಯಗಳಲ್ಲಿ ವಿಜೇತರಾಗಲು ಸಹಾಯ ಮಾಡುತ್ತದೆ. ಹೀಗಾಗಿ ಇವರು ಅಧಿಕಾರದ ಸ್ಥಾನದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಇವರು ಅದೃಷ್ಟಕ್ಕಾಗಿ ಕಾಯುತ್ತಾ ಕೂರುವವರಲ್ಲ. ಅದನ್ನು ಹುಡುಕಿಕೊಂಡು ಹೋಗುವವರು.

ಅದ್ಭುತ ಆತ್ಮ ವಿಶ್ವಾಸ(Amazing Self Confidence)
ಇವರ ಆತ್ಮವಿಶ್ವಾಸವು ಸುತ್ತಲಿರುವ ಜನರಿಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಎಂಥದೇ ಸಂದರ್ಭ ಎದುರಾದರೂ ಕದಲದ ಆತ್ಮವಿಶ್ವಾಸ ಇವರದು. ತಮ್ಮ ಆಲೋಚನೆಗಳು ಹಾಗೂ ಅಭಿಪ್ರಾಯಗಲಿಗೆ ಸದಾ ಅಂಟಿಕೊಂಡಿರುತ್ತಾರೆ. ಮತ್ತೊಬ್ಬರ ಸಲಹೆಯನ್ನು ಸ್ವೀಕರಿಸುವವರಲ್ಲ. ಇತರರನ್ನು ಅನುಕರಿಸುವವರು, ಅನುಸರಿಸುವವರೂ ಅಲ್ಲ. 

ಸಕಾರಾತ್ಮಕ ಶಕ್ತಿ(Positive Energy)
ಮೇಷ ರಾಶಿಯವರು ಬಹಳಷ್ಟು ಧನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ. ಶಕ್ತಿಯುತರೂ, ಕ್ರಿಯಾಶೀಲರೂ ಆಗಿರುತ್ತಾರೆ. ಏಕೆಂದರೆ ಇವರು ಮಂಗಳನಿಂದ ಆಳಲ್ಪಡುವ ಅಗ್ನಿ ತತ್ವಕ್ಕೆ ಸೇರಿದವರು. ಎಂಥದೇ ಕಠಿಣ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಆಶಾವಾದಿಗಳಿವರು. ಕೆಲವೊಮ್ಮ ತಪ್ಪಾಗುತ್ತದೆ ಎಂಬ ವಾಸ್ತವಿಕತೆ ಅರಿತಿರುತ್ತಾರೆ. ಗುರಿಗಳ ಕಡೆಗೆ ಸಂಪೂರ್ಣ ಗಮನ ಹರಿಸುತ್ತಾರೆ. ಇವರಲ್ಲಿ ಶೌರ್ಯ, ಧೈರ್ಯವೂ ಹೆಚ್ಚು. ಸವಾಲುಗಳನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. 

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಹೆಚ್ಚುತ್ತೆ ಏಕಾಗ್ರತೆ.. ಕಾರಣ ಇಲ್ಲಿದೆ

ಸೃಜನಶೀಲತೆ(creativity)
ಮೇಷ ರಾಶಿಯವರು ಯಾವಾಗಲೂ ವಿಭಿನ್ನವಾದುದನ್ನು ಮಾಡಲು ಮಾರ್ಗಗಳನ್ನು ಅನ್ವೇಷಿಸುತ್ತಾರೆ. . ಪ್ರತಿದಿನ ಒಂದೇ ಕೆಲಸವನ್ನು ಮಾಡುವುದು ಇವರಿಂದ ಸಾಧ್ಯವಿಲ್ಲ. ಕಲಾತ್ಮಕ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ.

ಮೇಷ ರಾಶಿಯ ಋಣಾತ್ಮಕ ಲಕ್ಷಣಗಳು(Aries Negative Traits)
ಸ್ವಾರ್ಥ(Selfishness)

ಮೇಷ ರಾಶಿಯವರು ಹೊಂದಿರುವ ನಕಾರಾತ್ಮಕ ಲಕ್ಷಣವೆಂದರೆ ಸ್ವಯಂ ಪ್ರಗತಿಯ ಕಾಳಜಿ. ಗೆಲುವಿನ ವಿಷಯಕ್ಕೆ ಬಂದಾಗ, ಮೇಷ ರಾಶಿಯವರು ಯಾವ ತಂತ್ರಗಳನ್ನು ಬೇಕಾದರೂ ಬಳಸುತ್ತಾರೆ. ತಮ್ಮ ಲಾಭಕ್ಕಾಗಿ ಅವರು ಇತರರ ಕಾಳಜಿ ಮಾಡದೆ ಕಾರ್ಯ ಕೈಗೊಳ್ಳುವರು. ಇತರರ ಭಾವನೆಗಳಿಗೆ ಬೆಲೆ ಕೊಡುತ್ತಾ ಕೂತರೆ ತನಗೆ ಸಮಸ್ಯೆಯಾಗುತ್ತದೆ ಎನಿಸಿದಾಗ ಇವರು ತಮ್ಮ ಲಾಭ ನೋಡಿಕೊಳ್ಳುವರು.

ಗಮನ ಸೆಳೆಯುವುದು(Attention Seeking)
ಮೇಷ ರಾಶಿಯ ವ್ಯಕ್ತಿಗಳು ಗಮನ ಸೆಳೆಯುವವರು. ವಾಸ್ತವವಾಗಿ, ಇವರಿಗೆ ಯಾರೂ ಗಮನ ಕೊಡುತ್ತಿಲ್ಲವೆಂದರೆ ಕಿರಿಕಿರಿಗೊಳಗಾಗುತ್ತಾರೆ. ಸದಾ ಆಕರ್ಷಣೆಯ ಕೇಂದ್ರವಾಗಿರಲು ಬಯಸುತ್ತಾರೆ. ಇದಕ್ಕಾಗಿ ಏನೆಲ್ಲ ತಂತ್ರಗಳನ್ನು ಮಾಡಬಹುದೋ ಅವನ್ನೆಲ್ಲ ಪ್ರಯೋಗಿಸಿಯೇ ತೀರುತ್ತಾರೆ.

Aquarius to Capricorn: ಈ ನಾಲ್ಕು ರಾಶಿಯವರು ಆನ್‌ಲೈನ್ ಫೇಕ್ ಪ್ರೊಫೈಲ್ ವೀರರು!

ಕೋಪ ಪ್ರಕೋಪಗಳು(Outbursts of Anger)
ಮೇಷ ರಾಶಿಯ ದೊಡ್ಡ ಸಮಸ್ಯೆ ಎಂದರೆ ಅವರ ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿಲ್ಲ. ಬಯಸಿದ ರೀತಿಯಲ್ಲಿ ಕೆಲಸಗಳು ನಡೆಯದಿದ್ದಾಗ ಅಥವಾ ತಮ್ಮ ಕೆಲಸದಲ್ಲಿ ಯಾರಾದರೂ ತಪ್ಪು ಕಂಡುಹಿಡಿದರೆ ಇವರು ಕೋಪಗೊಳ್ಳುತ್ತಾರೆ. 

ತಾಳ್ಮೆಯ ಕೊರತೆ(Lack Of Patience)
ತಾಳ್ಮೆ ಮೇಷ ರಾಶಿಗೆ ಸುಲಭವಾಗಿ ಬರುವುದಿಲ್ಲ. ಯಾವುದೋ ಫಲಿತಾಂಶಗಳಿಗಾಗಿ ಬಹಳ ಸಮಯ ಕಾಯಲು ಇವರಿಂದ ಸಾಧ್ಯವಿಲ್ಲ. ಏಕತಾನತೆಯ ವಿಷಯಗಳಿಂದ ಬೇಗ ಬೇಸರಗೊಳ್ಳುವ ಇವರು ಅವುಗಳನ್ನು ಪೂರ್ಣಗೊಳಿಸದೆ ಬಿಡಬಹುದು. ಯಶಸ್ಸಿನ ಹಾದಿಯಲ್ಲಿನ ನ್ಯೂನತೆಗಳನ್ನು ಕುಳಿತು ವಿಶ್ಲೇಷಿಸುವುದಿಲ್ಲ. ಇದರೊಂದಿಗೆ  ಹಠಾತ್ ವರ್ತನೆಯನ್ನು ಹೊಂದಿರುತ್ತಾರೆ. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. 

Latest Videos
Follow Us:
Download App:
  • android
  • ios