V ಅಕ್ಷರದಿಂದ ಶುರುವಾಗೋ ಹೆಸರಿನವರಿಗೆ ಸದಾ ವಿಕ್ಟರಿ!
ವಿ ಅಕ್ಷರದಿಂದ ಆರಂಭವಾಗುವ ಹೆಸರು ಹೊಂದಿದವರ ಸ್ವಭಾವ ಗುಣ ಲಕ್ಷಣಗಳು ಯಾವುವು?
ವಿ ಎಂಬ ಅಕ್ಷರದಿಂದ ಶುರುವಾಗುವ ಹೆಸರಿನವರು ಸದಾ ತಮ್ಮ ಕೆಲಸ ಕಾರ್ಯಗಳಲ್ಲಿ ವಿಜಯವನ್ನು ಸಂಪಾದಿಸಿಕೊಂಡು ಬರುತ್ತಿರುತ್ತಾರೆ. ಇವರನ್ನು ವಿ ಫಾರ್ ವಿಕ್ಟರಿ ಎಂದೇ ಕರೆಯಬಹುದು. ವಿ ಎಂಬುದು ಇಂಗ್ಲಿಷ್ ಹಾಗೂ ಕನ್ನಡದ ಅಕ್ಷರಮಾಲೆಯಲ್ಲಿ ಕೊಟ್ಟ ಕೊನೆಯ ಅಕ್ಷರಗಳಲ್ಲಿ ಬರುತ್ತದಾದರೂ, ಅದು ವಿಜಯವನ್ನು ಗಳಿಸುವುದರಲ್ಲಿ ಸದಾ ಮುಂದು ಎಂಬುದನ್ನು ನೆನಪಿಡಿ. ಕ್ಲಾಸಿನಲ್ಲಿ ಇವರ ಹೆಸರು ಟೀಚರ್ ಕರೆಯುವ ಅಟೆಂಡೆನ್ಸ್ ಲಿಸ್ಟಿನಲ್ಲಿ ಕೊನೆಯಲ್ಲೇ ಇರಬಹುದು. ಆದರೆ ಅದರಿಂದ ಬೇಜಾರಾಗಬೇಕಿಲ್ಲ. ಜೀವನ ಎಂಬ ಕ್ಲಾಸಿನಲ್ಲಿ ಇವರು ಯಾವತ್ತೂ ಹಿಂದೆ ಉಳಿಯುವುದಿಲ್ಲ, ಬದಲಾಗಿ ಮುಂದೆಯೇ ಇರುತ್ತಾರೆ.
ಕೌಟುಂಬಿಕ ವಿಚಾರದಲ್ಲಿ ಇವರು ಒಳ್ಳೆಯ ಮಗ, ಒಳ್ಳೆಯ ಮಗಳು, ಒಳ್ಳೆಯ ಅಪ್ಪ- ಅಮ್ಮ, ಒಳ್ಳೆಯ ಅಜ್ಜ- ಅಜ್ಜಿ ಆಗುವುದರಲ್ಲಿ ಸಂಶಯವಿಲ್ಲ. ಒಳ್ಳೆಯ ಟ್ರಬಲ್ ಶೂಟರ್ ಆಗಿರುವ ಇವರು ಫ್ಯಾಮಿಲಿಯಲ್ಲಿ ಯಾವುದೇ ಮನಸ್ತಾಪ ತಲೆದೋರಿದರೆ ಅದನ್ನು ತಕ್ಷಣದಲ್ಲೇ ಬಗೆಹರಿಸುವ ಕೌಶಲ್ಯ ಹೊಂದಿರುತ್ತಾರೆ. ತಂದೆ ಅಥವಾ ತಾಯಿ ಪ್ರಸಿದ್ಧರಾಗಿದ್ದರೆ, ಇವರು ಅವರನ್ನೂ ಮೀರಿಸುವ ಜನಪ್ರಿಯತೆ ಹೊಂದುತ್ತಾರೆ. ಕೆಲವೊಮ್ಮೆ ಹೆತ್ತವರ ಜೊತೆ ಸಂಘರ್ಷ ಸಾಧಿಸಬಹುದು. ಆದರೆ ಒಟ್ಟಾರೆ ಫ್ಯಾಮಿಲಿಯ ಒಳಿತಿನ ದೃಷ್ಟಿಯಿಂದ ನೋಡಿದರೆ ಇವರು ಮಾಡುವ ಕೆಲಸಗಳು ಸದಾ ಒಳಿತಿನ ಕಡೆಗಾಗಿಯೇ ಇರುತ್ತವೆ.
ಯಾವ ರಾಶಿಯವರಿಗೆ ಹಣ ಉಳಿಸೋ ಯಾವ ಪ್ಲಾನ್ ಸೂಕ್ತ? ...
ಇವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಿಗುಟು. ಕೈ ಬಿಚ್ಚಿ ಖರ್ಚು ಮಾಡುವ ಸ್ವಭಾವದವರಲ್ಲ. ಆದರೆ ಉಳಿತಾಯದ ವಿಷಯದಲ್ಲಿ ಇವರನ್ನು ಮೀರಿಸುವವರು ಇಲ್ಲ. ತಾವು ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮುಂದಿನ ಭವಿಷ್ಯದಲ್ಲಿ ತನ್ನ ಫ್ಯಾಮಿಲಿಯವರ್ಯಾರೂ ಹೊಟ್ಟೆಗಿಲ್ಲದೆ ಬಳಲಬಾರದು ಎಂಬ ಉದಾತ್ತ ದೃಷ್ಟಿಯಿಂದ ಸೇವ್ ಮಾಡುತ್ತಾರೆ. ಕೆಲವೊಮ್ಮೆ ಇವರ ಸೇವಿಂಗ್ಸ್ ಇವರ ಬಳಕೆಗೆ ಸಿಗದೇ ಹೋಗಬಹುದು, ಇನ್ಯಾರಿಗೋ ಸಿಗಬಹುದು. ಆದರೂ ತಮ್ಮ ಈ ಸಿದ್ಧಾಂತದಿಂದ ಇವರು ವಿಚಲಿತ ಆಗುವುದಿಲ್ಲ. ಇದರಿಂದ ಜಿಪುಣ ಅಥವಾ ಜಿಪುಣೆ ಎಂಬ ಬಿರುದು ಇವರಿಗೆ ಅಂಟಿಕೊಳ್ಳಬಹುದು. ಆದರೂ ಅದಕ್ಕೆ ಇವರು ಅಂಜಿಕೊಳ್ಳುವುದಿಲ್ಲ.
ಕಚೇರಿಯಲ್ಲಿ ಇವರು ಪರಮ ನಿಷ್ಠಾವಂತರು. ತಮ್ಮ ಬಾಸ್‌ನ ಸೂತ್ರಗಳನ್ನಾಗಲೀ ನಿರ್ದೇಶನಗಳನ್ನಾಗಲೀ ಕಡೆಗಣಿಸುವವರಲ್ಲ. ಇವರನ್ನು ಬಾಸ್ ಆಗಿ ಹೊಂದಿದ ಕಚೇರಿಯವರು ಪುಣ್ಯವಂತರೇ ಸರಿ. ಯಾಕೆಂದರೆ, ಇವರು ಎಲ್ಲರನ್ನೂ ಚೆನ್ನಾಗಿ ಕೆಲಸ ತೆಗೆಸುತ್ತಾರೆ. ಆದರೆ ಎಂಡ್ ಆಫ್ ದಿ ಡೇ, ಆ ಕೆಲಸದ ಕ್ರೆಡಿಟ್ ಅದನ್ನು ಮಾಡಿದವರಿಗೇ ಸಿಗುವಂತೆ ಮಾಡುತ್ತಾರೆ. ಒಳ್ಳೆಯ ಟೀಮ್ ವರ್ಕರ್ ಹಾಗೂ ಮುನ್ನಡೆಸುವ ಟೀಮ್ ಲೀಡರ್ ಕೂಡ. ಇವರು ಕೈಗೆತ್ತಿಕೊಂಡ ಪ್ರಾಜೆಕ್ಟ್‌ಗಳ್ಯಾವುದೂ ಅರ್ಧದಲ್ಲೇ ನಿಲ್ಲುವ ಉದಾಹರಣೆಯೇ ಇಲ್ಲ. ಎಲ್ಲವನ್ನೂ ತುದಿ ಮುಟ್ಟಿಸಿಯೇ ವಿರಮಿಸುವ ಸ್ವಭಾವ ಇವರದು.
ಮೇ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತೆ ನಿಮಗೆ ಗೊತ್ತೆ? ...
ಕೆಲವೊಮ್ಮೆ ಇವರು ತೆಗೆದುಕೊಳ್ಳುವ ನಿರ್ಧಾರಗಳು ದುಬಾರಿ ಎನಿಸಬಹುದು. ಉದಾಹರಣೆಗೆ, ರಿಸ್ಕ್ ಇರುವ ಹೂಡಿಕೆಗಳನ್ನು ಮಾಡಬಹುದು. ಅದರಿಂದ ನಷ್ಟ ಹೊಂದಬಹುದು. ಆದರೆ ಅದರಿಂದಲೂ ಇವರು ಸರಿಯಾದ ಪಾಠ ಕಲಿತು, ಇತರರಿಗೂ ಕಲಿಸುತ್ತಾರೆ.
ಆರೋಗ್ಯದ ವಿಚಾರದಲ್ಲಿ ಇವರು ಸ್ವಲ್ಪ ಸೂಕ್ಷ್ಮ. ಇವರ ದೇಹದ ಸ್ವಭಾವ ಕಫ- ಶೀತಕ್ಕೆ ಸಂಬಂಧಿಸಿದ ರೋಗಗಳನ್ನು ಆಹ್ವಾನಿಸುವಂತೆ ಇರುತ್ತದೆ. ಆದ್ದರಿಂದ ತಂಪು ಆಹಾರಗಳನ್ನು ಪಾನೀಯಗಳನ್ನು ಸೇವಿಸುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ಹೊರಗೆ ಹೋದಾಗ ಹೆಚ್ಚಾಗಿ ಬಿಸಿನೀರು ಸೇವಿಸಬೇಕು.
ಇವರ ಡ್ರೆಸ್ ಸೆನ್ಸ್ ಅದ್ಭುತವಾಗಿರುತ್ತದೆ. ಆದ್ದರಿಂದ ಇವರನ್ನು ನೋಡುವುದೇ ಸೊಗಸು. ಇವರು ಸಹಜ ಸೌಂದರ್ಯ ಹೊಂದಿದ್ದವರಾಗಿದ್ದರೆ ಅವರಿಗೆ ಅವರ ಡ್ರೆಸ್ಸಿಂಗ್ ಸೆನ್ಸ್ ಇನ್ನಷ್ಟು ಮೆರುಗು ಕೊಡುತ್ತದೆ. ವಿರುದ್ಧ ಲಿಂಗಿಗಳನ್ನು ಬಹು ಬೇಗನೆ ಆಕರ್ಷಿಸುತ್ತಾರೆ. ಇನ್ನೊಬ್ಬರನ್ನು ಮೋಡಿ ಮಾಡುವ ಮಾತಿನ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಆದ್ದರಿಂದ ಇವರಿಗೆ ಮಾರ್ಕೆಟಿಂಗ್ ಮೊದಲಾದ ಕೆಲಸಗಳು ಹೆಚ್ಚಾಗಿ ಒಲಿಯಬಲ್ಲವು. ಹಾಗೇ ಇವರು ಕಲಾವಿದರಾಗುವ ಅರ್ಹತೆ ಕೂಡ ಹೊಂದಿರುತ್ತಾರೆ.
ಯಾವ ದೇವರಿಗೆ ಯಾವ ಹೂವಿನ ಅರ್ಚನೆ ಅಚ್ಚುಮೆಚ್ಚು? ಅರ್ಚಿಸಿದರೆ ಹೆಚ್ಚು ಪ್ರಿಯ? ...