Asianet Suvarna News Asianet Suvarna News

ನಿರ್ಜಲ ಏಕಾದಶಿ ವ್ರತ 2022: ಈ ವ್ರತ ಮಾಡಿದರೆ ತುಂಬುವುದು ಪುಣ್ಯದ ಖಾತೆ

ಜೂನ್ 10ರಂದು ನಿರ್ಜಲ ಏಕಾದಶಿ ವ್ರತವನ್ನು ವಿಷ್ಣು ಭಕ್ತರು ಕೈಗೊಳ್ಳುತ್ತಾರೆ. ಈ ಏಕಾದಶಿ ವ್ರತವು ಇತರ 23 ಏಕಾದಶಿಗಳಿಗಿಂತ ಭಿನ್ನವೂ, ಕಠಿಣವೂ ಆಗಿದ್ದು, ಇದರ ಆಚರಣೆ ಹೇಗೆ ತಿಳಿಯಿರಿ. 
 

Nirjala Ekadashi Vrat 2022 date and other details skr
Author
Bangalore, First Published Jun 8, 2022, 11:24 AM IST

ಭಕ್ತರು ಏಕಾದಶಿ ತಿಥಿಯಂದು (ಹನ್ನೊಂದನೇ ದಿನ) ವಿಷ್ಣು(Lord Vishnu)ವಿನ ಸ್ಮರಣೆಯಲ್ಲಿ ತೊಡಗಿ ವ್ರತವನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಸದಲ್ಲಿ ಎರಡು ಬಾರಿ ಏಕಾದಶಿ ವ್ರತ ಬರುತ್ತದೆ. ಕುತೂಹಲಕರ ವಿಷಯವೆಂದರೆ, ಪ್ರತಿ ಏಕಾದಶಿ ವ್ರತವು ನಿರ್ದಿಷ್ಟ ಹೆಸರನ್ನು ಹೊಂದಿದೆ ಮತ್ತು ತನ್ನದೇ ಆದ ರೀತಿಯಲ್ಲಿ ಮಹತ್ವದ್ದಾಗಿದೆ. 

ಉದಾಹರಣೆಗೆ, ಇದೀಗ ಬರುತ್ತಿರುವ, ಜ್ಯೇಷ್ಠ ಶುಕ್ಲ ಪಕ್ಷದ ಏಕಾದಶಿಯು ನಿರ್ಜಲ ಏಕಾದಶಿ ವ್ರತವಾಗಿದೆ. ನಿರ್ಜಲ ಏಕಾದಶಿ ವ್ರತ 2022 ದಿನಾಂಕ, ತಿಥಿ ಸಮಯಗಳು ಮತ್ತು ಮಹತ್ವವನ್ನು ತಿಳಿಯಲು ಮುಂದೆ ಓದಿ.

ನಿರ್ಜಲ ಏಕಾದಶಿ 2022 ದಿನಾಂಕ(Nirjala Ekadashi 2022 date)
ಈ ವರ್ಷ, ನಿರ್ಜಲ ಏಕಾದಶಿ ವ್ರತವನ್ನು ಜೂನ್ 10 ಮತ್ತು 11ರಂದು ಆಚರಿಸಲಾಗುತ್ತದೆ.

ನಿರ್ಜಲ ಏಕಾದಶಿ 2022 ತಿಥಿ ಸಮಯ(Nirjala Ekadashi 2022 Tithi timings)
ಏಕಾದಶಿ ತಿಥಿಯು ಜೂನ್ 10ರಂದು ಬೆಳಿಗ್ಗೆ 7:25ರಿಂದ ಜೂನ್ 11ರ ಬೆಳಿಗ್ಗೆ 5:45ರವರೆಗೆ ಜಾರಿಯಲ್ಲಿರುತ್ತದೆ.

ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಯಾವತ್ತೂ ಇಡಲೇಬೇಡಿ

ನಿರ್ಜಲ ಏಕಾದಶಿ ವ್ರತದ ಮಹತ್ವ(Nirjala Ekadashi Vrat Significance)
ಹೆಸರಿನಿಂದಲೇ ಸ್ಪಷ್ಟವಾಗುವಂತೆ, ನಿರ್ಜಲ ಏಕಾದಶಿ ವ್ರತವು ಅಕ್ಷರಶಃ ನೀರನ್ನು ಸಹ ಸೇವಿಸದೆ ಕೈಗೊಳ್ಳುವ ಉಪವಾಸವನ್ನು ಸೂಚಿಸುತ್ತದೆ. ಆದ್ದರಿಂದ, ಭಗವಾನ್ ವಿಷ್ಣುವಿನ ಭಕ್ತರು ಈ ದಿನವಿಡೀ ಉಪವಾಸವನ್ನು ಆಚರಿಸುತ್ತಾರೆ ಮತ್ತು ಈ ಏಕಾದಶಿ ತಿಥಿಯಂದು ನೀರನ್ನು ಸಹ ಕುಡಿಯುವುದಿಲ್ಲ. ನಿರ್ಜಲ ಏಕಾದಶಿ ವ್ರತ ಆಚರಿಸುವ ವ್ಯಕ್ತಿಯು ರಾತ್ರಿಯಿಡೀ ಜಾಗರಣೆ ಮಾಡಿ, ಈ ಸಂದರ್ಭದಲ್ಲಿ ನಡೆಸಲಾಗುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
ಕುತೂಹಲಕಾರಿಯಾಗಿ, ನಿರ್ಜಲ ಏಕಾದಶಿಯನ್ನು ಭೀಮಸೇನ ಏಕಾದಶಿ(Bhimsen Ekadashi) ಅಥವಾ ಪಾಂಡವ ಏಕಾದಶಿ ಎಂದೂ ಕರೆಯಲಾಗುತ್ತದೆ. ಮತ್ತು ಇದಕ್ಕೆ ಎರಡನೇ ಪಾಂಡವ ಸಹೋದರ ಭೀಮನ ಹೆಸರನ್ನು ಇಡಲಾಗಿದೆ. ಬ್ರಹ್ಮ ವೈವರ್ತ ಪುರಾಣದ ಪ್ರಕಾರ, ಭೀಮನು ನಿರ್ಜಲ ಏಕಾದಶಿ ವ್ರತವನ್ನು ಮಾತ್ರ ಆಚರಿಸಬಲ್ಲನು. ಏಕೆಂದರೆ ಅವನು ತನ್ನ ಹಸಿವಿನ ಮೇಲೆ ಸ್ವಲ್ಪವೂ ನಿಯಂತ್ರಣ ಹೊಂದಿರಲಿಲ್ಲ. ಹೀಗಾಗಿ, ನೀರನ್ನು ಬಿಡುವುದು ಮಾತ್ರ ಆತನಿಂದ ಸಾಧ್ಯವಾಗುತ್ತಿದ್ದುದು. ಆದಾಗ್ಯೂ, ಅವನ ಸಹೋದರರು ಎಲ್ಲಾ ಏಕಾದಶಿ ತಿಥಿಗಳಲ್ಲಿ ಉಪವಾಸ ಮಾಡುತ್ತಿದ್ದರು. 

ವಾದಿರಾಜರ ಪಾದುಕೆಗೆ 500 ವರ್ಷ, ಯತಿಗಳು ಪಾದುಕೆ ಧರಿಸುವುದು ಯಾಕೆ ಗೊತ್ತಾ?

ಇತರ ಏಕಾದಶಿ ದಿನಗಳಲ್ಲಿ ಉಪವಾಸ ಮಾಡಲಾಗದವರು ನಿರ್ಜಲ ಏಕಾದಶಿ ವ್ರತವನ್ನು ಆಚರಿಸಬಹುದು ಎಂದು ನಂಬಲಾಗಿದೆ. ಮತ್ತು ಈ ವ್ರತವನ್ನು ಮಾತ್ರ ಪಾಲಿಸುವುದರಿಂದಲೂ ಉಳಿದ 23 ಏಕಾದಶಿ ದಿನಗಳಲ್ಲಿ ಉಪವಾಸದ ಪುಣ್ಯವನ್ನು ಪಡೆಯಬಹುದು ಎಂಬ ನಂಬಿಕೆ ಇದೆ. 

ಇದಲ್ಲದೆ, ಜನನ, ಜೀವನ ಮತ್ತು ಮರಣದ ಚಕ್ರದಿಂದ ಮೋಕ್ಷವನ್ನು (Salvation) ಪಡೆಯಲು ಭಕ್ತರು ಏಕಾದಶಿ ವ್ರತವನ್ನು ಆಚರಿಸುತ್ತಾರೆ. ಆದ್ದರಿಂದ, ಅವರು ಭೂಮಿಯ ಮೇಲಿನ ಪ್ರಯಾಣ ಮುಗಿದ ನಂತರ ವೈಕುಂಠದಲ್ಲಿ ಆಶ್ರಯ ನೀಡೆಂದು ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ. ಆದ್ದರಿಂದ, ಸಂಕ್ಷಿಪ್ತವಾಗಿ ಹೇಳುವುದಾದರೆ, ಏಕಾದಶಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದಿನವಾಗಿದೆ.
ಈ ವ್ರತವನ್ನು ಆಚರಿಸುವ ಮೂಲಕ, ಭಕ್ತನು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ಪುಣ್ಯವನ್ನು ಪಡೆಯಬಹುದು. ಇದಲ್ಲದೆ, ಒಬ್ಬ ವ್ಯಕ್ತಿಯು ಈ ವ್ರತವನ್ನು ಆಚರಿಸುವ ಮೂಲಕ ತಮ್ಮ ತಪ್ಪು ಅಥವಾ ಪಾಪಗಳ ಭಾರವನ್ನು ತೊಡೆದುಹಾಕಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios