ಬುಧನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಶುಭ ಯೋಗ, ನಿಮ್ಮ ರಾಶಿ ಇದೆಯಾ..?
ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಹಲವಾರು ರೀತಿಯ ಪ್ರಭಾವಗಳನ್ನು ಬೀರುತ್ತವೆ. ಕೆಲವು ಶುಭವಾದರೆ, ಇನ್ನು ಕೆಲವು ಅಶುಭವಾಗಿರುತ್ತದೆ. ಬುಧ ಗ್ರಹವು 2021ರ ಮೇ 26ರಂದು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಅನೇಕ ರಾಶಿಯವರಿಗೆ ಶುಭ ಫಲವುಂಟಾಗಲಿದೆ. ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂಬುದರ ಬಗ್ಗೆ ನೋಡೋಣ ಬನ್ನಿ…
ಬುಧಗ್ರಹದ ಚಲನೆ ಬೇರೆ ಗ್ರಹಗಳಿಗಿಂತ ಹೆಚ್ಚಿನ ವೇಗ ಹೊಂದಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬೇರೆ ಗ್ರಹಗಳು ವರ್ಷದಲ್ಲಿ ಒಂದು ಬಾರಿ ವಕ್ರವಾಗಿದ್ದರೆ, ಇದು ಮಾತ್ರ ತನ್ನ ವೇಗದ ಕಾರಣದಿಂದಾಗಿ ವಕ್ರದ ಅವಸ್ಥೆಯಲ್ಲಿಯೇ ಇರುತ್ತದೆ. ಅಲ್ಲದೆ, ಬುಧಗ್ರಹವನ್ನು ನವಗ್ರಹ ಮಂಡಲದ ರಾಜಕುಮಾರನೆಂದು ಕರೆಯಲಾಗುತ್ತದೆ. ಅಂದರೆ, ಬುದ್ಧಿ ಮತ್ತು ವಾಣಿಯ ಕಾರಕ ಗ್ರಹವಾಗಿದ್ದು, ವಾಕ್ಚಾತುರ್ಯಕ್ಕೆ ಪ್ರಖ್ಯಾತಿಯನ್ನು ಪಡೆದಿದೆ.
ಜಾತಕದಲ್ಲಿ ಬುಧಗ್ರಹವು ನೀಚ ಸ್ಥಾನದಲ್ಲಿದ್ದರೆ ವ್ಯಕ್ತಿಯ ಸ್ವಭಾವದ ಮೇಲೆಯೂ ಪರಿಣಾಮವನ್ನು ಬೀರುತ್ತದೆ. ಅಂಥವರು ಸಂಕೋಚದ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲರ ಎದುರಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇಂಥವರು ಹಿಂಜರಿಯುತ್ತಾರೆ. ಇಂತಹ ಸ್ವಭಾವ ಇವರದ್ದಾಗಿರಲಿದೆ. ಬುಧಗ್ರಹದ ಸ್ಥಿತಿ ಸರಿಯಿಲ್ಲ ಎಂದಾದರೆ ಮಾತಿನ ಮೇಲೆ ಹಿಡಿತವಿರುವುದಿಲ್ಲ. ಇದರಿಂದಾಗಿ ಒಮ್ಮೊಮ್ಮೆ ಕಟುವಾಗಿ ಮಾತನಾಡಿ ಆಗುವ ಕೆಲಸವನ್ನು ಹಾಳು ಮಾಡಿಕೊಳ್ಳುವಂತಾಗುತ್ತದೆ. ಅಂದರೆ ತಮ್ಮ ಕಾಲ ಮೇಲೆ ತಾವೇ ಕಲ್ಲುಚಪ್ಪಡಿಯನ್ನು ಹಾಕಿಕೊಂಡಂತಾಗುತ್ತದೆ.
ಇದನ್ನು ಓದಿ: ವೃಷಭ ರಾಶಿಯಲ್ಲಿ ರಾಹು ಗ್ರಹ, ಈ 5 ರಾಶಿಯವರಿಗೆ ಹಾನಿ ಭಯ..!
2021ರ ಮೇ 26ರಂದು ಬುಧ ಗ್ರಹವು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. 2021ರ ಮೇ 30ರಂದು ಬುಧನು ವಕ್ರ ಸ್ಥಿತಿಯನ್ನು ತಲುಪುತ್ತಾನೆ. ಬುಧ ಮಿಥುನ ರಾಶಿಗೆ ಪ್ರವೇಶ ಮಾಡುವುದರಿಂದ ಹಲವು ರಾಶಿಯವರಿಗೆ ಇದರ ಲಾಭ ಭರಪೂರವಾಗಿ ಆಗಿರಲಿದ್ದು, ಯಾವ ಯಾವ ರಾಶಿಗಳು, ಏನು ಲಾಭ ಎಂಬುದನ್ನು ನೋಡೋಣ…
ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದವರಿಗೆ ಈ ಸಮಯ ವರದಾನ ಎಂದೇ ಹೇಳಲಾಗುತ್ತದೆ. ಪರಿವಾರದ ಸದಸ್ಯರೊಂದಿಗೆ ಸಮಯ ಕಳೆಯುವ ಸುಸಂದರ್ಭ ಒದಗಿಬರುವುದು. ಕೆಲಸದಲ್ಲಿ ಸಫಲತೆ ಸಿಗಲಿದ್ದು, ಗೌರವಾದರಗಳು ಮತ್ತು ಪ್ರತಿಷ್ಠೆ ಸಹ ಹೆಚ್ಚಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ವ್ಯಕ್ತಿಗಳಿಗೆ ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶ ಮಾಡುವುದರಿಂದ ಶುಭ ಫಲವನ್ನು ಪಡೆಯುವ ಯೋಗವಿದೆ ಎಂದು ಹೇಳಲಾಗುತ್ತದೆ. ಧನಲಾಭವಾಗುವ ಯೋಗವಿದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪರಿವಾರದಲ್ಲಿ ಬಾಂಧವ್ಯ ವೃದ್ಧಿಯಾಗಲಿದೆ. ಸಂಗಾತಿಯೊಂದಿಗೆ ಸಮಯವನ್ನು ಕಳೆಯುತ್ತೀರಿ.
ಇದನ್ನು ಓದಿ: ದಿಕ್ಕುಗಳ ವಿಶೇಷತೆಯೊಂದಿಗೆ ದಿಕ್ಪಾಲಕರ ಮಹತ್ವ..
ಮಿಥುನ ರಾಶಿ
ಈ ರಾಶಿಯವರಿಗೆ ಶುಭ ಪರಿಣಾಮವಾಗಲಿದೆ. ಹೀಗಾಗಿ ಕೆಲಸ, ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ಈ ರಾಶಿಯವರು ತೆಗೆದುಕೊಂಡ ನಿರ್ಧಾರಕ್ಕೆ ಬಹಳ ಒಳ್ಳೆಯದಾಗುವುದಲ್ಲದೆ, ಸಾರ್ವತ್ರಿಕವಾಗಿ ಮೆಚ್ಚುಗೆಯನ್ನೂ ಪಡೆಯುತ್ತದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿಯ ಅನುಭವವನ್ನು ಪಡೆಯುತ್ತೀರಿ. ಈ ಸಮಯ ನಿಮಗೆ ವರದಾನವಾಗಿದೆ.
ಸಿಂಹ ರಾಶಿ
ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶ ಮಾಡುವುದರಿಂದ ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಆರ್ಥಿಕವಾಗಿ ಚೇತರಿಕೆ ಕಾಣುವುದಲ್ಲದೆ, ಧನ ಲಾಭವೂ ಆಗಲಿದೆ. ಇದಲ್ಲದೆ, ಕುಟುಂಬ ಸದಸ್ಯರ ಜೊತೆ ಹೆಚ್ಚಿನ ಸಮಯವನ್ನು ನೀವು ಕಳೆಯುತ್ತೀರಿ. ಇನ್ನು ನೀವು ಕೈ ಹಾಕುವ ಕೆಲಸ-ಕಾರ್ಯಗಳಿಗೆ ಹೆಚ್ಚಿನ ಸಫಲತೆಯನ್ನು ನೀವು ಪಡೆಯುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇದು ಒಳ್ಳೆಯ ಸಮಯವಾಗಿದ್ದು, ಕೆಲಸದಲ್ಲಿ ಜಯ ಲಭಿಸಲಿದ್ದು, ಅಂದುಕೊಂಡಿದ್ದನ್ನು ಸಾಧಿಸಬಹುದಾಗಿದೆ. ಇನ್ನು ವ್ಯಾಪಾರದಲ್ಲಿ ಲಾಭವೂ ಲಭಿಸಲಿದೆ. ಗೌರವಾದರಗಳು ಸಹ ಈ ಸಂದರ್ಭದಲ್ಲಿ ನಿಮ್ಮನ್ನು ಅರಸಿ ಬರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೂ ಸಹ ಇದು ಅದೃಷ್ಟದ ಸಮಯ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸದಾವಕಾಶ ಈ ರಾಶಿಯವರಿಗೆ ಲಭಿಸಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ನಿಮ್ಮ ಖ್ಯಾತಿ ಹೆಚ್ಚಲಿದೆ. ಇದರಿಂದ ಗೌರವಗಳು ನಿಮ್ಮದಾಗಲಿವೆ.
ಇದನ್ನು ಓದಿ: ನಕಾರಾತ್ಮಕ ಶಕ್ತಿಯನ್ನು ಮೊದಲೇ ಗ್ರಹಿಸೋ ರಾಶಿಗಳಿವು, ನಿಮಗಿದ್ಯಾ ಈ ಪವರ್?
ಧನು ರಾಶಿ
ಮಿಥುನ ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುವುದರಿಂದ ಧನು ರಾಶಿಯಲ್ಲಿ ಜನಿಸಿದವರಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಖುಷಿ ಹೆಚ್ಚಾಗಲಿದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುತ್ತೀರಿ. ಅಲ್ಲದೆ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಸಿಗಲಿದೆ.
ಮೀನ ರಾಶಿ
ಈ ರಾಶಿಯವರಿಗೆ ಬುಧ ಗ್ರಹದ ರಾಶಿ ಪರಿವರ್ತನೆಯು ಶುಭ ಫಲವನ್ನು ತಂದುಕೊಡಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಉತ್ತಮವಾಗಿರುತ್ತದೆ.