Asianet Suvarna News Asianet Suvarna News

Mahavir Jayanti 2023: ಮಹಾವೀರರು ಹೇಳಿದ ಯಶಸ್ವಿ ಜೀವನದ ಪಂಚಶೀಲ ತತ್ವಗಳು

ಈ ವರ್ಷ ಏಪ್ರಿಲ್ 4ರಂದು ಜೈನ ತೀರ್ಥಂಕರ ಮಹಾವೀರ ಜಯಂತಿ. ಮಹಾವೀರರ ಈ 5 ತತ್ವಗಳಲ್ಲಿ ಯಶಸ್ಸಿನ ಗುಟ್ಟು ಅಡಗಿದೆ. ಅವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸುಂದರ ಸಮಾಜದ ನಿರ್ಮಾಣವೂ ಸಾಧ್ಯವಾಗುತ್ತದೆ. 

Mahavir Jayanti 2023 The secret of success by Mahavir skr
Author
First Published Apr 3, 2023, 11:58 AM IST | Last Updated Apr 3, 2023, 11:58 AM IST

ಮಹಾವೀರ ಜಯಂತಿಯು ಪ್ರಪಂಚದಾದ್ಯಂತ ಮತ್ತು ಮುಖ್ಯವಾಗಿ ಭಾರತದಲ್ಲಿ ಜೈನರಿಗೆ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಈ ದಿನವು ಜೈನ ನಂಬಿಕೆಯಂತೆ 24ನೇ ಮತ್ತು ಕೊನೆಯ ತೀರ್ಥಂಕರ ಮತ್ತು ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಶಾಲ ಅವರ ಪುತ್ರ ಭಗವಾನ್ ಮಹಾವೀರರ ಜನ್ಮ ದಿನವನ್ನು ಸೂಚಿಸುತ್ತದೆ.

ಮಹಾವೀರ ಜಯಂತಿಯನ್ನು 4 ಏಪ್ರಿಲ್ 2023ರಂದು ಆಚರಿಸಲಾಗುತ್ತಿದೆ. ಭಗವಾನ್ ಮಹಾವೀರನ 5 ಅಮೂಲ್ಯ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಅತ್ಯುತ್ತಮ ಗೌರವ ಸಲ್ಲಿಸಬಹುದು. ಈ ತತ್ವಗಳಲ್ಲಿ ಯಶಸ್ಸಿನ ಸೂತ್ರವಡಗಿದೆ. ಅಷ್ಟೇ ಅಲ್ಲ, ಉತ್ತಮ ಸಮಾಜ ನಿರ್ಮಾಣಕ್ಕೆ ಈ ಸೂತ್ರಗಳು ಸರಳವಾಗಿ, ಅತ್ಯುತ್ತಮವಾಗಿವೆ. 

ಮಹಾವೀರರ 5 ತತ್ವಗಳು(Panchsheel Agreement)
ಭಗವಾನ್ ಮಹಾವೀರ ಜೈನ ಧರ್ಮದ 24 ನೇ ತೀರ್ಥಂಕರ. ಅವರು ಮಾನವ ಕಲ್ಯಾಣ ಮತ್ತು ಜೀವನದ ಯಶಸ್ಸಿಗೆ ಐದು ತತ್ವಗಳನ್ನು ಹೇಳಿದ್ದಾರೆ. ಇವುಗಳನ್ನು ಪಂಚಶೀಲ ತತ್ವಗಳು ಎಂದು ಕರೆಯಲಾಗುತ್ತದೆ. ಈ 5 ತತ್ವಗಳನ್ನು ಅಳವಡಿಸಿಕೊಂಡವನು ಪ್ರತಿ ಹಂತದಲ್ಲೂ ಯಶಸ್ಸನ್ನು ಪಡೆಯುತ್ತಾನೆ ಮತ್ತು ಅಂತಿಮವಾಗಿ ಮೋಕ್ಷವನ್ನು ಪಡೆಯುತ್ತಾನೆ ಎಂದು ಮಹಾವೀರ ನಂಬಿದ್ದರು.

ಸತ್ಯ(Truth)
ಭಗವಾನ್ ಮಹಾವೀರರ ಈ ತತ್ವವು ಸರಿಯಾದ ಮಾರ್ಗದಲ್ಲಿ ತಿಳಿದುಕೊಳ್ಳಲು ನಮಗೆ ಕಲಿಸುತ್ತದೆ. ಸತ್ಯದ ಬುನಾದಿ ಹಾಕಿದ ಹಾದಿಯಲ್ಲಿ ಕೆಲವು ಅಡೆತಡೆಗಳು ಖಂಡಿತಾ ಬರುತ್ತವೆ, ಆದರೆ ಸತ್ಯದ ಕೈ ಹಿಡಿದರೆ ಕಲ್ಲುಬಂಡೆಯ ಹಾದಿಯನ್ನೂ ದಾಟಬಲ್ಲೆವು. ಕೊನೆಗೆ ಗೆಲುವು ನಮ್ಮದೇ ಆಗಿರುತ್ತದೆ. 

ಶಿವೋ ಹಂ ಹಾಡಿಗೆ ದೇವಲೋಕವನ್ನೇ ಸೃಷ್ಟಿಸಿದ ವಿಪಿ, ಶಂಕರ್ ಮಹಾದೇವನ್ ಜುಗಲ್ಬಂದಿ

ಅಹಿಂಸೆ(Non-Violence)
ಜೈನ ಧರ್ಮದಲ್ಲಿ ಅಹಿಂಸೆಯು ಮೂಲಭೂತ ತತ್ವವಾಗಿದೆ, ಮಹಾವೀರರ ಪ್ರಕಾರ 'ಅಹಿಂಸೆಯೇ ಪರಮ ಧರ್ಮ'. ಈ ಪ್ರಪಂಚದಲ್ಲಿರುವ ಯಾವುದೇ ಮನುಷ್ಯರು ಮತ್ತು ಜೀವಿಗಳಿಗೆ ಹಿಂಸೆ ಮಾಡಬೇಡಿ ಎಂದು ಅವರು ಹೇಳುತ್ತಾರೆ. ಅವರನ್ನು ದೈಹಿಕವಾಗಿ ನೋಯಿಸಬೇಡಿ ಮತ್ತು ಯಾರ ಬಗ್ಗೆಯೂ ಕೆಟ್ಟದಾಗಿ ಯೋಚಿಸಬೇಡಿ. ಅಹಿಂಸೆಯನ್ನು ಅಳವಡಿಸಿಕೊಂಡವರು ಎಲ್ಲೆಡೆ ಯಶಸ್ವಿಯಾಗುತ್ತಾರೆ.

ಅಪರಿಗ್ರಹ(Aparigrah)
ಅಪರಿಗ್ರಹ ಎಂದರೆ ಯಾವುದೇ ವಸ್ತು ಅಥವಾ ಜೀವಿಯೊಂದಿಗೆ ಅತಿಯಾದ ಬಾಂಧವ್ಯ. ಮಹಾವೀರರ ಈ ಸಿದ್ಧಾಂತವು ಜೀವಂತ ಅಥವಾ ನಿರ್ಜೀವ ವಸ್ತುಗಳ ಮೇಲಿನ ಬಾಂಧವ್ಯವು ಮಾನವನ ದುಃಖಕ್ಕೆ ದೊಡ್ಡ ಕಾರಣವಾಗಿದೆ ಎಂದು ಹೇಳುತ್ತದೆ. ಭಗವಾನ್ ಮಹಾವೀರರು ವಸ್ತುಗಳ ಲಭ್ಯತೆ ಅಥವಾ ಲಭ್ಯತೆಯಿಲ್ಲದ ಎರಡೂ ಸಂದರ್ಭಗಳಲ್ಲಿ ಸಮಾನ ಮನೋಭಾವ ಇರಬೇಕು ಎಂದು ಹೇಳುತ್ತಾರೆ. ವಸ್ತುಗಳು ಮತ್ತು ಮನುಷ್ಯರಿಗೆ ಅತಿಯಾದ ಬಾಂಧವ್ಯವು ವ್ಯಕ್ತಿಯನ್ನು ಗುರಿಯಿಂದ ದೂರವಿಡುತ್ತದೆ ಎನ್ನುತ್ತಾರೆ.

ಆಚೌರ್ಯ(Achourya)
ಇದರರ್ಥ ಇತರರ ವಸ್ತುಗಳನ್ನು ಅವರ ಅನುಮತಿಯಿಲ್ಲದೆ ತೆಗೆದುಕೊಳ್ಳುವುದು (ಕದಿಯುವುದು). ಇಲ್ಲಿ ಕಳ್ಳತನದ ಅರ್ಥವು ಕೇವಲ ಭೌತಿಕ ವಸ್ತುಗಳ ಕಳ್ಳತನವಲ್ಲ, ಆದರೆ ಇತರರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಹೊಂದಿರುವುದು ಕೂಡಾ ಆಗಿದೆ. ‘ನಾನು’ ಎಂಬ ಭಾವವನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ‘ನಾವು’ ಎಂಬ ಪ್ರಜ್ಞೆಯುಳ್ಳ ವ್ಯಕ್ತಿ ಎತ್ತರಕ್ಕೆ ತಲುಪುತ್ತಾನೆ ಮತ್ತು ಅಂತಹವರಿಗೆ ದೇವರೂ ಸಹಾಯ ಮಾಡುತ್ತಾನೆ.

Soma Pradosh Vrat katha: ಭಿಕ್ಷುಕನನ್ನು ರಾಜ್ಯವಾಳಿಸಬಲ್ಲ ಮಹಿಮೆಯ ಪ್ರದೋಷ ವ್ರತ

ಬ್ರಹ್ಮಚರ್ಯ(Brahmacharya)
ಮಹಾವೀರರ ಈ ತತ್ವದ ಅರ್ಥ ಅವಿವಾಹಿತರಾಗಿ ಉಳಿಯಬೇಕೆಂದಲ್ಲ, ಒಬ್ಬ ವ್ಯಕ್ತಿಯು ತನ್ನೊಳಗೆ ಅಡಗಿರುವ ಬ್ರಹ್ಮವನ್ನು ಗುರುತಿಸಬೇಕು ಎಂದರ್ಥ. ಇದಕ್ಕಾಗಿ ಸ್ವತಃ ಸಮಯವನ್ನು ನೀಡುವುದು ಅವಶ್ಯಕ. ಬ್ರಹ್ಮಚರ್ಯವು ಅತ್ಯುತ್ತಮ ತಪಸ್ಸು, ನಿಯಮಗಳು, ಜ್ಞಾನ, ತತ್ತ್ವಜ್ಞಾನ, ಚಾರಿತ್ರ್ಯ, ಸ್ವಯಂ ನಿಯಂತ್ರಣ ಮತ್ತು ನಮ್ರತೆಗೆ ಮೂಲವಾಗಿದೆ ಎಂದು ಅವರು ಹೇಳುತ್ತಿದ್ದರು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios