Asianet Suvarna News Asianet Suvarna News

ಲೋಕ ಕಲ್ಯಾಣಾರ್ಥವಾಗಿ ಲಾಸ್ ಏಂಜಲೀಸ್‌ನಲ್ಲಿ ಮಹಾರುದ್ರಯಾಗ

ಅಮೆರಿಕಾದ ಲಾಸ್ ಏಂಜೆಲಿಸ್ ನಗರದಲ್ಲಿರುವ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಶ್ರೀಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾರಥ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಿದ  ಮಹಾರುದ್ರಯಾಗ ಸಂಪನ್ನಗೊಂಡಿದೆ. 

Maharudrayaga in Los Angeles by Sri puttige mutt Sri skr
Author
First Published Nov 5, 2022, 1:11 PM IST

ಶಶಿಧರ್ ಮಾಸ್ತಿಬೈಲು, ಉಡುಪಿ

ಅಮೆರಿಕಾದ ಲಾಸ್ ಏಂಜೆಲಿಸ್ ನಗರದಲ್ಲಿರುವ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಶ್ರೀಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾರಥ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಿದ  ಮಹಾರುದ್ರಯಾಗ ಸಂಪನ್ನಗೊಂಡಿದೆ. 

ನೂರಾರು ಋತ್ವಿಜರ ಸಹಯೋಗದಲ್ಲಿ, ಭಕ್ತವೃಂದದ ಸಮ್ಮುಖದಲ್ಲಿ  ವಿಜೃಂಭಣೆಯಿಂದ ಈ ಮಹಾಯಾಗ ನೆರವೇರಿತು. ಕ್ಷೇತ್ರದ ಪ್ರಧಾನ ಅರ್ಚರಾದ  ಜ್ಞಾನಮೂರ್ತಿ ಭಟ್ ಇವರ ಸಾರಥ್ಯ ಹಾಗೂ ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯರ ಪ್ರಧಾನ ಅಧ್ವರ್ಯುತ್ವ ಮತ್ತು ಮಠದ ಬೇರೆ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹತ್ತಾರು ಅರ್ಚಕರುಗಳ ಸಹಕಾರ ಮತ್ತು  ಭಾಗವಹಿಸುವಿಕೆಯಿಂದ ಯಾಗವು ಯಶಸ್ವಿಯಾಗಿ ಭಕ್ತರ ಮೆಚ್ಚುಗೆಗೆ ಪಾತ್ರವಾಯ್ತು.

ಸಾವಿರಾರು ಭಕ್ತರು ಈ ಯಾಗಕ್ಕೆ ಸಾಕ್ಷಿಯಾಗಿ,ಪ್ರಸಾದ ರೂಪವಾಗಿ ಉಡುಪಿ ಶೈಲಿಯ ಭೋಜನವನ್ನು ಸ್ವೀಕರಿಸಿ ರುದ್ರದೇವರ ಹಾಗೂ ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾದರು. ಅಲ್ಲದೆ ನಗರದ ಸೆನೆಟ್  ಜಾಕಿ ಆರ್ವಿನ್ ಯಾಗದಲ್ಲಿ ಭಾಗವಹಿಸಿ, ಮಠದ ಕಾರ್ಯವೈಖರಿ, ಸಮುದಾಯಕ್ಕೆ ಶ್ರೀಪಾದರ  ಕೊಡುಗೆ ಹಾಗೂ ಅವರ ಸಮಾಜಮುಖಿ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದರು. ಶ್ರೀಪಾದರಿಂದ ಕೋಟಿ ಗೀತಾಲೇಖನ ಯಜ್ಞದ ದೀಕ್ಷೆ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ಅಮೆರಿಕಾದ ಸಿಯಾಟಲ್ ನಗರದ , ವಾಷಿಂಗ್ಟನ್ ರಾಜ್ಯದ  ಸೆನೆಟರ್  ಡೆರೆಕ್ ಸ್ಟ್ಯಾನ್  ಫೋರ್ಡ್ ಅವರು ಪೂಜ್ಯ ಶ್ರೀಪಾದರನ್ನು ಸಿಯಾಟಲ್ ಮಠದಲ್ಲಿ ಭೇಟಿಯಾದರು .ಪೂಜ್ಯ ಶ್ರೀಪಾದರು  ಭಾರತೀಯ ಸನಾತನ ಸಂಸ್ಕೃತಿ ಬಗ್ಗೆ ಸ್ಥೂಲ ಪರಿಚಯ ನೀಡಿ ಭಗವದ್ಗೀತೆಯ ಶಾಂತಿ ಸಂದೇಶವನ್ನು ವಿವರಿಸಿದರು .

ಡೆರೆಕ್ ಅವರು ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ಪುಸ್ತಕವನ್ನು ಸ್ವೀಕರಿಸಿ ಶ್ರೀಗಳ ಕಾರ್ಯವನ್ನು  ಪ್ರಶಂಸಿಸಿದರು .

ಪೂಜ್ಯ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ಸೆನೆಟರ್ ಅವರನ್ನು ಆಹ್ವಾನಿಸಿದರು.

ಚಂದ್ರ ಗ್ರಹಣ: ನ.8ರಂದು ಧರ್ಮಸ್ಥಳ, ಕುಕ್ಕೆಯಲ್ಲಿ ಸಮಯ ಬದಲಾವಣೆ

ಚಂದ್ರ ಗ್ರಹಣ: ನ.8ರಂದು ಧರ್ಮಸ್ಥಳ, ಕುಕ್ಕೆಯಲ್ಲಿ ಸಮಯ ಬದಲಾವಣೆ

ನ.8ರಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ‌ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. 
ಮ.1.30ರಿಂದ ರಾ.7ರವರೆಗೆ ಧರ್ಮಸ್ಥಳದಲ್ಲಿ ‌ದೇವರ ದರ್ಶನ ಬಂದ್ ಆಗಲಿದ್ದು, ಅಂದು ಮಧ್ಯಾಹ್ನದಿಂದ ಸಂಜೆಯವರೆಗೆ ದರ್ಶನ ಮತ್ತು ಸೇವೆಗಳು ಬಂದ್ ಆಗಲಿದೆ. ಮಧ್ಯಾಹ್ನ 1.30ರವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದ್ದು, ಮತ್ತೆ ರಾ.7 ಗಂಟೆಯ ಬಳಿಕವಷ್ಟೇ ಭೋಜನ ವ್ಯವಸ್ಥೆ ಇರಲಿದೆ. ದೂರದ ಊರಿನಿಂದ ಬರುವ ಭಕ್ತರು ಬದಲಾವಣೆ ಗಮನಿಸಲು ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ‌ಮಂಡಳಿ ಪ್ರಕಟಣೆ ತಿಳಿಸಿದೆ. 

ಕುಕ್ಕೆಯಲ್ಲೂ ಸೇವೆಗಳು ಬಂದ್
ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂದ್ರಗ್ರಹಣದ ದಿನವಾದ ನ.8ರಂದು ಯಾವುದೇ ಸೇವೆಗಳು ನೆರವೇರುವುದಿಲ್ಲ‌. ಅಲ್ಲದೆ ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ಆದರೆ ಶ್ರೀದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯಗಳನ್ನು ಮಾಡಲಾಗಿದೆ. ಬೆಳಗ್ಗೆ 9ಗಂಟೆಯಿಂದ 11.30ರ ತನಕ, ಗ್ರಹಣ ಸ್ಪರ್ಶ ಸಮಯವಾದ 2.39ರಿಂದ ಗ್ರಹಣ ಮೋಕ್ಷ ಸಮಯವಾದ 6.19ರ ತನಕ ಹಾಗೂ ರಾತ್ರಿ 7.30ರಿಂದ 9 ರ ತನಕ ಶ್ರೀ ದೇವರ ದರ್ಶನಕ್ಕೆ ಭಕ್ಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios