ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬರು ಕಳೆದ 15 ವರ್ಷಗಳಿಂದ ನಾಪತ್ತೆಯಾಗಿದ್ದರು. ಇದೀಗ ಮಹಾಕುಂಭ ಪದ ಕಿವಿಗೆ ಬಿದ್ದೊಡನೆ ಈ ವ್ಯಕ್ತಿಯ ನೆನಪಿನ ಶಸ್ತಿ ಮರುಕಳಿಸಿದೆ. ಇದರ ಮಹಾಕುಂಭದಿಂದ ಈತ ಕುಟುಂಬ ಜೊತೆ ಸೇರಿದ್ದಾನೆ.
ರಾಂಚಿ(ಫೆ.10) ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಅತೀ ದೊಡ್ಡ ಹಿಂದೂ ಧಾರ್ಮಿಕ ಹಬ್ಬದಲ್ಲಿ ಪ್ರತಿ ದಿನ ಕೋಟಿಗೂ ಅದಿಕ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಮಹಾಕುಂಭ ಆಧ್ಯಾತ್ಮಿಕ ರೀತಿಯಲ್ಲಿ ಬದುಕಿಗೆ ಹೊಸ ಚೈತನ್ಯ ನೀಡುತ್ತಿದೆ. ಇದೇ ಮಹಾಕುಂಭ ಕಳೆದ 15 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಕುಟುಂಬದ ಜೊತೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಬರೋಬ್ಬರಿ 15 ವರ್ಷಗಳ ಹಿಂದೆ ಈತ ನಾಪತ್ತೆಯಾಗಿದ್ದ, ಆದರೆ ಮಹಾಕುಂಭ ಪದ ಕೇಳಿ ಈತನಿಗೆ ನೆನಪಿನ ಶಕ್ತಿ ಮರುಕಳಿಸಿದೆ. ಇದರ ಪರಿಣಾಮ ಕುಟುಂಬದ ಜೊತೆ ಸೇರಿದ್ದಾನೆ.
ಏನಿದು ಘಟನೆ?
ಜಾರ್ಖಂಡ್‌ನ ಕೊಡೆರ್ಮಾದ ಪ್ರಕಾಶ್ ಮೆಹ್ತೋ ಆರೋಗ್ಯ ಕ್ಷೀಣಿಸಿತ್ತು. ಪ್ರಮುಖವಾಗಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಕೋಲ್ಕಾತದ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಮೆಹ್ತೋ ತನ್ನ ಊರಿನಿಂದ ಕೋಲ್ಕತ್ತಾಗೆ ತೆರಳಿದ್ದ. ಆದರೆ ಮಾನಸಿಕವಾಗಿ ಸದೃಢವಾಗಿಲ್ಲದ ಕಾರಣ ಈತ ನೆನಪಿನ ಶಕ್ತಿ ಕಳೆದುಕೊಂಡಿದ್ದಾನೆ. ಈತ ಎಲ್ಲಿ ಇಳಿದಿದ್ದಾನೆ ಅನ್ನೋದು ಗೊತ್ತಿಲ್ಲ. ಪ್ರಕಾಶ್ ಮೆಹ್ತೋ ಪಶ್ಚಿಮ ಬಂಗಾಳದ ರಾಣಿಗಂಜ್ ಬಳಿ ರೈಲು ಇಳಿದಿದ್ದ. ಈತ ಕೋಲ್ಕತಾದಲ್ಲಿ ಇಳಿದು ಕಾರ್ಪೋರೇಶನ್‌ಗೆ ತೆರಳಬೇಕಿತ್ತು.
ಮಹಾಕುಂಭ ಮೇಳದಲ್ಲಿ 7 ಲಕ್ಷಕ್ಕೂ ಅಧಿಕ ಭಕ್ತರಿಗೆ ಚಿಕಿತ್ಸೆ ನೆರವು
ಮೇ 9, 2010ರಲ್ಲಿ ಪ್ರಕಾಶ್ ಮೆಹ್ತೋ ನಾಪತ್ತೆಯಾಗಿದ್ದ. ಕುಟುಂಬಸ್ಥರು ಮಾರ್ಕಾಚೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರುು ಹುಡುಕಾಟ ನಡೆಸಿದ್ದರು. ಆದರೆ ಸುಳಿವು ಪತ್ತೆಯಾಗಲಿಲ್ಲ. ಮೊಬೈಲ್ ಫೋನ್ ಇರಲಿಲ್ಲ. ಇತ್ತ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕಾರಣ ಪ್ರಕಾಶ್ ಮೆಹ್ತೋ ನೆನಪಿನ ಶಕ್ತಿಯೂ ಕಳೆದುಕೊಂಡಿದ್ದ. ಕುಟುಂಬ್ಥರು ಭಾರಿ ಹುಡುಕಾಟ ನಡೆಸಿದ್ದರು. ಕೋಲ್ಕತಾಗೆ ತೆರಳಿ ಗಲ್ಲಿ ಗಲ್ಲಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿಲ್ಲ.
ಪ್ರಕಾಶ್ ಮೆಹ್ತ ಕೋಲ್ಕತಾ ಕಾರ್ಪೋರೇಶನ್‌ಗೆ ತೆರಳುವ ಬದಲು ರಾಣಿಗಂಜ್‌ನ ಹೊಟೆಲ್‌ಗೆ ತೆರಳಿದ್ದಾನೆ. ಹಸಿವಾಗುತಿದ್ದ ಕಾರಣ ಆಹಾರ ಸೇವಿಸಿದ್ದಾನೆ. ಬಳಿಕ ಎತ್ತ ತೆರಳಬೇಕು ಅನ್ನೋದು ಗೊತ್ತಿಲ್ಲ, ಏನು ಕೇಳಿದರೂ ಈತನಿಗೆ ಗೊತ್ತಿಲ್ಲ. ಹೀಗಾಗಿ ಹೊಟೆಲ್ ಮಾಲೀಕ ಸುಮಿತ್ ಸಾಹೋ ಈತನಿಗೆ ಹೊಟೆಲ್‌ನಲ್ಲಿ ಕೆಲಸ ನೀಡಿದ್ದಾರೆ. ಕಳೆದ 15 ವರ್ಷಗಳಿಂದ ಹೊಟೆಲ್‌ನಲ್ಲಿ ಕೆಲಸ ಮಾಡುತ್ತಾ ಕಳೆದಿದ್ದಾನೆ.ಸುಮಿತ್ ಸಾಹೋ ಈತನ ಮನೆ ಕುರಿತು, ವಿಳಾಸ ಕುರಿತು ಕೇಳಿದ್ದಾನೆ. ಆದರೆ ಒಂದೊಂದು ಬಾರಿ ಒಂದು ಹೆಸರು,ವಿಳಾಸ ಹೇಳಿದ್ದಾನೆ. ಈತನ ಮಾನಸಿಕ ಸ್ಥಿತಿಯನ್ನು ಅರಿತ ಸುಮಿತ್ ಸಾಹೋ ವಸತಿ ಹಾಗೂ ಕೆಲಸ ನೀಡಿದ್ದರು. ಇದರ ನಡುವೆ ಹಲವು ಬಾರಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪ್ರಕಾಶ್ ಮೆಹ್ತೋ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಮಹಾಕುಂಭ ಮೇಳ ಆರಂಭಗೊಂಡ ಬಳಿಕ ಸುಮಿತ್ ಸಾಹೋ ಕುಟುಂಬ ಡಿಸೆಂಬರ್ ಅಂತ್ಯದಲ್ಲಿ ಈ ಕುರಿತು ಕುಟುಂಬದಲ್ಲಿ ಚರ್ಚೆ ಮಾಡಿದ್ದಾರೆ. ಮಹಾಕುಂಭ ಮೇಳಕ್ಕೆ ಕುಟುಂಬ ಸಮೇತ ತೆರಳಬೇಕು, ಪುಣ್ಯಸ್ನಾನ ಮಾಡಬೇಕು ಎಂದು ಚರ್ಚಿಸಿದ್ದಾರೆ. ಈ ಮಾತು ಕೇಳಿಸಿದ ಪ್ರಕಾಶ್ ಮೆಹ್ತೋ ನಾನು ಕೂಡ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದಿದ್ದಾನೆ. ಇದಕ್ಕೆ ಸುಮಿತ್ ಸಾಹೋ ಅದಕ್ಕೇನಂತೆ ನಾವು ತೆರಳುವಾಗ ಜೊತೆಗೆ ಹೋಗೋಣ ಎಂದಿದ್ದಾರೆ. ಆದರೆ ಪ್ರಕಾಶ್ ಮೆಹ್ತೋ ಇಷ್ಟಕ್ಕೆ ಮಾತು ನಿಲ್ಲಿಸಲಿಲ್ಲ. ಮಹಾಕುಂಭ ಮೇಳಕ್ಕೆ ತೆರಳುವ ಮಾರ್ಗದಲ್ಲಿ ನನ್ನ ಮನೆ ಸಿಗಲಿದೆ ಎಂದಿದ್ದಾನೆ. ಇದು ಸುಮಿತ್ ಸಾಹೋ ಅಚ್ಚರಿಗೆ ಕಾರಣವಾಗಿದೆ. ತಕ್ಷಣವೇ ಈತನ ಮನೆ ಕುರಿತು ಕೇಳಿದ್ದಾರೆ. ಈ ವೇಳೆ ಕೊಡೆರ್ಮಾ ಕುರಿತು ಹೇಳಿದ್ದಾನೆ. ಇಷ್ಟೇ ನೋಡಿ, ಸುಮಿತ್ ಸಾಹೋ ತಕ್ಷಣವೇ ಮಾರ್ಕಾಚೋ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಹಳೆ ಮಿಸ್ಸಿಂಗ್ ಕೇಸ್ ಕುರಿತು ಹುಡುಕಾಡಿದ್ದಾರೆ. ಈ ವೇಳೆ ಪ್ರಕಾಶ್ ಮೆಹ್ತೋ ನಾಪತ್ತೆ ಪ್ರಕರಣ ಫೈಲ್ ತೆಗೆದಿದ್ದಾರೆ. ಬಳಿಕ ಕಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಕುಟುಂಬಸ್ಥರು ರಾಣಿಗಂಜ್‌ಗೆ ತೆರಳಿದ್ದಾರೆ. ಬರೋಬ್ಬರಿ 15 ವರ್ಷದ ಬಳಿಕ ಪ್ರಕಾಶ್ ಮೆಹ್ತೋ ಕುಟುಂಬದ ಜೊತೆಯಾಗಿದ್ದಾನೆ. ಮಹಕುಂಭ ಮೇಳ ಪದದಿಂದ ಪ್ರಕಾಶ್ ಮೆಹ್ತಾ ನೆನಪಿನ ಶಕ್ತಿ ಮರುಕಳಿಸಿದೆ. ಇದರಿಂದ ಕುಟುಂಬ ಜೊತೆ ಸೇರುವಂತಾಗಿದೆ.
ಕೇಸರಿ ಬಟ್ಟೆ ತೊಟ್ಟು ಕುಂಭಮೇಳದಲ್ಲಿ ಕಾಣಿಸಿಕೊಂಡ ಮಿಸ್ ಇಂಡಿಯಾ, ನಟಿ ಯಾರು ಗೊತ್ತಾ?
