Maha Shivratri 2023: ಶಿವನಿಗೇಕೆ ಬಿಲ್ವ ಪತ್ರೆ ಅಂದರೆ ಪ್ರೀತಿ?
ತ್ರಿಕೋನಾಕೃತಿಯ ಎಲೆಗಳು ಅಥವಾ ಬಿಲ್ವ ವೃಕ್ಷದ 3 ಚಿಗುರೆಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಏಕೆಂದರೆ ಅವು ಶಿವನಿಗೆ ಬಹಳ ಪ್ರಿಯವಾಗಿವೆ. ಬಿಲ್ವ ಮರವನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸದೆ ಮಾಡುವ ಶಿವನ ಆರಾಧನೆಯು ಫಲವಿಲ್ಲವೆಂದೂ ಹೇಳಲಾಗುತ್ತದೆ. ಬಿಲ್ವ ಪತ್ರೆಯ ಮಹತ್ವವೇನು?
ಸಾಮಾನ್ಯವಾಗಿ ಭಗವಾನ್ ಶಿವನನ್ನು ಅತ್ಯಂತ ಉಗ್ರ ಮತ್ತು ವಿನಾಶಕಾರಿ ಸ್ವಭಾವದಂತೆ ಚಿತ್ರಿಸಲಾಗಿದೆ. ಆದಾಗ್ಯೂ, ಶಿವನು ಅದೇ ಸಮಯದಲ್ಲಿ ಬೇಗ ಒಲಿಯುವುದಕ್ಕೂ ಹೆಸರುವಾಸಿಯಾಗಿದ್ದಾನೆ. ಭಕ್ತಾದಿಗಳ ಕಿಂಚಿತ್ತೂ ಭಕ್ತಿಯು ಈ ದೇವರನ್ನು ಅತ್ಯಂತ ಸಂತೋಷಪಡಿಸುತ್ತದೆ.
ಶಿವನನ್ನು ಸಂತೋಷಪಡಿಸುವ ವಸ್ತುಗಳ ಪಟ್ಟಿಯನ್ನು ಶಿವ ಪುರಾಣವು ಉಲ್ಲೇಖಿಸುತ್ತದೆ. ಅವುಗಳೆಂದರೆ, ಮೂಲಮಂತ್ರ ಮತ್ತು ಮಹಾಮೃತ್ಯುಂಜಯ ಮಂತ್ರದ ಪಠಣ; ಬಿಲ್ವ ಪತ್ರೆ ಎಲೆಗಳು, ರುದ್ರಾಕ್ಷ ಎಲೆಗಳು, ಧೋತರ ಹೂವು ಮತ್ತು ಎಲೆಗಳನ್ನು ಅರ್ಪಿಸುವ ಮೂಲಕ ಅಭಿಷೇ ಮಾಡುತ್ತಾರೆ.
ಇಷ್ಟಕ್ಕೂ ಶಿವನಿಗೆ ಬಿಲ್ವ ಪತ್ರೆ ಅಂದರೆ ಅಷ್ಟೇಕೆ ಇಷ್ಟ? ಈ ಎಲೆಯ ಮಹತ್ವವೇನು? ತಿಳಿಯೋಣ.
ಸಂಸ್ಕೃತದಲ್ಲಿ ಬಿಲ್ವ ಪತ್ರ ಎಂದು ಕರೆಯಲ್ಪಡುವ ಬೆಲ್ ಪತ್ರವು ದೇವರಿಗೆ ಅರ್ಪಿಸುವ ಪವಿತ್ರ ಸಸ್ಯವಾಗಿದೆ. ಪುರಾಣಗಳು ಮತ್ತು ವೇದಗಳ ಪ್ರಕಾರ, ಬೇಲ್ ಪತ್ರವು ಸಾಮಾಜಿಕ, ಚಿಕಿತ್ಸಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ.ಬಿಲ್ವ ವೃಕ್ಷವನ್ನು ಬ್ರಹ್ಮ ದೇವರು ಸೃಷ್ಟಿಸಿದನೆಂದು ನಂಬಲಾಗಿದೆ. ಆದಾಗ್ಯೂ, ಲಕ್ಷ್ಮಿಯ ದೀರ್ಘ ತಪಸ್ಸಿನಿಂದ ಮರವು ಬಲಗೈಯಿಂದ ಹುಟ್ಟಿಕೊಂಡಿತು.
3 ರಾಶಿಗಳಿಗೆ ಹಣದ ಹೊಳೆ ಹರಿಸುವ ತ್ರಿಗ್ರಾಹಿ ಯೋಗ
ಬಿಲ್ವ ಪತ್ರೆ ದಂತಕತೆ
ಈ ಮರದ ಮೂಲದ ಬಗ್ಗೆ ಒಂದು ದಂತಕಥೆ ಇದೆ. ಒಮ್ಮೆ ದೇವ-ದಾನವರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದರು. ಆ ಸಂದರ್ಭ ಆ ಕ್ಷೀರ ಸಾಗರದಿಂದ ಸಾಕಷ್ಟು ಅನರ್ಘ್ಯ ರತ್ನಗಳು ಸೃಷ್ಟಿಯಾದವು. ಅವುಗಳ ಜೊತೆ ಮಹಾಲಕ್ಷ್ಮೀಯೂ ಬಂದಳು. ಆ ಮಹಾಲಕ್ಷ್ಮಿಯನ್ನು ಕಂಡು ದೈತ್ಯರು ಲಕ್ಷ್ಮಿಯ ಮೇಲೇ ಕಣ್ಣು ಹಾಕಿದರು, ಆಕೆಯನ್ನ ಶತಾಯ ಗತಾಯ ಪಡೆಯುವ ಪ್ರಯತ್ನ ಮಾಡಿದರು. ಆಗ ಬೆಚ್ಚಿ ಬಿದ್ದ ಮಹಾಲಕ್ಷ್ಮಿ ಬಿಲ್ವವೃಕ್ಷವಾಗಿ ನೆಲೆ ನಿಂತಳು. ಹಾಗಾಗಿ ಬಿಲ್ವ ವೃಕ್ಷ ಶ್ರೇಷ್ಠ ವೃಕ್ಷವಾಯ್ತು ಅನ್ನುವ ಕಥೆ ಇದೆ.
ತ್ರಿಕೋನಾಕೃತಿಯ ಎಲೆಗಳು ಅಥವಾ ಬಿಲ್ವ ವೃಕ್ಷದ 3 ಚಿಗುರೆಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಏಕೆಂದರೆ ಅವು ಶಿವನಿಗೆ ಬಹಳ ಪ್ರಿಯವಾಗಿವೆ. ಬಿಲ್ವ ಮರವನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸದೆ ಮಾಡುವ ಶಿವನ ಆರಾಧನೆಯು ಫಲವಿಲ್ಲವೆಂದೂ ಹೇಳಲಾಗುತ್ತದೆ.
ಪಾರ್ವತಿಯ ಬೆವರು
ಮತ್ತೊಂದು ಕತೆಯಂತೆ ಮಂದರ ಪರ್ವತ ಏರಿದ ಪಾರ್ವತಿಗೆ ತುಂಬಾ ಸುಸ್ತಾಗಿತ್ತು. ಆಗ ಆಕೆ ಅಲ್ಲಿ ವಿಶ್ರಾಂತಿಗೆ ಅಂತ ಬಂದು ಕುಳಿತಿದ್ದಳು. ಆಗ ಆಕೆಯ ಬೆವರ ಹನಿ ಭೂಮಿಯ ಮೇಲೆ ಬಿತ್ತು. ಆ ಹನಿಯಿಂದ ಮೂಡಿದ ವೃಕ್ಷವೇ ಬಿಲ್ವ ವೃಕ್ಷ. ಹಾಗಾಗಿಯೇ ಶಿವನಿಗೆ ಅದರ ಮೇಲೆ ಪ್ರೀತಿ ಎಂಬ ಕತೆ ಇದೆ.
ಮತ್ತೂ ಒಂದು ಕತೆ
ಲಕ್ಷ್ಮಿಯು ಪ್ರತಿ ಪೂಜೆಯಂದು ಶಿವನಿಗೆ 1000 ಕಮಲಗಳನ್ನು ಅರ್ಪಿಸುತ್ತಿದ್ದಳು. ಒಮ್ಮೆ ಆ ಸಾವಿರ ಕಮಲಗಳಲ್ಲಿ ಎರಡು ಕಮಲಗಳು ಕಾಣೆಯಾದವು. ಪೂಜೆಯ ಸಮಯದಲ್ಲಿ ಲಕ್ಷ್ಮಿಯು ಚಿಂತಿತಳಾಗಿ ಎರಡು ಸ್ತನಗಳನ್ನೇ ಕಮಲದಂತೆ ಕತ್ತರಿಸಿ ಅರ್ಪಿಸಿದಳು. ಆ ಘೋರ ಸ್ಥಿತಿಯನ್ನ ಕಂಡ ಶಿವ ತಕ್ಷಣ ಆಕೆಯ ಮೇಲೆ ಗಂಗಾಜಲವನ್ನ ಹರಿಸಿ ಆಕೆಯ ನೋವನ್ನ ಕಳೆದನಂತೆ. ಹಾಗೆ ಹರಿದ ನೀರು ಶ್ರೀ ಶೈಲವನ್ನು ತಲುಪಿ ಅಲ್ಲಿ ಬಿಲ್ವ ವೃಕ್ಷ ಹುಟ್ಟಿತು ಎಂಬ ಕತೆ ಇದೆ. ಅಂದು ಮಹಾಲಕ್ಷ್ಮಿಗೆ ಶಿವ ವರದ ರೂಪದಲ್ಲಿ ಅಷ್ಟ ಸಿದ್ಧಿತ್ವವನ್ನು ಕೊಟ್ಟ. ಹಾಗಾಗೇ ಅಷ್ಟ ಮಹಾಲಕ್ಷ್ಮಿಯರ ಸೃಷ್ಟಿಯಾಯಿತು ಎನ್ನಲಾಗುತ್ತದೆ.
ಬಿಲ್ವದ ಮಹತ್ವ
ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತ. ಅಷ್ಟೇ ಅಲ್ಲ, ಪ್ರಾತ: ಕಾಲ, ಮಧ್ಯಾಹ್ನ ಕಾಲ, ಸಂಧ್ಯಾ ಕಾಲಗಳ ಸಂಕೇತ.
Surya Shani Yuti 2023: ಕೃಷಿಯಲ್ಲಿ ಲಾಭ, ದೇಶದಲ್ಲಿ ಅನಿಶ್ಚಿತತೆ!
ಶಿವನಿಗೇಕೆ ಬಿಲ್ವ?
ಬಿಲ್ವ ಪತ್ರೆಯಿಂದ ನಾವು ಶಿವನನ್ನು ಪೂಜಿಸುತ್ತೇವೆ. ಶಿವ ಅಂದ್ರೆ ಮಂಗಳಕರ. ನಮಗೆ ಮಂಗಳವಾಗಬೇಕಾದರೆ ನಾವು ಸತ್ವ-ರಜಸ್ಸು-ತಮೋಗುಣಗಳನ್ನ ದಾಟಬೇಕು ಎಂಬ ಪಾಠವನ್ನು ಬಿಲ್ವ ಪತ್ರೆಯಿಂದ ಕಲಿಯುತ್ತೇವೆ. ಅವನ ಸಂಕಲ್ಪದ ಹೊರತಾಗಿ ಜಗತ್ತಿಲ್ಲ ಎಂಬ ಭಾವದಲ್ಲಿ ಬಿಲ್ವ ಪತ್ರೆಯನ್ನು ಸಮರ್ಪಿಸಿದರೆ ಖಂಡಿತಾ ಶಿವನ ಅನುಗ್ರಹವಾಗುತ್ತದೆ.