ಪ್ರತಿಯೊಬ್ರಿಗೂ ಒಂದು ಲಕ್ಕಿ ನಂಬರ್‌ ಇರುತ್ತೆ: ನಿಮ್‌ ನಂಬರ್‌ ಯಾವ್ದು?

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅದೃಷ್ಟ ಸಂಖ್ಯೆ ಇರುತ್ತದೆ. ಅದನ್ನು ಪರಿಗಣಿಸಿ ನೀವು ನಡೆದುಕೊಂಡರೆ ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತದೆ. ಯಾವುದೋ ಕೆಲಸ ಆರಂಭಿಸುವಾಗ ಅದೃಷ್ಟದ ಸಂಖ್ಯೆ ಇರುವ ದಿನದಂದೇ ಆರಂಭಿಸಿದರೆ ಯಶಸ್ಸು ನಿಮ್ಮದಾಗುತ್ತದೆ.
 

Lucky number for each zodiac signs

ಯಾವುದಾದರೂ ನಿರ್ದಿಷ್ಟ ಸಂಖ್ಯೆಯೊಂದಿಗೆ ನಿಮಗೆ ಹೆಚ್ಚಿನ ಬಾಂಧವ್ಯ ಕಂಡುಬರುತ್ತದೆಯೇ? ಅದು ನಿಮ್ಮ ಹುಟ್ಟಿದ ದಿನವಾಗಿರಬಹುದು ಅಥವಾ ಬೇರ್ಯಾವುದೇ ಸಂಖ್ಯೆ ಆಗಿರಬಹುದು. ಆ ನಿರ್ದಿಷ್ಟ ಸಂಖ್ಯೆ ನಿಮ್ಮನ್ನು ಹಿಂಬಾಲಿಸುತ್ತಿದೆ ಎನಿಸುತ್ತದೆಯಾ? ನೀವು ಯಾವ ದಿನಾಂಕ ನಿಮಗೆ ಶುಭವೆಂದು ಭಾವಿಸುತ್ತೀರಿ? ಯಾವ ಸಂಖ್ಯೆ ನಿಮಗೆ ಶುಭವೆಂದು ಭಾಸವಾಗುತ್ತದೆ? ಏಕೆಂದರೆ, ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅದೃಷ್ಟಶಾಲಿ ಸಂಖ್ಯೆ ಇರುತ್ತದೆ. ನಾವು ಇನ್ನು ಕೆಲವೇ ದಿನಗಳಲ್ಲಿ ೨೦೨೪ನ್ನು ಪ್ರವೇಶ ಮಾಡುತ್ತಿದ್ದೇವೆ. ಈ ಸಮಯದಲ್ಲಿ ನಿಮ್ಮ ರಾಶಿಯ ಅದೃಷ್ಟ ಸಂಖ್ಯೆ ಯಾವುದು ಎಂದು ತಿಳಿದುಕೊಳ್ಳಿ. 

•    ಮೇಷ (Aries)
ಅತ್ಯುತ್ಸಾಹದ, ಧೈರ್ಯಶಾಲಿ (Bold) ವ್ಯಕ್ತಿತ್ವದ ಮೇಷ ರಾಶಿಯ ಜನರ ಅದೃಷ್ಟ ಸಂಖ್ಯೆ 9. ಇದು ಮೋಹ (Passion) ಮತ್ತು ದೃಢನಿಶ್ಚಯವನ್ನು ಪ್ರತಿನಿಧಿಸುತ್ತದೆ. ಈ ದಿನಾಂಕ (Date) ಅಥವಾ 9ನೇ ಸಂಖ್ಯೆ ನಿಮಗೆ ಶುಭ ತರಬಲ್ಲದು. 

4 ತಿಂಗಳ ನಂತರ ಮೇಷದಲ್ಲಿ ಗುರು ನೇರ,ಈ 5 ರಾಶಿಗಳಿಗೆ ಒಳ್ಳೆಯ ದಿನ ಆರಂಭ,ಗಜಕೇಸರಿ ರಾಜಯೋಗ

•    ವೃಷಭ (Taurus)
ಪ್ರಾಯೋಗಿಕ (Practical) ಹಾಗೂ ಸಹಜತೆಯನ್ನು ಹೊಂದಿರುವ ವೃಷಭ ರಾಶಿಯ ಜನರ ಅದೃಷ್ಟ ಸಂಖ್ಯೆ 6. ಸ್ಥಿರತೆ ಮತ್ತು ಸತ್ಯವನ್ನು ಇದು ಪ್ರತಿನಿಧಿಸುತ್ತದೆ. ನಿಮ್ಮ ಯಶಸ್ಸಿಗೆ 6 ಹೆಚ್ಚು ಕೊಡುಗೆ ನೀಡುತ್ತದೆ, ಗಮನವಹಿಸಿ.

•    ಮಿಥುನ (Gemini)
ಅತಿ ಕುತೂಹಲ (Curiosity) ಬುದ್ಧಿಯುಳ್ಳ ಮಿಥುನ ರಾಶಿಯ ಜನರಿಗೆ 5 ಅದೃಷ್ಟವನ್ನು ತರಬಲ್ಲದು. ಮಾತುಗಾರಿಕೆ ಮತ್ತು ಮುಕ್ತಮನಸ್ಸನ್ನು ಪ್ರತಿನಿಧಿಸುವ ಈ ಸಂಖ್ಯೆ ನಿಮಗೆ ಮಾರ್ಗದರ್ಶನ ಮಾಡಬಲ್ಲದು.

•    ಕರ್ಕಾಟಕ (Cancer)
ಮನೆಯನ್ನು ಗಾಢವಾಗಿ ಪ್ರೀತಿಸುವ ಹಾಗೂ ಆರೈಕೆ ಮನೋಭಾವದ ಕರ್ಕಾಟಕ ರಾಶಿಯವರ ಅದೃಷ್ಟ ಸಂಖ್ಯೆ 2. ಇದು ಸಾಮರಸ್ಯ (Harmony) ಮತ್ತು ಸಮತೋಲನವನ್ನು ಬಿಂಬಿಸುತ್ತದೆ. ಸಂಬಂಧ ಮತ್ತು ಪರಿಸ್ಥಿತಿಯ ಹೊಂದಾಣಿಕೆಯನ್ನು ಬಯಸುವ ಕರ್ಕಾಟಕ ರಾಶಿಯ ಜನರಿಗೆ ಈ ಸಂಖ್ಯೆ ಭಾವನಾತ್ಮಕ (Emotional) ಪರಿಪೂರ್ಣತೆ ನೀಡಬಲ್ಲದು.

•    ಸಿಂಹ (Leo)
ಧೈರ್ಯಶಾಲಿ ಹಾಗೂ ವರ್ಚಸ್ಸಿನ ಸಿಂಹ ರಾಶಿಯ ಜನರ ಅದೃಷ್ಟ ಸಂಖ್ಯೆ 1. ನೈಸರ್ಗಿಕವಾಗಿ ನಾಯಕತ್ವದ ಗುಣ ಹೊಂದಿರುವ ಇವರ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಜೀವನದ (Life) ಯಾವುದೇ ಸಮಯದಲ್ಲಿ ದೃಢವಾಗಿ ನಿಲ್ಲಲು ಮತ್ತು ಆಂತರಿಕ ಸಾಮರ್ಥ್ಯದೊಂದಿಗೆ ಮುನ್ನುಗ್ಗಲು ಇದೇ ಪ್ರೇರಣೆ.

ಹೊಸ ವರ್ಷದಲ್ಲಿ ನೀವು ಯಾವ ಗುಡಿಗೆ ಹೋಗುವಿರಿ? ನಿಮ್ಮ ಜನ್ಮರಾಶಿಯ ದೇವರನ್ನು ತಪ್ಪಿಸಬೇಡಿ!

•    ಕನ್ಯಾ (Virgo)
ವಿಮರ್ಶಾತ್ಮಕ ಬುದ್ಧಿಯ ಕನ್ಯಾ ರಾಶಿಯ ಜನರ ಅದೃಷ್ಟ ಸಂಖ್ಯೆ 5. ಈ ಸಂಖ್ಯೆ ಇವರಿಗೆ ಫ್ಲೆಕ್ಸಿಬಿಲಿಟಿ (Flexibility) ಮತ್ತು ಮುಕ್ತ ಮನಸ್ಸಿನಿಂದ ಜಗತ್ತನ್ನು ನೋಡುವಂತೆ ಉತ್ತೇಜಿಸುತ್ತದೆ. ಹಾಗೂ ಇದು ಸಮಸ್ಯೆ ನಿವಾರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ.

•    ತುಲಾ (Libra)
ತುಲಾ ರಾಶಿಯ ಜನರ ಅದೃಷ್ಟ ಸಂಖ್ಯೆ 6. ನಿಮ್ಮ ಸಮತೋಲನ (Balance) ಮತ್ತು ಹಾರ್ದಿಕ ಸ್ವಭಾವವನ್ನು ಇದು ಸಂಕೇತಿಸುತ್ತದೆ. ನಿಮ್ಮ ಸಂಬಂಧ ಮತ್ತು ಸನ್ನಿವೇಶಗಳೊಂದಿಗೆ ಹೊಂದಾಣಿಕೆಯಾಗುವಂತೆ ಮಾಡುತ್ತದೆ.

•    ವೃಶ್ಚಿಕ (Scorpio)
ಆಳವಾದ ಭಾವತೀವ್ರತೆಯ ವೃಶ್ಚಿಕ ರಾಶಿಯ ಜನರ ಅದೃಷ್ಟ ಸಂಖ್ಯೆ 9. ಆಳ (Depth) ಮತ್ತು ಪರಿವರ್ತನೆಯನ್ನು ಇದು ಪ್ರತಿನಿಧಿಸುತ್ತದೆ.

•    ಧನು (Sagittarius)
ಆಶಾವಾದಿಯಾಗಿರುವ ಧನು ರಾಶಿಯ ಜನ ಅದೃಷ್ಟ ಸಂಖ್ಯೆ 3. ಇದು ಉತ್ಸಾಹ ಮತ್ತು ವಿಸ್ತಾರವನ್ನು ಸೂಚಿಸುತ್ತದೆ. ಮುಕ್ತ ಚೈತನ್ಯವನ್ನು ಅಪ್ಪಿಕೊಳ್ಳಲು ಉತ್ತೇಜಿಸುತ್ತದೆ. 

•    ಮಕರ (Capricorn)
ಮಹತ್ವಾಕಾಂಕ್ಷಿ ಮಕರ ರಾಶಿಯ ಜನರ ಅದೃಷ್ಟ ಸಂಖ್ಯೆ 8. ಪರಿಶ್ರಮ ಮತ್ತು ನಿರ್ಧಾರ ಕೈಗೊಳ್ಳುವ ಗುಣವನ್ನು ಪ್ರತಿನಿಧಿಸುತ್ತದೆ. 

•    ಕುಂಭ (Aquarius)
ಅನ್ವೇಷಣಾತ್ಮಕ ಬುದ್ಧಿಯ ಕುಂಭ ರಾಶಿಯ ಅದೃಷ್ಟ ಸಂಖ್ಯೆ 7. ಆಂತರಿಕ ಗುಣವನ್ನು ಅಭಿವ್ಯಕ್ತಿಸಲು ಇದು ನೆರವು ನೀಡುತ್ತದೆ. ಈ ಸಂಖ್ಯೆಯ ಧನಾತ್ಮಕ (Positive) ಗುಣವನ್ನು ನೀವು ಒಪ್ಪಿಕೊಳ್ಳಿ.

•    ಮೀನ (Pisces)
ಕ್ರಿಯಾಶೀಲ ಮೀನ ರಾಶಿಗೆ 2ನೇ ಸಂಖ್ಯೆ ಅದೃಷ್ಟ (Luck) ತರುತ್ತದೆ. ಸಾಮರಸ್ಯ ಮತ್ತು ಭಾವನಾತ್ಮಕ ಗುಣದ ಹೊಂದಾಣಿಕೆಯನ್ನು ಪ್ರತಿನಿಧಿಸುತ್ತವೆ. ಕ್ರಿಯಾಶೀಲತೆಯ ವಿಸ್ತಾರಕ್ಕೆ, ಭಾವನಾತ್ಮಕ ಪರಿಪೂರ್ಣತೆಗೆ ಈ ಸಂಖ್ಯೆಯನ್ನು ಅವಲಂಬಿಸಬಹುದು.   

 

Latest Videos
Follow Us:
Download App:
  • android
  • ios