ಆಂಜನೇಯನಿಗೇ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿದ ರೈಲ್ವೆ ಅಧಿಕಾರಿಗಳು!
ಮಧ್ಯಪ್ರದೇಶದ ಮೊರೆನಾದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ ಆರೋಪದ ಮೇಲೆ ಭಾರತೀಯ ರೈಲ್ವೇ ಹನುಮಂತನಿಗೆ ನೋಟಿಸ್ ಜಾರಿ ಮಾಡಿದೆ. 7 ದಿನಗಳೊಳಗೆ ಜಾಗ ಖಾಲಿ ಮಾಡಲು ಆಂಜನೇಯನಿಗೆ ವಾರ್ನ್ ಮಾಡಲಾಗಿದೆ!
‘ಸೂರ‍್ಯಂಗೇ ಟಾರ್ಚು, ಲಕ್ಷ್ಮಿಗೇ ಕಾಸು’ ಎಂಬ ಮಾತಿನಂತೆ ಉತ್ತರ ಪ್ರದೇಶದ ಝಾನ್ಸಿಯ ರೈಲ್ವೆ ಅಧಿಕಾರಿಗಳು ಆಂಜನೇಯ ದೇವಸ್ಥಾನದಲ್ಲಿದ್ದ ‘ಹನುಮ’ನಿಗೇ ನೋಟಿಸ್ ನೀಡಿದ್ದಾರೆ. ಹೌದು, ಇಲ್ಲಿನ ರೈಲ್ವೆ ಅಧಿಕಾರಿಗಳು ‘ಬಜರಂಗ ಬಲಿ ದೇವಸ್ಥಾನವು ರೈಲ್ವೆ ಜಾಗದಲ್ಲಿದೆ. ಅದನ್ನು ಆಂಜನೇಯ 7 ದಿನಗಳಲ್ಲಿ ಖಾಲಿ ಮಾಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ಹೇಳಿರುವುದು ನಗೆಪಾಟಲಿಗೀಡಾಗಿದೆ.
ಹನುಮಾನ ಮಂದಿರವನ್ನು ಒತ್ತುವರಿ ಭೂಮಿಯಿಂದ ತೆಗೆಯದಿದ್ದರೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮೊರೆನಾದಲ್ಲಿ ಬ್ರಾಡ್ ಗೇಜ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ.\
Daily Horoscope: ಪ್ರೇಮಿಗಳ ದಿನ ನಿಮ್ಮ ರಾಶಿ ಭವಿಷ್ಯ ಏನಿದೆ?
ಅತಿಕ್ರಮಣ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಕೆಡವಲು ವ್ಯಯಿಸಿದ ಮೊತ್ತವನ್ನು ಹನುಮಂತ ದೇವರಿಂದ ವಸೂಲಿ ಮಾಡಲಾಗುವುದು ಎಂದೂ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ನೋಟೀಸ್ ಅನ್ನು ಅಧಿಕಾರಿಗಳು ದೇವಸ್ಥಾನದ ಗೋಡೆ ಮೇಲೆ ಅಂಟಿಸಿದ್ದು ಭಾರಿ ವೈರಲ್ ಆಗಿದೆ. ಇದಾದ ನಂತರ ತೇಪೆ ಹಚ್ಚಿದ ರೈಲ್ವೆ, ಈ ನೋಟಿಸ್ ರದ್ದು ಮಾಡಿ ದೇವಸ್ಥಾನದ ಅರ್ಚಕನ ಹೆಸರಿಗೆ ಮರು ನೋಟಿಸ್ ನೀಡಿದೆ. ಏನೇ ಹೇಳಿ... ಕೆಲಸದ ಪಾಲನೆ ಮಾಡುವಾಗ ಸಾಮಾನ್ಯ ಅರಿವು ಮುಖ್ಯ ತಾನೆ?
****
ಮಂತ್ರಾಲಯ ಸಮೀಪವೇ ಪಂಚಮುಖಿ ಆಂಜನೇಯ ದೇವಾಲಯ ಇರೋದ್ಯಾಕೆ ತಿಳ್ದಿದೀರಾ?
ಪಂಚಮುಖಿ ಆಂಜನೇಯ ದೇವಸ್ಥಾನವು ಮಂತ್ರಾಲಯ ಪಟ್ಟಣದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ದೇವಾಲಯದಲ್ಲಿ ನೆಲೆಸಿರುವ ವಿಗ್ರಹವು ಆಂಜನೇಯನ ವಿಗ್ರಹವಾಗಿದೆ. ಇಲ್ಲಿರುವ ವಿಗ್ರಹವು ಐದು ತಲೆಗಳನ್ನು ಹೊಂದಿದ್ದು, ಪ್ರತಿ ತಲೆಯು ವಿಭಿನ್ನ ದೇವರಾದ ಗರುಡ, ನರಸಿಂಹ, ಹಯಗ್ರೀವ, ಹನುಮಾನ್ ಮತ್ತು ವರಾಹ ದೇವರನ್ನು ಪ್ರತಿನಿಧಿಸುತ್ತದೆ. ಈ ದೇವಾಲಯವು ಮಂತ್ರಾಲಯದ ಹತ್ತಿರದಲ್ಲೇ ಇರುವುದಕ್ಕೊಂದು ಹಿನ್ನೆಲೆ ಇದೆ.
ಪಂಚಮುಖಿ ಆಂಜನೇಯ ದೇವಾಲಯವು ತುಂಗಭದ್ರಾ ನದಿಯ ದಕ್ಷಿಣ ದಡದಲ್ಲಿ ಮಂಚಾಲದ ಬಳಿ ಇದೆ, ಇದನ್ನು ಈಗ ಮಂತ್ರಾಲಯ ಎಂದು ಕರೆಯಲಾಗುತ್ತದೆ. ನಿಖರವಾಗಿ ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಚೂರು ಜಿಲ್ಲೆಯ ಗಾಣಧಾಳ್ ಗ್ರಾಮದಲ್ಲಿದೆ. ಪಂಚಮುಖಿ ದೇವಾಲಯದ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ಗುರು ರಾಘವೇಂದ್ರ ತೀರ್ಥರಿಂದ ಪಂಚಮುಖಿಯು ಮಂತ್ರಾಲಯಕ್ಕೆ ಹತ್ತಿರದಲ್ಲಿದೆ.
ಆಂಜನೇಯ ಭಕ್ತ ರಾಯರು
ಹೌದು, ಮಂತ್ರಾಲಯದ ಗುರು ಶ್ರೀ ರಾಘವೇಂದ್ರರು ತಮ್ಮ ಹಿಂದಿನ ಜನ್ಮದಲ್ಲಿ ಸಂಕುಕರ್ಣ, ಪ್ರಹ್ಲಾದ, ಬಾಹ್ಲೀಕ, ವ್ಯಾಸರಾಜ ತೀರ್ಥರಾಗಿದದ್ದರು ಎಂಬ ಜನಪ್ರಿಯ ನಂಬಿಕೆ ಇದೆ. ಅವರ ಹಿಂದಿನ ಅವತಾರದಲ್ಲಿ ಶ್ರೀ ವ್ಯಾಸರಾಜರಾಗಿದ್ದಾಗ ಪೂಜ್ಯ ಶ್ರೀ ರಾಘವೇಂದ್ರ ಗುರುಗಳು ಆಂಜನೇಯನಿಗೆ 732 ದೇವಾಲಯಗಳನ್ನು ಸ್ಥಾಪಿಸಿದರು.
Shani Uday 2023: ಶನಿ ಉದಯದಿಂದ ಈ ರಾಶಿಗಳ ಜೀವನದಲ್ಲಿ ಭಾಗ್ಯೋದಯ
ಅತ್ಯಂತ ಧಾರ್ಮಿಕ, ದಯೆ, ಜನರ ಇಷ್ಟಾರ್ಥಗಳನ್ನು ಪೂರೈಸುವ, ಎಲ್ಲರಿಗೂ ಪ್ರಿಯವಾದ ಸಂತ, ಶ್ರೀ ರಾಘವೇಂದ್ರ ತೀರ್ಥರು ಭಗವಾನ್ ರಾಮ ಮತ್ತು ಭಗವಾನ್ ಹನುಮಾನ್ ಅವರ ಕಟ್ಟಾ ಭಕ್ತರಾಗಿದ್ದರು. ರಾಮಪೂಜೆಯನ್ನು ಮುಗಿಸಿದ ನಂತರ ರಾಯರು ಪ್ರತಿದಿನ ಮಂಚಾಲೆಯ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದರು. ಶ್ರೀ ರಾಘವೇಂದ್ರರು ಒಮ್ಮೆ 12 ವರ್ಷಗಳ ಕಾಲ ಇಲ್ಲಿ ಆಳವಾದ ಧ್ಯಾನಕ್ಕೆ ಹೋದರು. ಶ್ರೀ ರಾಯರ ಭಕ್ತಿಗೆ ಮೆಚ್ಚಿದ ಹನುಮಂತನು ಪಂಚಮುಖಿ ಆಂಜನೇಯನ ಅವತಾರದಲ್ಲಿ ಗುರು ರಾಘವೇಂದ್ರರ ಮುಂದೆ ಕಾಣಿಸಿಕೊಂಡನು. ಆದ್ದರಿಂದ ಈ ಸ್ಥಳಕ್ಕೆ 'ಪಂಚಮುಖಿ' ಎಂದು ಹೆಸರು ಬಂದಿದೆ.
ಬೆಟ್ಟದ ಮೇಲಿರುವ ಗುಹೆ
ಶ್ರೀ ರಾಘವೇಂದ್ರರು 12 ವರ್ಷಗಳ ಕಾಲ ತಪಸ್ಸನ್ನು ಮಾಡಿದ ಗುಹೆಯು ಬೆಟ್ಟದ ತುದಿಯಲ್ಲಿದೆ. ಇಂದಿಗೂ ಸಹ, ಗುಹೆಯನ್ನು ಆಗಿನಂತೆಯೇ ನಿರ್ವಹಿಸಲಾಗಿದೆ ಮತ್ತು ಸುಮಾರು ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ಕಲ್ಲಿನ ಮೆಟ್ಟಿಲುಗಳು ಗುಹಾ ದೇವಾಲಯಕ್ಕೆ ಕರೆದೊಯ್ಯುತ್ತವೆ. ಬೆಟ್ಟದ ಮೇಲಿನ ಕಿರಿದಾದ ಹಾದಿಯು ನಿಮ್ಮನ್ನು ಗುಹಾ ದೇವಾಲಯದ ಗರ್ಭಗುಡಿಗೆ ಕರೆದೊಯ್ಯುತ್ತದೆ. ಗುಹೆಯ ಒಳಗೆ, ಒಬ್ಬರು ಖಂಡಿತವಾಗಿಯೂ ಅತ್ಯಂತ ಪರಿಶುದ್ಧತೆ ಮತ್ತು ಪವಿತ್ರತೆಯನ್ನು ಅನುಭವಿಸಬಹುದು.