ನಿಮ್ಮ ಹೆಸರಲ್ಲಿ ಎಷ್ಟು ಅಕ್ಷರಗಳಿವೆ? ಕೌಂಟ್ ಮಾಡಿ, ವ್ಯಕ್ತಿತ್ವ ಹೇಗೆ ಅಂತ ಗೊತ್ತು ಮಾಡ್ಕೊಳ್ಳಿ!
ಸಂಖ್ಯಾಭವಿಷ್ಯದ ಪ್ರಕಾರ, ನಮ್ಮ ಹೆಸರುಗಳಲ್ಲಿರುವ ಅಕ್ಷರಗಳ ಸಂಖ್ಯೆಗಳು ನಮ್ಮ ವ್ಯಕ್ತಿತ್ವ, ಮನೋಬಲ, ಚಿಂತನೆಗಳನ್ನು ವ್ಯಕ್ತಪಡಿಸುತ್ತವೆ. ಎಷ್ಟು ಸಂಖ್ಯೆಯ ಅಕ್ಷರಗಳು ನಿಮ್ಮ ಹೆಸರಿನಲ್ಲಿವೆ, ಅವುಗಳ ಸಾಮರ್ಥ್ಯವೇನೆಂದು ನೋಡಿಕೊಳ್ಳಿ.

ಮಗು ಜನಿಸಿದಾಗ ಹೆಸರನ್ನು ಇಡಲು ಸಾಕಷ್ಟು ಹರಸಾಹಸ ಪಡುತ್ತೇವೆ. ಅಳೆದು ತೂಗಿ ಹೆಸರನ್ನು ಆಯ್ಕೆ ಮಾಡುತ್ತೇವೆ. ರಾಶಿಗೆ ಅನುಗುಣವಾಗಿಯೂ ಇರಬೇಕು, ಅರ್ಥಗರ್ಭಿತವಾಗಿರಬೇಕು, ಚಿಕ್ಕದಾಗಿ, ಚೊಕ್ಕವಾಗಿರಬೇಕು ಎನ್ನುವ ನಿಲುವಿನಿಂದ ಹೆಸರನ್ನು ಹುಡುಕುತ್ತೇವೆ. ಜತೆಗೆ, ಬಹಳಷ್ಟು ಜನ ಹೆಸರಿನಲ್ಲಿ ಎಷ್ಟು ಅಕ್ಷರಗಳು ಇವೆ ಎನ್ನುವುದನ್ನು ಪರಿಶೀಲನೆ ನಡೆಸುತ್ತಾರೆ. ಹೆಸರಿನಲ್ಲಿರುವ ನಿರ್ದಿಷ್ಟ ಸಂಖ್ಯೆಯ ಅಕ್ಷರಗಳು ಇರಬೇಕು ಎಂದು ಬಯಸುತ್ತಾರೆ. ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆಗಳು ಸಹ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತದೆ ಸಂಖ್ಯಾಭವಿಷ್ಯ. ಇದನ್ನೇ ನ್ಯೂಮರಾಲಜಿ ಎನ್ನಲಾಗುತ್ತದೆ. ಅಚ್ಚರಿ ಎಂದರೆ, ಇದರ ಮೂಲಕ ನಮ್ಮ ಹೆಸರಿನಲ್ಲಿರುವ ಸಂಖ್ಯೆಗಳಿಂದ ನಮ್ಮ ಜೀವನ ಮತ್ತು ವ್ಯಕ್ತಿತ್ವವನ್ನು ಪತ್ತೆ ಮಾಡಲಾಗುತ್ತದೆ. ಸಂಖ್ಯಾಭವಿಷ್ಯ ಪುರಾತನ ಪದ್ಧತಿಯಾಗಿದ್ದು, ವ್ಯಕ್ತಿಯ ವ್ಯಕ್ತಿತ್ವ, ಸಾಮರ್ಥ್ಯ ಅರಿಯಲು ಸಹಕಾರಿಯಾಗಿದೆ. ಇದರ ಪ್ರಕಾರ, ನಮ್ಮ ಹೆಸರು ಕೇವಲ ಅಕ್ಷರಗಳ ಸಮೂಹವಲ್ಲ, ಅದು ಸಂಕೇತದಲ್ಲಿರುವ ಸಂದೇಶ.
• ಮೂರಕ್ಷರ (3 Letters)
ನಿಮ್ಮ ಮೊದಲ ಹೆಸರು 3 ಅಕ್ಷರಗಳನ್ನು ಹೊಂದಿದ್ದರೆ ನೀವು ನಿರ್ಭೀತ (Dynamic) ಹಾಗೂ ಕ್ರಿಯಾಶೀಲ (Creative) ಸ್ಫೂರ್ತಿ ಹೊಂದಿದ್ದೀರಿ. ಚುರುಕು (Wit) ಹಾಗೂ ಒಳಗೊಳ್ಳುವ ಗುಣದಿಂದಾಗಿ ಸಮಸ್ಯೆಗಳನ್ನು (Problem) ಚೆನ್ನಾಗಿ ಪರಿಹರಿಸುತ್ತೀರಿ. ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ, ಸಾಮಾಜಿಕವಾಗಿ ಬೆರೆಯುತ್ತೀರಿ.
ಈ ರಾಶಿಯವರು ಎಚ್ಚರವಾಗಿರಿ.. ಸೂರ್ಯ ಗ್ರಹಣದಿಂದ ಕತ್ತಲಾಗಲಿದೆ ಬದುಕು
• ನಾಲ್ಕಕ್ಷರ
ದೃಢತೆ (Stability) ಮತ್ತು ಜವಾಬ್ದಾರಿಯನ್ನು (Responsibility) ಹೊಂದಿರುತ್ತೀರಿ. ಪ್ರಾಯೋಗಿಕ ನಿಲುವು, ನಂಬಿಕಸ್ಥರಾಗಿರುತ್ತೀರಿ. ನಿಮ್ಮ ಪರಿಶ್ರಮ, ಶ್ರದ್ಧೆ, ಸಂಘಟನಾತ್ಮಕ ಕೌಶಲ್ಯವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಯಾವುದೇ ಕೆಲಸಕ್ಕೆ ಬೇಕಾದ ಮಾಹಿತಿ ಪಡೆದು ಮುನ್ನಡೆಯುತ್ತೀರಿ. ಖಾಸಗಿ ಹಾಗೂ ವೃತ್ತಿ ಜೀವನದಲ್ಲಿ (Life) ಪ್ರಮುಖ ಆಸ್ತಿಯಾಗಿರುತ್ತೀರಿ.
• 5 ಅಕ್ಷರಗಳು
ಐದು ಅಕ್ಷರಗಳು ನಿಮ್ಮ ಹೆಸರಿನಲ್ಲಿದ್ದರೆ ಸಾಹಸಕ್ಕಾಗಿ ನಿಮ್ಮ ಮನಸ್ಸು ತುಡಿಯುತ್ತಿರುತ್ತದೆ. ಸ್ವತಂತ್ರ (Free) ಧೋರಣೆ ನಿಮ್ಮದು. ನೈಸರ್ಗಿಕವಾಗಿ ಕುತೂಹಲಿಗಳು (Curious). ಹೊಸದನ್ನು ಮಾಡಲು ಯತ್ನಿಸುತ್ತೀರಿ. ಮಾತುಗಾರರು. ಸುಲಭವಾಗಿ ಹಲವು ಸವಾಲುಗಳನ್ನು ನಿಭಾಯಿಸುತ್ತೀರಿ.
• 6 ಅಕ್ಷರಗಳು
ನಿಮ್ಮ ಹೆಸರಿನಲ್ಲಿ ಆರು ಅಕ್ಷರಗಳಿದ್ದರೆ ನೀವು ಕಾಳಜಿ (Care) ಹೊಂದಿರುವ ವ್ಯಕ್ತಿತ್ವದವರು, ಆರೈಕೆ ಮಾಡುವ ಗುಣ ಹೊಂದಿದ್ದೀರಿ. ಕುಟುಂಬ (Family) ಮತ್ತು ಪ್ರೀತಿಪಾತ್ರರ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೀರಿ. ಈ ಗುಣ ನಿಮ್ಮನ್ನು ಅದ್ಭುತ ಸ್ನೇಹಿತನನ್ನಾಗಿ ರೂಪಿಸುತ್ತದೆ.
• 7 ಅಕ್ಷರಗಳು
7 ಅಕ್ಷರಗಳು ನಿಮ್ಮ ಹೆಸರಿನಲ್ಲಿದ್ದರೆ ನೀವು ಜ್ಞಾನ (Knowledge) ಹೊಂದಲು ಆಳವಾದ ಬಯಕೆ ಹೊಂದಿದ್ದೀರಿ ಎಂದರ್ಥ. ಸತ್ಯದ ಅನ್ವೇಷಣೆ ನಿಮ್ಮ ಆಶಯ. ನಿಮ್ಮಲ್ಲಿ ಆತ್ಮಾವಲೋಕನ, ವಿಮರ್ಶೆ ಮಾಡಿಕೊಳ್ಳುವ ಗುಣವಿದೆ. ಜೀವನದ ನಿಗೂಢತೆಗಳನ್ನು (Mystery) ಅರಿತುಕೊಳ್ಳುವ ಆಸಕ್ತಿ ನಿಮ್ಮದು. ಅಂತಃದೃಷ್ಟಿ ಮತ್ತು ಬುದ್ಧಿವಂತಿಕೆ ನಿಮ್ಮನ್ನು ಸ್ವ ಅರಿವಿನ ಮಾರ್ಗದಲ್ಲಿ ನಡೆಸುತ್ತದೆ. ಆಧ್ಯಾತ್ಮಿಕ (Spiritual) ಪ್ರಗತಿ ಸಾಧಿಸುತ್ತೀರಿ.
ಈ ರಾಶಿಯವರು ಕೆಂಪು ದಾರ ಧರಿಸಿದರೆ ಶನಿ ದೇವನ ಕೋಪಕ್ಕೆ ತುತ್ತಾಗೋದು ಗ್ಯಾರಂಟಿ!
• 8 ಅಕ್ಷರಗಳು
8 ಅಕ್ಷರಗಳನ್ನು ಹೊಂದಿರುವ ಹೆಸರು ನಿಮ್ಮದಾಗಿದ್ದರೆ ನೀವು ಮಹತ್ವಾಕಾಂಕ್ಷಿಗಳು. ಗುರಿ (Goal) ಆಧಾರಿತವಾಗಿ ಕಾರ್ಯ ನಿರ್ವಹಣೆ ಮಾಡುತ್ತೀರಿ. ಅತ್ಯಂತ ದೃಢವಾದ ನಾಯಕತ್ವದ (Leadership) ಗುಣ ನಿಮ್ಮಲ್ಲಿದೆ. ಪರಿಸ್ಥಿತಿಯನ್ನು ಮುನ್ನಡೆಸುವ ಸಹಜ ಸಾಮರ್ಥ್ಯ ಹೊಂದಿದ್ದೀರಿ. ನೀವು ನಿರ್ಧಾರಿತ ಹಾಗೂ ಸ್ಥಿರವಾದ ವ್ಯಕ್ತಿಯಾಗಿದ್ದು, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ.
• 9 ಅಕ್ಷರಗಳು
ಮಾನವೀಯತೆ (Humanity) ನಿಮ್ಮ ಪ್ರಮುಖ ಗುಣ. ಆಳವಾದ ಪ್ರೀತಿ (Love) ಹೊಂದಿರುತ್ತೀರಿ. ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವುದು ನಿಮ್ಮ ಆಶಯ. ಇತರರಿಗೆ ಸಹಾಯ (Help) ಮಾಡುತ್ತೀರಿ. ಧನಾತ್ಮಕ ಬದಲಾವಣೆ ನಿರೀಕ್ಷಿಸುತ್ತೀರಿ. ನಿಮ್ಮ ಪರೋಪಕಾರಿ ಚಿಂತನೆ ಮತ್ತು ಇತರರನ್ನು ಸ್ಫೂರ್ತಿಗೊಳಿಸುವ ಗುಣದಿಂದಾಗಿ ನೈಜ ಮಾನವೀಯ ವ್ಯಕ್ತಿಯಾಗುತ್ತೀರಿ.
• 10 ಅಕ್ಷರಗಳು
ನಿಮ್ಮ ಮೊದಲ ಹೆಸರು 10 ಅಕ್ಷರಗಳಿಂದ ಕೂಡಿದ್ದರೆ ನೀವು ಕನಸುಗಾರರು. ದೊಡ್ಡ ದೊಡ್ಡ ಕನಸುಗಳನ್ನು (Dreams) ಹೊಂದಿದ್ದೀರಿ. ದೃಢವಾದ ಉದ್ದೇಶ ನಿಮ್ಮದು. ವಿಸ್ತಾರವಾಗಿ ಯೋಚನೆ ಮಾಡುವ ಸಾಮರ್ಥ್ಯ ಹೊಂದಿದ್ದು, ನಿಮ್ಮ ವಿಚಾರಗಳನ್ನು ಕಾರ್ಯಗತಗೊಳಿಸುತ್ತೀರಿ. ನಿಮ್ಮ ನಿರ್ಧಾರ ಮತ್ತು ಕ್ರಿಯಾಶೀಲತೆ ನಿಮ್ಮನ್ನು ಮುನ್ನಡೆಸುತ್ತವೆ.