ಈ ಜನರೊಂದಿಗೆ ಒಡನಾಡುವಾಗ ಹುಷಾರು, ಓವರ್ ರಿಯಾಕ್ಟ್ ಮಾಡೋದ್ರಲ್ಲಿ ಸಿದ್ಧಹಸ್ತರು

ಕೆಲ ಜನರು ಸಣ್ಣ ಪುಟ್ಟ ಸನ್ನಿವೇಶಕ್ಕೂ ಅತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಇಷ್ಟು ಚಿಕ್ಕ ವಿಷಯಕ್ಕೆ ಅವರು ಅಷ್ಟೊಂದೆಲ್ಲ ವರ್ತನೆ ಮಾಡುವುದೇಕೆ ಎಂದು ಬೇರೆಯವರಿಗೆ ಅರ್ಥವಾಗುವುದಿಲ್ಲ. ಇದಕ್ಕೆ ಅವರ ಜನ್ಮರಾಶಿಯೇ ಕಾರಣವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಲ್ಕು ರಾಶಿಗಳ ಜನರಲ್ಲಿ ಓವರ್ ರಿಯಾಕ್ಟ್ ಮಾಡುವ ಗುಣ ಹೆಚ್ಚಾಗಿ ಕಂಡುಬರುತ್ತದೆ.
 

Leo scorpio zodiac sign people tend to overreacts always

ಪ್ರಪಂಚವೇ ತಲೆಯ ಮೇಲೆ ಬೀಳುವ ಸನ್ನಿವೇಶದಲ್ಲೂ ಕೆಲವರು ಕೂಲಾಗಿ ಇರುತ್ತಾರೆ. ತೀರ ತಲೆಕೆಡಿಸಿಕೊಂಡು, ಏನೋ ಅನಾಹುತ ಸಂಭವಿಸಿಬಿಡುತ್ತದೆ ಎನ್ನುವ ಧಾವಂತದಲ್ಲಿ ಅವರು ಯಾವತ್ತೂ ಇರುವುದಿಲ್ಲ. ಹಲವು ಸನ್ನಿವೇಶಗಳಲ್ಲಿ ಅಂಥ ಜನರ ಅಗತ್ಯವಿರುತ್ತದೆ. ಅಂಥವರೇ ಒತ್ತಡದಾಯಕ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ, ಕೆಲವರು ಚಿಕ್ಕಪುಟ್ಟ ಸಂಗತಿಗಳಿಗೂ ಅತಿಯಾಗಿ ರಿಯಾಕ್ಟ್ ಮಾಡುತ್ತಾರೆ. ಇವರಲ್ಲಿ ಎಷ್ಟೇ ಸಾಮರ್ಥ್ಯವಿದ್ದರೂ, ಯಾವುದೇ ಪರಿಸ್ಥಿತಿ ಎದುರಿಸುವ ಛಾತಿ ಇದ್ದರೂ ಸಣ್ಣಪುಟ್ಟ ವಿಚಾರಗಳಿಗೂ ಓವರ್ ರಿಯಾಕ್ಟ್ ಮಾಡಿಬಿಡುತ್ತಾರೆ. ಇವರಿಗೆ ಒತ್ತಡಗಳನ್ನು ನಿಭಾಯಿಸುವ ಸಾಮರ್ಥ್ಯವಿಲ್ಲವೆಂದಲ್ಲ. ಕೆಲವು ಸನ್ನಿವೇಶಗಳಲ್ಲಿ ಅವರು ದೃಢವಾಗಿ ನಿಲ್ಲಬಹುದು. ಆದರೆ, ದೈನಂದಿನ ವ್ಯವಹಾರಗಳಲ್ಲಿ ಇವರೊಂದಿಗೆ ಮಾತನಾಡುವಾಗ, ವರ್ತಿಸುವಾಗ ಬೇರೆಯವರು ಸ್ವಲ್ಪ ನಾಜೂಕುತನ ಪ್ರದರ್ಶಿಸಿದರೆ ಉತ್ತಮ. ಏಕೆಂದರೆ, ಇವರು ಬಹಳ ಶಾರ್ಪ್ ಆಗಿ ಅತಿಯಾಗಿ ಪ್ರತಿಕ್ರಿಯೆ ನೀಡಿಬಿಡುತ್ತಾರೆ. ಇದಕ್ಕೆ ಇವರ ರಾಶಿಯ ಪ್ರಭಾವವೇ ಕಾರಣವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳ ಜನರು ಓವರ್ ರಿಯಾಕ್ಟ್ ಮಾಡುವಲ್ಲಿ ಬಹಳ ಮುಂದಿರುತ್ತಾರೆ. ತಮ್ಮ ಗುಣವನ್ನು ಅರಿತುಕೊಂಡು ಇವರು ಸ್ವಲ್ಪ ತಾಳ್ಮೆಯಿಂದ ವರ್ತಿಸುವುದನ್ನು ಕಲಿತುಕೊಂಡರೆ ಅತ್ಯುತ್ತಮವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ.

•    ಮೇಷ (Aries)
ದುಡುಕು (Impulsive) ಪ್ರವೃತ್ತಿಗೆ ಹೆಸರಾಗಿರುವ ಮೇಷ ರಾಶಿಯ (Sign) ಜನ ತಕ್ಷಣಕ್ಕೆ ಏನಾದರೂ ಪ್ರತಿಕ್ರಿಯೆ (React) ನೀಡುವಲ್ಲಿ ಸಿದ್ಧಹಸ್ತರು. ಚೂರೂ ತಾಳ್ಮೆಯಿಲ್ಲದೆ ಆ ಕ್ಷಣದಲ್ಲಿ ಯಾವ ಭಾವನೆ (Feelings) ಮೂಡುತ್ತದೆಯೋ ಅದರಂತೆ ಮಾತನಾಡುತ್ತಾರೆ ಹಾಗೂ ಪ್ರತಿಕ್ರಿಯೆ ನೀಡುತ್ತಾರೆ. ಯುದ್ಧಕಾರಕ (War) ಮಂಗಳ (Mars) ಗ್ರಹದ ಅಧಿಪತ್ಯಕ್ಕೆ ಒಳಪಟ್ಟಿರುವ ಮೇಷ ರಾಶಿಯ ಜನರಲ್ಲಿ ಅಪಾರವಾದ ಧೈರ್ಯ (Courage) ಮತ್ತು ಶಕ್ತಿ (Energy) ಇರುತ್ತದೆ. ಈ ಗುಣಗಳು ಇವರನ್ನು ಅತ್ಯುತ್ತಮ ಲೀಡರ್ ಆಗಿ ರೂಪಿಸಿದರೂ ಕೆಲವು ಸನ್ನಿವೇಶಗಳಲ್ಲಿ ದುಡುಕುತನ ತೋರಿಸುವುದು ಇವರಿಗೆ ಮುಳುವಾಗುತ್ತದೆ. ಯಾವುದಾದರೂ ವಿಚಾರದಲ್ಲಿ ತಕ್ಷಣ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ, “ಇದು ಹೀಗೆ’ ಎಂದು ನಿರ್ಣಯಿಸಿಬಿಡುತ್ತಾರೆ. ಓವರ್ ರಿಯಾಕ್ಟ್ ಮಾಡುವ ತಮ್ಮ ಪ್ರವೃತ್ತಿಯನ್ನು ಗಮನದಲ್ಲಿರಿಸಿಕೊಂಡು ಕೂಲಾಗಿ ಪರಿಸ್ಥಿತಿಯನ್ನು ಅವಲೋಕಿಸುವ ಪರಿಪಾಠ ಬೆಳೆಸಿಕೊಂಡರೆ ಜೀವನದ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ.

ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಏನು ಸಂಬಂಧ.. ಶಿವಲಿಂಗವನ್ನು ಮೊದಲು ಪೂಜಿಸಿದವರು ಯಾರು..?

•    ಕರ್ಕಾಟಕ (Cancer)
ಭಾವನಾತ್ಮಕ ಚಂದ್ರನ (Emotional Moon) ಅಧಿಪತ್ಯಕ್ಕೆ ಒಳಪಟ್ಟಿರುವ ಕರ್ಕಾಟಕ ರಾಶಿಯ ಜನ ಕೆಲವೊಮ್ಮೆ ಭಾವಾತಿರೇಕ ಪ್ರದರ್ಶಿಸುತ್ತಾರೆ. ಸಂವೇದನೆ, ಆರೈಕೆ ಮಾಡುವ ಗುಣ ಹೊಂದಿದ್ದರೂ ಕೆಲವು ಸನ್ನಿವೇಶಗಳಲ್ಲಿ ಓವರ್ ರಿಯಾಕ್ಟ್ (Over React) ಮಾಡುತ್ತಾರೆ. ತಮ್ಮ ಭಾವನೆಗಳೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದು, ಅದರ ಆಧಾರದ ಮೇಲೆಯೇ ಪ್ರತಿಕ್ರಿಯೆ ನೀಡುತ್ತಾರೆ. ಭಾವನೆಗಳನ್ನು ಹಾಗೂ ಅವುಗಳಿಂದ ಉಂಟಾಗುವ ಮನಸ್ಥಿತಿಯನ್ನು ನಿಯಂತ್ರಿಸಿಕೊಳ್ಳಲು, ಸಮತೋಲನಗೊಳಿಸಿಕೊಳ್ಳಲು ಕಲಿತುಕೊಂಡರೆ ಸೌಹಾರ್ದವಾಗಿ ಸಂಬಂಧಗಳನ್ನು (Relations) ನಿಭಾಯಿಸಲು ಇವರಿಗೆ ಸಾಧ್ಯವಾಗುತ್ತದೆ. 

•    ಸಿಂಹ (Leo)
ಸೂರ್ಯನ (Sun) ಅಧಿಪತ್ಯಕ್ಕೆ ಒಳಪಟ್ಟಿರುವ ಸಿಂಹ ರಾಶಿಯ ಜನ ಕ್ರಿಯಾಶೀಲರು. ತಮ್ಮವರಿಗೆ ಸಾಧ್ಯವಾದಷ್ಟು ಕಂಫರ್ಟ್ ನೀಡಲು ಯತ್ನಿಸುತ್ತಾರೆ. ಸಂಬಂಧಗಳಿಗೆ ನಾಟಕೀಯ ಸ್ಪರ್ಶ (Dramatic Touch) ನೀಡುತ್ತಾರೆ. ತಾವೇ ಕೇಂದ್ರಬಿಂದುವಾಗಲು ಇಷ್ಟಪಡುವ ಇವರು, ಬಹಳಷ್ಟು ಬಾರಿ ಓವರ್ ರಿಯಾಕ್ಟ್ ಮಾಡುತ್ತಾರೆ. ಪರಿಸ್ಥಿತಿಗಳಿಗೆ ಅತ್ಯಂತ ಭಾವೋದ್ರಿಕ್ತರಾಗಿ (Passionate) ಸ್ಪಂದಿಸುತ್ತಾರೆ. ಮುಂಗೋಪಿತನವನ್ನೂ ಪ್ರದರ್ಶಿಸಬಹುದು. ಪದೇ ಪದೆ ಎಲ್ಲರ ಗಮನ (Attention) ಸೆಳೆಯಲು ಇಷ್ಟಪಡುತ್ತಾರೆ. ಈ ಗುಣವನ್ನು ಅರಿತುಕೊಂಡು ವರ್ತನೆ ಮಾಡಿದರೆ ಸಿಂಹ ರಾಶಿಯವರ ವೈಬ್ರಂಟ್ ಎನರ್ಜಿಗೆ ಸರಿಸಾಟಿಯಿಲ್ಲ. 

ಮುಂದಿನ ತಿಂಗಳು ಈ ರಾಶಿಗೆ ತೊಂದರೆ!..ಮಕ್ಕಳಿಗೆ ಸಂಬಂಧಿಸಿದ ಆತಂಕಗಳಿವೆ ಎಚ್ಚರ..

•    ವೃಶ್ಚಿಕ (Scorpio)
ಪ್ಲೂಟೋ ಅಧಿಪತಿಯಾಗಿರುವ ವೃಶ್ಚಿಕ ರಾಶಿಯ ಜನ ಆಳವಾದ ಮನಸ್ಥಿತಿ, ನಿಗೂಢವಾದ (Mystery) ವರ್ತನೆ ಹೊಂದಿರುತ್ತಾರೆ. ಭಾವನಾತ್ಮಕ ಭದ್ರತೆಗೆ ಅಪಾಯ ಎದುರಾದಾಗ, ನಂಬಿಕೆಗೆ ವಿಶ್ವಾಸದ್ರೋಹವಾದ ಸನ್ನಿವೇಶಗಳಲ್ಲಿ ಇವರು ಅರಿಯಾಗಿ ಪ್ರತಿಕ್ರಿಯೆ ಮಾಡುತ್ತಾರೆ. ತೀವ್ರವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸಂಬಂಧಗಳಲ್ಲಿ ಭಾವನಾತ್ಮಕ ಸಮತೋಲನಕ್ಕೆ (Balance) ಇವರು ತಮ್ಮ ಗುಣಸ್ವಭಾವಗಳ ಕುರಿತು ಅರಿವು ಮೂಡಿಸಿಕೊಳ್ಳುವ ಅಗತ್ಯವಿರುತ್ತದೆ. 
 

Latest Videos
Follow Us:
Download App:
  • android
  • ios