ಮನೇಲಿ ಗೂಬೆ ಮೂರ್ತಿ ಇದ್ದರೆ ಓಕೇನಾ? ಇದು ಶುಭವೋ, ಅಶುಭವೋ?
ಶ್ರೀಮಂತಿಕೆ, ನೆಮ್ಮದಿಯನ್ನು ಪ್ರತಿಯೊಬ್ಬರು ಬಯಸ್ತಾರೆ. ಅದಕ್ಕೆ ಅಗತ್ಯವಿರುವ ಕೆಲಸ ಮಾಡ್ತಾರೆ. ತಾಯಿ ಲಕ್ಷ್ಮಿ ಒಲಿಸಿಕೊಳ್ಳಲು ನಾವು ದೊಡ್ಡ ಹೋಮ, ಹವನ ಮಾಡ್ಬೇಕಾಗಿಲ್ಲ. ಸಣ್ಣಪುಟ್ಟ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.
ಗೂಬೆ ರಾತ್ರಿ ಪ್ರಾಣಿ ಹಾಗೂ ಬೇಟೆಯ ಪ್ರಾಣಿ ಆಗಿರುವ ಕಾರಣ ಅನೇಕರು ಇದು ಅಶುಭ, ಕ್ರೂರವೆಂದು ಭಾವಿಸುತ್ತಾರೆ. ಆದ್ರೆ ಅವರ ನಂಬಿಕೆ ತಪ್ಪು. ಹಿಂದೂ ಧರ್ಮದಲ್ಲಿ ಗೂಬೆಗೆ ಮಹತ್ವದ ಸ್ಥಾನವಿದೆ. ಅದನ್ನು ಲಕ್ಷ್ಮಿ ದೇವಿ ವಾಹನ ಎಂದೇ ನಂಬಲಾಗುತ್ತದೆ. ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವಂತೆ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಗೂಬೆಯನ್ನು ಮನೆಗೆ ತಂದ್ರೆ ಅದೃಷ್ಟ ಎಂದು ನಂಬಲಾಗುತ್ತದೆ. ಗೂಬೆಯನ್ನು ಸಂತೋಷ, ಸಮೃದ್ಧಿ ಸಂಕೇತವೆಂದೇ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲೂ ಗೂಬೆ ವಿಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಮನೆಯಲ್ಲಿರುವ ಗೂಬೆ ವಿಗ್ರಹದಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ನಾವಿಂದು ಮನೆಯಲ್ಲಿ ಗೂಬೆ ಗೊಂಬೆ ಅಥವಾ ವಿಗ್ರಹವಿದ್ರೆ ಏನೆಲ್ಲ ಲಾಭ ಹಾಗೂ ಅದನ್ನು ಎಲ್ಲಿ ಇಡಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ನೀವು ಗೂಬೆ (Owl) ಮೂರ್ತಿಯನ್ನು ಮನೆಯಲ್ಲಿಟ್ಟರೆ ದೇವಿ ಲಕ್ಷ್ಮಿ ಪ್ರಸನ್ನಳಾಗ್ತಾಳೆ. ಮನೆಯಲ್ಲಿ ಸಂಪತ್ತು (Wealth) ಸದಾ ತುಂಬಿರುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಆರ್ಥಿಕ ಲಾಭ (Financial Benefit ) ದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಕಚೇರಿಯಲ್ಲಿ ಗೂಬೆಯನ್ನು ಇಟ್ಟುಕೊಳ್ಳುವುದು ವೃತ್ತಿಯಲ್ಲಿ ಪ್ರಗತಿಯನ್ನು ತರುತ್ತದೆ. ಸಂಬಂಧಗಳು ಸಹ ಮಧುರವಾಗುತ್ತವೆ.
ಶುಕ್ರ ಗೋಚರ, ಈ ರಾಶಿಗೆ 25 ದಿನದಲ್ಲಿ ಟ್ರೂ ಲವ್ ಸಿಗುತ್ತೆ.. ಹೇಗೆ ಗೊತ್ತಾ?
ಗೂಬೆ ಮೂರ್ತಿ ಖರೀದಿ ಹೇಗೆ? : ನೀವು ಮನೆಗೆ ಗೂಬೆ ಮೂರ್ತಿ ತರ್ತಿದ್ದರೆ ಒಂದೇ ಗೊಂಬೆ ಅಥವಾ ಮೂರ್ತಿಯನ್ನು ಎಂದಿಗೂ ತರಬೇಡಿ. ಜೋಡಿ ಗೂಬೆ ಮೂರ್ತಿಯನ್ನು ಮನೆಗೆ ತನ್ನಿ. ಜೋಡಿ ಗೂಬೆಗಳು ಮನೆಗೆ ಶುಭ ಫಲಿತಾಂಶವನ್ನು ತರುತ್ತವೆ. ನೀವು ಗೂಬೆ ಮೂರ್ತಿಯನ್ನು ಖರೀದಿ ಮಾಡುವ ಮೊದಲು ಯಾವ ದಿನ ಒಳ್ಳೆಯದು ಎಂಬುದನ್ನು ತಿಳಿದಿರಬೇಕು. ದೀಪಾವಳಿ ಗೂಬೆ ಮೂರ್ತಿ ಖರೀದಿಗೆ ಪ್ರಶಸ್ತವಾದ ದಿನ. ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಅಲಂಕಾರ ಮಾಡ್ತೇವೆ. ಅಲಂಕಾರಕ್ಕೆ ಕೆಲ ವಸ್ತುಗಳನ್ನು ಖರೀದಿ ಮಾಡ್ತೇವೆ. ಈ ಸಮಯದಲ್ಲಿ ನೀವು ಗೂಬೆಯನ್ನು ಖರೀದಿ ಮಾಡಿ.
ಯಾವ ಲೋಹ ಮೂರ್ತಿ ಒಳ್ಳೆಯದು? : ದೀಪಾವಳಿ ಶುಭ ಸಂದರ್ಭದಲ್ಲಿ ನೀವು ಗೂಬೆ ಮೂರ್ತಿ ಖರೀದಿ ಮಾಡುವುದಾದ್ರೆ ಕಂಚಿನ ಮೂರ್ತಿಗೆ ಆದ್ಯತೆ ನೀಡಿ. ಇದ್ರ ಶುಭ ಫಲ ಹೆಚ್ಚಿರುತ್ತದೆ. ನೀವು ಗೂಬೆ ಫೋಟೋವನ್ನು ಮನೆಯಲ್ಲಿ ಇಡುವುದಕ್ಕಿಂತ ಮೂರ್ತಿಯನ್ನು ಇಡುವುದು ಹೆಚ್ಚು ಒಳ್ಳೆಯದು. ಅದು ಸಾಧ್ಯ ಇಲ್ಲ ಎನ್ನುವವರು ಫೋಟೋ ಅಥವಾ ಗೂಬೆಗೆ ಸಂಬಂಧಿಸಿದ ವಸ್ತು, ಚಿಹ್ನೆಗಳನ್ನು ಇಡಬಹುದು.
ಇಂತವರ ಕೈಯಲ್ಲಿ ಹಣ ಉಳಿಯುವುದಿಲ್ಲ ಯಾಕೆ ಗೊತ್ತಾ..?
ಎಂದು ಅದ್ರ ಪ್ರತಿಷ್ಠಾಪನೆ ಮಾಡ್ಬೇಕು? : ಗೂಬೆ, ತಾಯಿ ಲಕ್ಷ್ಮಿ ವಾಹನವಾದ ಕಾರಣ ಅದನ್ನು ಪ್ರತಿಷ್ಠಾಪನೆ ಮಾಡಲು ಶುಕ್ರವಾರ ಒಳ್ಳೆಯದು. ಗಂಗಾಜಲದಿಂದ ಗೂಬೆ ಮೂರ್ತಿಯನ್ನು ಒರೆಸಬೇಕು. ನಂತ್ರ ಅದನ್ನು ಪ್ರತಿಷ್ಠಾಪನೆ ಮಾಡ್ಬೇಕು. ಈ ಸಂದರ್ಭದಲ್ಲಿ ನಡೆಯುವ ದೇವಿ ಪೂಜೆಗೆ ತೆಂಗಿನಕಾಯಿ ಮತ್ತು ಹಾಲನ್ನು ಅಭಿಷೇಕ ಮಾಡಬೇಕು.
ಯಾವ ದಿಕ್ಕಿನಲ್ಲಿ ಗೂಬೆ ಮೂರ್ತಿ ಇಡೋದು ಉತ್ತಮ : ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕಿನಲ್ಲಿ ಗೂಬೆ ಮೂರ್ತಿ ಇಡಬೇಕು ಎಂಬುದನ್ನು ಹೇಳಲಾಗಿದೆ. ಮನೆಯ ವಾಯುವ್ಯ ದಿಕ್ಕು ಇದಕ್ಕೆ ಅತ್ಯಂತ ಸೂಕ್ತ.
ಕಚೇರಿಯಲ್ಲಿ ಗೂಬೆಯ ಸಣ್ಣ ಪ್ರತಿಮೆಯನ್ನು ನೀವು ಇರಿಸಬಹುದು. ಗೂಬೆಯನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸುತ್ತಮುತ್ತಲ ಪ್ರದೇಶ ನಕಾರಾತ್ಮಕ ಶಕ್ತಿಯಿಂದ ದೂರವಿರುತ್ತದೆ.
ನಿಮ್ಮ ಮನೆಯಲ್ಲಿ ಗೂಬೆ ಮೂರ್ತಿ ಇಡೋದಾದ್ರೆ ಮುಖ್ಯ ಬಾಗಿಲಿಗೆ ಗೂಬೆ ಮುಖ ಬರುವಂತೆ ನೋಡಿಕೊಳ್ಳಿ. ಇದು ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಗೂಬೆ ನಿಮ್ಮ ಕುಟುಂಬ ಮತ್ತು ಅದರ ಸದಸ್ಯರನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ.